
ಮಲರ್ಿನ್ ಮನ್ರೋ ಕಾಲೊಂದರಲ್ಲಿ ಆರು ಬೆರಳಿದ್ವಾ?
ಇತ್ತು ಅನ್ನುವವರಿದ್ದಾರೆ. ಇಲ್ಲ ಅನ್ನುವವರೂ ಇದ್ದಾರೆ. ಇಲ್ಲ ಅನ್ನುವುದಕ್ಕೆ ಸಿಕ್ಕ ಒಂದು ಪುರಾವೆ ಇದು.
ಮಲರ್ಿನ್ ಮನ್ರೋ ಹುಟ್ಟಿದ್ದು ಜೂನ್ 1, 1926ರಲ್ಲಿ. ಹುಟ್ಟುವಾಗಲೂ ಅವಳಿಗೆ ಎರಡೂ ಕಾಲಲ್ಲಿ ಐದೈದೇ ಬೆರಳುಗಳಿದ್ದವು. 1962 ಆಗಸ್ಟ್ 5 ರಂದು ಸಾಯುವಾಗಲೂ ಅವಳ ಕಾಲಲ್ಲಿ ಐದೈದೇ ಬೆರಳಿದ್ದವಂತೆ. ಹೀಗಿದ್ದಾಗ ಈ ಸುದ್ದಿ ಸುಳ್ಳಲ್ವಾ ಅನ್ನುತ್ತದೆ ಒಂದು ಮೂಲ.
1946ಕ್ಕೆ ಸರಿಯಾಗಿ ಅವಳಿಗೆ ಇಪ್ಪತ್ತರ ತುಂಬು ಯೌವ್ವನ. ಅವಳಿನ್ನೂ ನೋಮರ್ಾ ಜೀನ್. ಮಲರ್ಿನ್ ಮನ್ರೋ ಆಗಿರಲಿಲ್ಲ. ಜೋಸೆಫ್ ಜಸ್ಗರ್ ಅನ್ನೋ ಫೋಟೋಗ್ರಾಫರ್ ಮಾಚರ್್ 18, 1946ರಂದು ನೋಮರ್ಾಳನ್ನ ಕರೆದುಕೊಂಡು ಫೋಟೋ ಶೂಟ್ಗೋಸ್ಕರ ಕ್ಯಾಲಿಫೋನರ್ಿಯಾದ ಝುಮಾ ಬೀಚ್ಗೆ ಹೋಗುತ್ತಾನೆ. ಆಗ ಅವನು ತೆಗೆದ ಒಂದು ಫೋಟೋದಲ್ಲಿ ಮಲರ್ಿನ್ಳ ಎಡ ಕಾಲಲ್ಲಿ ಆರುಬೆರಳು ಇದ್ದಂಗೆ ಕಾಣಿಸುತ್ತದೆ ಅಷ್ಟೆ.
ಆದ್ರೆ ಜೋಸೆಫ್ "ಖಿಜ ಃಡಿಣ ಠಜಿ ಒಚಿಡಿಟಥಿಟಿ: ಖಿಜ ಐಠಣ ಕಠಣಠರಡಿಚಿಠಿ ಠಜಿ ಓಠಡಿಟಚಿ ಎಜಚಿಟಿಜ " ಅನ್ನೋ ತನ್ನ ಪುಸ್ತಕದಲ್ಲಿ ಒಂದು ಸುಳ್ಳು ಹೇಳಿಬಿಡುತ್ತಾನೆ. ನೋಮರ್ಾ ಜೀನ್ ಎಡ ಕಾಲಿನಲ್ಲಿ ಆರು ಬೆರಳುಗಳಿದ್ದವು. ನಾನು ತೆಗೆದ ಫೋಟೋದಿಂದ ನಾನದನ್ನ ಪ್ರೂವ್ ಮಾಡಬಲ್ಲೆ ಅಂತ. ದುರಂತ ಅಂದ್ರೆ ರಿಪ್ಲೇಸ್ ಬಿಲೀವ್ ಇಟ್ ಆರ್ ನಾಟ್ ಪುಸ್ತಕದಲ್ಲೂ ಇದೂ ಹಾಗೇ ದಾಖಲಾಗಿದೆ.
ಹಾಗಾದರೆ ಜೋಸೆಫ್ ದುಡ್ಡಿಗಾಗಿ ಇಷ್ಟೆಲ್ಲ ಕಥೆ ಕಟ್ಟಿದನಾ?
ಗೊತ್ತಿಲ್ಲ.
ಮಲರ್ಿನ್ ಸತ್ತು ನಲವತ್ತಾರು ವರ್ಷವಾಯಿತು. ಇನ್ನೂ ಅವಳು ಒಂದಲ್ಲ ಒಂದು ಕಾರಣಕ್ಕೆ ನೆನಪಾಗುತ್ತಾಳೆ.
ಇವತ್ತು ಕಾಲು ಬೆರಳಿಗಾಗಿ ನೆನಪಾದಳು ಅಷ್ಟೆ.
1 comment:
ಮಲರ್ಿನ್ ಮನ್ರೋ ಹಿರಿಯರಿಂದ ಕಿರಿಯರವರೆಗೂ ಕಾಡುವ ಹಸಿರು ನೆನಪು, ಆಕೆಯ ಬಯಾಗ್ರಫಿ ಫಾಕ್ಸ್ ಹಿಸ್ಟರಿ ಚಾನೆಲ್ನಲ್ಲಿ ನೋಡಿದ್ದೆ, ಮತ್ತೊಮ್ಮೆ ನೆನಪಿಸಿದ್ದಕ್ಕೆ ಥ್ಯಾಂಕ್ಸ್.
Post a Comment