







ಆತ್ಮೀಯರೇ
ನಿಮಗೆ ಗೊತ್ತಿದೆ, ಪ್ರಕಾಶ್ ರೈ ಸಿಗುವುದೇ ಅಪರೂಪ. ಅಷ್ಟು ಬಿಜಿ ಬಿಜಿ ಬಿಜಿ ನಟ. ಆದರೆ ಅಷ್ಟು ಬಿಜಿಯ ನಡುವೆಯೂ ಬದುಕನ್ನ ಉಲ್ಲಾಸವಾಗಿಟ್ಟುಕೊಂಡವರು ರೈ. ಅವರ ಮಾತು ಕೇಳಿದರೆ ಇನ್ನಷ್ಟು ಹೊತ್ತು ರೈ ಮಾತಾಡಬಾರದಿತ್ತಾ ಅನಿಸುತ್ತದೆ. ಹೇಳಬೇಕೆಂದ್ರೆ ನಮಗಿಂತ ಚೆನ್ನಾಗಿ ಕನ್ನಡ ಮಾತಾಡುತ್ತಾರೆ. ಅವರೇ ಒಂದು ಕಡೆ ಹೇಳಿದ್ದು ನೆನಪಿದೆ. ನಾನು ಯಾವುದೇ ಕಡೆ ಹೋದರೂ ಅಲ್ಲಿನವರಿಗಿಂತ ಚೆನ್ನಾಗಿ ಆ ಭಾಷೆಯನ್ನು ಮಾತಾಡಬಲ್ಲೆ ಅಂತ. ಅದು ತಮಿಳಾಗಿರಲಿ, ತೆಲಗಾಗಿರಲಿ, ಇಂಗ್ಲಿಷ್ ಆಗಿರಲಿ, ಸೈ. ಭಾಷೆ ಅವರಿಗೆ ಅಷ್ಟು ಸುಲಲಿತ. ಕಮಷರ್ಿಯಲ್ ಮತ್ತು ಆಟರ್್ ಸಿನೆಮಾ ಯಾವುದಾದರೂ ಆಗಲಿ ಅವರ ಅಭಿನಯ ಕೂಡ ಫಕ್ಕಾ ಪ್ರೊಫೆಷನಲ್. ನಾಗಮಂಡಲ ಮರೆಯೋದಕ್ಕೆ ಸಾಧ್ಯಾನಾ?
ಇಲ್ಲಿ ಒಂದಷ್ಟು ರೈ ಅವರ ಫೋಟೋ ತೆಗೆದಿದ್ದೇನೆ. ಪತ್ರಕರ್ತ ಮಿತ್ರ ಮಣಿಕಾಂತ್ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ಬಿಡುಗಡೆಗೆ ಬಂದಿದ್ದರಲ್ಲ ಅವಾಗ ತೆಗೆದದ್ದು. ಕಲಾಕ್ಷೇತ್ರದ ಹಿಂಬದಿಯ ಅರಳಿ ಕಟ್ಟೆಯ ಮೇಲೆ ರೈ ಪವಡಿಸಿದ್ರು. ಜೊತೆಗೆ ಬಿ ಸುರೇಶ್ ಇದ್ರು. ನಾನಿದ್ದೆ. ಇನ್ನೂ ಹಲವು ಪತ್ರಕರ್ತ ಮಿತ್ರರೂ ಇದ್ರು. ಈ ಫೋಟೋಸ್ ಟಿಪಿಕಲ್ ರೈ ಅಂದ್ರೆ ಹೀಗಿರುತ್ತಾರೆ ಅಂತಿರ್ತೀವಲ್ಲ ಹಂಗಿದೆ.
ನಿಮಗೆ ಇಷ್ಟ ಆಗುತ್ತೆ ಅಂದುಕೊಳ್ಳುತ್ತೇನೆ.
10 comments:
raiyavaru biLee vaaya oodthiddare!
ಯಾಕ್ ಸರ್..ಇಷ್ಟು ತಡ? ಕಾರ್ಯಕ್ರಮ ಮುಗಿದು ಎಷ್ಟು ಟೈಮ್ ಆಗೋಯ್ತು. ಚೆನ್ನಾಗಿವೆ ಫೋಟೋಗಳು....! ಕನ್ನಡದವರೇ ಆದರೂ, ಕನ್ನಡ ಚಿತ್ರರಂಗ ಪ್ರಕಾಶ್ ರೈ ಅವರನ್ನು ಉಳಿಸಿಕೊಂಡಿಲ್ಲ ಅಂತ ಬೇಜಾರಾಗುತ್ತೆ. ಅವರಿಲ್ಲಿ ನಿರಂತರವಾಗಿರಬೇಕಿತ್ತು..ಆದರೂ ಪ್ರಕಾಶ್ ರೈ ಎಷ್ಟೇ ಬೆಳದರೂ ..ಎಲ್ಲೇ ಹೋದ್ರೂ ನಮಗೆ ಪಕ್ಕದ್ಮನೆ ಹುಡುಗ!
-ಧರಿತ್ರಿ
photos super...avara maatagalu kelade avattu..tumba chennagittu..avara photos ivattu siktu ..avaru nirmaapakaagi, nataraagi, prekshakanaagi, anveshakanaagi..olle hesaru madali antha haraistini....
Photo enooo chennagive...aadree sigaretu hidislilla kanree....?
maaraayre,rai jote naanu idde...aa photos elli?
Nanage photo kotre nimage mysore pak kodistene...nenapidi...
Manikanth
nice photos.
-Hani
Namaskara,
Rai bagegina photo chennagive.
saangatya
ಸರ್, ರೈಗಳ ಧೂಮ್ ಚನ್ನಾಗಿದೆ. ಅದೇ ಕಾರ್ಯಕ್ರಮದ ಬರಹವೊಂದು ನನ್ನ ಬ್ಲಾಗಿನಲ್ಲಿದೆ. ಓದಿ ನೋಡಿ. ಧೂಮಪಾನ ಆರೋಗ್ಯಕ್ಕೆ ಹಾನಿಕರ ಆದ ಕಾರಣ ಅಲ್ಲಿ ಅದಿಲ್ಲ....
- ಶಮ, ನಂದಿಬೆಟ್ಟ.
ಹಾಂ..ಹೇಳೋದು ಮರೆತೆ ಇನ್ನೊದು ಬಾರಿ ಆರ್.ಪಿ. ಸಿ ಲೇ ಔಟ್ ಬಸ್ ಸ್ಟಾಪಿನ ಕಾರ್ನರಿನಲ್ಲಿ ನೀವು ಮಣಿಕಾಂತ್ ಹಾಗೆ ಗಂಟೆಗಟ್ಟಲೆ ನಿಂತು ಹರಟೋದು ನೋಡಿದ್ರೆ ಅಪಹರಣ ಆಗುತ್ತೆ. ಅಲ್ಲಿಂದ ಹತ್ತು ಹೆಜ್ಜೆ ಬಂದ್ರೆ ನಮ್ಮ ಮನೆ. ಇಪ್ಪತ್ತು ಹೆಜ್ಜೆ ಬಂದ್ರೆ ಕ್ಲಿನಿಕ್.. ಅಲ್ಲಿ ಬಂದು ದಿನವಿಡೀ ಮಾತಾಡಬಹುದು. ಕಾಫಿ + ಚಿಪ್ಸು ಫ್ರೀ..
namaste sir. nanage o manase li bareebeku anta aase ide. naanu bareda GOOD NIGHT KAVANAGALU emba ondishtu kavanagala sangrahavide. adanne o manase li breebeku anta aase ide. omme nanna blog noadi nimma abhipraaya tilisi. nimma uttarakke kaayta irteeni.
Namast Sir photos are juss awesome . . !! ;)
Post a Comment