Sunday, January 3, 2010

ನಿಮ್ಮನ್ನು ನೋಡುವ ಭಾಗ್ಯ ಹೀಗಾದರೂ ಸಿಗಲಿ



ಗೆಳೆಯ ಮಣಿಕಾಂತ್ ಮತ್ತು ನನ್ನದು ಆರೇಳು ವರ್ಷಗಳ ಗಟ್ಟಿ ಸ್ನೇಹ. ನಾನು ವಿಜಯಕನರ್ಾಟಕದ ಹೊಸ್ತಿಲು ತುಳಿಯುವ ಹೊತ್ತಿಗಾಗಲೇ ಅವರು ಅಲ್ಲಿ ಸ್ಥಾಪಿತರಾಗಿಬಿಟ್ಟಿದ್ದರು. ತುಂಬಾ ಆತ್ಮೀಯ. ಸ್ನೇಹಿತರ ಬಗ್ಗೆ ತುಂಬಾ ಪ್ರೀತಿ ಇಟ್ಟುಕೊಂಡವರು. ಯಾವಾಗ ಸಿಕ್ಕರೂ ಗಂಟೆಗಟ್ಟಲೇ ಕುಳಿತು ಹರಟುತ್ತೇವೆ. ಬನ್ನಿ ರವಿ ನಿಮಗೆ ಗಣೇಶ್ ಸ್ವೀಟ್ಸ್ನಲ್ಲಿ ಮೈಸೂರ್ ಪಾಕ್ ಕೊಡಸ್ತೀನಿ ಅಂತ ಕರ್ಕೊಂಡು ಹೋಗಿ ಅವಾಗವಾಗ ಮೈಸೂರ್ ಪಾಕ್ ತಿನ್ನಿಸ್ತಿರ್ತಾರೆ. ಹಾಗಾಗೆ ನಾನು ದಪ್ಪ ಅಂತ ಏನಾದರೂ ಆಗಿದ್ದರೆ ಅದರ ಹಿಂದೆ ಮಣಿಯ ಕೈವಾಡವೂ ಇದೆ ಅನ್ನುವ ಗುಮಾನಿ ನನಗೆ. ಒಮ್ಮೊಮ್ಮೆ ಅಂತೂ ನಿಮ್ಮನ್ನು ನೋಡಬೇಕು ಎಲ್ಲಿ ಸಿಕ್ತೀರಾ ಅಂತ ಮೆಸೇಜ್ ಬಿಟ್ಟು ತುದಿಗಾಲಲ್ಲಿ ನಿಂತಿರ್ತಾರೆ. ಪ್ರತಿ ಸಲ ಸಿಕ್ಕಾಗಲೂ ಅದೇ ಪ್ರಿತಿ ಅದೇ ರೀತಿ.
ಇಂಥ 'ಮಣಿಯ ಹಾಡು ಹುಟ್ಟಿದ ಸಮಯ' ಅನ್ನೋ ಪುಸ್ತಕ ಹತ್ತನೇ ತಾರೀಕು ಬೆಳಿಗ್ಗೆ ಹತ್ತೂ ಮೂವತ್ತಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಅನಾವರಣಗೊಳ್ಳುತ್ತಿದೆ. ವಿಜಯಕನರ್ಾಟಕದಲ್ಲಿ ಅತ್ಯಂತ ಪಾಪ್ಯುಲರ್ ಆದ ಕಾಲಂ ಅದು. ಗುನುಗುನಿಸುವ ಹಾಡು ಹುಟ್ಟಿದ್ದರ ಹಿಂದೆ ಒಂದು ಪ್ರೀತಿ ಇದ್ದ ಹಾಗೆ ದುಃಖವೂ ಇರುತ್ತದೆ. ಪ್ರತಿ ಹಾಡಿಗೂ ಒಂದು ಇತಿಹಾಸ ಇದ್ದೇ ಇರುತ್ತದೆ. ಅಂತ ಹಾಡುಗಳ ಇತಹಾಸವೇ ಈ ಪುಸ್ತಕ. ಅವತ್ತು ನಟ ರಮೇಶ್ ಅರವಿಂದ್ ಬರ್ತಿದಾರೆ. ವಿಶ್ವೇಶ್ವರಭಟ್, ಅನಂತ ಚಿನಿವಾರ್ ಮುಂತಾದವರು ವೇದಿಕೆ ಹಂಚಿಕೊಳ್ಳಲಿದ್ದಾರೆ.
ಒಂದಿಷ್ಟು ಹಾಡುಗಳಿವೆ. ನೀವು ಅವತ್ತು ಬಿಡುವು ಮಾಡಿಕೊಂಡು ಬರಲೇಬೇಕು ಇಲ್ಲದಿದ್ದರೆ ನಾನು ಸುಮ್ಮನಿರೋಲ್ಲ ಅಂತ ಅವಾಜ್ ಹಾಕಿ ಹೋಗಿದ್ದಾರೆ ಮಣಿ. ಬಹುಶಃ ಅವರಿಗಿಂತ ಮೊದಲೇ ಅವತ್ತು ನಾನಲ್ಲಿರುತ್ತೇನೆ.
ನೀವೂ ಬನ್ನಿ... ನಿಮ್ಮನ್ನು ನೋಡುವ ಭಾಗ್ಯ ಹೀಗಾದರೂ ಸಿಗಲಿ.
ಮಿಸ್ ಮಾಡಲ್ಲ ತಾನೆ.