Monday, November 2, 2009

ಮುಖ ಮುಖವಾಡಕ್ಕೆ ಬಲಿಯಾಗಿದೆ

ಓ ಮನಸೇಯಲ್ಲಿ ನಾನು ಅತ್ಯಂತ ಪ್ರೀತಿಯಿಂದ ಬರೆಯುವ ಕಾಲಂ ಇನ್ಬಾಕ್ಸ್. ಹಾಗೇ ಹೆಚ್ಚು ತಲೆಕೆಡಿಸಿಕೊಂಡು ಬರೆಯುವ ಕಾಲಂ ಸಹ ಅದೆ. ಅದಕ್ಕೆ ಅದರದೇ ಆದ ಸಾವಿರಾರು ಓದುಗರಿದ್ದಾರೆ. ಅಭಿಮಾನಿಗಳಿದ್ದಾರೆ. ಕೆಲಸದ ಒತ್ತಡದಿಂದಲೋ ಅಥವಾ ನನ್ನ ಸೋಮಾರಿತನದಿಂದಲೋ ಒಂದಷ್ಟು ಕಾಲ ಬರೆಯಲಾಗಿರಲಿಲ್ಲ. ರವಿ ಬೆಳಗೆರೆ ಕೂಡ ಅದೇನೋ ಇನ್ಬಾಕ್ಸ್ ಅಂತ ಬರಿತೀರಲ್ಲ ರವಿ ಅದಕ್ಕೆ ತುಂಬಾ ಜನ ಓದುಗರಿದ್ದಾರೆ ಮತ್ತೆ ಬರೀರಿ ಅನ್ನುವ ಪ್ರೀತಿ ತೋರಿಸಿದ್ದರು. ಆದರೆ ನನಗೇ ಯಾಕೋ ಸಾಧ್ಯವಾಗಿರಲಿಲ್ಲ. ಕೆಲವೊಮ್ಮೆ ಬರೀಬೇಕು ಅನ್ನುವ ತುಡಿತ ಇದ್ದರೂ ಮನಸು ಚಂಡಿ ಹಿಡಿದು ಕುಳಿತುಬಿಡುತ್ತದೆ. ಜಪ್ಪಯ್ಯ ಅಂದರೂ ಒಂದು ಸಾಲು ಬರೆಯಲಾಗುವುದಿಲ್ಲ. ಎಲ್ಲಾ ಸರಿ ಇದೆ ಇನ್ನೇನು ಬರೆದುಬಿಡೋಣ ಅಂತ ಕೂತರೆ ಇನ್ನೇನೋ ಅವಾಂತರ. ಒಟ್ಟಿನಲ್ಲಿ ಇನ್ಬಾಕ್ಸ್ಗೆ ಕಲ್ಲುಬಿದ್ದಿತ್ತು.
ಈಗ ಮತ್ತೆ ಎರಡು ಸಂಚಿಕೆಯಿಂದ ಬರೆಯಲು ತೊಡಗಿದ್ದೇನೆ. ಅದೇ ಶ್ರದ್ಧೆಯಿಂದ ಅದೇ ಪ್ರೀತಿಯಿಂದ. ಓದಿಕೊಳ್ಳಿ.

ಇನ್ನು
ಕಾರಣ ಸಾಕು
ಆಚೆ ಹೋಗು
ಎದೆಯಿಂದ
ಅಲ್ಲೀಗ
ಪಟ್ಟಾಭಿಷೇಕ
ನಡೆಯುತ್ತಿದೆ
ಇನ್ನೊಬ್ಬನಿಗೆ
*
ನೆಲ
ಅಗೆದು
ನೀರು ಕೊಡಬಲ್ಲೆ
ಎದೆ ಬಗೆದು
ಹೇಗೆ ಕೊಡಲಿ
ರಕುತ
*
ನೀನು
ಎಲ್ಲಾ ಕೇಳಿದೆ
ನನ್ನ ಬಳಿ
ಪ್ರೀತಿಯೊಂದನ್ನು
ಬಿಟ್ಟು
*
ನನಗೊಂದು
ಆಸೆ ಇದೆ
ನಿನ್ನ
ತೋಳ ತೆಕ್ಕೆಯಲಿ
ಸಾಯಬೇಕೆಂದು
*
ಪ್ರೀತಿ ಅಂದರೆ
ದೇವರ
ಕಾಲ ಕೆಳಗಿನ
ಹೂವಲ್ಲ
ಅದು
ನೀಲಾಂಜನ
*
ನಾವು
ಕಾಮವನ್ನು
ಬಿಡಬಹುದು
ಕಾಮ
ನಮ್ಮನ್ನು
ಬಿಡೋಲ್ಲ
*
ನನಗೆ
ಅಳುವುದಕ್ಕೆ ಬಿಡು
ದೇವರೇ
ಇನ್ನಾದರೂ
ಅವಳ
ನೆನಪು
ಸಾಯಲಿ
*
ಕಷ್ಟ ಬಂದಾಗ
ದೇವರೇ
ನನಗೊಂದು
ದೊಡ್ಡ
ಕಷ್ಟ ಇದೆ
ಏನು ಮಾಡಲಿ
ಅನ್ನಬೇಡಿ
ಕಷ್ಟವೇ
ನನ್ನಲ್ಲಿ
ದೊಡ್ಡ ದೇವರಿದ್ದಾನೆ ಎನ್ನಿ
*
ಗೊತ್ತಾಗುತ್ತೆ ಬಿಡು
ನಿನಗೂ
ಒಡೆದ ಹೃದಯದ
ನೋವು
ಏನೆಂದು!
*
ಸೋಲುವುದು
ಸುಲಭ
ಗೆಲ್ಲುವುದು ಕಷ್ಟ
ಅದಕ್ಕೆ
ನಾನು ನಿನಗೆ
ಸೋತಿದ್ದು
*
ತುಂಬಾ ಜನ
ಪ್ರಪೋಸ್ ಮಾಡಿದ್ರು
ನಂಗೆ ಇಷ್ಟ ಇಲ್ಲ ಅಂದೆ
ಈಗ
ಅವರೆಲ್ಲ
ಸುಖವಾಗಿದಾರೆ
*
ನೀನು ಕೊಟ್ಟ
ಗುಲಾಬಿ
ಬಣ್ಣ
ಕಳಕೊಂಡಿದೆ
*
ಎಂದಿಗಿಂತ
ಇಂದು
ರುಚಿಯಾಗಿತ್ತು ಕಣೆ
ಕಾಫಿ
ನಿನ್ನ
ಪ್ರೀತಿ
ಬೆರೆಸಿದ್ಯಾ?
*
ನಿನಗೊಂದು
ಮಾತೂ ಹೇಳದೆ
ಸತ್ತು ಹೋಗಬಹುದು
ನಾನು
ಡೋಂಟ್ ವರಿ
ಸತ್ತ ಮೇಲೂ
ನಿನ್ನ
ಪ್ರೀತಿಸುವುದಿದ್ದರೆ
ಅದು
ನಾನು ಮಾತ್ರ
*
ಪ್ರತಿ ಕಣ್ಣೀರೂ
ದುಃಖದ್ದಲ್ಲ
ಪ್ರತಿ ನಗುವೂ
ಸುಖದ್ದಲ್ಲ
ಪ್ರತಿ ಮೌನವೂ
ಏಕಾಂತದ್ದಲ್ಲ
ಮುಖ
ಮುಖವಾಡಕ್ಕೆ
ಬಲಿಯಾಗಿದೆ
*
ದೇವರು
ಒಂದು ಹೂ ಮಾಡಿ
ಜೇನಿನಲ್ಲಿ ಅದ್ದಿ
ಇಟ್ಕೋ ಅಂತ ಕೊಟ್ಟ
ಅದು
ನೀನೇ ಕಣೆ
*
ಒದ್ದೆಯಾದ
ಮಣ್ಣ ಮೇಲೆ ನಿಂತು
ಆಚೆ ಬಂದಾಗಲೂ
ಉಳಿದುಬಿಡುತ್ತದಲ್ಲ
ಗುರುತು
ಹಾಗೇ ಪ್ರೀತಿ
*
ಪುಟ್ಟ ಕಥೆ ಹೇಳ್ತೀನಿ
ಅವನು ನಕ್ಕ
ಇವಳೂ ನಕ್ಕಳು
ಮಗು ಮಾತ್ರ
ಅಳ್ತಿತ್ತು
*
ಮಳೆ ಅಂದ್ರೆ
ಇಷ್ಟ ಅಂದವರೆ
ಬಂದಾಗ
ಛತ್ರಿ ಹುಡುಕ್ತಾರೆ
ಸೂರ್ಯ ಅಂದ್ರೆ
ಇಷ್ಟ ಅಂದವರೆ
ನೆರಳು ಹುಡುಕ್ತಾರೆ
ತಂಗಾಳಿ ಬೀಸಲಿ
ಅಂದವರೆ
ಬಂದಾಗ ಕಿಟಕಿ ಹಾಕ್ತಾರೆ
ಅದಕ್ಕೇ ಗೆಳೆಯ
ಯಾರಾದ್ರೂ
ಐ ಲವ್ ಯೂ
ಅಂದಾಗೆಲ್ಲ
ನನಗೆ ಭಯ
*
ಏನೂ
ಕೊಡಬೇಡ
ಕೇವಲ
ಪ್ರೀತಿಯ
ಹೊರತು
*
ಪ್ರೀತಿ
ಸುಲಭವೂ ಅಲ್ಲ
ಕಷ್ಟವೂ ಅಲ್ಲ
ಅದು ಹಗ್ಗದ
ಮೇಲಿನ ನಡಿಗೆ
*
ನಿಜ ಹೇಳ್ತೀನಿ
ನಾನು ಬಡವನಾಗಲು
ನಿನ್ನ ಬ್ಯೂಟಿಯೇ ಕಾರಣ
ನಿನಗೆ
ಕಾಸ್ಮೆಟಿಕ್ಸ್ ಕೊಡಿಸಲಿಲ್ಲ ಅಂದ್ರೆ
ಬೆಂಗಳೂರಲ್ಲೊಂದು
ಸೈಟ್ ಮಾಡ್ತಿದ್ದೆ
*
ಮೊನ್ನೆ ಕೇಳಬೇಕು ಅಂತಿದ್ದೆ
ಆಗಲಿಲ್ಲ
ನಿನ್ನೆ ಕೇಳಬೇಕು ಅಂತಿದ್ದೆ
ಆಗಲಿಲ್ಲ
ಇವತ್ತು ಕೇಳ್ತಿದೀನಿ ಕಣೋ
ನನ್ನ ಮರೆತು ಬಿಡು
ನನಗೆ ಪ್ರೀತಿಯೆಂದರೆ
ಕೇವಲ ಶೋಕಿಯಲ್ಲ
*
ಕೆಲವರು
ಬದುಕು
ಬಿಸಾಕಿ ಎದ್ದು ಹೋಗಿದ್ದು
ಬಾಳಲಿಕ್ಕಾಗಲ್ಲ ಅಂತಲ್ಲ
ನಾವೇ
ಬಿಡಲಿಲ್ಲ ಅಂತ

ನೂರು ರುಪಾಯಿಗೆ ಏನು ಬರುತ್ತೆ?

ಮೊನ್ನೆ ಸಂಜೆ ಯಾಕೋ ಫುಲ್ ಅಜರ್ೆಂಟಾಗಿ ಒಂದು ಟೀ ಕುಡಿಯಬೇಕೆನಿಸಿತು. ಒಮ್ಮೊಮ್ಮೆ ಯಾಕೆ ಹಾಗನ್ನಿಸುತ್ತದೆ ಅಂತ ನನಗೂ ಗೊತ್ತಿಲ್ಲ. ಬೇಜಾರಗಲಿಕ್ಕೆ, ತಲೆ ನೋವು ಬರಲಿಕ್ಕೆ ಆಫೀಸಿನಲ್ಲಿ ಬೇಜಾನ್ ಕಾರಣಗಳಿವೆ ಬಿಡಿ. ಆದರೆ ಅವತ್ತು ಅಂಥದ್ದೇನೂ ನಡೆದಿರಲಿಲ್ಲ.
ಆಫೀಸಿನ ಪಕ್ಕದಲ್ಲೊಂದು ಬೇಕರಿ ಇದೆ. ಅದು ಮರಳುಗಾಡಿನಲ್ಲಿ ಸಿಕ್ಕ ಓಯಸಿಸ್ ಥರ. ಅಲ್ಲಿಗೆ ಹೋಗಿ ಒಂದು ಟೀ ಹೇಳಿ ನಿಂತುಕೊಂಡೆ. ಬ್ಲೂ ಜೀನ್ಸ್ ಬ್ಲ್ಯಾಕ್ ಟೀಶಟರ್್ ತೊಟ್ಟಿದ್ದ ಚೆಲುವೆಯೊಬ್ಬಳು ಬಂದು ಎರಡು ಲೀಟರ್ ಪೆಪ್ಸಿ, ಎರಡು ಲೀಟರ್ ಮಿರಿಂಡಾ, ಎಡು ಲೀಟರ್ ಕೋಕ್ ತೆಗೆದುಕೊಂಡು ಹೋದಳು. ಅವಳು ಆ ಕಡೆ ಹೋದ ಮೇಲೆ ಅಂಗಡಿಯಾತ ಯಾತಕ್ಕೋ ನಕ್ಕ. ಏನ್ರಿ ಅಷ್ಟೊಂದು ಕುಡಿತಾರಾ? ಅಂದೆ. ಸ್ನಾನಕ್ಕಿರಬೇಕು ಸಾರ್ ಅಂದು ಆತ ಮತ್ತೆ ಫಕಫಕನೆ ನಕ್ಕ.
ಕೈಗೆ ಟೀ ಬರುವಷ್ಟರಲ್ಲಿ ಒಂದು ಮಗು ನೂರು ರುಪಾಯಿಯ ನೋಟು ಹಿಡಿದುಕೊಂಡು ಓಡೋಡಿ ಬಂತು. ಅದರ ಅಮ್ಮ ಮತ್ತು ಚಿಕ್ಕ ತಂಗಿ ಇನ್ನೂ ಆ್ಯಕ್ಟೀವಾದಿಂದ ಇಳಿದಿರಲೇ ಇಲ್ಲ. ಆಗಲೇ ಈ ಪೋರಿ ಈ ನೂರು ರುಪಾಯಿಗೆ ಏನು ಬರುತ್ತೆ ಅಂಕಲ್ ಅಂತ ಮೂರು ಸಲ ಕೇಳಿದ್ದಳು. ಅಂಗಡಿಯಾತ ಮಲಯಾಳಿ. ಅವನಿಗೆ ಏನು ಅರ್ಥ ಆಯಿತೋ ಅರ್ಥ ಆಗಲಿಲ್ಲವೋ! ಮಗುವಿನ ಮಾತಿಗೆ ಪ್ರತಿಕ್ರಿಯಿಸಲಾಗದೇ ಸುಮ್ಮನೆ ನಿಂತಿದ್ದ. ಮಗು ಮತ್ತೆ ಕೇಳಿತು, ಅಲ್ಲಿದ್ದ ತಿಂಡಿಯನ್ನೆಲ್ಲ ಒಮ್ಮೆ ನೋಡುತ್ತಾ... ನೂರು ರುಪಾಯಿಗೆ ಏನು ಬರುತ್ತೆ ಅಂಕಲ್ ?
ಅಂದರೆ ಆ ಮಗುವಿಗೆ ನೂರು ರುಪಾಯಿಗೆ ಅಂಥದ್ದೇನೂ ಬರೋಲ್ಲ ಅಂತ ಗೊತ್ತಾಗಿದೆಯೇ? ನೋ ಐಡಿಯಾ!
ಅಷ್ಟರಲ್ಲಿ ಅವರ ಅಮ್ಮ ಹೆಲ್ಮೆಟ್ಟೂ ತೆಗೆಯದೇ ಪರ ಲೋಕದಿಂದ ಬಂದ ಏಲಿಯನ್ಸ್ ಥರ ಇನ್ನೊಂದು ಚಿಕ್ಕ ಮಗುವಿನ ಕೈ ಹಿಡಿದುಕೊಂಡು ಬಂದಳು. ಮಗುವಿನ ಕೈಯಲ್ಲಿದ್ದ ನೂರು ರುಪಾಯಿ ಇಸಿದುಕೊಂಡು ಏನು ಬೇಕು ಬೇಗ ಹೇಳು? ಅಂತ ಅವಸರವಸರ ಮಾಡಿದಳು.
ಚಿಕ್ಕದು ದೊಡ್ಡದಕ್ಕಿಂತ ಹುಷಾರು. ನನಗೆ ಜೆಮ್ಸ್ ಬೇಕು. ಫ್ರೂಟಿ ಬೇಕು, ಕುರುಕುರೆ ಬೇಕು ಅಂತೆಲ್ಲ ಕೈ ಬೆರಳು ಎಣಿಸುತ್ತಾ ಪಟ್ಟಿಮಾಡತೊಡಗಿತು. ದೊಡ್ಡ ಮಗುವಿಗೆ ಮಾತ್ರ ಮೊದಲಿದ್ದ ಸ್ಪಿರಿಟ್ ಯಾಕೋ ಕಡಿಮೆಯಾದಂತಿತ್ತು. ಅದು ಒಂದೇ ಒಂದು ಡೈರಿಮಿಲ್ಕ್ಗೆ ಮೊರೆ ಹೋಗಿತ್ತು ಅಷ್ಟೆ.
ಬದುಕು ಎಂಥ ಡ್ರಾಸ್ಟಿಕ್ ಚೇಂಜ್ಗೆ ಒಳಗಾಗಿದೆ ಅಲ್ವಾ? ನಾವು ಚಿಕ್ಕವರಿದ್ದಾಗ ಐದು ಪೈಸೆಗೆ ಐದು ಶುಂಠಿ ಪೆಪ್ಪರ್ ಮಿಂಟ್ ಸಿಕ್ಕಿದರೆ ಅದೇ ಭಾಗ್ಯ. ಅದನ್ನೇ ಎಲ್ಲಿ ಬೇಗ ಕರಗಿ ಹೋಗುತ್ತದೋ ಅಂತ ಸ್ವಲ್ಪ ಚೀಪಿ ಇನ್ನು ಸ್ವಲ್ಪವನ್ನ ಅಂಗಿ ತುದಿಯಲ್ಲಿ ಒರೆಸಿ ಚಡ್ಡಿ ಜೇಬಲ್ಲಿ ಇಟ್ಟುಕೊಳ್ಳುತಿದ್ವಿ. ಈಗಿನ ಮಕ್ಕಳಿಗೆ ಅಂತ ಕೊರತೆಯಿಲ್ಲ. ಲಿಮಿಟ್ಟುಗಳೂ ಇಲ್ಲ. ಬಯಸಿದ್ದು ಕ್ಷಣದಲ್ಲೇ ಬೊಗಸೆಯಲ್ಲಿ ಸಿಗುತ್ತದೆ. ಸಿಗದೇ ಹೋಗಿರುವುದು ನಮಗೆ ಸಿಕ್ಕಿತಲ್ಲ ಆ ಮಜಬೂತಾದ ಬಾಲ್ಯ.
ಆ ವಿಷಯದಲ್ಲಿ ನಾವು ಭಾಗ್ಯವಂತರೇ!
ಏನಂತೀರಿ?

Monday, May 25, 2009

ದಿಸ್ ಈಸ್ ರೈ









ಆತ್ಮೀಯರೇ
ನಿಮಗೆ ಗೊತ್ತಿದೆ, ಪ್ರಕಾಶ್ ರೈ ಸಿಗುವುದೇ ಅಪರೂಪ. ಅಷ್ಟು ಬಿಜಿ ಬಿಜಿ ಬಿಜಿ ನಟ. ಆದರೆ ಅಷ್ಟು ಬಿಜಿಯ ನಡುವೆಯೂ ಬದುಕನ್ನ ಉಲ್ಲಾಸವಾಗಿಟ್ಟುಕೊಂಡವರು ರೈ. ಅವರ ಮಾತು ಕೇಳಿದರೆ ಇನ್ನಷ್ಟು ಹೊತ್ತು ರೈ ಮಾತಾಡಬಾರದಿತ್ತಾ ಅನಿಸುತ್ತದೆ. ಹೇಳಬೇಕೆಂದ್ರೆ ನಮಗಿಂತ ಚೆನ್ನಾಗಿ ಕನ್ನಡ ಮಾತಾಡುತ್ತಾರೆ. ಅವರೇ ಒಂದು ಕಡೆ ಹೇಳಿದ್ದು ನೆನಪಿದೆ. ನಾನು ಯಾವುದೇ ಕಡೆ ಹೋದರೂ ಅಲ್ಲಿನವರಿಗಿಂತ ಚೆನ್ನಾಗಿ ಆ ಭಾಷೆಯನ್ನು ಮಾತಾಡಬಲ್ಲೆ ಅಂತ. ಅದು ತಮಿಳಾಗಿರಲಿ, ತೆಲಗಾಗಿರಲಿ, ಇಂಗ್ಲಿಷ್ ಆಗಿರಲಿ, ಸೈ. ಭಾಷೆ ಅವರಿಗೆ ಅಷ್ಟು ಸುಲಲಿತ. ಕಮಷರ್ಿಯಲ್ ಮತ್ತು ಆಟರ್್ ಸಿನೆಮಾ ಯಾವುದಾದರೂ ಆಗಲಿ ಅವರ ಅಭಿನಯ ಕೂಡ ಫಕ್ಕಾ ಪ್ರೊಫೆಷನಲ್. ನಾಗಮಂಡಲ ಮರೆಯೋದಕ್ಕೆ ಸಾಧ್ಯಾನಾ?
ಇಲ್ಲಿ ಒಂದಷ್ಟು ರೈ ಅವರ ಫೋಟೋ ತೆಗೆದಿದ್ದೇನೆ. ಪತ್ರಕರ್ತ ಮಿತ್ರ ಮಣಿಕಾಂತ್ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ಬಿಡುಗಡೆಗೆ ಬಂದಿದ್ದರಲ್ಲ ಅವಾಗ ತೆಗೆದದ್ದು. ಕಲಾಕ್ಷೇತ್ರದ ಹಿಂಬದಿಯ ಅರಳಿ ಕಟ್ಟೆಯ ಮೇಲೆ ರೈ ಪವಡಿಸಿದ್ರು. ಜೊತೆಗೆ ಬಿ ಸುರೇಶ್ ಇದ್ರು. ನಾನಿದ್ದೆ. ಇನ್ನೂ ಹಲವು ಪತ್ರಕರ್ತ ಮಿತ್ರರೂ ಇದ್ರು. ಈ ಫೋಟೋಸ್ ಟಿಪಿಕಲ್ ರೈ ಅಂದ್ರೆ ಹೀಗಿರುತ್ತಾರೆ ಅಂತಿರ್ತೀವಲ್ಲ ಹಂಗಿದೆ.
ನಿಮಗೆ ಇಷ್ಟ ಆಗುತ್ತೆ ಅಂದುಕೊಳ್ಳುತ್ತೇನೆ.

Friday, May 15, 2009

ಟಿಪಿಕಲ್ ದೇವನೂರು




ನನಗೆ ಇನ್ನೂ ಚೆನ್ನಾಗಿ ನೆನಪಿದೆ.
ದೇವನೂರು ಮಹಾದೇವರನ್ನ ನಾನು ಮೊದಲ ಸಲ ನೋಡಿದ್ದು. ಮಹಾರಾಜ ಕಾಲೇಜಿನಲ್ಲಿ ಓದುವಾಗ ನನ್ನ ಗುರುಗಳೂ ಆತ್ಮೀಯರೂ ಆದ ಮೈಸೂರು ಲತಾ ಮೇಡಮ್ ಇದ್ದರು. ನನ್ನಲ್ಲೇನಾದ್ರೂ ಚೂರು ಪಾರು ಕವಿತೆಯ ಗಂಧ ಇದೆ ಅಂತ ಆದರೆ ಅದಕ್ಕೆ ಕಾರಣ ಲತಾ ಅವರೆ. 'ಬರೀತಾ ಇರು. ನಿಲ್ಲಿಸಬೇಡ' ಅಂತ ಬೆನ್ನುತಟ್ಟಿದವರೂ ಅವರೇ. ಒಮ್ಮೆ ದೆಹಲಿಯ ಪೊಯಿಟ್ರಿ ಸೊಸೈಟಿ ಆಫ್ ಇಂಡಿಯಾದವರು ಪೊಯಿಟ್ರಿ ವಕರ್್ ಶಾಪ್ ಅಂತ ಮಾಡಿದ್ರು. ಐದು ದಿನಾನೋ ಏನೋ ಇರಬೇಕು ನೆನಪಿಲ್ಲ. ಎನ್ಸಿಇಆರ್ಟಿ ಕ್ಯಾಂಪಸ್ನಲ್ಲಿ. ಅಲ್ಲಿನ ಮಲಯಾಳಂ ಹುಡುಗೀರ ಸೌಂದರ್ಯಕ್ಕೆ ಫಿದಾ ಆಗಿದ್ದು ಆವಾಗಲೇ. ಎನ್ಸಿಇಆರ್ಟಿಯಲ್ಲಿ ಇಂಗ್ಲೀಷ್ ರೀಡರ್ ಆಗಿದ್ದ ಎನ್ ಎಸ್ ರಘುನಾಥ್ ಆ ಶಿಬಿರದ ಸಂಚಾಲಕರಾಗಿದ್ರು. ಅದೊಂದು ಮರೆಯಲಾರದ ವಕರ್್ಶಾಪ್. ಅಲ್ಲಿ ಭಾಗವಹಿಸಿದ್ದ ತುಂಬಾ ಜನ ಗೆಳೆಯ ಗೆಳತಿಯರು ಇವತ್ತಿಗೂ ಸಂಪರ್ಕದಲ್ಲಿದ್ದಾರೆ. ಬಹುತೇಕರು ಜರ್ನಲಿಸ್ಟ್ಗಳೆ.
ಆ ವಕರ್್ಶಾಪ್ನಿಂದ ಬಂದ ಮೇಲೆ ನನ್ನ ಕವನದ ಖದರೇ ಬದಲಾಗಿ ಹೋಯಿತು. ಅದನ್ನು ಗಮನಿಸಿದ ಲತಾ ಅವರು 'ಪರವಾಗಿಲ್ಲ ಕಣೋ ವಕರ್್ಶಾಪ್ಗೆ ಹೋಗಿದ್ದೂ ಸಾರ್ಥಕ ಆಯ್ತು. ನಿನ್ನ ಕವಿತೆಯಲ್ಲಿ ಬದಲಾವಣೆ ಆಗಿದೆ' ಅಂದಿದ್ದರು. ಚಂಪಾ, ಎಲ್ ಬಸವರಾಜು, ಜಿ ಹೆಚ್ ನಾಯಕ್, ಪ್ರಭುಶಂಕರ್, ವಿಜಯಾ ದಬ್ಬೆ ಮುಂತಾದವರನ್ನೆಲ್ಲ ನೋಡಿದ್ದೂ ಅಲ್ಲೆ. ಅಲ್ಲಿಂದ ಬಂದ ಮೇಲೆ ಕಾಲೇಜಿನ ಕಾವ್ಯವಾಚನ ಸ್ಪಧರ್ೆಯಲ್ಲಿ ನನಗೆ ಮೊದಲ ಬಹುಮಾನ ಬಂತು.
ಹೀಗಿರುವಾಗಲೇ ಒಂದಿನ ಲತಾ ಮೇಡಮ್ ಹೇಳಿದ್ರು. 'ನೀನು ದೇವನೂರರನ್ನ ನೋಡಬೇಕು ಅಂದಿದ್ಯಲ್ಲ. ಸಂಜೆ ಹೋಗೋಣ. ಅವರು ಗಾಂಧಿಭವನಕ್ಕೆ ಬರುತ್ತಾರೆ. ಅಲ್ಲಿ ರಾಮ್ದಾಸ್ ಒಂದು ಇಂಟರ್ಕ್ಯಾಸ್ಟ್ ಮದುವೆ ಮಾಡಸ್ತಿದಾರೆ' ಅಂದ್ರು. ನನಗೆ ಖುಷಿ. ದೇವನೂರರನ್ನು ನೋಡಬಹುದಲ್ಲ ಅಂತ.
ಅಲ್ಲಿ ಹೋದ್ರೆ ಸಣ್ಣದೊಂದು ಸಮಾರಂಭ ಅದು. ರಾಮ್ದಾಸ್ ಇದ್ದರು. ದೇವನೂರು ಬಂದ್ರು. ನೋಡಿ ಅವಾಕ್ಕಾಗಿ ಹೋದೆ ನಾನು. ಒಡಲಾಳದಂತಹ, ಕುಸುಮಬಾಲೆಯಂತಹ ಮೌಲಿಕ ಕೃತಿ ಬರೆದದ್ದು ಈ ಮನುಷ್ಯನಾ?
ಅದೇ ಕಾಡ್ರಾಯ್ ಪ್ಯಾಂಟ್, ಇಸ್ತ್ರೀ ಇಲ್ಲದ ಕಾಟನ್ ಶಟರ್್, ಹಳೇ ಚಪ್ಲಿ. ಬಾಚದ ತಲೆ, ಅಥವಾ ಆ ತಲೆ ಬಾಚಿದರೂ ಹಾಗೇ ಇರುತ್ತೆ ಅನ್ನುವುದು ನನ್ನ ಅನಿಸಿಕೆ. ಟಿಪಿಕಲ್ ದೇವನೂರ ಮಹಾದೇವ. 'ಮೇಡಮ್ ಇವರಾ?' ಅಂದೆ. 'ಎಷ್ಟು ಸಿಂಪಲ್ ಆಗಿದಾರೆ ನೋಡು' ಅಂದ್ರು.
ಆಮೇಲೆ ಅವರನ್ನು ನಾನು ಅವಾಗವಾಗ ನೋಡತೊಡಗಿದೆ. ಕೆಲವು ಸಲ ಲೂನಾದಲ್ಲಿ ನಮ್ಮ ಕಾಲೇಜಿನ ಮುಂದೇನೆ ಹಾದು ಹೋಗ್ತಿದ್ರು.
ಅದಾಗಿ ಎಷ್ಟೋ ದಿನಗಳ ನಂತರ ನಾನು ಒಂದು ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದೆ. ಬಡತನ ಕೆಲಸ ಮಾಡುವುದನ್ನು ಕಲಿಸಿತ್ತು. ಪ್ರೆಸ್ನಲ್ಲಿ ದೇವನೂರರ ಒಡಲಾಳ ಪ್ರಿಂಟಾಗುತ್ತಿತ್ತು. ಬಹುಶಃ ಅದು ಯಾವುದೋ ವಿಶ್ವವಿದ್ಯಾನಿಲಯಕ್ಕೆ ಟೆಕ್ಸ್ಟ್ಬುಕ್ ಆಗಿತ್ತು ಅನಿಸುತ್ತೆ. ನಾನಾಗಲೇ ಅವರನ್ನು ಓದಿಕೊಂಡಿದ್ದೆ. ಮೆಚ್ಚಿಕೊಂಡಿದ್ದೆ.
ಒಂದಿನ ಇದ್ದಕ್ಕಿದ್ದಂತೆ ನಮ್ಮ ಪ್ರೆಸ್ಸಿಗೆ ಬಂದರು. ಅದದೇ ಗೆಟಪ್. ಕೈಯಲ್ಲೊಂದು ಸಿಗರೇಟ್. ಕಡುಗಪ್ಪಿನ ಗಡ್ಡ.
ಬಂದವರೇ ಪುಸ್ತಕ ಕೊಡಿ ಅಂತ ದೊಡ್ಡ ಟೇಬಲ್ ಮೇಲೇನೆ ಕೂತರು. ಕೊಟ್ಟೆ. ನಮ್ಮ ಓನರ್ ಇರಲಿಲ್ಲ. ಚೆನ್ನಾಗಿ ಮಾಡ್ತಿದೀರಿ ಕಣ್ರಯ್ಯಾ. ಅಂದರು. ನಾನು ನನ್ನ ಪರಿಚಯ ಹೇಳಿಕೊಂಡೆ. ಖುಷಿಯಾಯ್ತು ಅವರಿಗೆ. ಸರ್ ನಿಮ್ಮ ಕುಸುಮಬಾಲೆ ಒಂದು ಕಾಪಿ ಇದ್ರೆ ಕೊಡಿ. ಹುಡುಕಿ ಹುಡುಕಿ ಸಾಕಾಯ್ತು ಅಂದೆ. ಮುಂದಿನ ಸಲ ತರ್ತೀನಿ ಅಂದ್ರು. ಹಾಗನ್ನುತ್ತಲೇ ಮತ್ತೊಂದು ಸಿಗರೇಟು ಹಚ್ಚಿ ಕೂತರು. ಹಣ ಕೊಡಲು ಬಂದರು. ನಾನು ಬೇಡ ಸಾರ್ ಅಂದೆ. ಚೆನ್ನಾಗಿ ಮಾಡ್ತಿದೀರಿ. ಏನಾದರೂ ತಿಂಡಿ ತರಿಸ್ಕೊಂಡು ತಿನ್ನಿ ಅಂದರು. ಎಷ್ಟೇ ಬೇಡವೆಂದರೂ ಬಿಡಲಿಲ್ಲ. ಅವರ ಒತ್ತಾಯಕ್ಕೆ ಮಣಿದು ಪಡೆದುಕೊಂಡೆ. ವಿಷಯ ಏನಂದ್ರೆ ನನ್ನನ್ನ ಬಿಟ್ಟರೆ ಅಲ್ಲಿದ್ದ ಉಳಿದ ಇಬ್ಬರೂ ತಮಿಳರು. ಅವರಿಗೆ ದೇವನೂರರ ಬಗ್ಗೆ ಏನೆಂದರೆ ಏನೂ ಗೊತ್ತಿಲ್ಲ. ಅಷ್ಟರಲ್ಲಿ ನಮ್ಮ ಓನರ್ ಮಹಾಶಯ ಬಂದ. ದೇವನೂರರು ಸ್ವಲ್ಪ ಹೊತ್ತು ಕುಳಿತಿದ್ದು ಹೊರಟರು.
ಅವರು ಹೋದ ಮೇಲೆ ನಮ್ಮ ಓನರ್ ಕೇಳಿದ.
'ನೀನಾದರೂ ಹೇಳಬಾರದೇನಯ್ಯಾ ಸಿಗರೇಟ್ ಸೇದಬೇಡಿ ಅಂತ'.
'ನಾನೇಗೆ ಹೇಳಲಿ ಸಾರ್, ಅಷ್ಟು ದೊಡ್ಡವರಿಗೆ. ನೀವೇ ಹೇಳಬಹುದಿತ್ತಲ್ಲ. ನೀವು ಬಂದಮೇಲೂ ಸಿಗರೇಟ್ ಸೇದುತ್ತಿದ್ರಲ್ಲ' ಅಂದೆ.
'ಹೋಗಲಿ ಬಿಡು. ಇನ್ನೊಮ್ಮೆ ಬಂದಾಗ ಸರ್ ಪ್ರೆಸ್ನಲ್ಲಿ ಸಿಗರೇಟ್ ಸೇದೋ ಹಾಗಿಲ್ಲ ಅನ್ನು. ಪೇಪರ್ ಜಾಸ್ತಿ ಇರುತ್ತಲ್ಲ. ಬೆಂಕಿ ಬಿದ್ರೆ ಕಷ್ಟ ಅಂತ ಹೇಳು' ಅಂದ್ರು.
ಆಯ್ತು ಅಂದೆ.
ಅವರು ಮತ್ತೆ ಬರಲಿಲ್ಲ. ನಾನೋ ಬದುಕು ಅರಸಿಕೊಂಡು ಬೆಂಗಳೂರಿನ ಹಾದಿ ಹಿಡಿದೆ.
ಇದೆಲ್ಲ ಯಾಕೆ ನೆನಪಾಯ್ತು ಅಂದ್ರೆ ನಿನ್ನೆ ಅವರ ಒಡಲಾಳ ನಾಟಕ ನೋಡಿ ಬಂದೆ. ತುಂಬಾ ಖುಷಿ ಆಯ್ತು. ಉಮಾಶ್ರೀ ಸಾಕವ್ವನ ಪಾತ್ರಕ್ಕೆ ಜೀವ ತುಂಬಿದ್ದರು. ಬೆಳಕೂ ನೈಜವಾಗಿತ್ತು. ಎಲ್ಲಾ ಓಕೆ. ಆದರೆ ಇಡೀ ನಾಟಕದಲ್ಲೇನೋ ಕೊರತೆ ಇದೆ ಅನಿಸ್ತು. ಅದು ಭಾಷೆಯದ್ದು. ಸಾಮಾನ್ಯವಾಗಿ ದೇವನೂರರ ಭಾಷೆ ಸ್ವಲ್ಪ ಕಷ್ಟಾನೆ. ಆದರೆ ನನ್ನಂಥವರಿಗೆ ಅದು ತುಂಬಾನೆ ಇಷ್ಟ. ಆ ಭಾಷೆಯ ಸೊಗಡೇ ಅಂಥದ್ದು. ಪ್ರಾದೇಶಿಕವಾದ ಆ ಭಾಷೆಗೆ ಅದರದೇ ಆದ ಒಂದು ಗುಣವಿದೆ. ಲಾಲಿತ್ಯವಿದೆ. ಅದನ್ನು ಸರಿಯಾಗಿ ಬಳಸಿಕೊಂಡಿದ್ರೆ ನಾಟಕ ಇನ್ನಷ್ಟು ಪ್ರಬುದ್ಧವಾಗ್ತಿತ್ತೇನೋ ಅನಿಸ್ತು.
ಇವತ್ತಿಗೂ ನನ್ನ ಅಚ್ಚುಮೆಚ್ಚಿನ ಲೇಖಕ ದೇವನೂರು. ಮೈಸೂರು ಕಡೆ ಹೋದಾಗ ಒಮ್ಮೆ ಅವರ ತೋಟದ ಕಡೆಗೆ ಹೋಗಿಬರೋಣ ಅಂದುಕೊಂಡಿದ್ದೇನೆ.
ನೋಡೋಣ.

Sunday, May 10, 2009

ವೇಗ






ನನಗೆ ಅವಳ ಪರಿಚಯ ಆಗಿದ್ದು ಇಂಟನರ್ೆಟ್ ಚಾಟ್ ಮೂಲಕ.
ಸಿಕ್ಕ ಮೂರೇ ನಿಮಿಷದಲ್ಲಿ ಗತಕಾಲದ ಫ್ರೆಂಡ್ಸ್ನಂತಾಗಿಬಿಟ್ಟಿದ್ದೆವು. ನಾನೋ ಮೊದಲೇ ಮಹಾನ್ ತರಲೆ. ಅವಳೂ ಅಂತವಳೇ! ನಿನಗಿಂತ ನಾನೇನು ಕಡಿಮೆ ಅನ್ನುವಂತೆ ಬುರಬುರನೆ ಮಾತಾಡತೊಡಗಿದಳು. ನನ್ನ ತುಂಟತನ ಕೆಲವೊಮ್ಮೆ ಅವಳಲ್ಲಿ ನಗು ಉಕ್ಕಿಸುತ್ತಿತ್ತು.
ಅವಳು ವೇಗ.
ಆಕರ್ುಟ್ನಲ್ಲಿ ಅವಳ ಪ್ರೊಫೈಲ್ ಸಿಗಬಹುದೇನೋ ಅಂತ ಹುಡುಕಾಡಿದೆ. ಊಹುಂ ಸಿಗಲಿಲ್ಲ. ಆದರೆ ನಾನು ಆನ್ಲೈನ್ಗೆ ಹೋದಾಗಲೆಲ್ಲ ಅವಳು ಫಕ್ಕನೆ ಸಿಗುತ್ತಿದ್ದಳು. ನಾನು ಎಂಟ್ರಿ ಆದಕೂಡಲೇ ಹಾಯ್ ತುಂಟ ಅನ್ನೋ ಅವಳ ಶಬ್ದ ಕಣ್ಣಿಗೆ ರಾಚುತಿತ್ತು. ಯಾರಿರಬಹುದು ಇವಳು?
ದಿನೇ ದಿನೇ ಚಾಟ್ ಮಾಡುತ್ತ ಹೋದ ಹಾಗೆ ನನಗೆ ಅವಳ ಮೇಲೆ ಅದೆಂಥದೋ ಸೆಳೆತ ಶುರುವಾಗಿಬಿಟ್ಟಿತು. ರಜೆಯಲ್ಲಿದ್ದಾಗಲಂತೂ ಚಡಪಡಿಸಿಹೋಗುತ್ತಿದ್ದೆ.
ಹೀಗಿರುವಾಗಲೇ,
ನೀವು ಸಖತ್ ಹ್ಯಾಂಡಸಮ್ ಆಗಿ ಇದ್ದೀರಿ! ಅಂತ ಒಂದಿನ ಚಾಟ್ ಮಾಡಿದಳು.
ಇದ್ಯಾಕೋ ಸ್ವಲ್ಪ ಅತಿಯಾಯ್ತು ಅನಿಸೋಲ್ವ? ಅಂದೆ.
ಕಿಸ್ಸಕ್ಕನೆ ನಕ್ಕಳು.
ನಾನು ಆಕರ್ುಟ್ನಲ್ಲಿ ಹಾಕಿದ್ದ ಫೋಟೊ ಕೋತಿಯದ್ದು.
ಆಮೇಲೆ ಮೊಬೈಲ್ ನಂಬರ್ ಬೇಕು ಅಂದಳು. ಕೊಟ್ಟೆ. ಅವಳೇ ಫೋನ್ ಮಾಡಿದಳು. ನಿಮ್ಮ ಬಗ್ಗೆ ಕೇಳಿದ್ದೇನೆ. ಅಷ್ಟು ಚಂದಕ್ಕೆ ಹೇಗೆ ಬರೀತೀರಾ? ಎಲ್ಲಿ ಸಿಗುತ್ತವೆ ಆ ವಿಷಯಗಳೆಲ್ಲ? ಅಂದಳು. ನಾನು ನಿಮ್ಮ ಫ್ಯಾನ್ ಗೊತ್ತಾ? ಅಂದಳು.
ಯಾವ ಫ್ಯಾನ್? ಕೇತಾನಾ? ಉಷಾನಾ?ಅಂದೆ.
ಮತ್ತೆ ಕಿಸ್ಸಕ್ಕನೇ ನಗು.
ಪರಸ್ಫರ ಮಾತು, ಎಸ್ಸೆಮ್ಮೆಸ್ಸುಗಳ ಭರಾಟೆ ಶುರುವಾಯ್ತು. ಮಾತುಕತೆ ಚಾಟ್ನಿಂದ ಮೊಬೈಲ್ಗೆ ಶಿಫ್ಟ್ ಆಗಿತ್ತು. ಗಂಟೆಗಟ್ಟಲೆ ಹರೀತು. ವೇಗಳ ವಾಯ್ಸ್ ತುಂಬಾ ಸ್ವೀಟ್ ಆನಿಸ್ತಿತ್ತು.
ಮರುಳಾದೆ.
ಅದೇನು ವೇಗ ಅಂತ ಇಟ್ಟುಕೊಂಡಿದ್ದೀರಾ?
ನನ್ನೆಸರು ಸುಭದ್ರಾ ಅಂತ. ಎಲ್ಲರೂ ಸುಬ್ಬಿ ಸುಬ್ಬಿ ಅನ್ನೋರು. ನನಗ್ಯಾಕೋ ಅದು ಹಿಡಿಸಲಿಲ್ಲ. ಇದನ್ನ ಒಮ್ಮೆ ಅಪ್ಪನಿಗೆ ಹೇಳಿದಾಗ ಅಪ್ಪ ಹೇಳಿದ್ರು. ನೀನು ಅತ್ಯಂತ ಚೂಟಿ ಹುಡುಗಿ ಅಲ್ವ!. ತುಂಬ ವೇಗವಾಗಿ ಎಲ್ಲವನ್ನೂ ಗ್ರಹಿಸಿಕೊಳ್ತೀಯ. ವೇಗ ಅಂತಿಟ್ಕೋ ಅಂದ್ರು. ನನಗೇನೋ ಆ ಹೆಸರು ಕೇಳಿದ ತಕ್ಷಣ ಓಕೆ ಡಿಫರೆಂಟ್ ಆಗಿದೆ ಅನಿಸ್ತು. ಇರಲಿ ಅಂದೆ, ಅಂದಳು.
ಗುಡ್. ಚೆನ್ನಾಗಿದೆ. ತಂಗಿ ಇದಾಳಾ?
ಹ್ಞೂಂ ಇದಾಳೆ.
ಅವಳಿಗೆ ಸ್ಲೋ ಅಂತ ಇಡಿ.
ಮತ್ತೆ ಕಿಸ್ಸಕಿಸ್ಸಕ್ಕನೆ ನಗು.
ಓಕೆ, ನೀನು ಹೇಗಿದೀರಾ ನೋಡಲು? ಅಂದೆ.
ಕೆಟ್ಟದಾಗಿದ್ದೇನೆ!
ಪರವಾಗಿಲ್ಲ ಒಂದು ಫೋಟೋ ಕಳಿಸಿ?
ಅದೊಂದು ಮಾತ್ರ ಕೇಳಬೇಡಿ. ನಿಮ್ಮ ಫೋಟೋ ಕೂಡ ನನಗೆ ಬೇಡ. ಒಮ್ಮೆ ಭೇಟಿಯಾದ ಮೇಲೆ ಬೇಕಾದ್ರೆ ಅದೆಲ್ಲ ಆಗಲಿ ಅಂದಳು.
ಬಲವಂತ ಮಾಡುವುದು ಬೇಡ ಅಂತ ಸುಮ್ಮನಾದೆ.
***
ಅವತ್ತು ಭಾನುವಾರ. ಬೆಳಿಗ್ಗೆ.
ಇವತ್ತು ಭೇಟಿ ಆಗೋಣ ಅನಿಸ್ತಿದೆ. ಸಂಜೆ ಐದಕ್ಕೆ ಮೆಜೆಸ್ಟಿಕ್ನ ಸಂಗಮ್ ಟಾಕೀಸ್ ಎದುರಿಗೆ ನಾನು ನಿಂತಿರುತ್ತೇನೆ. ಬರ್ತೀರಾ? ಅಂದಳು ವೇಗ.
ನನ್ನಲ್ಲಿ ಅವಳನ್ನು ಭೇಟಿ ಆಗುವ ಎಕ್ಸೈಟ್ಮೆಂಟ್ ಇನ್ನೂ ಕಡಿಮೆ ಆಗಿರಲಿಲ್ಲ.
ಆಯ್ತು. ಬರ್ತೇನೆ. ಆದ್ರೆ ಇಬ್ಬರೂ ಪರಸ್ಫರ ಗುರುತು ಹಿಡಿಯೋದು ಹೇಗೆ?
ನಾನು ಆಕಾಶ ಬಣ್ಣದ ಚೂಡಿ ಹಾಕಿರ್ತೇನೆ. ನೀವು? ಅಂದಳು.
ನಾನು ಗುಲಾಬಿ ಬಣ್ಣದ ಶಟರ್್.
ಓಕೆ ಡನ್ ಅಂದಳು.
ನಾಲ್ಕೂವರೆಗೆಲ್ಲ ನನ್ನ ರೂಮು ಬಿಟ್ಟಿದ್ದೆ. ಆದರೆ ನಾನು ಹಾಕಿಕೊಂಡಿದ್ದು ಮೊಲದ ಬಿಳುಪಿನ ಶಟರ್್.
ಸುಮ್ಮನೆ ಒಂದು ಸಪ್ರರ್ೈಸ್ ಕೊಡೋಣ ಅನ್ನಿಸಿ ಹಾಗೆ ಮಾಡಿದ್ದೆ.
ಸರಿಯಾಗಿ ಐದು ಗಂಟೆ ಮೂರು ನಿಮಿಷ ಮುವತ್ತೊಂಬತ್ತು ಸೆಕೆಂಡಿಗೆ ನಾನು ಸಂಗಮ್ ಟಾಕೀಸಿನ ಎದುರಿಗೆ ನಿಂತಿದ್ದೆ.
ಜನ ತುಂಬಾ ಇದ್ದರು. 'ಹಾಗೆ ಸುಮ್ಮನೆ' ಏಳುವರೆ ಶೋ ಗೆ ಜನ ಮುಗಿ ಬೀಳುತ್ತಿದ್ರು.
ಐದು ಗಂಟೆ ಐದು ನಿಮಿಷ ಇಪ್ಪತ್ತೆಂಟು ಸೆಕೆಂಡಿಗೆ ಸರಿಯಾಗಿ ಅವಳು ಬಂದಳು. ಅದೇ ಆಕಾಶ ಬಣ್ಣದ ಚೂಡಿ. ಮುಡಿಯಲ್ಲಿ ಮೊಳದುದ್ದ ಮಲ್ಲಿಗೆ. ನನ್ನ ಕಣ್ಣನ್ನ ನಾನೇ ನಂಬದಾದೆ. ನನ್ನ ಪಕ್ಕದಲ್ಲೇ ಬಂದು ನಿಂತುಕೊಂಡಳು. ದೇವರೆ ನಾನು ಮಾತಾಡುತ್ತಿದ್ದ ಹುಡುಗಿ ಇವಳೇನಾ? ಇಷ್ಟು ಸುಂದರವಾಗಿಯೂ ಹುಡುಗೀರು ಇರ್ತಾರಾ?
ಟೈಮ್ ಪ್ಲೀಸ್ ಅಂದಳು. ತಡವರಿಸುತ್ತಾ ಐದು ಹತ್ತು ಅಂದೆ.
ಥ್ಯಾಂಕ್ಸ್ ಅಂದಳು. ನನ್ನ ಕಣ್ಣು ಅವಳನ್ನು ಬಿಟ್ಟು ಕದಲಲಿಲ್ಲ.
ಆದರೇ ಅವಳ ಕಣ್ಣು ಮಾತ್ರ ನನ್ನ ಬರುವಿಕೆಯನ್ನೇ ಅರಸುತ್ತಿದ್ದವು.
ನನ್ನ ಮನಸ್ಸೇಕೋ ನೀನು ನೋಡಿದ್ರೆ ಹೀಗಿದೀಯ. ಅವಳು ನೋಡಿದ್ರೆ ಅಷ್ಟು ಚಂದಕ್ಕಿದ್ದಾಳಲ್ಲೋ. ನಿನ್ನ ಕೆಟ್ಟ ಮುಖ ಅವಳಿಗೆ ಹ್ಯಾಗೋ ತೋರಿಸ್ತೀಯ. ಬೇಡ ಬಿಡು ಅಂದಂಗಾತು.
ಗಂಟೆ ಐದೂ ಕಾಲಾಯ್ತು. ಐದೂವರೆ ಆಯ್ತು. ಫೋನ್ ಮಾಡತೊಡಗಿದಳು ನನಗೆ.
ಅಯ್ಯೋ ಫೋನ್ ಮಾಡ್ತಿದಾಳಲ್ಲ, ರಿಂಗಾದ್ರೆ ಅಂತ ಗಾಬರಿಯಿಂದ ಜೇಬಿಗೆ ಕೈ ಹಾಕಿದರೆ! ಎಲ್ಲಿದೆ ಫೋನ್? ಬರುವ ಗಡಿಬಿಡಿಯಲ್ಲಿ ರೂಮಿನಲ್ಲೇ ಮರೆತು ಬಂದಿದ್ದೆ.
ನಿಜಕ್ಕೂ ಅವಳಿಗೆ ಸಿಟ್ಟು ಬಂದಿತ್ತು. ಈ ಹುಡುಗರೆ ಹೀಗೆ, ಛೇ ಅಂತೇನೋ ಗೊಣಗಿಕೊಂಡದ್ದು ಸಣ್ಣಗೆ ಕೇಳಿಸಿತು. ಮುಖದಲ್ಲಿ ಗಲಿಬಿಲಿ.
ಫೋನ್ ಮಾಡುತ್ತಲೇ ಇದ್ದಳು. ನನ್ನ ಕಡೆ ಒಮ್ಮೆ ತಿರುಗಿ ನೋಡಿದಳು. ನಾನು ಆಕಾಶದತ್ತ ನೋಡಿದೆ.
ಅವಳ ಚಡಪಡಿಕೆ ನನಗೆ ನೋಡಲಾಗಲಿಲ್ಲ.
ಇನ್ನು ಇಲ್ಲಿ ನಿಲ್ಲುವುದು ಬೇಡ ಅನ್ನಿಸಿ ವೇಗವಾಗಿ ಅಲ್ಲಿಂದ ಹೆಜ್ಜೆ ಕಿತ್ತೆ.

Friday, May 8, 2009

ಮಧುವನ ಕರೆದರೆ

ಮಧುವನ ಕರೆದರೆ
ತನುಮನ ಸೆಳೆದರೆ
ಶರಣಾಗು ನೀನು ಆದರೆ...
ಅದ್ಯಾವ ಅಮೃತ ಘಳಿಗೆಯಲ್ಲಿ ಈ ಹಾಡು ಕೇಳಿದೆನೋ ಗೊತ್ತಿಲ್ಲ ಅವಾಗಿನಿಂದ ಒಂದೇ ಸಮನೆ ಮಧುವನವನ್ನ ಕೇಳುತ್ತಿದ್ದೇನೆ.
ನಾನು ಒಂಥರಾ ಹಾಗೆ. ಒಂದು ಹಾಡು ಇಷ್ಟ ಆಗುತ್ತೆ ಅಂದ್ರೆ ಅದನ್ನೇ ಎಗ್ಗಿಲ್ಲದೇ ಕೇಳುತ್ತೇನೆ. ನೀವು ಅದಕ್ಕಿಂತ ಚಂದಕ್ಕಿದೆ ಕೇಳಿ ಅಂತ ನೂರು ಹಾಡು ಕೊಟ್ಟರೂ ನನಗೆ ಕೇಳಿಸೊಲ್ಲ. ನನಗೆ ನನ್ನದೇ ಹಾಡು. ನನ್ನದೇ ಪಾಡು. ಅದರ ಪಸೆ ಆರಿ, ಇನ್ನು ಸಾಕು ಅನ್ನುವ ತನಕ ಅದು ಕೇವಲ ನನ್ನ ಹಾಡು. ಗುಂಗು ಹಿಡಿಸಿರುತ್ತದೆ. ಅಂದಹಾಗೆ ಮಧುವನ ಇಂತಿ ನಿನ್ನ ಪ್ರೀತಿಯ ಚಿತ್ರದ್ದು. ಬರೆದವರು ನನ್ನ ಪ್ರೀತಿಯ ಗೆಳೆಯರೂ ಲೇಖಕರೂ ಆದ ಜಯಂತ್ ಕಾಯ್ಕಿಣಿ ಅವರು. ವಾಣಿ ಅದ್ಭುತವಾಗಿ ಹಾಡಿದ್ದಾರೆ.
ಈಗೊಂದಿಷ್ಟು ವರ್ಷದ ಹಿಂದೆ ಎಂ ಡಿ ಪಲ್ಲವಿಯವರು ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ "ನೀನಿಲ್ಲದೇ ನನ್ನದೇನಿದೆ" ಅನ್ನುವ ಭಾವಗೀತೆಯೊಂದನ್ನ ಹಾಡಿದ್ದರು. ನನಗೆ ಆ ಹಾಡು ಎಷ್ಟು ಹುಚ್ಚು ಹಿಡಿಸಿಬಿಡ್ತು ಅಂದ್ರೆ ಅದನ್ನ ಎಷ್ಟೋ ದಿನಗಳ ತನಕ ಎಡೆಬಿಡದೇ ಕೇಳಿದ್ದೆ. ಅದರಲ್ಲೂ ಎಂ ಡಿ ಪಲ್ಲವಿಯವರ ದನಿಯಲ್ಲಿ ಆ ಹಾಡನ್ನು ಕೇಳುವುದೇ ಒಂದು ಸೊಬಗು.
ಕೆಲವು ಹಾಡು ಮಾತ್ರ ಆ ಥರದ ಗುಂಗು ಹಿಡಿಸಿಬಿಡುತ್ತವೆ. ಅವರು ಹಾಡಿದ್ದಾರೆ ಅಂತ ಆ ಹಾಡಿಗೆ ಅಷ್ಟು ತೂಕ ಬಂತಾ ಅಥವಾ ಆ ಹಾಡು ಹಾಡಿದ್ದರಿಂದಲೇ ಹಾಡಿದವರಿಗೊಂದು ತೂಕ ಬಂತಾ? ಗೊತ್ತಿಲ್ಲ.
ಬಟ್ ಎರಡೂ ಹೌದು.
ರತ್ನಮಾಲಾ ಪ್ರಕಾಶ್ ಹಾಡಿದ ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ... ಅರ್ಚನಾ ಉಡುಪಾ ಅವರ ಕರುಣಾಳೆ ಬಾ ಬೆಳಕೆ... ಪುತ್ತೂರು ನರಸಿಂಹ ನಾಯಕ್ ಅವರ ದಾಸರ ಪದಗಳು, ಮೈಸೂರು ಅನಂತ ಸ್ವಾಮಿಯವರ ರತ್ನನ್ ಪದಗಳು, ಯಾವ ಮೋಹನ ಮುರಳಿ ಕರೆಯಿತೋ, ಅಶ್ವಥ್ ಅವರ ಕೋಡಗಾನ ಕೋಳಿ ನುಂಗಿತ್ತಾ... ಒಂದಾ ಎರಡಾ. ಕೇಳಿದರೆ ಯಾವತ್ತಿಗೂ ದಣಿಯದ ಹಾಡುಗಳವು.
ಕೇಳಿದ್ದರೂ ಕೇಳದಿದ್ದರೂ ಮಧುವನ ಕರೆದರೆ ಇನ್ನೊಮ್ಮೆ ಕೇಳಿ ನೋಡಿ.
ಅದರ ಗಮ್ಮತ್ತೇ ಬೇರೆ.

Tuesday, April 28, 2009

ಕಾಮಿ ಕವಿತೆಗಳು



ಪ್ರಿಯರೇ ಹೀಗ್ಯಾಕೆ ಬರೆಯಬೇಕೆನಿಸಿತೋ ನನಗೆ ಗೊತ್ತಿಲ್ಲ. ಸುಮ್ಮನೆ ಕುಳಿತಿದ್ದವನ ಕೈ ಹಿಡಿದು ಬರೆಸಿಕೊಂಡ ಪುಟ್ಟ ಪುಟ್ಟ ಸಾಲುಗಳಿವು. ಯಾಕೆ, ಏನು ಅಂತ ಕೇಳಬೇಡಿ. ಸುಮ್ಮನೆ ಓದಿಕೊಳ್ಳಿ. ಹಾಗೇ ಇಷ್ಟ ಆಗಿರಲಿ, ಆಗದೇ ಇರಲಿ ಪ್ರತಿಕ್ರಿಯಿಸಿ.




1
ಮುಟ್ಟು ಅಂದರೂ ಮುಟ್ಟಲ್ಲ
ಸುಮ್ಮನೆ ಆಸೆಪಡುತ್ತೀಯಲ್ಲ
ಒಮ್ಮೆ ಕೈ ತಾಕಿಸು ಗೆಳೆಯ
ಎದೆಯ ಪುಟಗಳಿಗೆ
ಸುಗ್ಗಿ ಬರಲಿ

1
ನೀನು ಮಲಗಿದೆ
ನಾನೂ ಮಲಗಿದೆ
ಎಚ್ಚರಾದಾಗಲೇ ಗೊತ್ತಾಗಿದ್ದ
ನಮ್ಮ ನಡುವೆ ಮತ್ತೊಬ್ಬನಿದ್ದ
ಕಾಮಿ

3
ನೀನು ಏನನ್ನೂ ಬಿಚ್ಚಬೇಡ
ಸುಮ್ಮನೆ ಬಚ್ಚಿಟ್ಟಿಕೋ
ಬಟಾ ಬಯಲಾಗುವುದೂ ಕೂಡ
ಕೆಲವೊಮ್ಮೆ ಬೋರ್ ಹೊಡೆಸುತ್ತದೆ.

4
ಇವತ್ಯಾಕೋ
ನೀನು ಬೇಕೆನಿಸುತ್ತಿದೆ
ಬಂದು ಹೋಗೋ
ಮೈಗೆ ಸೋಲುವುದು ಗೊತ್ತಿದ್ದಂತೆ
ಸುಖಕ್ಕೆ ತೇಲುವುದು ಗೊತ್ತಿದೆ
ಅವೆರಡನ್ನೂ ಕಲಿಸುತ್ತೇನೆ

5
ನನ್ನ ಪಾದದ ಕಿರುಬೆರಳಿಗೂ
ನಿನ್ನ ನೆನಪಿದೆ ಕಣೋ
ಕಚ್ಚಿದ
ಗುರುತು ಮಾಸಿ ಹೋಗಿಲ್ಲ
ಇವತ್ತಾದರೂ ಬಂದು
ಮುಲಾಮು ಹಚ್ಚಬಾರದಾ?

6
ನೀನು ಏನೋ ಹುಡುಕಿದೆ?
ನಾನು ಏನೋ ತಡಕಿದೆ?
ಗೊತ್ತಿಲ್ಲ, ಆದರೆ
ಇಬ್ಬರಲ್ಲೂ ಏನೋ ಸಿಕ್ಕ ಖುಷಿ ಇದೆ

7
ಏನೂ ಬೇಡ
ಸುಮ್ಮನೆ ತಬ್ಬಿಕೋ!

Friday, April 24, 2009

ದಿ ಪೇಯ್ನ್



ಪ್ರಿಯ ಸ್ನೇಹಿತರೆ
ಇದು ಕೆಲವು ವಾರಗಳ ಹಿಂದೆ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಪ್ರಕಟವಾದ ಕಥೆ.
ಮತ್ತೆ ಇಲ್ಲಿ ನಿಮಗಾಗಿ ಹಾಕುತ್ತಿದ್ದೇನೆ. ಓದಿಕೊಳ್ಳಿ





ಕಿಟಕಿ ತೆರೆದೇ ಇತ್ತು.
ದೂರದಲ್ಲಿ ಯಾರದೋ ಒಕ್ಕಳಾಳದಿಂದ ಎದ್ದು ಬಂದ ಸಣ್ಣದೊಂದು ಆಲಾಪ್. ಅದು ನೋವಿನ ಎಳೆ ಎಂದು ಗುರುತಿಸಿಕೊಳ್ಳುವುದಕ್ಕೆ ಪ್ರಿಯಾಗೆ ಸಮಯ ಹಿಡಿಯಲಿಲ್ಲ.
ಮಗ್ಗಲು ಬದಲಿಸಿದಳು. ಸಣ್ಣಗೆ ಕೆಮ್ಮು ಬಂದು ಉಸಿರು ಹಿಂಡಿದಂಗಾಯಿತು. ಕತ್ತು ಆನಿಸಿದಳು. ಉಫ್. ಒಂದು ನಿಡಿದಾದ ಉಸಿರಿಗಾಗಿ ಎಷ್ಟು ಪರದಾಡಬೇಕು?
ಥತ್...ಇನ್ನೂ ಯಾಕೆ ಬದುಕಿದ್ದೀನಿ ನಾನು? ಬದುಕು ಅನ್ನುವುದು ಕೇವಲ ಇಪ್ಪತ್ತೊಂದನೇ ವಯಸ್ಸಿಗೆ ಈ ಪರಿ ಮಕ್ಕಾಡೆ ಮಲಗಿಬಿಡುತ್ತದೆ ಅಂತ ನಾನು ಎಂದಾದರೂ ಭಾವಿಸಿದ್ದೆನಾ? ಎಷ್ಟು ಬೇಗ ನನ್ನೆಲ್ಲ ದಾರಿಗಳು ಮುಚ್ಚಿಹೋದುವಲ್ಲ. ಕನಸುಗಳು ಕಳೆದುಹೋದವು. ಮನಸ್ಸು ನಿಲರ್ಿಪ್ತವಾಯಿತು. ನಿದ್ರೆ ದೂರಾಯಿತು. ನೋವು ದಿನ ಕಳೆದಂತೆ ಅಭ್ಯಾಸವಾಗಿ ಹೋಯಿತು. ಪ್ರತಿ ಕ್ಷಣ ಕೂಡ ನಾನು ಸಾವಿಗೆ ಹತ್ತಿರಾಗುತ್ತಿದ್ದೇನೆ ಅನಿಸುತ್ತಿದೆ. ಸಾವು ಇಷ್ಟು ಯಾತನಾಮಯವಾಗಿರುತ್ತಾ? ಇನ್ನು ಎಷ್ಟು ನಿಮಿಷವೋ, ಎಷ್ಟು ವಾರವೋ, ಎಷ್ಟು ತಿಂಗಳೋ ನನ್ನ ಈ ಉಸಿರು.
ಪ್ರಿಯಾ ಬಳಿಗೆ ಬಂದ ನಸರ್್ ಯಾವುದೋ ಮಾತ್ರೆ ಕೈಗಿಟ್ಟು ನುಂಗಿ ಅನ್ನುವಂತೆ ಸನ್ನೆ ಮಾಡಿದಳು. ಅವಳ ಹೆಸರು ಪಾರ್ವತಿ. ಕೇರಳದಿಂದ ಬಂದವಳಂತೆ. ಕನ್ನಡ ಕಲಿತಿದ್ದಾಳೆ. ಹಾಸ್ಪಿಟಲ್ಗೆ ಬಂದ ದಿವಸದಿಂದ ನನ್ನ ಆರೈಕೆ ಮಾಡುತ್ತಿರುವ ಅಮ್ಮನಂಥವಳು. ಅವಳ ಪ್ರೀತಿ ದೊಡ್ಡದು. ನೀವು ಇಷ್ಟು ಚೆನ್ನಾಗಿದ್ದೀರಾ? ಆ ದೇವರು ನಿಮಗೆ ಯಾಕೆ ಈ ಕ್ಯಾನ್ಸರ್ ಅನ್ನೋ ಕಾಯಿಲೆ ಕೊಟ್ಟ ಸಿಸ್ಟರ್. ಅವನಿಗೆ ಚೆನ್ನಾಗಿರೋರನ್ನ ನೋಡಿದ್ರೆ ಆಗೊಲ್ಲ. ಪಕ್ಕಾ ಈಡಿಯಟ್ ಅವನು. ನನ್ನ ಅಕ್ಕನಿಗೂ ಹೀಗೆ ಆಗಿತ್ತು. ಅವಳೂ ನಿಮ್ಮಷ್ಟೇ ಚಂದಕ್ಕಿದ್ದಳು. ಏನೇ ಪ್ರಯತ್ನ ಮಾಡಿದರೂ ಅವಳನ್ನು ಮರೆಯೋದಕ್ಕೆ ಆಗುತ್ತಾ ಇಲ್ಲ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅನಿಸುತ್ತೆ ಅಂತ ಒಂದಿನ ಕಣ್ಣು ತುಂಬಿಕೊಂಡಿದ್ದಳು. ಅವಳಿಗೂ ಗೊತ್ತು ನಾನು ಹೆಚ್ಚು ದಿನ ಬದುಕೊಲ್ಲ ಅಂತ. ಏನೂ ಆಗೊಲ್ಲ ಸಿಸ್ಟರ್. ಒಂದಿನ ನೀವು ಹುಷಾರಾಗೇ ಆಗ್ತೀರ. ಡೋಂಟ್ ವರಿ ಅಂತ ಕೈ ಹಿಡಿದು ಸಾಂತ್ವನ ಹೇಳುತ್ತಾಳೆ. ಅದೆಲ್ಲ ನನ್ನ ಮೇಲಿನ ಪ್ರೀತಿಗಾಗಿ ಅಷ್ಟೆ.
ನಾನು ಕಣ್ಣೀರಾಗುತ್ತೇನೆ. ಪಾರ್ವತಿ ಕೈ ನನ್ನ ನೆತ್ತಿ ಸವರುತ್ತದೆ.
ಪಕ್ಕದ ರೂಮಿನಲ್ಲಿ ಯಾರೋ ಕಿರುಚಿದರು. ಅದೇನು ಕೊನೆಯ ಆರ್ತನಾದವಾ? ಕಳಕೊಂಡವರ ದುಃಖವಾ? ಆಸ್ಪತ್ರೆ ಅನ್ನುವುದು ನರಕ ಕೂಪಗಳಿದ್ದ ಹಾಗೆ! ಇಲ್ಲಿಗೆ ಜನ ಸಾಯಲಿಕ್ಕೆಂದೇ ಬರುತ್ತಾರಾ? ಓಹ್... ಅಮ್ಮ ಬರಬಹುದು ಈಗ. ನನಗೆ ಅಂತ ಅವಳು ಹಾಲು ತರುತ್ತಾಳೆ. ಎಂತೆಂಥದೋ ಹಣ್ಣು ತರುತ್ತಾಳೆ. ಮಗಳು ಬದುಕಿಯಾಳು ಅನ್ನುವ ಸಣ್ಣ ಭರವಸೆ ಅವಳಲ್ಲಿ ಮಾತ್ರ ಗಟ್ಟಿಯಾಗಿದೆ. ಯಾಕೆಂದ್ರೆ ಅವಳು ತಾಯಿ. ಯಾವ ತಾಯಿ ತಾನೆ ಮಗಳು ತನ್ನ ತೊಡೆಯ ಮೇಲೇ ಸಾಯುವುದನ್ನ ಇಷ್ಟಪಟ್ಟಾಳು. ನಿನಗೆ ಏನೂ ಆಗೊಲ್ಲ ಮಗಳೆ. ಡಾಕ್ಟರು ಹೇಳಿದ್ದಾರೆ. ಈಗೇನು ಎಂಥ ಕ್ಯಾನ್ಸರನ್ನೂ ಗುಣ ಪಡಿಸಬಹುದಂತೆ. ಅದರಲ್ಲೂ ಡಾ. ಸುರೇಶ್ ಪಾಟೀಲ್ ತುಂಬಾ ಫೇಮಸ್ ಆದಂಥವರು. ಅವರು ನಿಮ್ಮ ಮಗಳಿಗೆ ಏನೂ ಆಗೋದಿಲ್ಲ ಅಂತ ಹೇಳಿದ್ದಾರೆ. ನೀನು ಧೈರ್ಯ ಗೆಡಬೇಡ ಮಗಳೇ, ಅಂತ ಅಮ್ಮ ಹೇಳುತ್ತಿರುತ್ತಾಳೆ. ಅವಳಿಗೂ ಗೊತ್ತು ನನ್ನ ಮಗಳು ಬದುಕೋಲ್ಲ ಅಂತ. ಆದರೂ ನನ್ನ ಮೇಲಿನ ಪ್ರೀತಿಗಾಗಿ ಹಾಗೆ ಹೇಳುತ್ತಾಳೆ. ಅಪ್ಪ ಇದ್ದಿದ್ದರೆ ಅಮ್ಮನಿಗಿಂತ ಹೆಚ್ಚು ಸಂಕಟ ಪಡುತ್ತಿದ್ದನೇನೋ. ಇದನ್ನೆಲ್ಲ ನೋಡಬೇಕಾಗುತ್ತೆ ಅಂತ ಮೊದಲೇ ಹೋಗಿಬಿಟ್ಟ. ಡೋಂಟ್ ವರಿ ಡ್ಯಾಡಿ ಇನ್ನೇನು ಕೆಲವೆ ದಿನ ನಾನು ನಿನ್ನಲ್ಲಿಗೆ ಬರುತ್ತೇನೆ.
ಅಮ್ಮ ಸರಸ್ವತಿ ಬಂದರು.
ಬರುವಾಗಲೇ ಕಣ್ಣ ತುಂಬಾ ನೀರು. ಮಗಳಿಗೆ ಗೊತ್ತಾದೀತು ಅಂತ ಸಣ್ಣಗೆ ತಿರುಗಿ ಸೀರೆ ಸೆರಗಿನಿಂದ ಒರೆಸಿಕೊಂಡರು.
ಸೇಬು ತಿನ್ನು ಮಗಳೇ!
ಅಮ್ಮ ನಾನು ಅಂದ್ರೆ ನಿನಗೆ ಅಷ್ಟಿಷ್ಟಾನಾ?
ಯಾಕೆ ಹಾಗೆಲ್ಲ ಕೇಳ್ತೀಯ?
ಅಲ್ಲ ನಾನು ಸತ್ತು ಹೋದ್ರೆ ನೀನು ಎಷ್ಟು ಸಂಕಟ ಪಡ್ತೀ ಅಂತ ನನಗೆ ದಿಗಿಲಾಗಿದೆ!
ಸರಸ್ವತಿಗೆ ದುಃಖ ತಡೆಯಲಾಗಲಿಲ್ಲ. ಮಗಳನ್ನು ಬಾಚಿ ತಬ್ಬಿಕೊಂಡರು.
ದೇವರೆ ಎಷ್ಟು ಅಂತ ದುಃಖ ಕೊಡುತ್ತೀ. ಗಂಡನನ್ನ ಕಿತ್ತುಕೊಂಡೆ. ಆದರೂ ನಾನು ಬದುಕಿದೆ, ಅದು ನನ್ನ ಮಗಳಿಗಾಗಿ. ಅವಳು ಚೆನ್ನಾಗಿರಬೇಕು ಅಂತ ನಾನು ಮಾಡಿದ ಕೆಲಸ, ಪಟ್ಟ ಯಾತನೆ ಇದೆಯಲ್ಲ ಅದು ಬೇರೆ ಯಾವ ತಾಯಿಗೂ ಬೇಡ. ಇದ್ದದ್ದೊಂದು ಮನೆ ಬೆಳಕಿನಂತವಳು ಮಗಳು. ಈಗ ಅವಳನ್ನು ಕಿತ್ತುಕೊಳ್ಳಲು ಹೊರಟಿದ್ದೀಯಲ್ಲ. ಮುಂದೆ ನಿನಗೆ ಯಾವತ್ತೂ ನಾನು ಕೈ ಮುಗಿಯಲಾರೆ, ದೀಪ ಹಚ್ಚಲಾರೆ. ಇದ್ದೊಂದು ದೀಪವನ್ನೂ ನೀನೇ ಆರಿಸಿದ ಮೇಲೆ ನನಗೆ ಇನ್ನೆಲ್ಲಿದೆ ಬದುಕು.
ಸರಸ್ವತಿಯ ದುಃಖ ಇನ್ನೂ ಬತ್ತಿರಲಿಲ್ಲ.
ಯಾರೋ ಹೆಗಲ ಮೇಲೆ ಕೈ ಇಟ್ಟಂತಾಯಿತು. ತಿರುಗಿದರೆ ಅದೇ ಹುಡುಗ.
ನೀನಾ?
ಆ್ಯಂಟಿ. ಹಾಗನ್ನುವ ಮೊದಲೇ ಅವನ ಕಣ್ಣು ತುಂಬಿಬಂತು. ಹೀಗೆ ಕೇಳಿದೆ ಪ್ರಿಯಾಳಿಗೆ ಹುಷಾರಿಲ್ಲ ಅಂತ. ನೋಡಿ ಹೋಗೋಣ ಅಂತ ಬಂದೆ. ಅವಳಿಗೆ ಏನೂ ಆಗೊಲ್ಲ ಆ್ಯಂಟಿ. ದೇವರಿದ್ದಾನೆ.
ಎಲ್ಲಿದ್ದಾನೆ ದೇವರು. ನನ್ನ ಪಾಲಿಗೆ ಅವನು ಯಾವತ್ತೋ ಸತ್ತು ಹೋದ. ಹೇಗೆ ಭರಿಸಲಿ ಈ ದಃಖವನ್ನ? ಸರಸ್ವತಿಯ ಕಣ್ಣು ಅತ್ತು ಅತ್ತು ಬತ್ತಿಹೋದ ಕೊಳದಂತಾಗಿದ್ದವು.
ವಿಕಾಸ್ ಹೋಗಿ ಪ್ರಿಯಾಳ ಪಕ್ಕ ಕುಳಿತ. ಕೈ ಹಿಡಿದುಕೊಂಡ.
ಡೋಂಟ್ ವರಿ ನಾನಿದ್ದೇನೆ. ನಿನಗೆ ಏನೂ ಆಗೊಲ್ಲ.
ಯಾಕೆ ಹಾಗಂತೀಯ ವಿಕಿ. ನೀನೂ ಸುಳ್ಳು ಹೇಳ್ತೀಯಲ್ಲ ಅನ್ನಬೇಕೆನಿಸಿತು ಪ್ರಿಯಾಳಿಗೆ.
ಸುಮ್ಮನೆ ಅವನ ಕೈ ಅದುಮಿದಳು ಅಷ್ಟೆ.
ಎಂಥ ಹುಡುಗ ಇವನು. ನನಗಾಗಿ ಪ್ರಾಣ ಬೇಕಾದ್ರೆ ಕೊಡ್ತೀನಿ ಅಂದಿದ್ದ ಒಮ್ಮೆ. ಹುಚ್ಚಾ ಅದೆಲ್ಲ ಯಾಕೆ, ನಿನ್ನನ್ನ ಪ್ರೀತಿ ತಾನೆ ಮಾಡಬೇಕು. ಮಾಡ್ತೀನಿ ಬಿಡು ಅಂದಿದ್ದೆ ನಾನು. ಅವತ್ತು ಅವನಷ್ಟು ಖುಷಿ ಪಟ್ಟವರನ್ನ ನಾನು ಈ ಜನ್ಮದಲ್ಲಿ ಕಂಡಿಲ್ಲ. ಮುಗಿಲೇ ಎಟಕುವಷ್ಟು ಜಿಗಿದಾಡಿದ್ದ. ನನ್ನ ಕರೆದುಕೊಂಡು ಊರೆಲ್ಲ ಸುತ್ತಿಸಿದ್ದ. ಕೇಳಿದ್ದೆಲ್ಲ ಕೊಡಿಸಿದ್ದ. ಒಂದೇ ಒಂದಿನ ನನ್ನ ಪ್ರೀತಿಯನ್ನಲ್ಲದೇ ಬೇರೆ ಏನನ್ನೂ ಬಯಸದ ಹುಡುಗ. ಪ್ಲೆಟಾನಿಕ್ ಪ್ರೀತಿ ಅಂತಾರಲ್ಲ ಅಂಥದು.
ಆಮೇಲೆ ಕೆಲಸದ ಮೇಲೆ ಮುಂಬೈಗೆ ಅಂತ ಹೊರಟು ಹೋದ. ವರ್ಷದ ಮೇಲಾಯಿತು. ಅಲ್ಲ ಕಣೋ ನೀನು ಅಲ್ಲಿ ನಾನು ಇಲ್ಲಿ. ಹೇಗಪ್ಪ ಪ್ರೀತಿ ಅಂದ್ರೆ ದೂರ ಇದ್ದಷ್ಟು ಪ್ರೀತಿ ಜಾಸ್ತಿ ಕಣೆ. ಹತ್ತಿರ ಅದರಲ್ಲೂ ತೀರಾ ಹತ್ರ ಇದ್ರೆ ಪ್ರೀತಿಗೆ ಕಾಮದ ವಾಂಛೆ ಬಂದುಬಿಡುತ್ತೆ. ನಾನು ಬರುವುದಕ್ಕೆ ಇನ್ನೂ ಒಂದು ವರ್ಷ ಆಗಬಹುದು. ಅಲ್ಲಿವರೆಗೂ ನಿನಗೆ ತಾಳ್ಮೆ ಇದ್ದರೆ ಕಾಯಿ. ಇಲ್ಲ ಅಂದ್ರೆ ಒಳ್ಳೆ ಹುಡುಗ ಸಿಕ್ಕಿದ್ರೆ ಮದುವೆ ಆಗಿಬಿಡು. ನಾನು ಪ್ರಾಕ್ಟಿಕಲ್ ಮನುಷ್ಯ. ಯಾರಿಗಾಗೋ ಕಾಯುತ್ತಾ ಕೂತು ಬದುಕನ್ನ ವ್ಯರ್ಥ ಮಾಡಿಕೊಳ್ಳುವುದರಲ್ಲಿ ಅರ್ಥ ಇಲ್ಲ ಪ್ರಿಯಾ ಅಂತ ಫೋನ್ ಮಾಡಿದ್ದ.
ಅವತ್ತೇ ನನಗೆ ಗೊತ್ತಾಗಿದ್ದು ಇವನು ನನ್ನ ಬುದ್ಧಿಗೆ ಮೀರಿದ ಹುಡುಗ ಅಂತ.
ಅದಾದ ಮೇಲೆ ನಮ್ಮಿಬ್ಬರದು ಸಂಪರ್ಕವೇ ಇಲ್ಲ.
ಈಗ ನೋಡಿದ್ರೆ ಪಕ್ಕದಲ್ಲೇ ಬಂದು ಕುಳಿತಿದ್ದಾನೆ. ಪ್ರೀತಿಗೆ ಅಷ್ಟೊಂದು ಸೆಳೆತವಿದೆಯಾ?
ಪ್ರಿಯಾಳ ಕಣ್ಣು ಮತ್ತೆ ಹನಿಗೂಡಿದವು.
ಏನನ್ನೋ ಹೇಳಲು ಹೊರಟ ವಿಕಾಸ್ ಅವಳ ಕಣ್ಣೊರೆಸಿದ.
ಮತ್ತೆ ಮತ್ತೆ ಹನಿಗೂಡುತ್ತಿದ್ದ ಕಣ್ಣನ್ನು ಒರೆಸುವುದಾದರೂ ಯಾಕೆ?
ಪ್ರಿಯಾ ಅವನ ಮುಖ ನೋಡಲಿಕ್ಕಾಗದೆ ಚಡಪಡಿಸಿದಳು.
***
ಡಾಕ್ಟರ್ ಪ್ರಿಯಾಳ ಸ್ಥಿತಿ ಹೇಗಿದೆ?
ಎದುರಿಗೆ ಕುಳಿತ ಸುರೇಶ್ ಪಾಟೀಲರು ಕ್ಷಣ ಮೌನವಾದರು.
ಅವಳನ್ನು ಬದುಕಿಸಿಕೊಡಲಿಕ್ಕೆ ಆಗಲ್ಲವಾ ಡಾಕ್ಟರ್? ವಿಕಾಸ್ ಡಾಕ್ಟರ್ರ ಕೈ ಹಿಡಿದುಕೊಂಡ.
ಪ್ಲೀಸ್ ಡಾಕ್ಟರ್. ಅದಕ್ಕೋಸ್ಕರ ನಾನು ಏನು ಮಾಡಬೇಕು ಹೇಳಿ?
ಸುರೇಶ್ ಪಾಟೀಲ್ರ ಕಣ್ಣು ತುಂಬಿಬಂತು. ಇಷ್ಟು ವರ್ಷದಲ್ಲಿ ಎಂಥೆಂತ ಕ್ಯಾನ್ಸರ್ ಕೇಸ್ಗಳನ್ನು ನೋಡಿಲ್ಲ ನಾನು .ಇದರಷ್ಟು ಕರಳು ಹಿಂಡಿದ್ದು ಮತ್ತೊಂದಿಲ್ಲ. ಯಾಕೋ ಪ್ರಿಯಾ ಬದುಕಬೇಕು ಅನಿಸುತ್ತೆ. ಆದ್ರೆ ಅವಳು ಬದುಕುವ ಯಾವ ಕುರುಹೂ ಇಲ್ಲ. ಕ್ಯಾನ್ಸರ್ ಅವಳನ್ನು ಅಷ್ಟು ಆವರಿಸಿಕೊಂಡುಬಿಟ್ಟಿದೆ.
ಐ ಯಾಮ್ ಸಾರಿ ಮಿಸ್ಟರ್ ವಿಕಾಸ್. ಪ್ರಿಯಾ ಬದುಕಲಾರದಷ್ಟು ದೂರ ಹೊರಟುಹೋಗಿದ್ದಾಳೆ. ಅವಳಿಗೆ ಲಂಗ್ ಕ್ಯಾನ್ಸರ್. ಉಸಿರಾಟ ಈಸಿಯಾಗಿ ಆಗೊಲ್ಲ. ನೋವಿಗೆ ಮಾಫರ್ಿನ್ ಕೊಡುತ್ತಿದ್ದೇವೆ. ಅದನ್ನು ನಿಲ್ಲಿಸಿದರೆ ಅವಳಿಗೆ ನೋವು ತಡೆದುಕೊಳ್ಳಲು ಕಷ್ಟ್ಲ. ಮಾಫರ್ಿನ್ ಕೊಡೋದರಿಂದ ಅವಳ ಇತರೆ ಆರ್ಗನ್ಗಳಿಗೂ ತೊಂದರೆ ಆಗಿದೆ. ಬಿಲೀವ್ ಮಿ, ಅವಳನ್ನ ಇನ್ನು ಮರೆತುಬಿಡೋದು ಒಳ್ಳೇದು.
ಅವರ ಕಣ್ಣಂಚಿನಿಂದ ಜಾರಿದ ಹನಿಯೊಂದು ವಿಕಾಸ್ನ ಮುಂಗೈ ಬೇಲೆ ಬಿತ್ತು.
ಪ್ಲೀಸ್ ಇನ್ನೊಂದೇ ಒಂದು ಚಾನ್ಸ್ ನೋಡಿ ಡಾಕ್ಟರ್!
ಇಲ್ಲ ವಿಕಾಸ್. ಇರುವಷ್ಟು ದಿನ ಅವಳಿಗೆ ಒಂದು ಕಂಫಟರ್್ ಕೊಡಿ. ನನಗೂ ಅವಳು ಬದುಕಬೇಕು ಅನಿಸುತ್ತಿದೆ. ಬಟ್ ಐಯಾಮ್ ಹೆಲ್ಪ್ಲೆಸ್. ಸಾರಿ ಅಂತ ಎದ್ದರು.
ವಿಕಾಸ್ ಕುಸಿದುಹೋದ. ಹಾಗಾದರೆ ಇನ್ನೆಷ್ಟು ದಿನ ಪ್ರಿಯಾಳ ಈ ಯಾತನಾ ಬದುಕು.
ಡಾಕ್ಟರ್ ಒಂದು ನಿಮಿಷ ಪ್ಲೀಸ್.
ಮತ್ತೆ ಸುರೇಶ್ ಪಾಟೀಲ್ ಕುಳಿತರು.
ನಾನೊಂದು ನಿಧರ್ಾರಕ್ಕೆ ಬಂದಿದ್ದೇನೆ.
ಏನು?
ನಾನು ಪ್ರಿಯಾಳನ್ನು ಮದುವೇ ಆಗಬೇಕೆಂದಿದ್ದೇನೆ.
ವಾಟ್?
ಹೌದು. ಅವಳು ನನ್ನ ಹೃದಯದ ಹುಡುಗಿ. ಅಂಥ ಹುಡುಗಿಯನ್ನ ನಾನು ಮತ್ತೆಲ್ಲಿಯೂ ಕಾಣಲಾರೆ. ಅವಳು ನನಗೆ ಮಾತ್ರ ಹುಟ್ಟಿ ಬಂದಿದ್ದವಳು. ನನ್ನ ಬದುಕಿನ ಮುದುವೆಯ ಅಧ್ಯಾಯವೂ ಅವಳು ಬದುಕಿರುವಾಗಲೆ ಮುಗಿದುಹೋಗಲಿ.
ಒಮ್ಮೆ ಯೋಚಿಸಿ ನಿಧರ್ಾರ ತೆಗೆದುಕೊಂಡರೆ ಒಳಿತು. ಅವಳಿರುವ ಸ್ಥಿತಿಯಲ್ಲಿ ಅದೆಲ್ಲ ಬೇಕಾ? ಒಪ್ಪುತ್ತಾಳಾ?
ನಾನು ಒಪ್ಪಿಸುತ್ತೇನೆ. ಇದು ನನ್ನ ಮತ್ತು ಅವಳ ವೈಯಕ್ತಿಕ ನಿಧರ್ಾರ. ಅದಕ್ಕೆ ಪಮರ್ಿಷನ್ ಕೊಡಬೇಕು ನೀವು.
ಆಯಿತು. ನಾನೇ ಎಲ್ಲಾ ವ್ಯವಸ್ಥೆ ಮಾಡಿಸುತ್ತೇನೆ. ನಿನ್ನ ಮನಸ್ಸು ದೊಡ್ಡದು. ನೀನು ನಮ್ಮೆಲ್ಲರ ಮುಂದೆ ಗ್ರೇಟ್ ಆಗಿಬಿಟ್ಟಿರಿ ವಿಕಾಸ್. ದೇವರು ಈಡಿಯಟ್ ಅಂತ ನನಗೆ ಈಗ ಅನಿಸುತ್ತಿದೆ. ಅವಳು ಬದುಕಿರಬೇಕಿತ್ತು ವಿಕಾಸ್ ... ಬದುಕಿರಬೇಕಿತ್ತು. ಅವರ ಕಣ್ಣಾಲಿಗಳು ತುಂಬಿಬಂದವು.
ಎದ್ದು ಸರಸರನೆ ಹೊರಟುಹೋದರು.
***
ಅಮ್ಮ ನಾನು ಪ್ರಿಯಾಳನ್ನು ಮದುವೆ ಆಗುತ್ತಿದ್ದೇನೆ.
ಅವಳಿಗೆ ಕ್ಯಾನ್ಸರ್ ಇದೆ ಅಂತಿದ್ರು.
ಗೊತ್ತಿದ್ದೇ ಮದುವೆ ಆಗಬೇಕು ಅಂತಿದ್ದೀನಿ ಮಮ್ಮಿ. ಅವಳು ಇನ್ನು ಹೆಚ್ಚೆಂದರೆೆ ಎಷ್ಟು ದಿನ ಬದುಕುತ್ತಾಳೋ ಗೊತ್ತಿಲ್ಲ. ಆದ್ರೆ ಅವಳು ಮುತ್ತೈದೆ ಆಗಿಯೇ ಹೋಗಲಿ ಅನ್ನೋದು ನನ್ನ ಇಷ್ಟ. ಇದಕ್ಕೆ ನಿನ್ನ ಒಪ್ಪಿಗೆ ಬೇಕು.
ವಿಕಾಸ್ನ ಅಮ್ಮ ಶಾರದಾಗೆ ಮಗ ಎಂಥವನು ಅಂತ ಗೊತ್ತು. ಅವನ ಮನಸ್ಸು ಎಂಥದು ಅಂತ ಗೊತ್ತು. ಒಂದೇ ಒಂದು ದಿನ, ಕ್ಷಣ ಇನ್ನೊಬ್ಬರಿಗೆ ಕೇಡಾಗಲಿ ಅಂತ ಬಗೆದವನಲ್ಲ. ಅವನದು ಹೂವಿನಂತಹ ಮನಸ್ಸು. ಆದ್ರೆ ಈಗ ನೋಡಿದ್ರೆ ಪ್ರಿಯಾಳನ್ನೆ ಮದುವೆ ಆಗುತ್ತೇನೆ ಅಂತಿದಾನಲ್ಲ. ಹೇಗೆ ಇದು? ಅರ್ಥವೇ ಆಗುತ್ತಿಲ್ಲ. ಖಡಾಖಂಡಿತವಾಗಿ ಬೇಡ ಅಂದು ಅವನ ಮನಸ್ಸನ್ನು ಹೇಗಾದರೂ ನೋಯಿಸಲಿ.
ಒಮ್ಮೆ ಯೋಚಿಸಿ ನೋಡಿದ್ರೆ ಒಳ್ಳೇದು ಕಣೋ ವಿಕ್ಕಿ. ಪ್ರಿಯಾ ಬದುಕೋಲ್ಲ ಅಂತ ನೀನೇ ಹೇಳ್ತಿದೀಯಾ? ಅವಳು ಹೋದ ನಂತರ ಹೇಗಿರ್ತೀಯಾ?
ಅವಳ ನೆನಪಿನೊಂದಿಗೆ ಮಮ್ಮಿ. ಇದರಲ್ಲಿ ಯೋಚಿಸಿ ನೊಡೋದು ಏನೂ ಇಲ್ಲ. ಇದು ಫೈನಲ್ ಡಿಸಿಷನ್. ಪ್ಲೀಸ್ ನನ್ನ ಬದುಕು ನನಗೆ ಬೇಕಾದ ಹಾಗೆ ರೂಪಿಸಿಕೊಳ್ಳೋದಕ್ಕೆ ಒಂದು ಅವಕಾಶ ಕೊಡಿ ಮಮ್ಮಿ. ಅವಳನ್ನು ನಾನು ನಿನಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಈಗ ಅವಳೇ ಇಲ್ಲವಾದ ಮೇಲೆ ನನಗೆ ಮದುವೆಯ ಸಂತೋಷ ಎಲ್ಲಾ ಯಾಕೆ. ಇದೆಲ್ಲ ಅವಳ ಸಂತೋಷಕ್ಕಾಗಿ. ಪ್ಲೀಸ್ ನನ್ನನ್ನ ತಡೆಯಬೇಡಿ.
ಶಾರದಾ ಅಳು ತಡೆಯಲಾರದೇ ಒಳಕ್ಕೆ ಹೋದರು.
ಇದ್ದೊಬ್ಬ ಮಗನೂ ಹೀಗೆ ಆದ್ರೆ ನನ್ನ ಪಾಡೇನು. ಯಜಮಾನರು ಒಪ್ಪುತ್ತಾರಾ?
ದೇವರೆ ಎಂಥ ಪರೀಕ್ಷೆಗೆ ಒಡ್ಡಿದೆಯಲ್ಲ.
***
ರಾತ್ರಿ ವಿಕಾಸ್ಗೆ ನಿದಿರೆ ಹತ್ತಲಿಲ್ಲ. ಕಣ್ಣು ಮುಚ್ಚಿದರೆ ಸಾಕು ಪ್ರಿಯಾ ಬಂದು ನಿಲ್ಲುತ್ತಿದ್ದಳು. ಹೋಗ್ತೀನಿ ಕಣೋ. ಏನೂ ಅನ್ಕೋ ಬೇಡ. ನನಗೂ ನಿನ್ನ ಜೊತೆ ದಿವಿನಾಗಿ ಬದುಕಬೇಕು ಅನ್ನೋ ಆಸೆ ಇತ್ತು. ನಿಜ್ಜ ಹೇಳ್ತೀನಿ, ನನ್ನ ಬದುಕಿನಲ್ಲಿ ನೀನೊಬ್ಬನಿದ್ದರೆ ನನಗೆ ಅಷ್ಟೇ ಸಾಕಿತ್ತು. ಆದ್ರೆ ಏನು ಮಾಡಲಿ. ನಿನ್ನೊಬ್ಬನನ್ನೇ ಬಿಟ್ಟು ಹೋಗುತ್ತಿದ್ದೇನೆ. ಐ ಯಾಮ್ ಸಾರಿ.
ದಿಂಬು ತೋಯ್ಯುವಷ್ಟು ಅತ್ತ.
ಹಳೆಯ ದಿನಗಳು ನೆನಪಾದವು. ಒಂದಿನ ನನಗೆ ವಿಪರೀತ ಜ್ವರ. ಆಸ್ಪತ್ರೆಗೆ ಅಡ್ಮಿಟ್ ಆಗಿದ್ದೆ. ಒಂದೇ ಒಂದು ದಿನ ಕ್ಲಾಸಿಗೆ ಹೋಗಿರಲಿಲ್ಲ. ಎರಡನೇ ದಿನ ಬಂದವಳು ಯಾಪಾಟಿ ಅತ್ತಿದ್ದಳು ಅಂದ್ರೆ ನೀನಿಲ್ದೆ ನಾನು ಸತ್ತೇಹೋಗ್ತೀನಿ ಕಣೋ ಅಂದಿದ್ದಳು. ಇದೆಂಥ ಹುಚ್ಚು ಪ್ರೀತಿ ಅಂದುಕೊಂಡಿದ್ದೆ ನಾನು. ಆಸ್ಪತ್ರೆಯಲ್ಲಿ ನಾನಿದ್ದ ವಾರವೂ ಅಲ್ಲೇ ಇದ್ದಳು. ಇಡೀ ರಾತ್ರಿ ಕಣ್ಣು ಮುಚ್ಚಿದವಳಲ್ಲ. ನಿನ್ನ ಪ್ರೀತಿಗೋಸ್ಕರ ನಾನು ಇಷ್ಟು ಮಾಡದೇ ಹೋದ್ರೆ ಹೇಗೋ?
ಈಗ ಅದೆ ಪ್ರಿಯಾ ಸಾವಿನ ಕುದುರೆ ಏರಿ ಕುಳಿತಿದ್ದಾಳೆ. ತಡೆದು ನಿಲ್ಲಿಸುವವರು ಯಾರು?
ಟೆರೇಸ್ ಮೇಲಕ್ಕೆ ಹೋದ. ಕತ್ತಲು ಹಾಸಿ ಹೊದ್ದುಕೊಂಡು ಮಲಗಿದ್ದಂತಿತ್ತು.
ಅಲ್ಲೇ ಅಂಗಾತ ಮಲಗಿ ಆಕಾಶ ದಿಟ್ಟಿಸಿದ. ಯಾರೋ ಕರೆದಂಗಾಯಿತು. ನಾನೂ ಪ್ರಿಯಾ ಜೊತೆ ಹೋಗಿಬಿಡಲಾ?
ಮೈ ಬೆವೆತಿತು.
***
ಮೂರು ದಿನ ಕಳೆಯುವಷ್ಟರಲ್ಲಿ ವಿಕಾಸ್ ಪ್ರಿಯಾ ಜೊತೆ ಮದುವೆ ಬಗ್ಗೆ ಮಾತಾಡಿದ. ಅವಳು ನಿಜಕ್ಕು ಖಿನ್ನಳಾದಳು. ಹೇಗಿದ್ರೂ ನಾನು ಸಾಯುವವಳು. ನನಗೇಕೆ ಮದುವೆ. ನಾನು ಹೋದ ಮೇಲೆ ನೀನು ಮದುವೆ ಆಗಿ ಸುಖವಾಗಿರಬೇಕು ಅನ್ನೋದೆ ನನ್ನ ಆಸೆ ಅಂದಳು. ಇವನು ಒಪ್ಪಲಿಲ್ಲ. ಮದುವೆ ಅಂತ ಆದ್ರೆ ಅದು ನಿನ್ನನ್ನೆ. ನನ್ನ ಜೊತೆ ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ನಾನು ನಿರೀಕ್ಷಿಸಲಾರೆ. ಪ್ಲೀಸ್ ಇದು ನನ್ನ ಕೊನೆ ಬಯಕೆಯೂ ಹೌದು. ಅದು ನಿನ್ನದೂ ಆಗಲಿ ಬಿಡು ಅಂತ ಪರಿಪರಿಯಾಗಿ ಬೇಡಿದ. ಮೂರು ರಾತ್ರಿ ಮೂರು ಹಗಲು ಒತ್ತಾಯಿಸಿದ ಮೇಲೆ ಪ್ರಿಯಾ ಒಪ್ಪಿಕೊಂಡಳು.
ಆ ದಿನವೂ ಬಂತು.
ಪ್ರಿಯಾಳನ್ನು ಆಕ್ಸಿಜನ್ ಕೊಳವೆಯ ಜೊತೆಗೆ ತುಸು ಸಿಂಗಾರ ಮಾಡಲಾಯಿತು.
ತೀರಾ ಸಿಂಪಲ್ ಆಗಿ ಆಸ್ಪತ್ರೆಯ ಅಂಗಳದಲ್ಲೇ ಪ್ರಿಯಾ ಮತ್ತು ವಿಕಾಸ್ ಮದುವೆ ನಡೆದುಹೋಯಿತು.
ಅದು ಪ್ರಿಯಾಳ ಬದುಕಿನ ಸಂತಸದ ಕ್ಷಣವಾ? ದುಃಖದ ಕ್ಷಣವಾ?
ವಿಕಾಸನ ಬದುಕಿನ ಈ ಕ್ಷಣಕ್ಕೆ ಏನಂತ ಹೆಸರಿಡುವುದು?
ಅದಾದ ಸರಿ ಐದನೇ ರಾತ್ರಿ ಪ್ರಿಯಾಳಿಗೆ ಎಚ್ಚರವಾಯಿತು. ವಿಕಾಸ್ ದಡಬಡಾಯಿಸಿ ಎದ್ದ.
ಉಸಿರಾಡಲು ಕಷ್ಟವಾಗ್ತಿದೆ ಕಣೋ ಅನ್ನೋ ರೀತಿ ಸನ್ನೆ ಮಾಡಿದಳು.
ಎದೆಗೊರಗಿಸಿಕೊಂಡ.
ಒಂದೇ ಬಿಕ್ಕು ಅಷ್ಟೆ.
ಇವನ ಕೈಯೊಳಗಿದ್ದ ಅವಳ ಕೈ ತಣ್ಣಗಾಗತೊಡಗಿತು.

Friday, April 17, 2009

ಮಣಿಕಾಂತ್ ಅವರ ಪುಸ್ತಕ ಬಿಡುಗಡೆಗೆ ನಾನೂ ಬರ್ತೇನೆ ನೀವೂ ಬನ್ನಿ






ಪತ್ರಕರ್ತ ಮಿತ್ರ ಮಣಿಕಾಂತ್ರ ಮತ್ತೊಂದು ಪುಸ್ತಕ 'ಅಮ್ಮ ಹೇಳಿದ ಎಂಟು ಸುಳ್ಳುಗಳು'ಬಿಡುಗಡೆಯಗುತ್ತಿದೆ. ಮಣಿಕಾಂತ್ ಮತ್ತು ನನ್ನ ಸ್ನೇಹ ಐದಾರು ವರ್ಷದಷ್ಟು ಹಳೆಯದು. ಮಾತಿಗೆ ಸಿಕ್ಕಾಗಲೆಲ್ಲ ನಮ್ಮಗಳ ಮಾತು ಚಿತ್ರಾನ್ನ. ಮೈಸೂರ್ ಪಾಕು ಕೊಡಸ್ತೀನಿ ಅಂತ ವರ್ಷದಿಂದ ರೈಲ್ ಬಿಡ್ತಾನೆ ಇದಾರೆ. ಈ ಸಲ ಮಾತ್ರ ಪುಸ್ತಕ ಬಿಡುಗಡೆಯ ನೆಪದಲ್ಲಿ ತಿನ್ನದೇ ಬಿಡುವುದಿಲ್ಲ. ಅವರ ಪ್ರೀತಿ ದೊಡ್ಡದು. ತುಂಬಾ ನಿಷ್ಕಲ್ಮ್ಮಷ ಹೃದಯಿ. ಅದೆಲ್ಲಕ್ಕಿಂತ ಹೆಚ್ಚಾಗಿ ಚೆನ್ನಾಗಿ ಬರೆಯುತ್ತಾರೆ. ಉಭಯಕುಶಲೋಪರಿ ಅವರ ಅತ್ಯಂತ ಫೇಮಸ್ ಅಂಕಣ. ಅವರದೆ 'ಈ ಗುಲಾಬಿಯು ನಿನಗಾಗಿ' ಅಂಕಣ ನಾಡಿನ ಯುವಕ ಯುವತಿಯರ ಗಮನಸೆಳೆದು ಅದು ಪುಸ್ತಕ ಕೂಡ ಆಗಿದೆ.
'ಅಮ್ಮ ಹೇಳಿದ ಎಂಟು ಸುಳ್ಳುಗಳು' ಮುದ್ದಾದ ಮುಖಪುಟದೊಂದಿಗೆ ರೆಡಿಯಾಗಿದೆ. ಒಳಗಿನ ಲೇಖನಗಳೂ ಅಷ್ಟೆ ಮನಸ್ಸಿಗೆ ತಟ್ಟುತ್ತವೆ. ಕೈ ಹಿಡಿದು ಸಾಂತ್ವನ ಹೇಳುತ್ತವೆ. ಅರೆ ಇವಳು ಹೇಗೆ ಅಷ್ಟೆಲ್ಲ ನೋವು ಗೆದ್ದು ಚೂರೇ ಚೂರು ಖುಷಿ ತಂದುಕೊಂಡಳು ಅಂತ ಸೋಜಿಗ ಆಗುತ್ತೆ. ಇಲ್ಲಿ ಸೋತು ಗೆದ್ದವರ ಕಥೆಗಳಿವೆ. ನೋವಿನ ಆಳದಿಂದೆದ್ದು ಬಂದು ಚೂರು ಪ್ರೀತಿಗಾಗಿ ಹಂಬಲಿಸಿದವರ ಕಥೆಗಳಿವೆ. ಅವೆಲ್ಲವನ್ನೂ ಮಣಿ ಎಲ್ಲೆಲ್ಲಿಂದಲೋ ಹೆಕ್ಕಿ ನಿಮಗಾಗಿ ಕಟ್ಟಿಕೊಟ್ಟಂತವು. ನೀವು ಓದಲೇಬೇಕಾದ ಪುಸ್ತಕ ಅದು; ಅಮ್ಮ ಹೇಳಿದ ಎಂಟು ಸುಳ್ಳುಗಳು.
ಇದೇ ತಿಂಗಳ 26 ನೇ ತಾರೀಖು ಬೆಳಿಗ್ಗೆ ಹನ್ನೊಂದು ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಬಿಡುಗಡೆ. ಖ್ಯಾತ ನಟ ಪ್ರಕಾಶ್ ರೈ ಪುಸ್ತಕ ಬಿಡುಗಡೆ ಮಾಡುತ್ತಾರೆ. ರವಿ ಬೆಳಗೆರೆಯವರು ಅಮ್ಮನ ಪ್ರೀತಿಯ ಬಗ್ಗೆ ಮಾತಾಡುತ್ತಾರೆ.
ವಿಶ್ವೇಶ್ವರ ಭಟ್ಟರು ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ. ಕೃಷ್ಣೇಗೌಡರು ಪುಸ್ತಕದ ಬಗ್ಗೆ ಮಾತಾಡುತ್ತಾರೆ. ಇದಕ್ಕೆಲ್ಲ ಮೊದಲು ಗೆಳೆಯ ಉಪಾಸನಾ ಮೋಹನ್ ತಂಡ ಭಾವಗೀತೆಗಳನ್ನ ಹಾಡಲಿದೆ.
ಅಂತ ಸಮಾರಂಭದಲ್ಲಿ ನೀವು ಇಲ್ಲದೇ ಹೋದರೆ ಹೇಗೆ?
ನಾನೂ ಬರುತ್ತೇನೆ. ನೀವೂ ಬನ್ನಿ.

Sunday, February 15, 2009

ಶಮ




ಶಮಂತಕಮಣಿ.
ಕುಪ್ಪಳಿಸುತ್ತಾ ಮೆಟ್ಟಿಲು ಜಿಗಿಯುತ್ತಿದ್ದ ಅವಳ ಜೋಷ್ಗೆ ಕಾಲಲ್ಲಿನ ಒಂಟಿ ಗೆಜ್ಜೆಯ ಚೈನು ಫಕ್ಕನೆ ನಕ್ಕಿತು. ವಯಸ್ಸು ಹದಿನೇಳಲ್ವ ಅದಕ್ಕೆ ಹೀಗಾಡ್ತಾಳೆ ಬಿಡು. ಎದುರಿಗೆ ಬರುತ್ತಿದ್ದ ಹಾಲಿನವ ಗುಡ್ ಮಾನರ್ಿಂಗ್ ಬೇಬಿ ಅಂದ. ಯಾವನೋ ಎಮ್ಟಿವಿ ಬಕ್ರ ಇರಬೇಕು. ಇಲ್ಲ ಅಂದ್ರೆ ಹಾಲಿನವನ ಬಾಯಲ್ಲಿ ಕಂಗ್ಲಿಷ್ ಎಲ್ಲಿ ಬರಬೇಕು. ಆದರೂ ದೇವರೆ ದಾರಿಯಲ್ಲಿ ಹೋಗೋ ಬರೋರೆಲ್ಲ ಗುಡ್ ಮಾನರ್ಿಂಗ್ ಹೇಳ್ತಿದಾರೆ ಅಂದ್ರೆ ನಾನು ಅಷ್ಟೊಂದು ಬ್ಯೂಟೀನಾ?
ಕ್ಲಾಸಿನ ಮುಂದುಗಡೆ ಬೆಂಚಿನಲ್ಲಿ ಕುಳಿತುಕೊಳ್ಳುವುದು ಅಂದ್ರೆ ಶಮಳಿಗೆ ಯಾವತ್ತೂ ಒಗ್ಗಲ್ಲ. ಕೊನೆ ಬೆಂಚಿನ ಕೊನೆ ಸೀಟೇ ಅವಳಿಗೆ ಇಷ್ಟ. ಅಲ್ಲಾದರೆ ನಿದ್ರೆ ಮಾಡಬಹುದು, ಪಿಸು ಮಾತಾಡಬಹುದು, ಪಜ್ಜಲ್ ಆಡಬಹುದು, ಎಸ್ಸೆಮ್ಮೆಸ್ ಕಳಿಸಬಹುದು, ಡೆಸ್ಕ್ ಮೇಲೆ ಹೆಸರು ಕತ್ತಿಕೊಳ್ಳಬಹುದು. ಇನ್ನೂ ಬೇಜಾರಾಯಿತು ಅಂದ್ರೆ ಎದುರಿಗೆ ಕುಳಿತವಳ ಚೂಡಿ ದುಪ್ಪಟಕ್ಕೆ ಬಣ್ಣ ಬಣ್ಣದ ಕಾಗದ ಕಟ್ಟಿ ಮೇಸ್ಟ್ರು ಹೋದ ಮೇಲೆ ಹುರ್ರೇ ಅನ್ನಬಹುದು. ದಟ್ ಇಸ್ ಕ್ರೇಜಿ! ಮುಂದಿನ ಬೆಂಚಲ್ಲೇನಿದೆ? ಸುಮ್ಮನೆ ಕತ್ತು ಆನಿಸಿಕೊಂಡು ಲೆಕ್ಷರರ್ನ ಬಾಯಿಗೆ ಕಿವಿ ಆಗಬೇಕು. ಯಾರಿಗೆ ಬೇಕು ಅವನ ಪಾಠ.
ಹಾಗಂದುಕೊಂಡೇ ಹಿಂದಿನ ಬೆಂಚಿಗೆ ದೌಡಾಯಿಸಿದಳು ಶಮ. ಹೋದವಳಿಗೆ ಎರಡೇ ನಿಮಿಷದಲ್ಲಿ ಇಲ್ಲೇನೋ ಬದಲಾವಣೆೆ ಇದೆ ಅನ್ನಿಸಿಬಿಟ್ಟಿತು. ಮಾಮೂಲಿನಂತಿಲ್ಲ. ಆದರೆ ಏನೂ ಗೊತ್ತಾಗುತ್ತಿಲ್ಲ. ಇಡೀ ಕ್ಲಾಸ್ ರೂಮ್ನಲ್ಲೆಲ್ಲ ಒಮ್ಮೆ ಕಣ್ಣಾಡಿಸಿದಳು. ಎಲ್ಲ್ಲಾ ಅದೇ ಮುಖಗಳು. ಒಬ್ಬನಾದರೂ ಚಂದದವನಿಲ್ಲ ಕಣೆ ಅಂತು ಮನಸ್ಸು. ಆದ್ರೆ ಅವರೆಲ್ಲರ ಮಧ್ಯೆ ಕೆಂಪಾನೆ ಕೆಂಪು ಟೀ ಶಟರ್್ ಹಾಕಿಕೊಂಡವನೊಬ್ಬ ಕುಳಿತಿದ್ದ. ಅರೆ ಇವನ್ನ ಈ ಮೊದಲು ನನ್ನ ಕ್ಲಾಸ್ನಲ್ಲಿ ನೋಡಿದ ನೆನಪೇ ಆಗುತ್ತಿಲ್ಲವಲ್ಲ. ಎಲ್ಲಿದ್ದ ಇವನು? ಹೊಸಬಾನಾ? ನೋಡೋದಕ್ಕೆ ಬೇರೆ ಹ್ಯಾಂಡ್ಸಮ್ ಆಗಿದ್ದಾನೆ. ಇವತ್ತೇನೋ ಡಿಫರೆಂಟ್ ಆಗಿ ಕಾಣಿಸುತ್ತಿದಾನೆ ಅಂದ್ರೆ ಹೊಸ ಟೀ ಶಟರ್್ ಹಾಕ್ಕೊಂಡಿರಬಹುದು. ಅದೂ ಕಲರ್ಫುಲ್!
ಅಷ್ಟರಲ್ಲಿ ಲೆಕ್ಷರರ್ ಬಂದ್ರು. ಎಲ್ಲಾ ಗಪ್ಚುಪ್. ಕೊನೆ ಬೆಂಚಿನ ರಾವಣ ಉರುಫ್ ರಾಮ ಬಿಟ್ಟ ಪೇಪರ್ ರಾಕೆಟ್ ಇನ್ನೇನು ಲೆಕ್ಷರರ್ ತಲೆಗೆ ಬಡೀಬೇಕು ಅನ್ನೋ ಅಷ್ಟರಲ್ಲಿ ಅದು ದಿಕ್ಕು ಬದಲಿಸಿತು. ಛೇ ಜಸ್ಟ್ ಮಿಸ್ ಅಂದುಕೊಂಡ. ಶಮ ತನ್ನ ಬ್ಯಾಗಿನಿಂದ ಮೊಬೈಲ್ ತೆಗೆದು ಕೆಂಪು ಟೀಶಟರ್್ನವನದೊಂದು ಫೋಟೊ ತೆಗೆದುಕೊಂಡಳು. ಹಾಗೆ ತೆಗಿಬೇಕು ಅನ್ನೋದಕ್ಕೂ ಅವಳ ಹತ್ರ ಕಾರಣ ಇರಲಿಲ್ಲ.
ಕ್ಲಾಸ್ ಬಿಟ್ಟ ಮೇಲೂ ಅವನದೇ ಗುಂಗು ಇವಳಿಗೆ. ಅರೆ ಎಲ್ಲಿದ್ದ ಇವನು. ಇಷ್ಟು ಹ್ಯಾಂಡ್ಸಮ್ ಹಾಗೂ ಹುಡುಗರು ಇರ್ತಾರಾ? ಗ್ರೇಟ್! ಹೋಗಿ ಮಾತನಾಡಿಸಿಬಿಡಲಾ?ಅಂದುಕೊಂಡಳು ಒಮ್ಮೆ. ಏನಾದ್ರು ಅಂದುಕೊಂಡರೆ! ಕತ್ತೆಬಾಲ ಕುದುರೆ ಜುಟ್ಟು. ಅಕೌಂಟ್ಸ್ ನೋಟ್ಸ್ ಕೊಡಿ ಅಂದ್ರೆ ಆಯ್ತು. ದಟ್ಸ್ ಆಲ್.
ಎಕ್ಸ್ಕ್ಯೂಸ್ ಮಿ.
ಎಸ್ ಅಂದ ಇವನು.
ಟೀಶಟರ್್ನ ಎಡಕ್ಕೆ, ಎದೆಯ ಮೇಲ್ಗಡೆ ಡೋಂಟ್ ಲವ್ ಮಿ ಅಂತ ಬರೆದಿತ್ತು. ಹುಚ್ಚಾ ಹಾಗಂದ್ರೆ ಲವ್ ಮಾಡ್ತಾರೆ ಅಂದುಕೊಂಡಿರಬೇಕು.
ಇಫ್ ಯೂ ಡೋಂಟ್ ಮೈಂಡ್ ನನಗೆ ಚೂರೇ ಚೂರು ಅಕೌಂಟ್ಸ್ ನೋಟ್ಸ್ ಬೇಕಿತ್ತು ಅಂದಳು.
ಅಕೌಂಟ್ಸ್ ನೋಟ್ಸ್?!?! ಚೂರೇ ಚೂರು! ಯೂ ನೋ ನಾನು ಸೈನ್ಸ್ ಸ್ಟೂಡೆಂಟ್! ನಿಮ್ಮ ಕ್ಲಾಸೆ!
ಹೋ ಮೈ ಗಾಡ್! ಶುರುವಿನಲ್ಲೇ ಮುಗ್ಗರಿಸಿದೆಯಲ್ಲೇ ಗೂಬೆ ಅಂತು ಮನಸು. ಐಯಾಮ್ ಸಾರಿ. ತಲೆಕೆರೆದುಕೊಂಡಳು. ಅಂದ್ರೆ ನಾನೂ ಸೈನ್ಸ್ ಸ್ಟೂಡೆಂಟೇ. ಗಾಡ್ ಮತ್ತೇಕೆ ಅಕೌಂಟ್ಸ್ ನೋಟ್ಸ್ ಕೇಳಿಸಿದೆ. ಈಡಿಯಟ್ ತಲೆ ಮೇಲೊಂದು ಮೊಟಕಿಕೊಂಡಳು.
ನಾಚಿಕೆ ಎನಿಸಿತು.
ಕನ್ಫ್ಯೂಸ್ ಮಾಡಿಕೊಂಡ್ರಾ? ಅಂದ ಇವಳು ಪೆಕರು ಪೆಕರಾಗಿ ನಿಂತಿದ್ದು ನೋಡಿ.
ಸಾರಿ ಅಂದು ಅಲ್ಲಿಂದ ಪೇರಿಕಿತ್ತಳು.
ಮತ್ತೆ ಕಾಲಿನ ಒಂಟಿ ಗೆಜ್ಜೆಯ ಚೈನು ನಕ್ಕಿತು. ವಯಸ್ಸು ಹದಿನೇಳಲ್ವ ಬಿಡು.
***
ಒಂದೇ ಕ್ಲಾಸ್ನಲ್ಲಿ ಓದಿದರೂ ಅವನ ಹೆಸರು ಮಿಥುನ್ ಅಂತ ಗೊತ್ತಾಗಲಿಕ್ಕೆ ಅರ್ಧ ವರುಷ ಹಿಡೀತಲ್ಲ. ಛೇ ಹಾಗೆ ಕೇಳಬಾರದಿತ್ತು ಅವನನ್ನ. ಎಷ್ಟು ಕೂಲಾಗಿ ಹೇಳಿದ ನಾನು ಸೈನ್ಸ್ ಸ್ಟೂಡೆಂಟ್ ನಿಮ್ಮ ಕ್ಲಾಸೇ ಅಂತ. ಅಯ್ಯೋ ಗೂಬೆ ಅನ್ನೋ ಥರಾನೆ ಇತ್ತು ಅವನ ಆ್ಯನ್ಸರ್. ಆದ್ರೂ ಹುಡುಗ ಸ್ಮಾಟರ್್. ಕೈಯಲ್ಲಿ ಮೊಲದ ಬಣ್ಣದ ಮಫ್ಲರ್ ಹಿಡಿದುಕೊಂಡು ಅದನ್ನ ಮೆಲ್ಲಗೆ ತಲೆ ತುಂಬಾ ಸುತ್ತಿಕೊಂಡಳು. ಫಕ್ಕಾ ಗೂಬೆ ಅಂತು ಮನಸ್ಸು. ನಗು ಬಂತು ಇವಳಿಗೆ. ಯಾಕೋ ಪದೆ ಪದೆ ನೆನಪಾಗ್ತಾನೆ ಹುಡುಗ.
ತಿಂಗಳು ಕಳೆಯುವಷ್ಟರಲ್ಲಿ ಇಬ್ಬರೂ ಅಚ್ಚಾ ಅಚ್ಚಾ ಫ್ರೆಂಡ್ ಆಗಿಹೋದರು. ಒಂದೂವರೆ ತಿಂಗಳು ಮುಗಿಯುವಷ್ಟರಲ್ಲಿ ಶಮಳ ಎದೆಯಲ್ಲಿ ಏನೋ ಕಸಿವಿಸಿ ಶುರುವಾಯಿತು. ನಾನು ಲವ್ವಿಗೆ ಬಿದ್ದಿದ್ದೇನಾ? ಎಸ್, ಬಿದ್ದಿದ್ದೇನಾದ್ರೆ ಅವನಿಗೆ ಹೇಳೋದು ಹೇಗೆ? ಅವನೋ ಸೈಲೆಂಟ್ ಹುಡುಗ. ಎರಡು ಮಾತಿಗಿಂತ ಹೆಚ್ಚು ಮಾತಾಡೋಲ್ಲ. ಮೂರನೇ ಮಾತಿಗೆಲ್ಲ ಮೌನಕ್ಕೆ ಅಂಟಿಕೊಂಡುಬಿಡುತ್ತಾನೆ. ನಾನೆ ಹೇಳಿದರಾಯ್ತು, ನಿನ್ನ ಲವ್ ಮಾಡ್ತಿದೀನಿ ಕಣೋ ಅಂತ. ಏನಂದಾನು? ಅವನಿಗೂ ಲವ್ ಆಗಿದ್ರೆ ಓಕೆ ಅಂತಾನೆ. ಇಲ್ಲ ಅಂದ್ರೆ ಗೆಟ್ಲಾಸ್ಟ್ ಅಂತಾನೆ. ಗೆಟ್ ಲಾಸ್ಟ್ ಅನ್ನೋದಕ್ಕೆ ಅವಕಾಶಾನೆ ಕೊಡಬಾರದು. ಯಾಕೆಂದ್ರೆ ಒಮ್ಮೆ ಹಾಗಂದುಬಿಟ್ರೆ ಇಂಥ ಹುಡುಗರು ಮತ್ತೊಮ್ಮೆ ಸಿಗೋಲ್ಲ. ದೇವರೆ ಅವನು ನನಗೇ ಸಿಗಲಿ.
ಇವಳಿಗೂ ನೀನಂದ್ರೆ ಇಷ್ಟ ಅಂತ ಹೇಳೋದಕ್ಕೆ ಆಗಲಿಲ್ಲ. ಒದ್ದಾಡಿದಳು. ಬೆಳಿಗ್ಗೆ ಸೀದಾ ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ಹುಂಡಿಯಲ್ಲಿ ನೂರಾ ಒಂದು ರೂಪಾಯಿ ಹಾಕಿ, ಚೂರೇ ಚೂರು ಧೈರ್ಯ ಕೊಡಬೇಕೆಂದು, ಇಲ್ಲದಿದ್ದರೆ ಅವನೇ ನಿನ್ನನ್ನು ಪ್ರೀತಿಸುತ್ತಿದ್ದೇನೆ ಕಣೆ ಅಂತ ಹೇಳುವಂತೆ ಮಾಡಬೇಕೆಂದು ಬೇಡಿಕೊಂಡಳು. ಸಂಜೆ ಅವನ ಪಕ್ಕ ಕುಳಿತು ಪಾಪ್ಕಾನರ್್ ಜಗಿದಳೇ ವಿನಃ ಮಾತೇ ಹೊರಡಲಿಲ್ಲ. ನಡುವೆ ನಿನಗೆ ನನ್ನನ್ನ ನೋಡಿದ್ರೆ ಏನೂ ಅನಿಸುತ್ತಿಲ್ವಾ ?ಅಂದಳು. ಏನು ಅನ್ನಿಸಬೇಕೋ ಅದು ಅನ್ನಿಸುತ್ತೆ ಬಿಡು. ಅಂದು ಸುಮ್ಮನಾದ. ಅಂದ್ರೆ? ಇವನೊಳ್ಳೆ ಒಗಟಾದನಲ್ಲ. ಹೋಗಲಿ ಬಿಡು. ಆದ್ರೆ ಎಷ್ಟು ಚಂದ ಇದ್ದಾನೆ. ಜೀವನ ಪೂತರ್ಿ ಹೀಗೆ ನೋಡ್ತಾ ಕೂರಬೇಕು ಅನಿಸ್ತಿದೆ! ಪ್ಲೀಸ್ ಅವನೇ ಐ ಲವ್ ಯೂ ಅಂತ ಹೇಳಲಿ.
ಅಷ್ಟರಲ್ಲಿ ಇವಳ ಹುಟ್ಟಿದ ಹಬ್ಬ ಬಂತು. ಅವತ್ತಾದರೂ ನನಗೆ ಸಪ್ರೈಸ್ ಕೊಡ್ತಾನೆ ಅಂದುಕೊಂಡಳು ಶಮ. ಬದಲಿಗೆ ಅವಳಿಗೆ ಇಷ್ಟದ ಗುಲಾಬಿ ಬಣ್ಣದ ಒಂದು ದೊಡ್ಡ ಬೊಂಬೆ ಕೊಟ್ಟು ಹುಟ್ಟು ಹಬ್ಬದ ಶುಭಾಶಯಗಳು ಅಂದ. ಇವಳಿಗೆ ಸಿಟ್ಟು ಬಂತು. ಐ ಲವ್ ಯು ಅಂತ ಹೇಳುವುದಕ್ಕೆ ಏನಾಗಿದೆ ಇವನಿಗೆ ದಾಡಿ. ಸುಮ್ಮನೆ ಸತಾಯಿಸುತ್ತಿದ್ದಾನಲ್ಲ. ನಾನೇ ಹೇಳೋಣವೆಂದರೂ ಥೂ ನಾಚಿಕೆ ಬಿಟ್ಟು ಹೇಗೆ ಹೇಳೋದು.
ವ್ಯಾಲೆಂಟೈನ್ಸ್ ಡೇ ಬಂತು. ಅವತ್ತೂ ಒಂದು ಗುಲಾಬಿ ಬಣ್ಣದ ಗೊಂಬೆ ತಂದು ಕೈಗಿತ್ತ. ಇವತ್ತಾದರೂ ಹೇಳಬಾರದ? ಚಡಪಡಿಸಿದಳು.
ಕೊಟ್ಟ ಗೊಂಬೆಗಳನ್ನೆಲ್ಲ ತೆಗೆದುಕೊಂಡು ಹೋಗಿ ರೂಮಿನ ಕಬೋಡರ್್ನಲ್ಲಿ ಎಸೆಯುತ್ತಿದ್ದಳು. ಒಂದಾ ಎರಡಾ ಅವನು ಕೊಟ್ಟಿದ್ದು ನೂರಾರು ಬೊಂಬೆಗಳು. ಎಲ್ಲಾ ಗುಲಾಬಿ ಬಣ್ಣದವೇ!
ಇಷ್ಟು ನನ್ನನ್ನ ಹಚ್ಚಿಕೊಂಡಿದ್ದಾನೆ, ಕರೆದಲ್ಲಿಗೆ ಬರುತ್ತಾನೆ, ಕೇಳಿದ್ದನ್ನೆಲ್ಲ ಕೊಡಿಸುತ್ತಾನೆ, ಒಂದಿನ ನಾನು ಕಾಲೇಜಿಗೆ ಹೋಗದೇ ಹೋದ್ರೆ ಯಾಕೆ ನಿನ್ನೆ ಬರಲಿಲ್ಲ ಅಂತ ಮುಖ ಸಪ್ಪಗೆ ಮಾಡಿಕೊಳ್ಳುತ್ತಾನೆ. ಅವನಿಗೆ ನನ್ನಲ್ಲಿ ಪ್ರೀತೀನೆ ಇಲ್ಲವಾ? ಏನಾದ್ರೂ ಫ್ಲಟರ್್ ಮಾಡುತ್ತಿದ್ದಾನಾ? ಎಷ್ಟೊಂದು ಜನ ಹುಡುಗೀರು ಅವನ ಜೊತೆ ಸುತುತ್ತಿರುತ್ತಾರಲ್ಲ. ಯಾರಿಗೊತ್ತು ಅವರಲ್ಲಿ ಯಾರಾದ್ರೂ ಒಬ್ಳು ಇಷ್ಟ ಆಗಿಬಿಟ್ರೆ? ನನ್ನ ಹುಡುಗನನ್ನ ನಾನೇ ಹಾಗೆ ಅನುಮಾನಿಸುವುದಾ! ಇವತ್ತಲ್ಲ ನಾಳೆ ಹೇಳಿಯಾನು ಬಿಡು. ಎಷ್ಟು ದಿನ ಅಂತ ಪ್ರೀತಿಯನ್ನ ಹಾಗೆ ಎದೆಯಲ್ಲಿ ಬಚ್ಚಿಟ್ಟುಕೊಳ್ಳುವುದಕ್ಕೆ ಸಾಧ್ಯ?
ಶಮಾಳದು ನಿಲ್ಲದ ಚಡಪಡಿಕೆ.
ಅವತ್ತು ಎಂದಿನಂತೆ ಬಸ್ಸ್ಟಾಂಡಿನಲ್ಲಿ ನಿಂತಿದ್ದ. ಇವಳಿಗೆ ಹಟ ಬಂತು. ನನ್ನನ್ನ ಲವ್ ಮಾಡ್ತೀಯ ಇಲ್ವಾ? ಅಷ್ಟೊಂದು ಜನ ಹುಡುಗೀರ ಜೊತೆ ಸುತ್ತುತ್ತೀಯಲ್ಲ. ಯಾಕೆ ಹೀಗೆ ಮಾಡ್ತೀಯ? ಅಂತ ಕೇಳಲೇಬೇಕೆನಿಸಿತು. ಹಾಗಂದುಕೊಂಡವಳೇ ಸರ್ರ್ ಅಂತ ಹೋಗಿ ಅವನ ಮಾತಿಗೂ ಕಾಯದೇ ಕೈ ಹಿಡಿದು ಎಳೆದುಕೊಂಡು ರಸ್ತೆಗಿಳಿದಳು ಅಷ್ಟೆೆ. ಎದುರಿಗೆ ಬರುತ್ತಿದ್ದ ಕಾರನ್ನು ಗಮನಿಸಲೇ ಇಲ್ಲ. ಹಿಂದೆ ಬರುತ್ತಿದ್ದ ಮಿಥುನ್ನ ಕಾರು ಹೊಡೆದುಕೊಂಡು ಹೋಗಿತ್ತು.
ಶಮ ಅಲ್ಲೆ ಕುಸಿದು ಕುಳಿತಳು. ಇಪ್ಪತ್ನಾಲ್ಕು ಗಂಟೆ ಆದ ಮೇಲೆ ಎಚ್ಚರ ಬಂತು. ಕಣ್ತುಂಬ ನೀರು. ಬತ್ತಿಹೋದ ಮಾತು. ನಾನೇ ಕರೆತಂದು ಕೊಂದಂಗಾಯಿತಲ್ಲ. ಪ್ರೀತಿ ಅಂತ ಅವನ ಪ್ರಾಣ ತೆಗೆದುಬಿಟ್ಟೆ.
ಹಲುಬಿದಳು.
ಸತ್ತು ಹೋಗಲಾ?
ಅವನಿಲ್ಲದ ಬದುಕಲ್ಲಿ ನನಗೇನಿದೆ?
........................
ಕಬೋಡರ್್ನಲ್ಲಿದ್ದ ಬೊಂಬೆಗಳ್ಯಾಕೋ ತೀರಾ ನೆನಪದವು.
ಹೋಗಿ ಒಂದೊಂದೇ ತೆಗೆದು ಎದೆಗವಚಿಕೊಂಡಳು. ನಿನ್ನ ನೆನಪಿಗೆ ಅಂತ ಇರೋದು ಇದಿಷ್ಟೇ ಕಣೋ.
ಮತ್ತೆ ಮನ ದುಃಖದ ಕಡಲು.
ಹಾಗೆ ಒಂದೊಂದೇ ಗೊಂಬೆ ನೋಡುತ್ತಿದ್ದಳಲ್ಲ ಏನೋ ಕೈಗೆ ಸಿಕ್ಕಂತಾಯಿತು. ನೋಡಿದರೆ ಪುಟ್ಟ ಕೀ.
ಸುಮ್ಮನೆ ತಿರುಗಿಸಿದಳು.
ಐ ಲವ್ ಯೂ ಶಮ, ಐ ಲವ್ ಯೂ ಶಮ ಅನ್ನೋ ಮಿಥುನನದೇ ಮಾತುಗಳು.
ಶಮ ಬಿಳಿಚಿಕೊಂಡಳು.

Tuesday, February 10, 2009

ಅವಳು ಸ್ಕೂಟಿ ತಗೊಂಡಿದಾಳೆ ನಂದಿನ್ನೂ ಹಳೇ ಬೈಕು ಅಂದವನದು ಜೆಲಸಿಯಾ?



ಫೆಬ್ರವರಿ ಬಂತೆಂದರೆ ಸಾಕು ಪ್ರೇಮಿಗಳ ಮನಸ್ಸು ದಿಲ್ಖುಷ್.
ಅದು ಅವರ ಪಾಲಿನ ತಿಂಗಳು. ತಾವು ಇಷ್ಟಪಟ್ಟವರ ಮುಂದೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಅವರು ಆರಿಸಿಕೊಳ್ಳುವ ದಿನ ಫೆಬ್ರವರಿ ಹದಿನಾಲ್ಕು. ಗೊತ್ತಿರಲಿ ಅವತ್ತು ಪ್ರೇಮಿಗಳ ದಿನ. ವರ್ಷದಿಂದ ಒಳಗೊಳಗೇ ಬಚ್ಚಿಟ್ಟುಕೊಂಡಿದ್ದ ಭಾವವೊಂದು ಆ ದಿನ ಪ್ರಕಟಗೊಂಡುಬಿಡುತ್ತದೆ. ಆಮೇಲಿಂದ ಅವರು ಜಸ್ಟ್ ಲವ್ವರ್ಸ್.
ವಿಷಯ ಅದಲ್ಲ.
ಲವ್ವರ್ಸ್ ಅಂತ ಅಂದುಕೊಂಡ ಮೇಲೇನೆ ಫಜೀತಿಗಳೆಲ್ಲ ಶುರುವಾಗೋದು. ಅವತ್ತಿನಿಂದ ಅವಳಿಗೆ ಇವನ ಬಗ್ಗೆ ಇವನಿಗೆ ಅವಳ ಬಗ್ಗೆ ಒಂದು ರೀತಿಯ ಪೊಸೆಸೀವ್ನೆಸ್ ಶುರುವಾಗಿಬಿಡುತ್ತದೆ. ಇವನು ಕೇವಲ ನನ್ನವನು/ನನ್ನವಳು ಅನ್ನುವ ಅಧಿಕಾರದ ಮಾತೊಂದು ಅದೆಲ್ಲಿಂದಲೋ ಚಲಾವಣೆಗೆ ಬಂದುಬಿಡುತ್ತದೆ. ಸಮಸ್ಯೆ ಶುರುವಾಗೋದು ಅಲ್ಲೆ. ಅದೂ ಅಲ್ದೆ ಹುಡುಗಿ ತನಗಿಂತ ಬುದ್ಧಿವಂತೆಯಾಗಿದ್ದರೆ, ಒಳ್ಳೆ ಕೆಲಸದಲ್ಲಿದ್ದರೆ ಹುಡುಗ ಜೆಲಸ್ ಆಗುತ್ತಾನಾ?
ನನ್ನ ಆತ್ಮೀಯ ಗೆಳೆಯನೊಬ್ಬನಿದ್ದಾನೆ. ಅವನಿಗೆ ವಯಸ್ಸು ಜಸ್ಟ್ ಥಟರ್ಿ. ಕಳೆದ ವ್ಯಾಲೆಂಟೈನ್ಸ್ ಡೇನಲ್ಲಿ ಒಂದು ಹುಡುಗಿಗೆ ಐ ಲವ್ ಯೂ ಕಣೆ ಅಂತ ಹೇಳಿದ್ದ. ಅವಳು ಆಯ್ತು ಕಣೋ ಅಂತ ಒಪ್ಪಿಕೊಂಡಿದ್ದಳು. ಇವನ ನೇರತನ, ಕಷ್ಟಪಟ್ಟು ದುಡಿಯುವ ಮನಸ್ಸು ಅವಳಿಗೂ ಇಷ್ಟ ಆಗಿತ್ತು ಅನಿಸುತ್ತೆ. ಆಯ್ತು. ಆದ್ರೆ ಒಂದು ಕಂಡೀಷನ್. ನನ್ನನ್ನ ಸಿನೆಮಾಕ್ಕೆ ಕರೆಯಬಾರದು, ಪಾಕರ್್ನಲ್ಲಿ ಕೈ ಕೈ ಹಿಡಿದು ಅಲೆಯೋಣ ಬಾ ಅನ್ನಬಾರದು. ಅಲ್ಲೆಲ್ಲೋ ಕಾಫಿಡೇನ ಮೂಲೆಯಲ್ಲಿ ಕುಳಿತು ಐಸ್ ಕಾಫಿ ಕುಡಿ ಅಂತ ಒತ್ತಾಯಮಾಡಬಾರದು. ಬಿಕಾಸ್ ಐ ಹೇಟ್ ದಟ್. ನನಗೆ ಹೇಗೆ ಬೇಕೋ ಆ ಥರ ನಾನು ಇರುತ್ತೇನೆ. ನೀನಗೆ ಹೇಗೆ ಬೇಕೋ ಆ ಥರ ನೀನಿರು. ಒಬ್ಬರು ತಮ್ಮ ಅಭಿಪ್ರಾಯವನ್ನ ಇನ್ನೊಬ್ಬರ ಮೇಲೆ ಹೇರಬಾರದು. ಬಟ್ ಮದುವೆ ಅಂತ ಆದ ಮೇಲೆ ಇದೆಲ್ಲ ಛೇಂಜ್ ಆಗುತ್ತೆ. ಅಲ್ಲಿವರೆಗೂ ನೋ ಕಾಂಪ್ರಮೈಸ್ ಅಂದುಬಿಟ್ಟಿದ್ದಳು. ಇವನು ಅವತ್ತೇ ಸುಸ್ತಂತೆ.
ಆದ್ರೂ ಅದಕ್ಕೋಸ್ಕಾರಾನೆ ನೀನು ಇಷ್ಟ ಆಗ್ತೀಯ ಕಣೆ ಅಂತ ಅವಳ ಮುಂದೆ ಒದರಿ ಅವಳನ್ನ ಎಲ್ಲಿಗೂ ಕರೆಯದೇ ಏನನ್ನೂ ಗಿಫ್ಟ್ ಅಂತ ಕೊಡದೆ, ತೆಗೆದುಕೊಳ್ಳದೆ ತಣ್ಣಗೆ ಪ್ರೀತಿ ಮಾಡುತ್ತಿದ್ದ.
ನಡುವೆ ಅವಳಿಗೊಂದು ಕೆಲಸದ ಆಫರ್ ಬಂತು. ಸೆಲೆಕ್ಟೂ ಆಗಿಹೋದಳು. ಕೈ ತುಂಬಾ ಪಗಾರ. ಅವಾಗವಾಗ ಟೂರು. ಇತ್ಯಾದಿ ಎಲ್ಲಾ ಕೇಳಿ ಇವನು ಗರಬಡಿದವನಂತೆ ಕುಳಿತ. ಮನದಲ್ಲೇನೋ ತಳಮಳ. ಯಾಕೆಂದ್ರೆ ಇವನಿಗೆ ಅಂಥ ಹೇಳಿಕೊಳ್ಳುವ ಕೆಲಸವೇನೂ ಇರಲಿಲ್ಲ. ಆದ್ರೆ ಅವಳಿಗೆ ಕೈತುಂಬಾ ಪಗಾರ ಬರುತ್ತದೆ. ತಲೆನೋವಾಗಿರುವುದು ಇವನಿಗೆ ಅದೇ! ಇದನ್ನ ಜೆಲಸಿ ಅಂತೀರಾ... ಸಂಕೋಚ ಅಂತೀರಾ ಗೊತ್ತಿಲ್ಲ. ಬಟ್ ಅವನಿಗೆ ನನ್ನ ಹುಡುಗಿ ನನಗಿಂತ ಹೆಚ್ಚಿಗೆ ಸಂಪಾದಿಸುತ್ತಾಳಲ್ಲ ಅನ್ನುವ ಫೀಲಿಂಗ್ ಒಂದು ಎಗ್ಗಿಲ್ಲದೆ ಕಾಡುತ್ತಿದೆ. ಅವನ ಪ್ರಕಾರ ಅಂತ ಹುಡುಗಿಯರು ಹುಡುಗರನ್ನ ಕೀಳಾಗಿ ಕಾಣುತ್ತಾರೆ. ಮದುವೆ ಅಂತ ಆದ ಮೇಲೆ ಅಧಿಕಾರ ಚಲಾಯಿಸುತ್ತಾರೆ. ನಮ್ಮನ್ನ ಹೇಳದೆ ಕೇಳದೆ ಎಲ್ಲೆಲ್ಲಿಗೋ ಹೋಗುತ್ತಾರೆ. ಅವರಿಗೆ ಸುಖಾಸುಮ್ಮನೆ ಫ್ರೆಂಡ್ಸ್ ಜಾಸ್ತಿ. ಕಿಟ್ಟಿಪಾಟರ್ಿ. ಕ್ಲಬ್ಬು, ಪಿಕ್ನಿಕ್ಕೂ ಅದು ಇದೂ ಅಂತ ಸುತ್ತುತ್ತಿರುತ್ತಾರೆ. ಅವರಿಗೆ ಜೊತೆಗೆ ನಾವಿಲ್ಲದಿದ್ರೂ ಆದೀತು. ಓಡಾಡಲು ಕಾರೇಬೇಕು. ಫ್ರೆಂಡ್ಸ್ಗೆ ಕಾಸ್ಟ್ಲೀ ಗಿಫ್ಟ್ ಕೊಡ್ತಾಳೆ. ಹೀಗೆಲ್ಲ ಬೆಳೆಯುತ್ತದೆ ಅವನ ತಕರಾರು?
ಫ್ರೆಂಡ್ಸ್ ಜಸ್ಟ್ ಥಿಂಕ್. ಪ್ರೀತಿ ಅನ್ನೋದು ವಸ್ತಗಳಿಂದ, ಕೆಲಸದಿಂದ ಅಳೆಯುವಂತಹದ್ದಾ? ಅವಳು ಹೇಗೆ ಇರಲಿ, ಇವನು ಹೇಗೆ ಇರಲಿ ಪ್ರೀತಿ ಮಾತ್ರ ಬದಲಾಗಕೂಡದು. ಹಾಗಿದ್ದಾಗ ಮಾತ್ರ ಪ್ರೀತಿ ಜಾರಿಯಲ್ಲಿರುತ್ತದೆ. ಇಲ್ಲದಿದ್ದರೆ ಈ ವ್ಯಾಲೆಂಟೈನ್ಸ್ ಡೇಗೆ ಶುರುವಾದ ಪ್ರೀತಿ ನೆಕ್ಸ್ಟ್ ವ್ಯಾಲೆಂಟೈನ್ಸ್ ಡೇಗೆ ಬಿರುಕು ಬಿಟ್ಟಿರುತ್ತದೆ. ಶಿಥಿಲವಾದ ಪ್ರೀತಿಯನ್ನ ತೇಪೆ ಹಚ್ಚಿ ಹೆಚ್ಚು ದಿನ ಸಾಗಿಸೋದು ಕಷ್ಟ ಕಷ್ಟ. ನಿಮಗೆ ಗೊತ್ತಿರಲಿ, ಪ್ರೀತಿ ವಿಷಯದಲ್ಲಿ ಇಬ್ಬರಲ್ಲಿ ಯಾರೂ ಹೆಚ್ಚಲ್ಲ. ಯಾರೂ ಕಡಿಮೆ ಅಲ್ಲ. ಅಲ್ಲಿ ಇಬ್ಬರೂ ಸರ್ವಸಮಾನರು. ಹಾಗಿದ್ದಾಗ ಮಾತ್ರ ವ್ಯಾಲೆಂಟೈನ್ಸ್ ಡೇಗೂ ಒಂದು ಅರ್ಥ ಬರುತ್ತದೆ.
ಇತ್ತೀಚೆಗೆ ರೇಡಿಯೋ ಪ್ರೋಗ್ರಾಮ್ನಲ್ಲಿ ಒಬ್ಬ ಹುಡುಗ ಹೇಳುತ್ತಿದ್ದ. ನನ್ನದು ಹಳೇ ಬೈಕ್. ಆದ್ರೆ ನನ್ನ ಹುಡುಗಿ ಹೊಸ ಸ್ಕೂಟಿ ತಗೊಂಡಿದಾಳೆ. ಯಾಕೋ ನನಗೆ ಮುಜುಗರ ಅನಿಸುತ್ತಿದೆ. ಏನು ಮಾಡಲಿ ಅಂತ.
ಈ ಥರದ ಸಣ್ಣತನಗಳು, ಕೀಳರಿಮೆಗಳು ಬೇಡ ಅಂತಾನೆ ನಾನು ಹೇಳಲು ಹೊರಟಿದ್ದು. ನಿಮ್ಮ ಜೊತೆಗಾರ ಅಥವಾ ಜೊತೆಗಾತಿ ನಿಮಗಿಂತ ಚೆನ್ನಾಗಿ ಬೆಳೆಯುತ್ತಿದ್ದಾಳೆ ಅಂದ್ರೆ ಅದಕ್ಕಿಂತ ಸಂತೋಷ ಬೇರೇನಿದೆ ಅಲ್ವ!
ಅಂದಹಾಗೆ ಹ್ಯಾಪಿ ವ್ಯಾಲೆಂಟೈನ್ಸ್ ಡೇ.

ಫ್ಲರ್ಟ್ ಎಕ್ಸ್ ಪ್ರೆಸ್
ಈ ವಿದೇಶೀಯರೇ ಹಾಗೇನೋ! ಏನೇ ಮಾಡಿದರೂ ಅದು ಖುಲ್ಲಂಖುಲ್ಲ. ಅಥವಾ ವಿದೇಶಿಯರು ಅನ್ನುವುದಕ್ಕೋಸ್ಕರಾನೇ ಅವರು ನಮ್ಮ ಪಾಲಿಗೆ ಹಾಗೇ ಕಾಣಿಸುತ್ತಾರಾ, ಗೊತಿಲ್ಲ.
ನೋಡಿ, ಜರ್ಮನ್ನಲ್ಲಿ ಫ್ಲಟರ್್ ಎಕ್ಸ್ಪ್ರೆಸ್ ಅಂತ ಒಂದು ಟ್ರೈನ್ ಬಿಟ್ತಾರೆ. ಸಿಫರ್್ ಪ್ರೇಮಿಗಳಿಗೋಸ್ಕರ. ಫೆಬ್ರವರಿ ಹದಿಮೂರನೇ ತಾರೀಖು ರಾತ್ರಿ ಅದು ಹೊರಡುತ್ತದಂತೆ. ಅಲ್ಲಿ ಮದುವೆ ಆಗಿರೋರು, ಮಕ್ಕಳಾಗಿರೋರು ಹೋಗೋ ಹಾಗಿಲ್ಲವಾ, ಗೊತ್ತಿಲ್ಲ. ಆದ್ರೆ ಯಂಗ್ ಹಾಟ್ಸರ್್ ಟ್ರೈನ್ನಲ್ಲಿ ತಮ್ಮ ತಮ್ಮ ಜೊತೆಗಾರರನ್ನ ಹುಡುಕಿಕೊಳ್ಳಬಹುದು. ಪ್ರೀತಿ ಮಾಡಬಹುದು. ವ್ಯಾಲೆಂಟೈನ್ಸ್ ಡೇ ಗಿಫ್ಟ್ ಕೊಡಬಹುದು. ಅವರ ಜೊತೆ ಹಾಡಬಹುದು. ಕುಣಿಬಹುದು. ಪರಸ್ಫರ ಓಕೆ ಆದ್ರೆ ಪರ್ಸನಲ್ ವಿವರಗಳನ್ನ ಹಂಚಿಕೊಳ್ಳಬಹುದು. ಒಟ್ಟಿನಲ್ಲ ಎಲ್ಲೆ ಮೀರದಂತೆ ಇದ್ದರಾಯ್ತು. ಇಷ್ಟಾದ ಮೇಲೆ ಇಷ್ಟ ಆದ್ರೆ ಜೀವನಪೂತರ್ಿ ಸಂಗಾತಿಯನ್ನಾಗಿಯೂ ಇಟ್ಟುಕೊಳ್ಳಬಹುದು. ಕಷ್ಟ ಆದ್ರೆ ಇನ್ನೊಬ್ಬರಿಗೆ ಟ್ರೈ ಮಾಡಬಹುದು. ಇಂಥ ಪ್ರೇಮಯಾನಕ್ಕೆ ಸಖತ್ ಡಿಮ್ಯಾಂಡ್ ಇದೆಯಂತೆ. ಹೋದ ವರ್ಷ ಎಂಟುನೂರು ಮಂದಿಗೆ ಮಾತ್ರ ಇರೋದು ಕಣ್ರಯ್ಯ ಅವಕಾಶ ಅಂದ್ರೂ ಕೇಳದೆ ಬರೋಬ್ಬರಿ ಐದುಸಾವಿರ ಅಪ್ಲಿಕೇಷನ್ ಬಂದಿದ್ದವಂತೆ. ಅಂದ್ರೆ ಪ್ರೀತಿಯ ಹುಚ್ಚು ತುಸು ಜಾಸ್ತೀನೆ ಇದೆ ಅಂತಾಯ್ತಲ್ಲ.
ಈ ಟ್ರೈನ್ ಜರ್ಮನ್ನ ಹತ್ತು ಪ್ರಮುಖ ಪಟ್ಟಣಗಳನ್ನು ಹಾದು ಹೋಗುತ್ತಂತೆ. ಕೊನೆಗೆ ಪ್ರೇಮಯಾನ ಮುಗಿದ ಮೇಲೆ ಒಂದು ಪಾಟರ್ಿ ಇರುತ್ತೆ. ರೈಲ್ನಲ್ಲಿ ಫೇಲ್ ಆದವರು ಪಾಟರ್ಿಯಲ್ಲಿ ಪಾಟರ್್ನರ್ನ ಹುಡುಕಿಕೊಳ್ಳುವುದಕ್ಕೆ ಆವಕಾಶ ಉಂಟು. ನಮ್ಮ ಕಡೆ ಮ್ಯಾಟ್ರಿಮೋನಲ್ಸ್ನವರು ಹುಡುಗ ಹುಡುಗಿಯರನ್ನ ಒಂದೆಡೆ ಸೇರಿಸಿ ಮ್ಯಾಚ್ಮೇಕಿಂಗ್ ಆಂತ ಮಾಡುತ್ತಾರಲ್ಲ ಅದೇ ಥರ ಅನ್ನಿ. ಆದ್ರೆ ಇಲ್ಲಿ ರೈಲ್ ಬಿಡ್ತಾರೆ.
ಅದೆಲ್ಲ ಸರಿ, ರೈಲಲ್ಲಿ ರೈಲ್ ಬಿಟ್ಟು ಪ್ರೀತಿ ಮಾಡ್ತೀನಿ ಅಂತ ಮೋಸ ಮಾಡಿ ಹೋದ್ರೆ ಏನು ಗತಿ?
ಅಲ್ಲರೀ, ರೈಲೇ ಬಿಟ್ಟವರು ಸುಖಾಸುಮ್ಮನೆ ರೈಲ್ ಬಿಡೋರ ಬಗ್ಗೆ ಒಂದು ಕಣ್ಣಿಟ್ಟಿರಲ್ವಾ!
ಅಂದಹಾಗೆ ಬೆಂಗಳೂರಲ್ಲೂ ಇಂಥದ್ದೊಂದು ರೈಲ್ ಬಿಟ್ರೆ ಹೇಗೆ ಅಂತ ಯೋಚಿಸ್ತಿದೀನಿ.
ಯಾವುದಕ್ಕೂ ಫೆಬ್ರವರಿ ಹದಿನಾಲ್ಕರ ತನಕ ನೀವು ಕಾಯಲೇಬೇಕು.

ಎಲ್ಲಾ ಇಸಕೊಂಡವಳಿಗೆ ಇದೊಂದು ಬೇಡವೆಂದ್ರೆ ಹೇಗೆ?





ಪ್ರಿಯ ಇವಳೇ!
ನನಗೇನು ಹೆಸರಿಲ್ಲವಾ ಅಂತ ಕೇಳಬೇಡ. ನಿನ್ನ ಹೆಸರು ಕರೆಯಲು ಮನಸ್ಸಾಗುತ್ತಿಲ್ಲ ಕಣೆ ಅಂದರೆ ಕೋಪಿಸಿಕೊಳ್ಳಬೇಡ.
ನೆನಪಿದೆಯಾ ನಿನಗೆ. ನಿನ್ನ ಹೆಸರೆಂದ್ರೆ ನನಗೆ ಅಷ್ಟಿಷ್ಟ. ಯಾವ ಹುಡುಗಿಯನ್ನೂ ಈ ಮೊದಲು ಪೂತರ್ಿ ಹೆಸರಿಡಿದು ಕರೆಯದ ಪಾಪಿ ನಾನು. ಕರೆಯಲಿ ಅಂತ ಆಸೆ ಪಡುತ್ತಿದ್ದವರ ಪಟ್ಟಿ ದೊಡ್ಡದಿದೆ ಅಂದ್ರೆ ಅಪಸವ್ಯ ಆದೀತು. ಅಂಥದರಲ್ಲಿ ನಿನ್ನನ್ನ ಪೂವರ್ಿ ಅಂತ ಕರೆಯುತ್ತಿದ್ದೆ. ನಿನ್ನದೋ ಅದನ್ನು ಶಾಟರ್್ ಮಾಡಿ ಕರೆಯೋ ಅಂತ ಪೀಡಣೆ. ಶಾಟರ್್ ಮಾಡೋದಕ್ಕೆ ಆಗೊಲ್ಲ ಅನ್ನುವುದು ನಿನಗೂ ಗೊತ್ತಿತ್ತು. ಆದರೂ ಹಾಗೆ ಕೇಳುವುದರಲ್ಲೇನೋ ನಿನಗೆ ಎಲ್ಲಿಲ್ಲದ ಖುಷಿ ಖುಷಿ.
ಜಸ್ಟ್ ಎಲ್ಲಾ ನೆನಪಾಗುತ್ತಿದೆ ಕಣೆ. ಹೇಗೆ ಹೇಳಲಿ ನಿನಗೆ ನನ್ನ ಎದೆಯ ಕದದ ಮೇಲಿನ ಮೊದಲ ಹೆಸರು ನೀನೆ ಅಂತ. ನೋಡ ನೋಡುತ್ತಲೇ ಅದ್ಯಾಗೆ ನೀನು ನನಗೆ ಎಲ್ಲಾ ಆಗಿಹೋದೆಯಲ್ಲ! ಪ್ರೀತಿಯಂದ್ರೆ ಹಾಗೇನೆ. ಅದು ಒಮ್ಮೆ ಬಂದು ಎದೆಯ ಅಂಗಳದಲ್ಲಿ ನಿಂತರೆ ಸಾಕು ಅಲ್ಲಿ ಸಾವಿರ ಗುಲಾಬಿಗಳ ಹೂ ಕಂಗೊಳಿಸುತ್ತದೆ. ಅದರ ಗಂಧ, ಘಮಲು, ನುಣುಪು, ವೈಯ್ಯಾರ ಎಲ್ಲಾ ನೀನೆ. ಇನ್ನೇನಿದೆ ನನಗೆ?! ನಿನ್ನ ಸನಿಹವೊಂದನ್ನು ಬಿಟ್ಟು. ನಿನ್ನ ನೆನಪಿಲ್ಲದ ದಿನವನ್ನು ನಾನು ಕನಸಲ್ಲೂ ಎಣಿಸಿಕೊಳ್ಳಲಾರೆ. ಹೀಗಿರುವಾಗ ಜಸ್ಟ್ ನೀನು ಮಾಡಿದ್ದು ಸರಿಗಿಲ್ಲ ಅಂತ ಒಂದೇ ಒಂದು ಮಾತು ಹೇಳಿದ್ರು ಮುಚ್ಚುಕೊಂಡು ತಿದ್ದಿಕೊಳ್ತಾ ಇದ್ದನಲ್ಲೆ! ಇಷ್ಟಕ್ಕೂ ಅಂತ ತಪ್ಪು ನಾನೇನು ಮಾಡಿದೆ ಹೇಳು! ನಿನ್ನ ಮೃದು ಮಧುರ ಕೆನ್ನೆಗೆ ಸಂಜೆ ಗತ್ತಲಿನಲ್ಲೊಂದು ಮುತ್ತು ಕೊಟ್ಟಿದ್ದು ತಪ್ಪಾ? ಬಿಡು ಬಿಡು. ಈ ಪ್ರಪಂಚದಲ್ಲಿ ಎಷ್ಟು ಜನ ಪ್ರೇಮಿಗಳು ಮುತ್ತು ಕೊಟ್ಟಿಲ್ಲ, ತೆಗೆದುಕೊಂಡಿಲ್ಲ. ಕೊಡುವುದು ಮತ್ತು ತೆಗೆದುಕೊಳ್ಳುವುದು ಪ್ರೇಮಿಗಳ ಅಲಿಖಿತ ರೂಲ್ಸ್. ಅಂತದರಲ್ಲಿ ಕೊಡು ಅಂತ ನಾನು ನಿನ್ನನ್ನಾವತ್ತಾದರೂ ಕೇಳಿದ್ದೆನಾ? ಪೀಡಿಸಿದ್ದೆನಾ? ಪಪ್ಪಿ ಕೊಡೆ ಅಂತ ಮುನಿಸಿಕೊಂಡೆನಾ? ಬಯಸಿ ಬಯಸಿ ನಾನೇ ಕೊಟ್ಟೆ, ತೆಗೊಂಡು ಸುಮ್ಮನಿರಬೇಕಿದ್ದವಳು ನೀನು, ದೊಡ್ಡ ರಂಪಾ ಮಾಡಿ ಹೊರಟುಹೋದೆಯಲ್ಲ.
ಮನಸ್ಸಿಗೆ ತುಂಬಾ ನೋವಾಗ್ತಿದೆ ಕಣೆ.
ಅವತ್ತು ನೀನು ಆಕಾಶ ಬಣ್ಣದ ಸೀರೆ ಹುಟ್ಟುಕೊಂಡು ಬಂದಿದ್ದೆಯಲ್ಲ ಅದರ ಮೇಲಿನ ಬಿಳಿ ಹೂಗಳು ಹೇಗಿವೆ? ಕೊಟ್ಟ ಟೈಟಾನ್ ವಾಚಿನ ಶೆಲ್ ವೀಕಾಗಿರಬೇಕು ನೋಡಿಕೋ! ಕಣ್ಣ ಬಣ್ಣದ ಚೂಡಿದಾರ ಹಳತಾಯಿತಾ? ಚಪ್ಪಲಿ ಮೇಲಿದ್ದ ಗೊಂಡೆ ಬಿದ್ದುಹೋಗಿರಬೇಕು! ಕೊಡಿಸಿದ್ದ ಹನ್ನೆರಡು ಡಜನ್ ಬಳೆಯಲ್ಲಿ ಉಳಿದವೆಷ್ಟೋ? ಕಡುಗೆಂಪಿನ ನೇಲ್ ಪಾಲಿಶ್ ಒಮ್ಮೆಯಾದರೂ ಹಚ್ಕೊಂಡ್ಯಾ? ಮುತ್ತಿನ ಮೂಗುತಿಯ ನತ್ತಿಗೆ ನಾನು ಕೇಳಿದೆ ಅಂತ ಹೇಳಿಬಿಡು. ಇದೆಲ್ಲ ಬಿಡು ಸಣ್ಣ ಸಣ್ಣ ಕನಸುಗಳು. ಆದ್ರೆ ನಾನು ನಡೆದರೂ ಪರವಾಗಿಲ.್ಲ ನನ್ನ ಹುಡುಗಿ ನಡೀಬಾರದು. ಅವಳ ಹಾಲು ಬಿಳುಪಿನ ಪಾದಕ್ಕೆ ನೋವಾದೀತು ಅಂತ ಸಾಲ ಮಾಡಿ ನಿನಗೊಂಡು ಸ್ಕೂಟಿ ಪೆಪ್ ಕೊಡಿಸಿದ್ದೆನಲ್ಲ. ಅದರ ಸಾಲವೆ ಇನ್ನೂ ತೀರಿಲ್ಲ ಕಣೆ. ಆಗಲೇ ಎದ್ದುಹೋಗಿಬಿಟ್ಟೆಯಲ್ಲ, ಜತೆಯಲ್ಲಿ ನೀನಿದ್ದರೆ ಆ ಸಾಲದ ಭಾದೆ ಅಷ್ಟಾಗಿ ಕಾಡುತ್ತಿರಲಿಲ್ಲ ಅಂತ ಹೇಳಿದರೆ ಮತ್ತೆ ತಪ್ಪಾದೀತೇನೋ!
ನಿಜ್ಜ ಹೇಳ್ಲ, ಇಷ್ಟೆಲ್ಲವನ್ನೂ ನೀನೇನು ಕೇಳಿದವಳಲ್ಲ ಬಿಡು. ನಾನೇ ಕೊಡಿಸಿದೆ. ನನ್ನ ಹುಡುಗಿ ಕೊಡುವವಳಲ್ಲ ಜಸ್ಟ್ ತೆಗೆದುಕೊಳ್ಳುವವಳು ಅಂತ ನಿನ್ನ ಪರಿಚಯವಾದ ಎರಡನೇ ಕ್ಷಣಕ್ಕೆ ಗೊತ್ತಾಗಿಹೋಗಿತ್ತು ನನಗೆ. ಹಾಗಂತಲೇ ಮುತ್ತು ಕೊಟ್ಟೆ. ಎಲ್ಲಾ ಇಸಕೊಂಡವಳಿಗೆ ಮುತ್ತೊಂದು ಬೇಡವೆಂದ್ರೆ ಯಾವ ನ್ಯಾಯ?
ಚಿಂತೆ ಅದಲ್ಲ. ನನಗೆ ಕೊಟ್ಟೇ ಅಭ್ಯಾಸ. ಕೊಡುವ ಸುಖ ತೆಗೆದುಕೊಳ್ಳುವುದರಲ್ಲಿ ಇರುವುದಿಲ್ಲ ಅಂತ ಯಾವನೋ ಇಡಿಯಟ್ ಹೇಳಿದ್ದನ್ನೇ ಅಕ್ಷರಶಃ ಪಾಲಿಸಿಕೊಂಡು ಬಂದವನು ನಾನು. ಆದ್ರೆ ಎಂದು ಬರುತ್ತೀಯ? ನಾನು ಕೊಟ್ಟ ಮುತ್ತು ಬೇಡಾದ್ರೆ ವಾಪಸ್ ಕೊಟ್ಟಿಬಿಡು! ಆದ್ರೆ ಸತಾಯಿಸಬೇಡ. ಇನ್ನು ಮುಂದೆ ನೀನು ಕೇಳದ ಹೊರತು ಒಂದೇ ಒಂದು ಮುತ್ತನ್ನೂ ನಾನು ದಯಪಾಲಿಸಲಾರೆ ಅಂತ ಆ ವ್ಯಾಲೆಂಟೈನ್ ಮೇಲೆ ಅಣೆ ಮಾಡಿ ಹೇಳುತ್ತಿದ್ದೇನೆ.
ಗೊತ್ತಾ, ಇನ್ನು ಎರಡು ರಾತ್ರಿ ಕಳೆದರೆ ಪ್ರೇಮಿಗಳ ಹಬ್ಬ. ಅವತ್ತಿಗೆ ನಮ್ಮ ಪ್ರೀತಿಗೆ ಒಂದು ವರ್ಷ. ಅದೇನು ಸುಮ್ಮನೆ ಬಂತಾ? ಕಾಡಿಬೇಡಿ, ಹಿಂದಿಂದೆ ಅಲೆದು ಹೈರಾಣಾಗಿ ಒಲಿಸಿಕೊಂಡ ಪ್ರೀತಿ ಕಣೆ ಅದು. ಪ್ರೀತಿಸುವುದರ ಮತ್ತು ಕಳೆದುಕೊಳ್ಳುವುದರ ವ್ಯಥೆ ನಿನಗೇನು ಗೊತ್ತು.
ಇಲ್ಲಿ ನೀರಿನಿಂದ ತೆಗೆದ ಮೀನಿನಂತಾಗಿದ್ದೇನೆ ನಾನು.
ವ್ಯಾಲೆಂಟೈನ್ಸ್ ಡೇ ಬೆಳಿಗ್ಗೆ ಏಳಕ್ಕೆ ಮೆಜೆಸ್ಟಿಕ್ ಬಸ್ ಸ್ಟಾಂಡಿನ ಆರನೇ ಪ್ಲಾಟ್ಫಾಮರ್ಿಗೆ ಬಂದುಬಿಡು.
ನೀ ಬಂದರೆ ಅದಕ್ಕಿಂತ ಖುಷಿ ನನಗೆ ಬೇರೇನಿದೆ.

Monday, February 2, 2009

ಪಾಕಿಸ್ತಾನಕ್ಕೊಂದು ಕವರ್


ಇದು ಇತ್ತೀಚೆಗೆ ನಾನು ಮಾಡಿದ ಕವರ್ ಪೇಜ್. ರವಿ ಬೆಳಗೆರೆಯವರ ನೀನಾ ಪಾಕಿಸ್ತಾನಾ?
ನಿಮಗೆ ಗೊತ್ತಿದೆ, ಪಾಕಿಸ್ತಾನ ಅಸಂಬದ್ಧಗಳ ನಾಡು. ಅಲ್ಲಿ ರಕ್ತಪಾತ, ಕೊಲೆ, ಬಾಂಬು, ಗನ್ನು, ಬ್ಯಾಟಲ್ಲು ವೆರಿ ಕಾಮನ್. ಮನುಷ್ಯರಿಗೆ ಬೆಲೆ ಇಲ್ಲ. ನೂರಾ ಐವತ್ತು ಡಾಲರ್ ಕೊಟ್ಟರೆ ಒಂದು ಎ ಕೆ 47 ಸಿಗುತ್ತದೆ. ಕಡಲೆ ಪುರಿ ಥರ ಬುಲ್ಲೆಟ್ಗಳು ರಸ್ತೆ ಬದಿಯಲ್ಲಿ ಮಾರಾಟವಾಗುತ್ತವೆ. ಕೊಲ್ಲುವುದಕ್ಕೆ ಅಂತಾನೆ ತಂಡಗಳಿವೆ. ಯಾರಿಗೂ ಗೊತ್ತಿಲ್ಲದ ಯಾವನೋ ಒಬ್ಬ ಮೈತುಂಬಾ ಬಾಂಬು ಕಟ್ಟಿಕೊಂಡು ಇನ್ನಾರಿಗಾಗೋ ಪ್ರಾಣ ತೆತ್ತುಬಿಡುತ್ತಾನೆ. ಹಾಗೆ ನೂರಾರು ಅಮಾಯಕರ ಪ್ರಾಣ ತೆಗೆಯುತ್ತಾನೆ. ಅದು ಅವನ ಪಾಲಿಗೆ ದೇವರ ಕೆಲಸ.
ಇಂಥ ವಿಚಿತ್ರ ನಾಡೂ ಉಂಟೆ ಅನಿಸುತ್ತದೆ ಪಾಕಿಸ್ತಾನವನ್ನು ನೋಡಿದಾಗ. ಅದರ ಇನ್ನೊಂದು ಕರಾಳ ಮುಖವನ್ನು ಪುಸ್ತಕದಲ್ಲಿ ನೋಡಬಹುದು.
ಹಾಗಾಗಿ ಕವರ್ ಪೇಜ್ ಗೆ ಈ ಚಿತ್ರ ಅಪ್ರಾಪ್ರಿಯೇಟ್ ಅನಿಸಿತು.
ಹೇಗಿದೆ?

Sunday, February 1, 2009

ರೋಸ್ ಅರಳಿದ ಸಮಯ



ವಿಧಿ ಕೆಲವೊಮ್ಮೆ ಏನೆಲ್ಲಾ ಮಾಡಿಬಿಡುತ್ತದೆ ಗೊತ್ತಾ?
ತಾಯ ಗರ್ಭದಿಂದ ಈ ಸುಂದರ ಜಗತ್ತಿಗೆ ಬಂದು ಬಿಡುತ್ತೇವೇನೋ ನಿಜ. ಆದ್ರೆ ಅದನ್ನ ನೋಡೋದಕ್ಕೆ ಕಣ್ಣೇ ಇರುವುದಿಲ್ಲ. ನಡೆಯಲು ಕಾಲೇ ಇರುವುದಿಲ್ಲ. ಮಾತಾಡಿದರೆ ಶಬ್ದಗಳೇ ಇರುವುದಿಲ್ಲ. ಹುಟ್ಟಿದ್ದಾದರೂ ಯಾಕೋ ಅನ್ನುವ ಅನಾಥಪ್ರಜ್ಞೆಯೊಂದು ಬದುಕಿನುದ್ದಕ್ಕೂ ಬಾಚಿ ತಬ್ಬಿಕೊಂಡೇ ಇರುತ್ತದೆ. ಇಂಥ ಎಷ್ಟೋ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ನಮ್ಮ ನಡುವೆಯೇ ಬದುಕೆಂಬ ಬಂಡಿಗೆ ಹೆಗಲು ಕೊಟ್ಟು ಹೇಗೋ ದೂಕುತ್ತಿರುತ್ತಾರೆ. ಅವರ ಬದುಕಿನ ಸಂಕಷ್ಟ ದೊಡ್ಡದು. ಕೈ ಹಿಡಿಯುವವರಿರುವುದಿಲ್ಲ, ಸಾಂತ್ವನ ಹೇಳುವವರಿರುವುದಿಲ್ಲ. ಬೇಡಿಕೊಳ್ಳೋಣವೆಂದ್ರೆ ಆ ದೇವರು ಮೊದಲೇ ಕೈ ಬಿಟ್ಟಿರುತ್ತಾನೆ!
ಫ್ರೆಂಡ್ಸ್ ಕಳೆದ ವಾರವಷ್ಟೇ ನಿಕ್ ಅನ್ನೋ ಹುಡುಗನ ಕಥೆ ಓದಿದ್ರಿ. ಆತನಿಗೆ ಎರಡೂ ಕೈ ಇಲ್ಲ. ಕಾಲೂ ಇಲ್ಲ. ಆದರೂ ಏನಾದ್ರೂ ಮಾಡಬೇಕು ಅಂತ ಹೊರಟು ಸಾಧನೆಯನ್ನು ಬಿಡದೆ ಒಲಿಸಿಕೊಂಡವ.
ಇದೂ ಅಂಥದೇ ಸ್ಟೋರಿ. ಹೇಳಬೇಕೆಂದ್ರೆ ಇವಳಿಗೆ ಅರ್ಧ ದೇಹ ಮಾತ್ರ ಇದೆ. ಇನ್ನರ್ಧ ಇಲ್ಲ. ಇವಳ ಹೆಸರು ರೋಸ್ಮೇರಿ ಸಿಗ್ಗಿನ್ಸ್. ಕೊಲೊರಾಡೋದವಳು. ಜೆನೆಟಿಕ್ ಡಿಸಾರ್ಡರ್ನಿಂದುಂಟಾದ ತೊಂದರೆಯಿಂದ ಅವಳ ನಿರುಪಯೋಗಿ ಕಾಲನ್ನು ಚಿಕ್ಕಂದಿನಲ್ಲೆ ತೆಗೆಯಲಾಗಿತ್ತು. ಅಲ್ಲಿಂದ ಶುರುವಾಯಿತು ನೋಡಿ ಅವಳ ಬದುಕಿನ ಹೋರಾಟ. ಹೇಗೆ ನೀನು ಈ ನೋವನ್ನ ಮೆಟ್ಟಿ ನಿಂತೆ ಅಂದ್ರೆೆ ರೋಸ್ ಹೇಳುವುದಿಷ್ಟು. ದಿಸ್ ಈಸ್ ಮೈ ರಿಯಾಲಿಟಿ. ದಿಸ್ ಈಸ್ ಮೈ ನಾರ್ಮಲ್. ನಾನು ನಿಮ್ಮೆಲ್ಲರ ತರಾನೆ ಏನು ಬೇಕಾದ್ರೂ ಮಾಡಬಲ್ಲೆ.
ಇಂತ ರೋಸ್ 1999ರಲ್ಲಿ ಡೇವಿಡ್ ಸಿಗ್ಗಿನ್ಸ್ನನ್ನ ಮದುವೆ ಅಗ್ತಾಳೆ. ಅದೂ ಕುತೂಹಲವೇ! ಡೇವ್ ಅವಳಿಗೆ ಪರಿಚಯವಾದದ್ದು ಫೋನ್ ಮುಖಾಂತರ. ತುಂಬಾ ದಿನ ಹಾಗೆ ಮಾತಾಡಿಕೊಂಡಿದ್ದ ರೋಸ್ ಒಂದಿನ ನಿನ್ನನ್ನ ನೋಡಬೇಕು ನನ್ನ ಆಫೀಸಿಗೆ ಬಾ ಅಂದುಬಿಡುತ್ತಾಳೆ. ಡೇವ್ ಹೋಗಿ ನೋಡಿದ್ರೆ ಅವನಿಗೆ ಅಂತ ಶಾಕ್ ಏನೂ ಆಗಲಿಲ್ಲ. ನನ್ನನ್ನ ಪರಿಪೂರ್ಣ ಮಹಿಳೆಯಂತೆ ನೋಡಿದ್ದು ಅವನು ಮಾತ್ರ ಅನ್ನುತ್ತಾಳೆ ರೋಸ್. ಇವಳು ಜಸ್ಡ್ ಎರಡೂವರೆ ಅಡಿ. ಆತ ಐದು ಅಡಿ ಹತ್ತು ಇಂಚು ಎತ್ತರ ಇದ್ದಾನೆ. ಪ್ರೀತಿ ಒಂದಿದ್ರೆ ಜೋಡಿ ಹೇಗಿದ್ದರೇನು ಅಲ್ವ! ಅಲ್ಲಿಗೆ ಅವಳ ಮಹತ್ತರ ಕನಸೊಂದು ನನಸಾಗಿತ್ತು.
ರೋಸ್ಳ ಬದುಕು ಅಷ್ಟು ಖುಷಿಯಾಗೇನೂ ಇರಲಿಲ್ಲ. ಈಗಲೂ. ಆದ್ರೆ ಅವಳು ಬಂದ ಕಷ್ಟಗಳನ್ನ ಎದುರಿಸಿದ ರೀತಿ ಇದೆಯಲ್ಲ ಗ್ರೇಟ್. ನೀವು ನಂಬಲಿಕ್ಕಿಲ್ಲ ಅವಳು ಗಭರ್ಿಣಿ ಅಂದಾಗ ಡಾಕ್ಟರೇ ಗಾಬರಿ ಬಿದ್ದಿದ್ದರು. ನೀನು ಅಥವಾ ಮಗು ಇಬ್ಬರಲ್ಲಿ ಒಬ್ಬರು ಮಾತ್ರ ಉಳಿಯೋದಕ್ಕೆ ಸಾಧ್ಯ. ಡಿಸೈಡ್ ಮಾಡು ಅಂದರಂತೆ. ಆದ್ರೆ ಇವಳು ನೋ ಪ್ರಾಬ್ಲೆಮ್ ಡಾಕ್ಟರ್. ನನಗೆ ಮಗು ಬೇಕು ಅಂದುಬಿಟ್ಟಳು. ಆಕೆ ಅದೆಂತಹ ನೋವು ತಿಂದಿರಬೇಕು. ಸಿಸೇರಿಯನ್ ಮಾಡಿ ಗಂಡು ಮಗು ಆಗಿದೆ ನೋಡು ಅಂತ ತೋರಿಸಿದರೆ ರೋಸ್ ಮೊದಲು ನೋಡಿದ್ದು ಮಗುವಿನ ಕೈಕಾಲುಗಳನ್ನ. ಎಲ್ಲಾ ಸರಿಯಾಗಿವೆ ಅನಿಸಿದ ಮೇಲೆ ಅವಳು ನಿಟ್ಟುಸಿರು ಬಿಟ್ಟಿದ್ದಂತೆ. ಸಂತೋಷ ಪಟ್ಟಿದ್ದಂತೆ. ಅವಳ ಬದುಕಿನಲ್ಲಿ ಅದು ಎಂದೂ ಮರೆಯಲಾಗದ ಕ್ಷಣ. ಆ ಮಗುವಿನ ಹೆಸರು ಲೂಕ್ ಸಿಗ್ಗಿನ್ಸ್. ಈಗ ಅವನು ಅಮ್ಮನಿಗಿಂತ ಎತ್ತರಕ್ಕೆ ಬೆಳೆದುಬಿಟ್ಟಿದ್ದಾನೆ.
ನಂಬಿ ರೋಸ್ ಎರಡನೇ ಬಾರಿ ಗರ್ಭವತಿಯಾದಳು. ಡಾಕ್ಟರು ಅಲ್ಲಮ್ಮ ಮೊದಲನೇ ಹೆರಿಗೇನೇ ಅಷ್ಟು ಕಷ್ಟ ಆಯ್ತು. ಮತ್ತೇಕೆ ರಿಸ್ಕ್ ತೆಗೋಳ್ತೀದೀಯ ಅಂದ್ರೆ, ನನಗೆ ಗೊತ್ತು ಡಾಕ್ಟರ್. ನಾನಿರುವ ಸ್ಥಿತಿಯಲ್ಲಿ ಬೇರೇ ಯಾರೇ ಇದ್ದರೂ ಆಕೆ ಗರ್ಭ ಧರಿಸಲು ಒಪ್ಪುತ್ತಿರಲಿಲ್ಲ. ಬಟ್ ನಾನು ಹಾಗಲ್ಲ. ಮೊದಲನೆಯದು ಮಿರಾಕಲ್ ಅಂದ್ರಿ. ಈಗ ಇನ್ನೊಂದು ಮಿರಕಲ್ ಜರುಗಲಿ ಬಿಡಿ ಅಂದಳಂತೆ. ಅದರ ಫಲ ಈಗ ರೋಸ್ಗೆ ಒಂದು ಮುದ್ದಾದ ಹೆಣ್ಣು ಮಗು ಇದೆ.
ರೋಸ್ಳ ಆತ್ಮಸ್ಥೈರ್ಯ ಎಂಥವರನ್ನೂ ದಂಗುಬಡಿಸುತ್ತದೆ. ಅವಳು ಎಲ್ಲಾ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಾಳೆ. ನಾನೂ ನಿಮ್ಮಂತೆಯೇ ನಾರ್ಮಲ್ ಆಗಿ ಎಲ್ಲಾ ಕೆಲಸ ಮಾಡುತ್ತೇನೆ. ಆದ್ರೆ ಚೂರು ಡಿಫರೆಂಟ್ ಆಗಿರುತ್ತೆ ಅಷ್ಟೆ ಅನ್ನೋದು ಅವಳ ಮಾತು. ಕಾರ್ ಓಡಿಸುತ್ತಾಳೆ. ಮಕ್ಕಳನ್ನ ತಿರುಗಾಟಕ್ಕೆ ಕರೆದೊಯ್ಯುತ್ತಾಳೆ. ಗಂಡನ ಜೊತೆ ಜಾಲಿ ರೈಡಿಂಗ್ ಹೋಗುತ್ತಾಳೆ. ಅವಳ ಬದುಕಲ್ಲಿ ಆಗಲ್ಲ ಅನ್ನುವುದು ಏನೂ ಇಲ್ಲ. ನನ್ನ ಗಂಡ ಡೇವ್ ಇದಾನಲ್ಲ. ಆತ ಚಿನ್ನದಂಥವ. ಆತನ ಸಪ್ಪೋಟರ್್ ಇಲ್ಲದಿದ್ರೆ ನಾನೆಲ್ಲಿರುತ್ತಿದ್ದೆ ಅನ್ನುವುದನ್ನು ಆಕೆ ಮರೆಯುವುದಿಲ್ಲ. ಗಂಡ ಮಾತ್ರವಲ್ಲ ಹೆತ್ತವರೂ ಇವಳನ್ನ ಬಗಲಿಗೆ ಹಾಕಿಕೊಂಡು ಸಾಕಿದರು. ನೀನು ಏನು ಬೇಕಾದ್ರೂ ಮಾಡು ಮಗಳೇ ಅಂದರು. ವಿಕಲಾಂಗರಿಗೆ ಒಂದು ಪುಟ್ಟ ಭರವಸೆ, ಒಂದು ಆತ್ಮಸ್ಥೈರ್ಯ, ಸಣ್ಣದೊಂದು ಹೋಪ್ ಅಪ್ಪ ಅಮ್ಮಂದಿರಲ್ಲದೇ ಬೇರೆ ಯಾರು ಕೊಡಲಿಕ್ಕೆ ಸಾಧ್ಯ, ಅಲ್ಲವೇ!
ಇದನ್ನೆಲ್ಲ ಯಾಕೆ ಬರೀತಿದೀನಿ ಅಂದ್ರೆ ನಮ್ಮ ನಡುವೆಯೂ ಅದೆಷ್ಟೋ ವಿಕಲಚೇತನ ಪ್ರತಿಭೆಗಳಿವೆ. ಅವರಿಗೆ ರೋಸ್ಳಂತವರು, ನಿಕ್ನಂಥವರು ಸ್ಫೂತರ್ಿಯಾಗಬೇಕು. ಸೋತು ಕೂರುವುದು ಮೈ ಮನಸ್ಸನ್ನ ಇನ್ನಷ್ಟು ಜಡ್ಡುಗಟ್ಟಿಸಿಬಿಡುತ್ತದೆ. ಆದ್ರೆ ಗೆಲುವಿನ ಹಾದಿ ಹಿಡಿದು ಎದ್ದು ನಿಲ್ಲುತ್ತಾರಲ್ಲ ಅಂಥವರಿಗೆ ಒಂದು ಸಣ್ಣ ಸುಖದ ಹಾದಿಯಾದರೂ ಗೋಚರಿಸದೇ ಇರುವುದಿಲ್ಲ.
ಪ್ರಯತ್ನ ಮಾಡಬೇಕಷ್ಟೆ.

ಕಾಲು ಬೆರಳಿಗಾಗಿ ನೆನಪಾದವಳು




ಮಲರ್ಿನ್ ಮನ್ರೋ ಕಾಲೊಂದರಲ್ಲಿ ಆರು ಬೆರಳಿದ್ವಾ?
ಇತ್ತು ಅನ್ನುವವರಿದ್ದಾರೆ. ಇಲ್ಲ ಅನ್ನುವವರೂ ಇದ್ದಾರೆ. ಇಲ್ಲ ಅನ್ನುವುದಕ್ಕೆ ಸಿಕ್ಕ ಒಂದು ಪುರಾವೆ ಇದು.
ಮಲರ್ಿನ್ ಮನ್ರೋ ಹುಟ್ಟಿದ್ದು ಜೂನ್ 1, 1926ರಲ್ಲಿ. ಹುಟ್ಟುವಾಗಲೂ ಅವಳಿಗೆ ಎರಡೂ ಕಾಲಲ್ಲಿ ಐದೈದೇ ಬೆರಳುಗಳಿದ್ದವು. 1962 ಆಗಸ್ಟ್ 5 ರಂದು ಸಾಯುವಾಗಲೂ ಅವಳ ಕಾಲಲ್ಲಿ ಐದೈದೇ ಬೆರಳಿದ್ದವಂತೆ. ಹೀಗಿದ್ದಾಗ ಈ ಸುದ್ದಿ ಸುಳ್ಳಲ್ವಾ ಅನ್ನುತ್ತದೆ ಒಂದು ಮೂಲ.

1946ಕ್ಕೆ ಸರಿಯಾಗಿ ಅವಳಿಗೆ ಇಪ್ಪತ್ತರ ತುಂಬು ಯೌವ್ವನ. ಅವಳಿನ್ನೂ ನೋಮರ್ಾ ಜೀನ್. ಮಲರ್ಿನ್ ಮನ್ರೋ ಆಗಿರಲಿಲ್ಲ. ಜೋಸೆಫ್ ಜಸ್ಗರ್ ಅನ್ನೋ ಫೋಟೋಗ್ರಾಫರ್ ಮಾಚರ್್ 18, 1946ರಂದು ನೋಮರ್ಾಳನ್ನ ಕರೆದುಕೊಂಡು ಫೋಟೋ ಶೂಟ್ಗೋಸ್ಕರ ಕ್ಯಾಲಿಫೋನರ್ಿಯಾದ ಝುಮಾ ಬೀಚ್ಗೆ ಹೋಗುತ್ತಾನೆ. ಆಗ ಅವನು ತೆಗೆದ ಒಂದು ಫೋಟೋದಲ್ಲಿ ಮಲರ್ಿನ್ಳ ಎಡ ಕಾಲಲ್ಲಿ ಆರುಬೆರಳು ಇದ್ದಂಗೆ ಕಾಣಿಸುತ್ತದೆ ಅಷ್ಟೆ.
ಆದ್ರೆ ಜೋಸೆಫ್ "ಖಿಜ ಃಡಿಣ ಠಜಿ ಒಚಿಡಿಟಥಿಟಿ: ಖಿಜ ಐಠಣ ಕಠಣಠರಡಿಚಿಠಿ ಠಜಿ ಓಠಡಿಟಚಿ ಎಜಚಿಟಿಜ " ಅನ್ನೋ ತನ್ನ ಪುಸ್ತಕದಲ್ಲಿ ಒಂದು ಸುಳ್ಳು ಹೇಳಿಬಿಡುತ್ತಾನೆ. ನೋಮರ್ಾ ಜೀನ್ ಎಡ ಕಾಲಿನಲ್ಲಿ ಆರು ಬೆರಳುಗಳಿದ್ದವು. ನಾನು ತೆಗೆದ ಫೋಟೋದಿಂದ ನಾನದನ್ನ ಪ್ರೂವ್ ಮಾಡಬಲ್ಲೆ ಅಂತ. ದುರಂತ ಅಂದ್ರೆ ರಿಪ್ಲೇಸ್ ಬಿಲೀವ್ ಇಟ್ ಆರ್ ನಾಟ್ ಪುಸ್ತಕದಲ್ಲೂ ಇದೂ ಹಾಗೇ ದಾಖಲಾಗಿದೆ.
ಹಾಗಾದರೆ ಜೋಸೆಫ್ ದುಡ್ಡಿಗಾಗಿ ಇಷ್ಟೆಲ್ಲ ಕಥೆ ಕಟ್ಟಿದನಾ?
ಗೊತ್ತಿಲ್ಲ.
ಮಲರ್ಿನ್ ಸತ್ತು ನಲವತ್ತಾರು ವರ್ಷವಾಯಿತು. ಇನ್ನೂ ಅವಳು ಒಂದಲ್ಲ ಒಂದು ಕಾರಣಕ್ಕೆ ನೆನಪಾಗುತ್ತಾಳೆ.
ಇವತ್ತು ಕಾಲು ಬೆರಳಿಗಾಗಿ ನೆನಪಾದಳು ಅಷ್ಟೆ.

Sunday, January 18, 2009

ಸ್ಲಮ್ ಹುಡುಗನೊಬ್ಬ ಮಿಲಿಯನೇರ್ ಆಗ್ತಾನಂದ್ರೆ!




ಸ್ಲಮ್ ಬಗ್ಗೆ ಬಾಲಿವುಡ್ನಲ್ಲಿ ಎಷ್ಟು ಫಿಲ್ಮ್ಸ್ ಬಂದಿಲ್ಲ. ಬಂದವೆಲ್ಲವೂ ಹೆಚ್ಚ ಕಡಿಮೆ ಅಂಡರ್ವಲ್ಡರ್್ಗೆ ಸಂಬಂಧಪಟ್ಟವೆ. ಅಲ್ಲಿ ಗನ್ ಮಾತಾಡುತ್ತವೆ. ಮನುಷ್ಯನ ಪ್ರೀತಿ ಅನ್ನೋದು ಮರೀಚಿಕೆಯಾಗುತ್ತದೆ. ಮುಂಬೈ ಜಗತ್ತಿನ ಖದರೇ ಅಂಥದು ಬಿಡಿ. ಅದರ ಒಡಲಾಳದಲ್ಲಿ ಅದೆಷ್ಟು ರಕ್ತ ಚೆಲ್ಲಿಲ್ಲ. ಎಷ್ಟು ಜನ ಡಾನ್ಗಳು ಅವಳ ಎದೆಯ ಕದಕ್ಕೆ ತಲೆ ಆನಿಸಿ ಸತ್ತಿಲ್ಲ. ಮುಂಬೈ ಆಳಬೇಕು ಅಂಥ ಬಂದವರೆಲ್ಲ ಅದರ ಒಡಲಲ್ಲೇ ಬೀದಿ ನಾಯಿಗಿಂತ ಕಡೆಯಾಗಿ ಸತ್ತುಹೋಗಿದ್ದಾರೆ. ಆದರೂ ಮುಂಬೈ ಯಾವಾಗಲೂ ಎಂದಿಗೂ ಜಗತ್ತಿನ ಪಾಲಿಗೆ ಒಂದು ವಿಚಿತ್ರ ಕನಲಿಕೆಯೇ! ಅಲ್ಲಿನ ಸ್ಲಮ್ ಬದುಕಿದೆಯಲ್ಲ ಅದು ಜಗತ್ತಿನ ಇತರೆ ಸ್ಲಮ್ಗಳಿಗಿಂತ ವಿಚಿತ್ರ.
ಸ್ಲಮ್ಡಾಗ್ ಮಿಲಿಯನೇರ್ ಅಂತ ಒಂದು ಚಿತ್ರ ಬಂದಿದೆ. ಈ ಚಿತ್ರದ ಕಥೆ ಕೂಡ ಬಿಚ್ಚಿಕೊಳ್ಳುವುದು ಅದೇ ಸ್ಲಮ್ನಲ್ಲೆ. ಆದ್ರೆ ಇಲ್ಲಿ ಗನ್ ಮಾತಾಡುವುದಕ್ಕಿಂತ ಮನುಷ್ಯತ್ವದ ಇನ್ನೊಂದು ಮಗ್ಗಲು ಮಾತಾಡುತ್ತಾ ಹೋಗುತ್ತದೆ. ಬದುಕು ಅನ್ನುವುದು ಸ್ಲಮ್ಮಿನ ಆಸುಪಾಸಿನಲ್ಲೆ ಚಾಚಿಕೊಂಡು ಮಲಗಿದ್ದಾಗ ಜಮಾಲ್ ಅನ್ನೋ ಹುಡುಗ ಕೌನ್ ಬನೇಗಾ ಕರೊಡ್ಪತಿಯಲ್ಲಿ ಭಾಗವಹಿಸಿ ಇದ್ದಕ್ಕಿದ್ದಂತೆ ಮಿಲಿಯನೇರ್ ಆಗಿಬಿಟ್ಟರೆ? ಆದ್ರೆ ಇನ್ನೊಂದೇ ಒಂದು ಕ್ವಶ್ಚನ್ ಬಾಕಿ ಇದೆ ಅನ್ನಿಸಿದಾಗ ಶೋ ಹೋಸ್ಟ್ ಮಾಡುತ್ತಿದ್ದ ಪ್ರೇಮ್ ಕುಮಾರ್(ಅನಿಲ್ಕಪೂರ್) ಗೆ ಇವನು ಚೀಟ್ ಮಾಡುತ್ತಿದ್ದಾನೆ ಅನ್ನಿಸಿಬಿಡುತ್ತದೆ. ಕೇವಲ ಸ್ಲಮ್ ಹುಡುಗನೊಬ್ಬ ಈ ಪರಿ ಎಲ್ಲಾ ಪ್ರಶ್ನೆಗಳಿಗೂ ಸರಿ ಉತ್ತರ ಕೊಡೋದು ಅಂದ್ರೆ ಹೇಗೆ ಸಾಧ್ಯ? ಆದ್ರೆ ಜಮಾಲ್ನ ಬದುಕು ಅಂತದ್ದೊಂದು ಅನುಭವವನ್ನ ಅವನಿಗೆ ಕಟ್ಟಿಕೊಟ್ಟಿರುತ್ತದೆ. ಇನ್ಸ್ಪೆಕ್ಟರ್ ಮಾಡುವ ಇಂಟರಾಗೇಷನ್ನಲ್ಲಿ ಜಮಾಲ್ ಅವನ ಬದುಕಿನ ಒಂದೊಂದೂ ಘಟನೆ ಹೇಗೆ ತಾನು ಹೇಳುವ ಪ್ರಶ್ನೆಗಳಿಗೆ ಸಾಥ್ ಕೊಟ್ಟವು ಅನ್ನುವುದನನ್ನು ಮನವರಿಕೆ ಮಾಡಿಕೊಡುತ್ತಾನೆ. ಕೊನೆಗೆ ಹುಡುಗ ಕೊನೆ ಪ್ರಶ್ನೆಗೆ ಉತ್ತರ ಹೇಳಲು ಹೋಗಿ ಕುಳಿತುಕೊಳ್ಳುತ್ತಾನೆ ಮತ್ತು ಆ ಪ್ರಶ್ನೆಗೆ ಉತ್ತರ ಹೇಳಿ ಮಿಲಿಯನೇರ್ ಆಗಿಬಿಡುತ್ತಾನೆ. ಇಡೀ ಮುಂಬೈ ಅವತ್ತು ಟಿವಿ ಮುಂದೆ ಕುಳಿತು ಈ ಜಮಾಲ್ನ ಚಮತ್ಕಾರವನ್ನ ನೋಡಿಬಿಡುತ್ತದೆ. ಸ್ಲಮ್ಮಿನ ಪಡ್ಡೆ ಹುಡುಗನೊಬ್ಬ ಮಿಲಿಯನೇರ್ ಆಗಿಬಿಡುವುದೆಂದ್ರೆ ಹೇಗೆ? ಅನ್ನುವುದೇ ಚಿತ್ರದ ತಿರುಳು.
ಚಿತ್ರ ನಿಂತಿರುವುದೇ ಸ್ಕ್ರೀನ್ಪ್ಲೇ ಮೇಲೆ. ಒಂದೇ ಒಂದು ದೃಶ್ಯ ವೇಸ್ಟ್ ಅನ್ನದಹಾಗೆ ಸೈಮನ್ ಚಿತ್ರಕತೆ ರಚಿಸಿದ್ದಾರೆ. ಸಲಿಮ್, ಜಮಾಲ್ ಮಲಿಕ್ ಮತ್ತ ಲತಿಕಾ ಮೂರು ಮೇನ್ ಪಾತ್ರಗಳು. ಮಾಮನ್ ಅನ್ನೋ ಪಾತ್ರ ಮೊದಲಿಗೆ ನೋಡಿದ್ರೆ ತುಂಬಾ ಸಾಫ್ಟ್ ಅನಿಸುತ್ತದೆ. ಮಕ್ಕಳಿಗೆ ಒಂದು ಬದುಕು ಕೊಟ್ಟನಲ್ಲ ಅನಿಸುತ್ತದೆ. ಆದ್ರೆ ಅವನು ಎಷ್ಟು ಕ್ರೂರಿ ಅಂದ್ರೆ ಮಕ್ಕಳ ಕಣ್ಣು ಕಿತ್ತು ಅವರನ್ನು ಭಿಕ್ಷಾಟನೆಗೆ ದೂಡುತ್ತಾನೆ. ತನ್ನ ಗೆಳೆಯ ಸಲೀಮನ ಕಣ್ಣು ಕೀಳಲು ಮಾಮನ್ ಪ್ಲಾನ್ ಕಂಡು ಅವನ ಮೇಲೆಯೇ ಸೀಮೆ ಎಣ್ಣೆ ಬುಡ್ಡಿ ಎಸೆದು ಸಲೀಮ್, ಜಮಾಲ್ ಲತಿಕಾ ಮೂವರೂ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಸಲೀಮ್, ಜಮಾಲ್ ಟ್ರೈನ್ ಹತ್ತಿದ್ರೆ ಲತಿಕಾ ಮತ್ತೆ ಅವರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾಳೆ. ಆಮೇಲೆ ಗೊತ್ತಾಗುವುದು ಅವಳು ಮುಂಬೈನ ವೇಶ್ಯಾವಾಟಿಕೆಯೊಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಳೆ ಅಂತ. ಅಲ್ಲಿಗೆ ಹೋಗುವಷ್ಟರಲ್ಲಿ ಜಮಾಲ್ ಮತ್ತು ಸಲೀಮ್ಗೆ ಹದಿಹರೆಯದ ಪ್ರಾಯ. ಮಾಮನ್ನನ್ನು ಕೊಂದು ಲತಿಕಾಳನ್ನು ಕಾಪಾಡುತ್ತಾನೆ ಸಲೀಮ್. ಆದ್ರೆ ಹಾಗೆ ಬಂದ ಸಲೀಮ್ ಒಮ್ಮೆ ಹೇಳುತ್ತಾನೆ. ನಾನು ಇಲ್ಲಿ ಬಾಸ್. ನಾನು ಹೇಳಿದ ಹಾಗೆ ನೀನು ಕೇಳಬೇಕು. ಇಲ್ಲದಿದ್ರೆ ಗೆಟ್ಔಟ್ ಅಂತ ಜಮಾಲ್ಗೆ. ಅಲ್ಲಿಂದ ಹೋದ ಜಮಾಲ್ ಕಾಲ್ ಸೆಂಟರ್ನಲ್ಲಿ ಟೀ ಮಾರುತ್ತಾನೆ. ಇತ್ತ ಸಲೀಮ್ ಜಾವೆದ್ ಅನ್ನೋ ಕ್ರೈಮ್ ಲಾಡರ್್ ಜತೆ ಕೆಲಸ ಮಾಡುತ್ತಿರುತ್ತಾನೆ. ಅಲ್ಲೇ ಜಮಾಲ್ಗೆ ಸಲೀಮ್ ಎಲ್ಲಿದ್ದಾನೆ ಅಂತ ಗೊತ್ತಾಗುವುದು.
ಜಮಾಲ್ಗೆ ಲತಿಕಾ ಅಂದ್ರೆ ಅಷ್ಟಿಷ್ಟ. ಆದ್ರೆ ಅವಳು ಸಲೀಮ್ ಜೊತೆ ಇರುತ್ತಾಳೆ. ಅವನು ಈಗ ಬೆಳೆದು ಜಾವೆದ್ ಸಾಮ್ರಾಜ್ಯದಲ್ಲಿ ದೊಡ್ಡ ದಂಧೆ ಮಾಡುತ್ತಿರುತ್ತಾನೆ. ಏನು ಮಾಡುವುದಕ್ಕೂ ಹೇಸದವ. ಹೀಗಿರುವಾಗಲೇ ಜಮಾಲನ ಪ್ರೀತಿ ಸಲೀಮ್ಗೆ ಗೊತ್ತಾಗಿ ಹೋಗುತ್ತದೆ. ಇಲ್ಲಿಂದ ನೀನು ಹೊರಟು ಹೋಗು ಅಂತ ಕಾರಿನ ಕೀ ಕೊಟ್ಟು ಕಳಿಸುತ್ತಾನೆ. ಆಗಲೇ ಜಮಾಲ್ ಅಲ್ಲಿ ಕೊನೆ ಪ್ರಶ್ನೆಗೆ ಫೋನೋ ಫ್ರೆಂಡ್ ಆಪ್ಷನ್ ಬಳಸಲು ಕೇಳಿಕೊಳ್ಳುವುದು. ಫೋನ್ ಮಾಡಿದರೆ ಆ ಪೋನ್ ಲತಿಕಾ ಹತ್ತಿರ ಇರುತ್ತದೆ. ಟೀವಿ ನೋಡುತ್ತಿದ್ದ ಲತಿಕಾ ಕೂಡಲೇ ಕಾರಲ್ಲಿದ್ದ ಫೋನ್ ತೆಗೆದುಕೊಳ್ಳುತ್ತಾಳೆ. ಅವಳಿಗೋ ಫುಲ್ ಎಕ್ಸೈಟ್ಮೆಂಟು. ಅವನು ಸಿಕ್ಕಿದನಲ್ಲ ಅನ್ನುವ ಖುಷಿಯಲ್ಲೆ ನನಗೆ ಆನ್ಸರ್ ಗೊತ್ತಿಲ್ಲ ಅಂದುಬಿಡುತ್ತಾಳೆ. ಅಷ್ಟರಲ್ಲಾಗಲೇ ಜಾವೆದ್ಗೆ ನಿಜ ಏನು ಅಂತ ಗೊತ್ತಾಗಿ ಸಲೀಮ್ ಮೇಲೆ ಅಟ್ಯಾಕ್ ಮಾಡುತ್ತಾರೆ. ಆದ್ರೆ ಸಲೀಮ್ ಅವರನ್ನು ಕೊಂದು ತಾನೂ ಕೊಂದುಕೊಳ್ಳುತ್ತಾನೆ. ಅವನು ಸತ್ತ ಬಾತ್ ಟಬ್ನ ತುಂಬ ಹಣದ ರಾಶಿ ರಾಶಿ.
ಕೊನೆಗೆ ಜಮಾಲ್ ಮತ್ತು ಲತಿಕಾ ಒಂದಾಗುತ್ತಾರೆ.
ಸ್ಲಮ್ ಡಾಗ್ ಸ್ಟೋರಿ ಅನುಪ್ ಸ್ವರೂಪ್ ಅವರ ಕಾದಂಬರಿ ಕಿ & ಂ ನಿಂದ ಪ್ರೇರಿತವಾಗಿದ್ದು. ನಿದರ್ೇಶಕ ಡ್ಯಾನಿ ಬಾಯ್ಲ್. ರಚನೆ ಸೈಮನ್ ಬೀಫಾಯ್ ಅವರದ್ದು. ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ನಾಲ್ಕು ವಿಭಾಗಗಳಲ್ಲಿ -Best director, picture, screenplay and score-ಸ್ಲಮ್ಡಾಗ್ ಗೋಲ್ಡನ್ ಅವಾಡರ್್ ಬಾಚಿಕೊಂಡಿದೆ. ಹದಿನೈದು ಮಿಲಿಯನ್ ವೆಚ್ಚದಲ್ಲಿ ನಿಮರ್ಾಣಗೊಂಡಿರುವ ಈ ಚಿತ್ರದಲ್ಲಿ ಪಾತ್ರಗಳು ಮುಖ್ಯವಾಗುತ್ತವೆಯೇ ಹೊರತು ಅಲ್ಲಿ ನಟಿಸಿರುವವರಲ್ಲ. ಹಾಗಾಗೆ ಚಿತ್ರ ಗೆಲ್ಲುತ್ತದೆ. ಸ್ಲಮ್ ಮಕ್ಕಳ ಮನೋಲೋಕವನ್ನು ಡ್ಯಾನಿ ಬ್ಲಾಯ್ ಅಷ್ಟು ಮನೋಜ್ಞವಾಗಿ ಬಿಚ್ಚಿಡುತ್ತಾ ಹೋಗುತ್ತಾರೆ.
ಸಿನೆಮಾಟೋಗ್ರಫಿ ಸೂಪರ್. ರೆಹಮಾನ್ ಮ್ಯೂಸಿಕ್ ಫೆಂಟಾಸ್ಟಿಕ್. ನಿದರ್ೇಶನವಂತೂ ಎಲ್ಲೂ ಬೋರಾಗುವುದಿಲ್ಲ. ನೂರಾ ಇಪ್ಪತ್ತು ನಿಮಿಷಗಳ ಸ್ಲಮ್ ಡಾಗ್ ಈಗ ಆಸ್ಕರ್ ಅವಾಡರ್್ನ ಹೊಸ್ತಿಲಲ್ಲಿದೆ. ಈ ಬಾರಿ ಸಿಕ್ಕೇ ಸಿಗಬೇಕು ಅನ್ನುವುದು ಹಲವರ ಅಭಿಪ್ರಾಯ.
ಸಿಗಲಿ ಅನ್ನುವುದು ನಮ್ಮೆಲ್ಲರ ಆಶಯ ಕೂಡ.


ಮತ್ತೆ ಕನಸು ಕಾಣೋ ಸರದಿ
ಆಸ್ಕರ್ ಅನ್ನುವುದು ಭಾರತೀಯರ ಪಾಲಿಗೆ ಇನ್ನೂ ಗಗನ ಕುಸುಮವಾಗಿಯೇ ಉಳಿದಿದೆ. ಈ ಸಲ ಬಂದೇ ಬರುತ್ತೆ ಬಿಡಿ ಅನ್ನುವ ಆಸೆ ಇಟ್ಟುಕೊಂಡಾಗಲೆಲ್ಲ ನಿರಾಶೆ ಬಂದು ಆವರಿಸಿಕೊಂಡಿದೆ.
ಹಾಗಾದ್ರೆ ಇಂಡಿಯನ್ ಫಿಲ್ಮ್ಗಳು ಆಸ್ಕರ್ ಅವಾಡರ್್ ಪಡೆಯುವುದಕ್ಕೆ ಲಾಯಕ್ಕಿಲ್ಲವೇ? ಲಾಯಕ್ಕಿವೆ ಅಂತ ತೋರಿಸಲೆಂದೇ ಅಮೀರ್ಖಾನ್ ನಂತಹವರು, ದೀಪಾ ಮೆಹ್ತಾರಂತಹವರು, ಮೀರಾ ನಾಯರ್ ರಂತಹವರು ಪ್ರಯತ್ನ ಮಾಡುತ್ತಲೇ ಇದ್ದಾರೆ. ಈಗ ಮತ್ತೊಂದು ಕನಸು ಚಿಗುರೊಡೆದಿದೆ. ಆ ಕನಸಿನ ಹೆಸರು ಸ್ಲಮ್ಡಾಗ್ ಮಿಲಿಯನೇರ್!
ನೀವು ನಂಬಿಲಿಕ್ಕಿಲ್ಲ. ಸಿನೆಮಾ ಕ್ರೇಜ್ ಇದೆಯಲ್ಲ ಅದು ಭಾರತೀಯರಿಗಿರುವಷ್ಟು ಬೇರೆ ಯಾವ ದೇಶದವರಿಗೂ ಇಲ್ಲ. ಇಲ್ಲಿ ವರ್ಷಕ್ಕೆ ಸಾವಿರದಷ್ಟು ಫಿಲ್ಮ್ಗಳು ರಿಲೀಸ್ ಆಗುತ್ತವೆ. ಅದರಲ್ಲಿ ಆಸ್ಕರ್ಗೆ ಹೋಗುವಂತಹವು ಇಲ್ಲೇ ಇಲ್ಲ ಅನ್ನಬೇಕೇನೋ! 1957ರಲ್ಲಿ ಬಂದ ಮದರ್ ಇಂಡಿಯಾ ಮೊದಲಿಗೆ ಆಸ್ಕರ್ಗೆ ನಾಮಿನೇಟ್ ಆದಂತಹ ಚಿತ್ರ. ನಗರ್ಿಸ್ ಮತ್ತು ಸುನಿಲ್ ದತ್ ಅದ್ಭುತವಾಗಿ ಅಭಿನಯಿಸಿದ್ದರು. 1988ರಲ್ಲಿ ಮೀರಾ ನಾಯರ್ರ ಸಲಾಮ್ ಬಾಂಬೆ, 2001ರಲ್ಲಿ ಅಮೀರ್ಖಾನ್ನ ಲಗಾನ್, 2006ರಲ್ಲಿ ದೀಪಾ ಮೆಹ್ತಾರವರ ವಾಟರ್, ಮತ್ತೆ ಅಮೀರ್ ಖಾನ್ನ ರಂಗ್ದೇ ಬಸಂತಿ, ತಾರೇ ಜಮೀನ್ ಪರ್ ಆಸ್ಕರ್ಗೆ ನಾಮಿನೇಟ್ ಆದಂತಹ ಚಿತ್ರಗಳು. ಲಗಾನ್ ಭಾರೀ ನಿರೀಕ್ಷೆ ಮೂಡಿಸಿದರೂ ಕೊನೆ ಘಳಿಗೆಯಲ್ಲಿ ಪ್ರಶಸ್ತಿ ಕಣದಲ್ಲಿ ಬಿದ್ದುಹೋಯಿತು.

ಈಗ ಸ್ಲಮ್ ಡಾಗ್ಗೆ ನಾಲ್ಕು ಗೋಲ್ಡನ್ ಅವಾಡರ್್ ಬಂದಿದೆ. ಈ ಅವಾಡರ್ೂ ಭಾರತೀಯರ ಪಾಲಿಗೆ ಮೊದಮೊದಲನೆಯದು. ಚಿತ್ರವೂ ಅದ್ಭುತವಾಗಿ ಮೂಡಿ ಬಂದಿದೆ. ಸೆನ್ಸಿಬಲ್ ಸಬ್ಜೆಕ್ಟ್ ಕೂಡ. ರೆಹಮಾನ್ ಸಂಗೀತಕ್ಕೆ ಆಸ್ಕರ್ ಗ್ಯಾರಂಟಿ ಅಂತಲೇ ಬಾಲಿವುಡ್ನಲ್ಲಿ ಲೆಕ್ಕಾಚಾರ ನಡೆದಿದೆ. ಅಲ್ಲರೀ ಅಲ್ಜೀರಿಯಾ, ಬೋಸ್ನಿಯಾ, ಇರಾನ್ನಂತಹ ರಾಷ್ಟ್ರಗಳಿಗೆ ಆಸ್ಕರ್ ಸಿಕ್ಕಿದೆ ಅಂದ್ರೆ ನಾವು ಸೆನ್ಸಿಬಲ್ ಫಿಲ್ಮ್ಗಳನ್ನು ತೆಗೆಯುವುದರಲ್ಲಿ ಸೋಲುತ್ತಿದ್ದೇವೆ ಅನ್ನಿಸುತ್ತಿಲ್ಲವೇ? ರಾಜ್ ಕಪೂರ್, ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ಯಶ್ ಚೋಪ್ರಾ, ಸುಭಾಷ್ ಘಾಯ್, ಶಾರುಖ್ ಖಾನ್ ಎಂತೆಂಥಹ ನಟರಿದ್ದಾರೆ, ನಿದರ್ೇಶಕರಿದ್ದಾರೆ ನಮ್ಮಲ್ಲಿ. ಅವರಿಂದ ಒಂದೇ ಒಂದು ಆಸ್ಕರ್ ಅವಾಡರ್್ ನಮ್ಮ ಪಾಲಿಗೆ ತಂದು ಕೊಡಲಿಕ್ಕೆ ಆಗಲಿಲ್ಲ ಅಂದ್ರೆ ಏನರ್ಥ?
ಬಟ್ ಡೋಂಟ್ ವರಿ. ಈಗ ಸ್ಲಮ್ ಡಾಗ್ ಆಸ್ಕರ್ನ ಬಾಗಿಲು ಬಡಿಯುತ್ತಿದೆ. ಮತ್ತೆ ಕನಸು ಕಾಣೋ ಸರದಿ ಬಂದಿದೆ.
ಜಸ್ಟ್ ವೇಯ್ಟ್!


ಜಸ್ಟ್ ಥಿಂಕ್
ಸ್ಲಮ್ಡಾಗ್ ಮತ್ತು ದೇಶಪ್ರೇಮ ಅಂತೆಲ್ಲ ಕೆಲವರು ಮಾತಾಡುತ್ತಿದ್ದಾರೆ. ಅದು ಅವರವರ ಭಾವಕ್ಕೆ, ಪ್ರೇಮಕ್ಕೆ ಸಂಬಂಧಿಸಿದ್ದು. ಹೇಳುವುದಕ್ಕೆ ಎಲ್ಲರಿಗೂ ಸ್ವಾತಂತ್ರ್ಯವಿದೆ ಬಿಡಿ.
ಆದರೆ ರಿಯಾಲಿಟಿ ಅಂತ ಒಂದಿರುತ್ತದೆ. ನಾನಿರುವ ಸ್ಥಿತಿಯನ್ನಲ್ಲದೇ ನಾನು ಬೇರೇ ಏನನ್ನ ತೋರಿಸಲಿಕ್ಕೆ ಸಾಧ್ಯ? ಅದನ್ನು ತೋರಿಸಿದ್ರೆ ಭಾರತೀಯರಿಗೆ ಅವಮಾನ ಮಾಡಿದಿರಿ ಅನ್ನೋದು ಎಷ್ಟು ಸರಿ? ಹಾಗಂತ ಮುಂಬೈನಲ್ಲಿ ಸ್ಲಮ್ಗಳಿಲ್ಲವೇ? ಅಲ್ಲಿನ ನರಕ ಜೀವನವನ್ನು ನೋಡಿಕೊಂಡೂ ನಮ್ಮ ರಾಜಕೀಯ ನಾಯಕರು ಕಣ್ಣು ಮುಚ್ಚಿಕೊಂಡು ಕುಳಿತಿಲ್ಲವೇ? ಅವರಿಗೆ ಸ್ಲಮ್ ಅನ್ನುವುದು ಹಾಗೇ ಇರಬೇಕು. ಅಲ್ಲಿನ ಜನ ಇವರ ಹಲ್ಕಾ ಕೆಲಸಗಳಿಗೆ ಬಳಕೆಯಾಗಬೇಕು. ಅಲ್ಲಿನ ಮಕ್ಕಳು ಓದಬಾರದು. ಅಲ್ಲಿನ ಸುಂದರಿಯರು ಇವರ ಸಖ್ಯಕ್ಕೆ ಬೇಕು. ಅದಕ್ಕೆ ಅವರು ಸ್ಲಮ್ನ ಉದ್ಧಾರ ಮಾಡುವುದಿಲ್ಲ. ನಿಮಗೆ ಗೊತ್ತಿರಲಿ ಮುಂಬೈನ ಧಾರಾವಿ ಸ್ಲಮ್ ಏಷಿಯಾದಲ್ಲೇ ಅತ್ಯಂತ ದೊಡ್ಡ ಸ್ಲಮ್. ಅಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳು ಒಂದಾ ಎರಡಾ? ಅದರಿಂದಲೇ ಆ ಸ್ಲಮ್ ಉಸಿರಾಡುತ್ತಿದೆ. ಅಂತ ಸ್ಲಮ್ನಿಂದ ಒಂದು ಹುಡುಗ ಕಾಂಪಿಟೇಷನ್ನಲ್ಲಿ ಭಾಗವಹಿಸಿ ಮಿಲಿಯನೇರ್ ಆಗೋ ಕಥೆಯಲ್ಲಿ ದೇಶಪ್ರೇಮ ಹುಡುಕಿದ್ರೆ ಏನನ್ನೋದು.
ಇವತ್ತಿನ ಫಿಲ್ಮ್ಗಳಲ್ಲಿ ಅಪಾಟಿ ಮಚ್ಚು, ಕೊಚ್ಚು, ಹೊಡೆದಾಟ, ಅಸಭ್ಯ ಮಾತುಗಳಿವೆಯಲ್ಲ, ಅದರಿಂದೆಲ್ಲ ಭಾರತದ ಘನತೆಗೆ ಕುತ್ತು ಬರೋದಿಲ್ವೆ?
ಜಸ್ಟ್ ಥಿಂಕ್.

ಅವಳ ಕನ್ಯತ್ವ ಹರಾಜಿಗಿದೆ!

ಹೌಹಾರಬೇಡಿ. ಇದೇನಪ್ಪ ಅಂತಾ?
ಬಟ್ ಅಂಥದ್ದೊಂದು ಘಟನೆ ಅಮೆರಿಕಾದ ಕ್ಯಾಲಿಫೋನರ್ಿಯಾದಲ್ಲಿ ಜರುಗಲಿದೆ. ಸ್ಯಾನ್ಡೀಗೋ ಪಟ್ಟಣದ ಜಸ್ಟ್ ಇಪ್ಪತ್ತೆರಡರ ಹರಯದ ನತಾಲಿ ಡೈಲನ್ ಅನ್ನೋ ಹೆಣ್ಣು ಮಗಳು ನನ್ನ ಕನ್ಯತ್ವ ಹರಾಜಿಗಿದೆ. ಯಾರಾದರೂ ಬಂದು ನಾನು ಕೇಳಿದಷ್ಟು ಅಷ್ಟು ಹಣ ಕೊಟ್ಟು ನನ್ನ ಜೊತೆ ಒಂದು ರಾತ್ರಿ ಮಲಗಬಹುದು ಅಂತ ಓಪನ್ ಆಗಿ ಹೇಳುತ್ತಿದ್ದಾಳೆ. ಅಂದ ಹಾಗೆ ಅವಳ ಕನ್ಯತ್ವದ ಬಿಡ್ ಎಷ್ಟು ಗೊತ್ತೆ? ಒನ್ ಮಿಲಿಯನ್ ಡಾಲರ್ಗೂ ಹೆಚ್ಚು.
ಆದ್ರೆ ಈ ಕನ್ಯಾಮಣಿ ಇನ್ನೂ ಕನ್ಯತ್ವ ಉಳಿಸಿಕೊಂಡಿದ್ದಾಳಾ, ಇಲ್ಲವಾ ? ಇಂಥ ಪ್ರಶ್ನೆ ಕೇಳುತ್ತೀರಾ ಅಂತಲೇ ಅವಳು ಮೆಡಿಕಲ್ ಟೆಸ್ಟ್ಗೆ ರೆಡಿಯಾಗಿ ನಿಂತಿದ್ದಾಳೆ. ನುರಿತ ಡಾಕ್ಟರ್ಗಳು ಆಕೆಯನ್ನ ಟೆಸ್ಟ್ ಮಾಡಿ ಅವಳು ವಜರ್ಿನ್ನಾ ಇಲ್ಲವಾ ಅಂತ ಸಟರ್ಿಫೈಡ್ ಮಾಡಲಿದ್ದಾರಂತೆ.
ಇಂಟರೆಸ್ಟಿಂಗ್ ಅಂದ್ರೆ, ಅವಳು ತನ್ನ ಕನ್ಯತನವನ್ನು ಹರಾಜು ಮಾಡುತ್ತಿರುವುದು ತನ್ನ ಹೆಚ್ಚಿನ ಓದಿಗಾಗಿ. ಇಡೀ ಜಗತ್ತು ಇವತ್ತು ನಿಂತಿರೋದು ಬಂಡವಾಳ ಶಾಹಿ ಮೇಲೆ ಸ್ವಾಮಿ. ನನಗೂ ಬಂಡವಾಳ ಬೇಕಾಗಿದೆ ನನ್ನ ಸ್ಟಡೀಸ್ ಮಾಡಲು. ಅದಕ್ಕಾಗಿ ನನ್ನ ಶೀಲವನ್ನೇ ಬಂಡವಾಳದ ಮೂಲವನ್ನಾಗಿ ಮಾಡಿಕೊಂಡರೆ ತಪ್ಪಾ? ಅನ್ನುವ ಲಾಜಿಕ್ ಆದ ಪ್ರಶ್ನೆ ಕೇಳುತ್ತಿದ್ದಾಳೆ. ಇದೆಲ್ಲ ಸರಿಗಿಲ್ಲ ಅನ್ನುವವರ ನಡುವೆಯೇ 'ಯಾವನೋ ಅಬ್ಬೇಪಾರಿಯೊಂದಿಗೆ ಮಲಗಿ ಸುಖಾ ಸುಮ್ಮನೆ ಎದ್ದು ಬರುವುದಕ್ಕಿಂತ ಇದೇ ಮೇಲು ಕಣೇ ಡೈಲನ್. ಡೂ ಇಟ್ ' ಅನ್ನುವವರೂ ಇದ್ದಾರೆ. ಅಂದಹಾಗೆ ಮೂನ್ಲೈಟ್ ಬನ್ನಿ ರಾಂಚ್ ಅನ್ನೋ ವೇಶ್ಯಾಗೃಹದ ಮೂಲಕ ಡೈಲನ್ ಹರಾಜಿಗೆ ಒಪ್ಪಿದ್ದಾಳೆ. ಅಲ್ಲಿ ಅವಳ ತಂಗಿಯೂ ವೇಶ್ಯೆಯಾಗಿದ್ದುಕೊಂಡು ಓದುತ್ತಿದ್ದಾಳಂತೆ. ಆ ವೇಶ್ಯಾಗೃಹಕ್ಕೆ ಪಕ್ಕಾ ಲೈಸೆನ್ಸ್ ಇದೆ.
ಹೀಗೆ ಕನ್ಯತ್ವ ಹರಾಜಿಗೆ ಇಡುತ್ತಿರುವುದು ಇದೇ ಮೊದಲೇನಲ್ಲ. 2007ರಲ್ಲಿ ಹದಿನೆಂಟು ವರ್ಷದ ಕ್ಯಾರಿಸ್ ಕೋಪ್ಸ್ಟೆಕ್ ಅನ್ನೋ ಬೆಡಗಿ 10,000 ಪೌಂಡ್ಗೆ ತನ್ನ ಕನ್ಯತ್ವವನ್ನ ಹರಾಜಿಗಿಟ್ಟಿದ್ದಳು. 2004ರಲ್ಲಿ ರೋಸೀ ರೀಡ್ ಅನ್ನೋ ಬ್ರಿಸ್ಟಾಲ್ ಯೂನಿವಸರ್ಿಟಿಯ ಲೆಸ್ಬಿಯನ್ ಸ್ಟೂಡೆಂಟ್ ಕೂಡ ತನ್ನ ಶೀಲದ ಬೆಲೆ 8,400 ಪೌಂಡ್ ಅಂದಿದ್ದಳು.
ಈಗ ಡೈಲನ್ ಸರದಿ.
ಆದ್ರೆ ಇದು ತಪ್ಪ್ಪಾ? ಸರಿಯಾ?
ಸರಿ ತಪ್ಪು ಅನ್ನುವುದು ಬೇರೆ. ಕೆಲವೊಮ್ಮೆ ಚಚರ್ೆಗಳು ಕೇವಲ ಚಚರ್ೆಗಳಾಗಿಯೇ ಉಳಿದುಬಿಡುತ್ತವೆಯೇ ವಿನಃ ಯಾವ ರೀತಿಯಲ್ಲೂ ಬದುಕಿಗೆ ಸಪ್ಪೋಟರ್್ ಆಗೊಲ್ಲ. ಬದುಕು ಅನ್ನುವುದು ಪಕ್ಕಾ ಪ್ರಾಕ್ಟಿಕಲ್ ಆದುದರಿಂದ ಅಲ್ಲಿ ಗಿಮಿಕ್ಗಳೆಲ್ಲ ಹಾಗೆ ಸುಮ್ಮನೆ ಅನ್ನಿಸಿಬಿಡುತ್ತವೆ. ಹಾಗಾದರೆ ಡೈಲನ್ ಮಾಡುತ್ತಿರುವುದು ಗಿಮಿಕ್ಕಾ? ಗೊತ್ತಿಲ್ಲ. ಆದ್ರೆ ಅವಳು ಇವತ್ತಿನ ಜಗತ್ತಿನ ಇನ್ನೊಂದು ಮುಖವನ್ನ ತೆರೆದು ತೋರಿಸಿಕೊಡಲು ಹೊರಟಿದ್ದಾಳೆ. ನನಗೆ ಹಣದ ಅವಶ್ಯಕತೆ ಇದೆ. ಅದಕ್ಕಾಗಿ ನನ್ನ ಕನ್ಯತ್ವ ಮಾರಿಕೊಂಡರೆ ತಪ್ಪೇನು ಅನ್ನುವುದು ಅವಳ ಲೆಕ್ಕಾಚಾರ!
ಮಡಿವಂತ ಭಾರತೀಯರ ಪಾಲಿಗೆ ಇದು ಖಂಡಿತವಾಗಿಯೂ ಒಪ್ಪಲ್ಲ. ಅಲ್ಲರೀ ಅವಳಿಗೇನು ತಲೆಗಿಲೆ ಕೆಟ್ಟಿದೆಯಾ? ಬೀದಿಯಲ್ಲಿ ನಿಂತು ನಾನು ಸೇಲ್ಗಿದ್ದೇನೆ ಅಂದ್ರೆ ಏನರ್ಥ? ಮರ್ಯಾದಸ್ಥ ಹೆಣ್ಣುಮಕ್ಕಳು ಮಾಡೋ ಅಂತ ಕೆಲಸವ ಇದು? ಅಂತೆಲ್ಲ ಬಂಬಡಾ ಹೊಡೆದಾರು. ಆದರೆ ಒಂದು ಹೊತ್ತಿನ ಹೊಟ್ಟೆ ಹೊರೆಯುವುದಕ್ಕಾಗಿ ಮೈಮಾರಿಕೊಳ್ಳುವವರು ಈ ಜಗತ್ತಿನಲ್ಲಿ ಎಷ್ಟಿಲ್ಲ. ಯಾರದೋ ಬಲವಂತಕ್ಕೆ ಶೀಲ ಕಳೆದುಕೊಂಡವರು, ಅತ್ಯಾಚಾರಕ್ಕೊಳಗಾದವರು, ಬ್ರಾಥಲ್ಗಳಗೆ ಗೊತ್ತಿಲ್ಲದೇ ಮಾರಾಟವಾದವರು ಪ್ರತಿ ಕ್ಷಣವನ್ನೂ ನೋವು, ಆತಂಕ, ಅವಮಾನದಿಂದಲೇ ಕಳೆಯುತ್ತಿದ್ದಾರೆ. ಹೆಣ್ಣುಮಕ್ಕಳು ಬೀದಿಗೆ ಬರಬಾರದು ಅನ್ನುವ ಬೃಹಸ್ಪತಿಗಳೇ ಕದ್ದು ಮುಚ್ಚಿ ಸೆಕ್ಸ್ ಅನುಭವಿಸೋಲ್ವೆ! ಇಂಥ ಬೃಹಸ್ಪತಿಗಳ ತೆವಲಿಗೆ ಒಳಗಾಗುವ ಆ ಹೆಣ್ಣುಮಕ್ಕಳಿಗೆ ಈ ಸಮಾಜ ನೀಡುವ ಸ್ಥಾನವಾದರೂ ಎಂಥದು? ಗಂಡು ಲಜ್ಜೆಗೆಟ್ಟವನಾಗಬಹುದು. ಆದ್ರೆ ಹೆಣ್ಣಿಗೆ ಮಾತ್ರ ಲೈನ್ ಆಫ್ ಕಂಟ್ರೋಲ್ ಇದೆ ಅಂದ್ರೆ ಯಾವ ನ್ಯಾಯ? ಹಾಗಾಗಿ ಡೈಲನ್ ಕನ್ಯತ್ವ ಮಾರಾಟಕ್ಕಿದೆ ಅಂದ್ರೆ ಅದೇನೂ ಅಸಹಜ ಅನ್ನಿಸೋಲ್ಲ.
ವೇಶ್ಯಾವೃತ್ತಿ ಅನ್ನುವುದು ಇಂದು ನಿನ್ನೆಯದಲ್ಲ ಬಿಡಿ. ಅದಕ್ಕೊಂದು ಪರಂಪರೆಯೇ ಇದೆ. ಇತಿಹಾಸವಿದೆ. ಅದನ್ನ ಕಾಲಕಾಲಕ್ಕೆ ನಮಗೇ ಗೊತ್ತಿಲ್ಲದ ಹಾಗೆ ಪೋಷಿಸಿ ಬೆಳೆಸಿದವರು ನಾವೇ ಅಲ್ಲವೇ! ಹಾಗಿದ್ದಾಗ ಕನ್ಯತನ ಅನ್ನೋ ಅಮೂಲ್ಯ ದೈಹಿಕ ಮಾನದಂಡವನ್ನ ಯಾಕೆ ಸುಮ್ಮನೆ ಕಳೆದುಕೊಳ್ಳಬೇಕು. ಅದಕ್ಕೆ ಬೆಲೆ ಉಂಟು ಅನ್ನೋದಾದರೆ ಅದು ಹೆಚ್ಚು ಬೆಲೆಗೆ ಹೋಗಲಿ ಅನ್ನುವುದು ಡೈಲನ್ ಲೆಕ್ಕಾಚಾರ. ನಾನು ಇಂಥವಳು ಅಂತ ಜಗತ್ತು ಬೇಕಾದ್ದು ಅಂದುಕೊಳ್ಳಲಿ. ಐ ಡೋಂಟ್ ಕೇರ್ ಅಂತಾಳೆ ಅವಳು.
ಇತ್ತೀಚೆಗೆ ಅಮೆರಿಕಾದ ಕಾಂಗ್ರೆಸ್ ಮುಂದೆ ಒಂದು ಅಪೀಲ್ ಇತ್ತು. ಅಲ್ಲಿನ ಪೋನರ್್ ಇಂಡಸ್ಟ್ರಿ(ಅಶ್ಲೀಲ ಫಿಲ್ಮ್ಗಳನ್ನು ತಯಾರಿಸುವವರು) ಈಗ ಸರಿಯಾಗಿ ನಡೆಯುತ್ತಿಲ್ಲವಂತೆ. ಆಥರ್ಿಕ ಕುಸಿತದ ಪರಿಣಾಮ ನಮ್ಮ ಮೇಲೂ ಆಗಿದೆ. ಅಲ್ಲಿನ ದಿವಾಳಿ ಆದ ಬ್ಯಾಂಕ್ಗಳನ್ನ ಉಳಿಸಿಕೊಳ್ಳಲು ಅಮೆರಿಕನ್ ಕಾಂಗ್ರೆಸ್ ಪ್ಯಾಕೇಜ್ ಘೋಷಿಸಿದ ಹಾಗೆ ನಮಗೂ ಪ್ಯಾಕೆಜ್ ಕೊಡಿ ಅನ್ನುವುದು ಅವರ ಡಿಮ್ಯಾಂಡ್. ಅದಕ್ಕೆ ಕಾಂಗ್ರೆಸ್ ಮೌನ ವಹಿಸಿದೆ. ಅಂದ್ರೆ ಸೆಕ್ಸ್ ವ್ಯವಹಾರ ಜಗತ್ತಿನಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಅದೊಂದು ಉದ್ಯೋಗ. ಅದಕ್ಕೆ ಬೇಕಾದ ಸವಲತ್ತುಗಳನ್ನ ಸರಕಾರ ಕೊಡಬೇಕು ಅನ್ನೋ ಕೂಗು ಅತ್ತಕಡೆಯಿಂದ ಆಗಾಗ ಕೇಳಿಬರುತ್ತಿದೆ. ಕೆಲವು ಪಾಶ್ಚಾತ್ಯ ದೇಶಗಳು ವೇಶ್ಯಾಗೃಹಗಳಿಗೆ ಲೈಸೆನ್ಸ್ ನೀಡುತ್ತಿವೆ.
ವಿಷಯ ಅದಲ್ಲ.
ಡೈಲನ್ ಸುಮಾರು 2.5 ಮಿಲಿಯನ್ಗೆ ಹರಾಜಾಗಬಹುದು ಅನ್ನುವ ಲೆಕ್ಕಾಚಾರ ನಡೆದಿದೆ. ಹಾಗೆ ಅಷ್ಟು ದುಡ್ಡುಕೊಟ್ಟು ಅವಳೊಂದಿಗೆ ಒಂದು ರಾತ್ರಿ ಕಳೆಯೋ ಭೂಪ ಎಲ್ಲಿದ್ದಾನೋ?
ಜಸ್ಟ್ ವೇಯ್ಟ್,
ನ್ಯೂಸ್ ಗೊತ್ತಾದ್ರೆ ಇದೇ ಅಂಕಣದಲ್ಲಿ ಬರೀತೀನಿ.

Friday, January 16, 2009

ನೀವೂ ನೋಡಬೇಕು ಅನ್ನೋದು ನನ್ನ ಆಸೆ



ಇದು ಇತ್ತೀಚೆಗೆ ನಾನು ಮಾಡಿದ ಇನ್ವಿಟೇಷನ್ ಕಾಡರ್್. ಸುಚಿತ್ರ ಫಿಲ್ಮ್ ಸೊಸೈಟಿಯವರು
ಬೆಂಗಳೂರು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಯೋಜಿಸಿದ್ದಾರಲ್ಲ ಅದಕ್ಕೆ. ವಿಜಯಮ್ಮ, ಸುಬ್ಬರಾವ್ ಸರ್ ಎಲ್ಲರಿಗೂ ಬಹಳಾನೇ ಇಷ್ಟ ಆಯ್ತು. ನೋಡಿದವರೂ ತುಂಬಾ ಇಷ್ಟಪಟ್ಟರು ಅಂತ ವಿಜಯಮ್ಮ ಹೇಳ್ತಿದ್ರು. ಇದೇ ಸಂದರ್ಭದಲ್ಲಿ ಅವರಿಗೆ ಒಂದು ಮೆಮೆಂಟೋ ಡಿಸೈನ್ ಕೂಡ ಮಾಡಿಕೊಟ್ಟೆ. ಅದೂ ಡಿಫರೆಂಟ್ ಆಗಿದೆ. ಬಟ್ ನಾನು ಅಂದುಕೊಂಡ ಫಿನಿಷಿಂಗ್ ಅದರಲ್ಲಿ ಬರಲಿಲ್ಲ ಅನ್ನುವುದನ್ನ ಬಿಟ್ರೆ ಓಕೆ. ನೋಡಿ ಖುಷಿಯಾಯ್ತು. ಅವತ್ತು ಜನವರಿ 15 ಸಂಜೆ ಹೊತ್ನಲ್ಲಿ ಚೌಡಯ್ಯ ಮೆಮೋರಿಯಲ್ ಹಾಲ್ ತುಂಬಾ ಅವೇ ಇನ್ವಿಟೇಷನ್ ಸರಿದಾಡುತ್ತಿದ್ವು.
ಅದನ್ನ ನೀವೂ ನೋಡಬೇಕು ಅನ್ನೋದು ನನ್ನ ಆಸೆ.
ಹೇಗಿದೆ ಹೇಳಿ