Wednesday, December 24, 2008

ಗೊತ್ತಾ ... ಸತ್ತುಹೋಗೋ ಅಷ್ಟು ನಿನ್ನ ಪ್ರೀತಿಸ್ತಿದೀನಿ ಕಣೇ...




ಹಾಯ್ ಕಣೇ
ಬೆಣ್ಣೆ ಬಣ್ಣದ ಕಾಲವಳೇ.
ಹೇಗೆ ಶುರುಮಾಡಬೇಕೋ ತೋಚುತ್ತಿಲ್ಲ. ಹೋದ ವರ್ಷವೆಲ್ಲ ನನ್ನನ್ನ ಪ್ರೀತಿಸೋ ಅಂತ ನೀನು ಬೆನ್ನು ಬಿದ್ದಿದ್ದೆ. ನೆನಪಿದೆಯಾ... ಐಯಾಮ್ ಇನ್ ಲವ್ ವಿಥ್ ಯೂ ಅಂತ ಬೋಡರ್ು ಹಿಡಿದುಕೊಂಡು ಒಂದಿನ ರೂಮಿನ ತನಕ ಬಂದುಬಿಟ್ಟಿದ್ಯಲ್ಲ! ನನಗೋ ನನ್ನ ಮನಸ್ಸಿನಲ್ಲಿರುವವಳು ನೀನಲ್ಲ ಕಣೇ ಅಂತ ಹೇಗೆ ಹೇಳಲಿ ಅನ್ನುವುದು ತೋಚದೆ ಪೆಕರು ಪೆಕರಾಗಿ ನಿಂತಿದ್ದೆ. ನೀನು ಅತ್ತೆ, ಗೋಗರದೆ, ಬೆನ್ನಿಗೆ ಗುದ್ದು ಮಾಡಿ ಪ್ಲೀಸ್ ಕಣೋ ನನಗೇನು ಕಡಿಮೆಯಾಗಿದೆ ಹೇಳು? ನಾನು ಚೆನ್ನಾಗಿಲ್ವಾ? ಓದಿಲ್ವಾ? ಅಥವಾ ನಿನ್ನ ಟೇಸ್ಟ್ಗೆ ಒಗ್ಗೊಲ್ವಾ? ಹೈಟೂ ನಿನಗಂತ ಎರಡಿಂಚು ಕಮ್ಮಿ ಇದೀನಿ ಅಷ್ಟೆ. ನಿನಗೆ ಬೇಕಂದ್ರೆ ಚೂರು ದಪ್ಪ ಆಗ್ತೀನಿ. ಸತ್ಯ ಹೇಳ್ತೀನಿ ಕೇಳು, ನೀನು ನನ್ನನ್ನ ಪ್ರೀತಿ ಮಾಡ್ತೀನಿ ಅಂತ ಹೇಳು. ಅಲ್ಲಿ ನನ್ನದೂ ಅಂತ ಏನೂ ಇರೋಲ್ಲ. ಎಲ್ಲಾ ನಿನ್ನ ಆಣತಿಯಂತೆಯೇ ನಡೆಯುತ್ತದೆ. ನಿನ್ನ ಟೇಸ್ಟ್ ನಾನೂ ಕಲಿತುಕೊಳ್ಳುತ್ತೇನೆ. ನಿನ್ನ ಬೈಗುಳ, ನಿನ್ನ ಹುಚ್ಚಾಟ, ನಿನ್ನ ಅಸಹ್ಯ ಮೌನ ಸಹಿಸಿಕೊಳ್ಳುತ್ತೇನೆ. ನಿನ್ನ ದಿನಕ್ಕೊಂದು ಫಿಲ್ಮ್ ನೋಡೋ ಹುಚ್ಚಿಗೆ ನಾನೂ ಬಲಿಯಾಗುತ್ತೇನೆ, ಆದ್ರೆ ಅದೊಂದನ್ನು ಬಿಟ್ಟು. ನಿಮಿಷಕ್ಕೆ ಹದಿನೆಂಟು ಸಲ ಎಳೆಯುತ್ತೀಯಲ್ಲ ಸಿಗರೇಟು ಅದು. ಇಲ್ಲ ಅನ್ನಬೇಡ, ನನಗೆ ನಿನ್ನ ಮುಖ ನೋಡದೇ ಇರೋದಕ್ಕೆ ಆಗ್ತಾ ಇಲ್ಲ ಕಣೋ. ನೀನು ಹೇಗೇ ಇದ್ದರೂ, ಏನೇ ಕೊರತೆ ಇದ್ದರೂ ಸಹಿಸಿಕೊಂಡು ಜೀವನ ಮಾಡ್ತೀನಿ ಅಂತೆಲ್ಲ ಅವಲತ್ತುಕೊಂಡಿದ್ದೆಯಲ್ಲ ಸೌಪಣರ್ಿಕಾ, ಕೇಳು ಈಗೀಗ ನಿನ್ನ ಮೇಲೆ ಮನಸ್ಸಾಗಿದೆ ಕಣೆ.
ನಾವ್ ಐ ಯಾಮ್ ಇನ್ ಲವ್ ವಿಥ್ ಯು.
ನಿಂಗೆ ಗೊತ್ತಾ, ಬಡ್ಡೀ ಮಗಂದು ಈ ಪ್ರೀತೀನೆ ಹಾಗೆ. ಯಾರೋ ನಿನ್ನನ್ನ ಪ್ರೀತಿಸ್ತಿದೀನಿ ಅಂದಾಗ ಇವಳಿಗೆ ಮಾಡೋದಕ್ಕೆ ಕೆಲಸ ಇಲ್ಲ ಅನಿಸಿಬಿಡುತ್ತೆ. ಅದೇ ಅವಳು ದೂರ ಆದಾಗ ಛೇ ಅವಳನ್ನ ತುಂಬಾ ಮಿಸ್ ಮಾಡ್ಕೋತಿದೀನಿ ಅನ್ನಿಸಿಬಿಡುತ್ತೆ. ರಿಯಲಿ ಐ ಮಿಸ್ ಯೂ ಕಣೆ. ಮನಸ್ಸು ನೀನಿಲ್ಲದೆ ಬಿಕೋ ಅಂತಿದೆ. ನೀನು ಬಿಸಾಕಿ ಹೋದ ಆ ಪ್ರೀತಿಯ ಬೋರ್ಡನ್ನ ಹುಡುಕಿ ಎತ್ತಿಟ್ಟುಕೊಂಡಿದ್ದೇನೆ. ಅವತ್ತೇಕೋ ಸುಮ್ಮನೆ ಕುಳಿತವನಿಗೆ ನೀನು ಯಾವ ಪರಿ ಕಾಡಿಬಿಟ್ಟೆ ಅಂದ್ರೆ ಸತ್ತು ಹೋಗೋ ಅಷ್ಟು ನಿನ್ನನ್ನ ಆಗಲೇ ನೋಡಬೇಕು ಅನಿಸಿಬಿಡ್ತ್ತು. ನಿನ್ನ ಹಾಸ್ಟೆಲ್ ಹತ್ರ ಹೋದ್ರೆ ಅವಳು ಊರಿಗೋಗಿ ತಿಂಗಳಾಯ್ತು ಅಂದ್ರು. ಯಾವತ್ತೂ ಅಳದವನು ಅಲ್ಲೇ ಒಂಟಿ ಕಲ್ಲಿನ ಮೇಲೆ ಕುಳಿತು ಅತ್ತುಬಿಟ್ಟೆ ಗೊತ್ತಾ! ಕಲ್ಲಿಗೂ ಕನಿಕರ ಬಂತೆನೋ. ಗೊತ್ತಿಲ್ಲ. ನನಗೆ ಗೊತ್ತು ನಿನಗೆ ಸಿಟ್ಟು ಬಂದಿದೆ ಅಂತ. ಆದರೇನು ಮಾಡಲಿ ಮನಸ್ಸು ನೀನೇ ಬೇಕು ಅಂತ ಹಟ ಹಿಡಿದಿರುವಾಗ. ಅವಾಗೆಲ್ಲ ನಿನ್ನ ಮುಖ ನೋಡಲಿಕ್ಕೂ ನನಗೆ ಬೇಜಾರಾಗುತ್ತಿತ್ತು ನಿಜ್ಜ, ಈಗ ಅದೇ ಮುಖದ ತಲಾಶೆಯಲ್ಲಿದ್ದೇನೆ. ನಿನ್ನ ನಗು ನೋಡಬೇಕೆನಿಸಿದೆ, ಮಾತು ಕೇಳಬೇಕೆನಿಸಿದೆ, ಮೌನಕ್ಕೆ ಸಾಥಿಯಾಗಬೇಕೆನಿಸಿದೆ, ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನಿನ್ನಿಷ್ಟದ ಹಾಡನ್ನ ನನ್ನೆದೆಯೊಳಗೆ ಗುನುಗಿಕೊಳ್ಳಬೇಕೆನಿಸಿದೆ. ಎಲ್ಲಿಹೋದೆ ಸೌಪಣರ್ಿಕಾ?
ನಿಜ್ಜ ಹೇಳು ಅಷ್ಟು ಹೇಟ್ ಮಾಡ್ತೀಯ ನನ್ನ?
ಹೊಸ ವರ್ಷದ ಬೆಳ್ಳಂಬೆಳಿಗ್ಗೆ ನಿನಗೆ ಐ ಲವ್ ಯೂ ಅಂತ ಹೇಳಲಿಕ್ಕೆ ಕಾದು ಕುಳಿತಿದೀನಿ. ಎದೆಯಲ್ಲಿ ಅದೆಂಥದೋ ಪುಳಕವಿದೆ. ಆಸೆ ಇದೆ. ಅದಮ್ಯ ಉತ್ಸಾಹವಿದೆ. ಮೂರು ಜನ್ಮಕ್ಕಾಗುವಷ್ಟು ಪ್ರೀತಿ ಇದೆ. ಜೊತೆಗೆ ಭಯವೂ ಇದೆ. ಅವತ್ತು ಕೂತು ಮಾತಾಡಿಕೊಳ್ಳೋದೆ ಬೇಡ. ಜಸ್ಟ್ ಸಿಗು ಸಾಕು. ತಾಳಿಕಟ್ಟಿಬಿಡ್ತೀನಿ. ಅವತ್ತಿಂದ ನೀನು ಸಿಫರ್್ ನನ್ನವಳು. ಪಟ್ಟದ ರಾಣಿ ಅಂತಾರಲ್ಲ ಹಾಗೆ ನೋಡಿಕೊಳ್ತೀನಿ . ನಿನ್ನ ರವಿಕೆಗೆ ಹುಕ್ ಹಾಕುವುದರಿಂದ ಹಿಡಿದು ಮುಡಿಗೆ ಮಲ್ಲಿಗೆ ಮುಡಿಸುವುದರ ತನಕ ಜವಾಬ್ದಾರಿ ನನ್ನದು. ತಪ್ಪು ನನ್ನಿಂದಾಗಿದೆ ನಿಜ್ಜ. ಹಾಗಂತ ಕಾಡಬೇಡ, ಸತಾಯಿಸಬೇಡ, ಕೊಲ್ಲಬೇಡ. ಜಸ್ಟ್ ಕ್ಷಮಿಸಿಬಿಡೆ ನನ್ನ.
ಒಂದನೇ ತಾರೀಖು ಬೆಳಿಗ್ಗೆ ಲಾಲ್ ಬಾಗ್ನ ಎಡ ತಿರುವಿನಲ್ಲಿರುವ ಪುಟ್ಟ ಹೂವಿನ ಗಿಡದ ಹತ್ತಿರ ಕಾಯುತ್ತಾ ನಿಂತಿರುತ್ತೇನೆ. ಅವತ್ತಿಂದ ಇಬ್ಬರೂ ಬದುಕೋದಾದರೆ ಒಟ್ಟಿಗೆ ಸತ್ತರೂ ಒಟ್ಟಿಗೆ.
ಬರ್ತೀಯಲ್ಲ ...
ಬಾರದಿದ್ದರೆ ನಾ ಬದುಕೊಲ್ಲ ಅನ್ನೋದು ನಿನಗೆ ಗೊತ್ತಿರಲಿ.

Sunday, December 21, 2008

ಗುಡ್ morning ಲಾಲ್ಬಾಗ್











ಒನ್ಸ್ ಎಗೇನ್ ಲಾಲ್ಬಾಗ್ನ ಕದ ತಟ್ಟಿ ಬಂದಿದ್ದೇನೆ. ಅದೂ ಬೆಳ್ಳಂಬೆಳಿಗ್ಗೇನೆ!
ಅದೇಕೋ ಗೊತ್ತಿಲ್ಲ ಈ ಲಾಲ್ಬಾಗ್ಗೂ ನನಗೂ ಒಂಥರಾ ಬಿಟ್ಟೂ ಬಿಡದ ಸಂಬಂಧ. ನಾನು ಬೆಂಗಳೂರಿಗೆ ಕಾಲಿಟ್ಟ ಗಳಿಗೆಯಿಂದಲೂ ಅದರ ಹೊಸ್ತಿಲು ತುಳಿಯುತ್ತಲೇ ಬಂದಿದ್ದೇನೆ. ಅದರ ಅಂಗಳದಲ್ಲಿ ಒಬ್ಬಂಟಿಯಾಗಿ ಅಲೆದಾಡಿದ್ದೇನೆ. ಅವಳ ಮಾತಿಗೆ ಕಿವಿ ಕೊಟ್ಟು ಸುಮ್ಮನೇ ಮೌನಕ್ಕೆ ಬಿದ್ದವನಂತೆ ನಡೆದಿದ್ದೇನೆ. ಸಂಜೆಗಳಿಗೆ ಸಾಕ್ಷಿಯಾಗಿದ್ದೇನೆ. ಲಾಲ್ ಬಾಗ್ ನನ್ನ ಭಾನುವಾರದ ಪ್ರೀತಿಯ ಡೆಸ್ಟಿನೇಷನ್.
ಇಂಥ ತಾಣಕ್ಕೆ ಭಾನುವಾರ ಬೆಳಿಗ್ಗೆ ಐದುಕಾಲಿಗೆಲ್ಲ ತಲಪಿಬಿಟ್ಟಿದ್ದೆ. ಇನ್ನೂ ಮಸುಕು ಮಸುಕು ಕತ್ತಲು. ಇಡೀ ಲಾಲ್ ಬಾಗ್ ಫೇರ್ ಅಂಡ್ ಲವ್ಲಿ ಹಚ್ಚಿಕೊಂಡ ಹುಡುಗಿ ಅದರ ಮೇಲೆ ತುಸು ಜಾಸ್ತೀನೆ ಪಾಂಡ್ಸ್ ಪೌಡರ್ ಹಚ್ಚಿಕೊಳ್ತಾಳಲ್ಲ ಹಂಗಿತ್ತು. ಎದುರಿಗಿದ್ದರೂ ಯಾರೂ ಕಾಣರು. ಥಂಡ ಥಂಡ ಕೂಲ್ ಕೂಲ್. ಸುಂಯ್ ಅನ್ನುವ ಗಾಳಿ. ಅರೆ ಲಾಲ್ ಬಾಗ್ ಎಂಬ ಬ್ಯೂಟಿ ಬೆಳಿಗ್ಗೆ ಬೆಳಿಗ್ಗೆ ಇಷ್ಟು ಚಂದಕ್ಕೆ ಕಾಣಿಸುತ್ತಾಳಾ? ನೋಡೇ ಇರಲಿಲ್ಲವಲ್ಲ ಅನ್ನಿಸಿಬಿಟ್ಟಿತು. ಎಷ್ಟೋ ಸಲ ನಾನು ಗೆಳೆಯರು ಸೂರ್ಯ ಹುಟ್ಟುವ ಮೊದಲೇ ಅಲ್ಲಿಗೆ ಹೋಗಿದ್ದಿದೆ. ಆದ್ರೆ ಇವತ್ಯಾಕೋ ಲಾಲ್ಬಾಗ್ ಥರ ಥರ ಹೊಸ ಥರ...
ಸುಮ್ಮನೆ ಕೆಮೆರಾ ಹಿಡಿದುಕೊಂಡು ಸುತ್ತಿಬಿಟ್ಟೆ. ಎಂಥದೋ ಖುಷಿ. ಗಂಟೆ ಆರಾಯ್ತು, ಏಳಾಯ್ತು, ಎಂಟಾಯ್ತು ಸೂರ್ಯನ ದರ್ಶನವೇ ಇಲ್ಲ. ಅರೆ ಎಲ್ಲಿ ಹೋದ ಈ ಬಿಸ್ಸಿ ಬಿಸ್ಸಿ ಸೂರ್ಯ?
ಜಾಗಿಂಗ್ಗೆ ಬಂದವರು ಫ್ರೆಶ್ ಉಸಿರಿಗಾಗಿ ಏದುಸಿರು ಬಿಡುತ್ತಾ ಓಡುತ್ತಿದ್ರು, ಕೆಲವರು ಅಲ್ಲೇ ಮರದ ಅಡಿಯಲ್ಲಿ ತಪಸ್ಸಿಗೆ ಕುಳಿತಂತೆ ಏಕಾಗ್ರಚಿತ್ತದಿಂದ ಕುಳಿತಿದ್ರು, ಮಕ್ಕಳು ಮೀನು ಗುಳಂ ಮಾಡುತ್ತಿದ್ದ ಪೆಲಿಕಾನ್ ಪಕ್ಷಿಗಳನ್ನು ಕಂಡು ಹುರ್ರೇ ಅಂತಿದ್ವು, ಸೊಂಟದ ಕಿವಿಗೆ ಐಪಾಡ್ ಸಿಕ್ಕಿಸಿಕೊಂಡು ಕ್ಯಾಟ್ವಾಕ್ ಪ್ರಾಕ್ಟೀಸ್ ಮಾಡುತ್ತಿದ್ದಂತಿದ್ದ ಲಲನೆಯರು, ತಿಂದೂ ತಿಂದೂ ಮೈ ಬೆಳೆಸಿಕೊಂಡು ಅದನ್ನ ಕರಗಿಸಿಲು ಕಷ್ಟ ಪಡುತ್ತಿದ್ದವರು, ದಪ್ಪ ಆಗಿಬಿಡುತ್ತಿನೇನೋ ಅನ್ನುವ ಆತಂಕ್ಕಕೆ ಬಿದ್ದು ಇನ್ನೂ ನಾಲ್ಕು ಹೆಜ್ಜೆ ಹೆಚ್ಚಿಗೆ ಓಡೋಣ ಅಂತ ಓಡುತ್ತಿದ್ದ ಹುಡುಗರು... ಪಕ್ಷಿ ಹುಡುಕುತ್ತ ಕೆಮೆರಾ ಕಣ್ಣಿಗೆ ಕಣ್ಣು ಕೀಲಿಸಿ ಕುಳಿತಿದ್ದ ಫೋಟೋಗ್ರಾಫರ್ಗಳು, ಯಾವ ಕಡೆಯಿಂದ ನೋಡಿದರೂ ಲಾಲ್ ಬಾಗ್ ಮಾಯಾಲೋಕದಂತಿತ್ತು. ಮಂಜು ಮುಸುಕಿದ ಮುಂಜಾವಿನಲ್ಲಿ ಲಾಲ್ ಬಾಗ್ ಎಂಬ ಸ್ನಿಗ್ಧ ಸುಂದರಿಗೆ ಜಸ್ಟ್ ಮನ ಸೋತುಬಿಟ್ಟಿದ್ದೆ.
ಒಂಬತ್ತರ ತನಕ ಅಲ್ಲೇ ಸುತ್ತಾಡಿದ್ರು ಸೂರ್ಯ ಬರುವ ಸೂಚನೆಗಳೇ ಇರಲಿಲ್ಲ. ಭಯೋತ್ಪಾದನೆ ವಿರುದ್ಧ ಒಂದು ಸಣ್ಣ ತಂಡ ಘೋಷಣೆ ಕೂಗುತ್ತಾ ಸಾಗುತ್ತಿತ್ತು. ಪಕದಲ್ಲೇ ಕಿವಿಗಿಂಪಾದ ಸಂಗೀತ. ಜೈ ಭಾರತ ಜನನಿಯ ತನುಜಾತೆ ಜಯಹೇ ಕನರ್ಾಟಕ ಮಾತೆ... ಗುಲಾಬಿ ಪಾಕರ್್ಗೆ ಹೋದ್ರೆ ಅಲ್ಲಿ ಗುಲಾಬಿ ಗಿಡಗಳು ಇನ್ನೂ ಕಸಿ ಮಾಡಿಸಿಕೊಂಡು ಕುಳಿತಿದ್ದವು. ಯಾರೋ ಒಬ್ಬರು ಪುಣ್ಯಾತ್ಮರು ಚೀಲದ ತುಂಬ ಸಕ್ಕರೆ,ರವೆ, ಅಕ್ಕಿ ತುಂಬಿಕೊಂಡು ಇರುವೆಗಳಿಗೆ, ಪಾರಿವಾಳಗಳಿಗೆ ಹಾಕುತ್ತಾ ಸಾಗುತ್ತಿದ್ದರು. ಬದುಕನ್ನು ಸಾರ್ಥಕ್ಯಗೊಳಿಸಿಕೊಳ್ಳಲಿಕ್ಕೆ ಎಷ್ಟೊಂದು ಮಾರ್ಗಗಳು ಅಲ್ಲವೇ! ಎದುರಿಗೆ ಸಿಕ್ಕ ಹುಡುಗಿ ಯಾಕೋ ನೋಡಿ ನಕ್ಕಳು. ಪದೇ ಪದೇ ತಿರುಗಿ ತಿರುಗಿ ನೋಡುತ್ತಿದ್ದಳು. ಅವಳನ್ನು ಎಲ್ಲಿಯಾದರೂ ನೋಡಿದ್ದೇನಾ? ಅಥವಾ ಅವಳು ನನ್ನನ್ನ ನೋಡಿದ್ದಳಾ? ಗೊತ್ತಿಲ್ಲ.
ಹೊಟ್ಟೆ ಚುರುಗುಟ್ಟುತ್ತಿತ್ತು. ಅಲ್ಲಿಂದ ವಿದ್ಯಾಥರ್ಿ ಭವನಕ್ಕೆ ಹೋಗಿ ದೋಸೆ ತಿಂದು ಮನೆಗೆ ಹೋದ್ರೆ ಫುಲ್ ನಿದ್ರೆ.
ಮಧ್ಯಾಹ್ನ ಎದ್ದವನ ಮನದ ತುಂಬ ಮುಂಜಾವಿನದೇ ಫ್ರೆಶ್ನೆಸ್.
ಬಿಡುವಿದ್ರೆ ಡಿಸೆಂಬರ್ ಮುಗಿಯೋ ಮುನ್ನ ಬೆಳಿಗ್ಗೆ ಎದ್ದು ಒಂದಿನ ಲಾಲ್ಬಾಗ್ ಕದ ತಟ್ಟಿಬನ್ನಿ.
ಅದರ ಮಜಾನೇ ಬೇರೆ.

Friday, December 19, 2008

ಗಿಫ್ಟ್ ಏನ್ ಕೊಡ್ತೀರಾ ಅಂದ್ರೆ...




ತುಂಬಾ ದಿನ ಆದಮೇಲೆ ಒಂದಿನ ರಸ್ತೆಯಲ್ಲಿ ನೀವು ನನ್ನನ್ನ ಅಚಾನಕ್ಕಾಗಿ ಭೇಟಿ ಆಗ್ತೀರ. ಉಭಯಕಲಸೋಪರಿ ಆದಮೇಲೆ ಇವತ್ತು ನನ್ನ ಬತರ್್ಡೇ ಅಂತ ಅದ್ಯಾಗೋ ನಿಮಗೆ ಗೊತ್ತಾಗಿಬಿಡುತ್ತೆ. ಆದ್ರೆ ನನಗೆ ಗಿಫ್ಟ್ ಅಂತ ಕೊಡಲಿಕ್ಕೇ ನಿಮ್ಮತ್ರ ಏನೇನೇನೂ ಇರೋಲ್ಲ. ಅಂತ ಸಮಯದಲ್ಲಿ ಏನು ಗಿಫ್ಟ್ ಕೊಡ್ತೀರಾ?
ಈ ಪ್ರಶ್ನೆಗೆ ರಿಪ್ಲೈ ಮಸ್ಟ್ ಅಂತ ಒಂದಿಷ್ಟು ಸ್ನೇಹಿತರಿಗೆ ಕಳುಹಿಸಿದೆ.
ಅವರು ಕೊಟ್ಟ ಉತ್ತರಗಳಿವು.

ಚುಪ್ಪಿ: ಪೊರಕೆ. ನಿಮ್ಮ ಲೈಫ್ನಲ್ಲಿರೋ ಕಸಾನೆಲ್ಲ ಗುಡಿಸಿ ಹೊರ ಹಾಕಿ ಅನ್ನೋ ಸ್ಲೋಗನ್ ಜೊತೆ.
ಕಮೆಂಟ್: ನಿಮ್ಮತ್ರ ಏನೇನೂ ಇಲ್ಲ ಅಂದಮೇಲೆ ಪೊರಕೆ ಎಲ್ಲಿಂದ ಬರಬೇಕು. ಪೊರಕೆ ಅವಸಿಕೊಂಡೇನಾದ್ರೂ ಹೋಲ್ಸೇಲ್ ಆಗಿ ಸಿಟಿ ಕ್ಲೀನ್ ಮಾಡೋದಕ್ಕೆ ಹೊರಟಿದ್ರಾ!

ಕಲಾ: ನನ್ನ ಕಣ್ಣ ರೆಪ್ಪೆಯ ಕೂದಲನ್ನು ಕೊಡುವೆ ಗೆಳೆಯ. ನೀನು ಬಯಸಿದ್ದು ಅದನ್ನು ಗಾಳಿಗೆ ತೂರಿದಾಗ ಸಿಗಲಿ ಎಂದು ಹಾರೈಸುವೆ.
ಕಮೆಂಟ್: ನಿಮ್ಮ ಐಡಿಯಾ ಏನೋ ಸೂಪರ್ರ್! ಆದ್ರೆ ಇರೋದೆರಡು ರೆಪ್ಪೆ ಕೂದಲು ಕಿತ್ತುಕೊಂಡ್ರೆ ಸೇವಿಂಗ್ ಮಾಡಿಸಿದ ಕೋತಿ ಥರ ಕಾಣಿಸಲ್ವಾ? ಥಿಂಕ್ ಟ್ವೈಸ್!

ಮಣಿಕಾಂತ್: ನೂರಾರು ಹಾರೈಕೆ ನಿಮಗೆ ಎಂಬ ಹರಕೆಯ ಬಿಟ್ಟಿ ಮಾತು.
ಕಮೆಂಟ್: ರೀ ಮಿನಿಕಾಂತ್ ಅದರಲ್ಲೂ ಕಂಜೂಸಾ? ಬಿಟ್ಟಿ ಅಂತಿದೀರಾ ಬೇರೆ...ನೂರಾರೇ ಏಕೆ. ಸಾವಿರಾರು ಅಂತಾದರೂ ಅನ್ರೀ!

ಕುಮಾರ ಸ್ವಾಮಿ: ಏನೂ ಕೊಡೋಲ್ಲ ಜಸ್ಟ್ ವಿಷಸ್ ಅಷ್ಟೇ!
ಕಮೆಂಟ್: ನೀವು ಕೊಡೊಲ್ಲ ಅಂತ ಗೊತ್ತು ಬಿಡ್ರೀ ನಟರೇ. ನಿಮ್ಮನ್ನ ನೋಡುದ್ರೆ ಯಾವ ಕಡೇ ಇಂದಾನೂ ಕೊಡೋ ಸೂಚನೆಗಳೇ ಇಲ್ಲ. ಹೇಳೋದರಲ್ಲೂ ಎಂಥ ನೇರವಂತಿಕೆ ನಿಮ್ಮದು. ಮೆಚ್ಚಿದೆ ಮೆಚ್ಚಿದೆ.

ಸುಬ್ಬು: ಮೊದಲೇ ಹೇಳಬಾರದಿತ್ತೇನೋ ಜೇಬ್ನಲ್ಲಿ ತಾಜ್ ಮಹಲ್ಲೆ ಇಟ್ಕಂಬತ್ತಿದ್ದೆ!
ಕಮೆಂಟ್: ಜೇಬಿದೆಯಾ ಅಂತ ನೋಡ್ಕೋ. ಇದ್ರೂ ತೂತಿರಬಹುದು. ತಾಜ್ ಮಹಲ್ ಇರಲಿ ನಿನ್ನ ಅಂಗಡೀಲಿರೋ ಒಂದು ಲಾಲಿ ಪಪ್ಪನ್ನ ಯಾರಿಗಾದ್ರೂ ದಾನ ಮಾಡಿದಿಯೇನೊ ಬ್ರದರ್!

ರವಿರಾಜ್: ನಿಮ್ಮ ಹುಟ್ಟಿದಬ್ಬ ನೆನಪಿಸಿಕೊಳ್ಳೋದೇ ನನಗೊಂದು ವಿಶೇಷ ಬಿಡಿ. ಯಾಕೆಂದ್ರೆ ನಾನು ಆಬ್ಸೆಂಟ್ ಮೈಂಡೆಡ್.
ಕಮೆಂಟ್: ಹೋಗಲಿ ಬಿಡಿ ರವಿರಾಜ್ ನಿಮ್ಮನ್ನ ನೆನಪಿಸಿಕೊಂಡ್ರೇ ಸಖತ್ ದುಃಖ ಆಗುತ್ತೆ. ಯಾವುದಕ್ಕೂ ಒಳ್ಳೇ ಕಡೆ ತೋರಿಸಿಕಳಿ.

Thursday, December 11, 2008

ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ



...'ಯಾರದೋ ಕೈಯಿಂದ ಜಾಮು ಬಿದ್ದಿರಬೇಕು... ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ ಹಾಗಂತ ಬರೆಯುತ್ತಾನೆ ಫಿರಾಖ್ ಗೋರಖ್ಪುರಿ. ಭಗ್ನ ಹೃದಯವೊಂದರ ಚಿತ್ರಣವನ್ನು ಇದಕ್ಕಿಂತ ಚೆನ್ನಾಗಿ ಕಟ್ಟಿಕೊಡಲು ಸಾಧ್ಯವೇ? ಉಫ್ ....... ನಾನಂತೂ ಫಿದಾ ಆಗೋಗಿಬಿಟ್ಟೆ. ನಿಮಗೆ ಗೊತ್ತಿದೆ, ಈ ಪ್ರೀತಿಗೂ ಮದ್ಯಕ್ಕೂ ಅದೆಂಥದೋ ಸಂಬಂಧವಿದೆ. ಅದೂ ಅಮಲೇ ಇದೂ ಅಮಲೇ! ಹೇಳಬೇಕೆಂದ್ರೆ ಪ್ರೀತಿ ಮದ್ಯಕ್ಕಿಂತ ಅಮಲಮಲು. ಪ್ರೀತಿಯಲ್ಲಿ ಸೋತವನು ಮದ್ಯಕ್ಕೆ ದಾಸನಾಗುತ್ತಾನೆ. ಮದ್ಯಕ್ಕೆ ದಾಸನಾದವನು ಬದುಕನ್ನೇ ಗಂಟುಕಟ್ಟಿ ಗಟಾರಕ್ಕೆ ಎಸೆದುಬಿಡುತ್ತಾನೆ. ಅಲ್ಲಿ ನೋ ಮುಜುಗರ, ನೋ ಹೋಪ್ಸ್, ನೋ ಲೈಫ್. ಪ್ರೀತಿ ಎದೆಯೊಳಗಿನ ದಾವಾಗ್ನಿ. ಯಾವ ಪ್ರೀತಿ ತನ್ನ ಬದುಕನ್ನು ಬಂಗಾರಮಾಡಬಲ್ಲದು ಅಂದುಕೊಂಡಿದ್ದನೋ ಅದೇ ಪ್ರೀತಿ ಅವನ ಬದುಕನ್ನ ಮುಕ್ಕಳಿಸಿ ಎಸೆದುಬಿಡುತ್ತದೆ. ಇನ್ನೆಲ್ಲಿ ಪ್ರೀತಿ?
ಕವಿ ಶಾಂತರಸ ಅವರು ಸೊಗಸಾದ, ಮನತಬ್ಬುವ ಇಂಥ ಎಷ್ಟೋ ದ್ವಿಪದಿಗಳನ್ನ ಉದರ್ುವಿನಿಂದ ಕನ್ನಡಕ್ಕೆ ತಂದಿದ್ದಾರೆ. ಉದರ್ುಕಾವ್ಯದಲ್ಲಿ ಮದ್ಯ ಮತ್ತು ಮದಿರೆ ಅನ್ನುವ ಹೆಸರಿನಲ್ಲಿ.
ಮೊನ್ನೆ ಶಶಿಕಲಾ ವೀರಯ್ಯಸ್ವಾಮಿಯವರು ತಂದುಕೊಟ್ಟು ಓದಿ ನೋಡಿ ನಿಮಗಿಷ್ಟ ಆಗುತ್ತೆ ಅಂದ್ರು. ಓದಿದೆ. ನೀವು ನೆನಪಾದೀರಿ. ಅದಕ್ಕೇ ಕೆಲವನ್ನ ಇಲ್ಲಿ ಕೊಡುತ್ತಿದ್ದೇನೆ.



ನಿನ್ನ ಕೇಶಗಳ ನೆರಳಲ್ಲಿ ಕೆಲ ನಿಮಿಷ ಕಳೆದವಗೆ
ಬೆಳುದಿಂಗಳಿಂದಲೂ ಹಿಂಸೆಯಾಗುವುದವಗೆ
- ನಾಷಾದ್
ಜೀವನವು ಏನೆಂದು ನಾನು ಕೇಳಿದೆನು
ಕೈ ಜಾರಿ ಬಿದ್ದು ಜಾಮು ಒಡೆದುಹೋಯ್ತು
- ಜಗನ್ನಾಥ ಆಜಾದ್
ಯಾರದೋ ಕೈಯಿಂದ ಜಾಮು ಬಿದ್ದಿರಬೇಕು
ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ
- ಫಿರಾಖ್ ಗೋರಖ್ಪುರಿ
ನೂರು ನೋವುಗಳನ್ನು ಹಿಚುಕಿ ಹಿಂಡಿದರೆ
ಒಂದೇ ಒಂದು ಹನಿ ಮದ್ಯವಾಗುವುದು
-ಸಾಹಿರ್ ಹೊಷಿಯಾರ್ ಪೂರಿ
ಯಾರು ಎಬ್ಬಿಸಬೇಕು ಉದ್ಯಾನದಂಗಳದ ಮೊಗ್ಗುಗಳನು
ಮಲಗಿಹುದು ನಿನ್ನ ಕೇಶಗಳ ನೆರಳಲ್ಲಿ ಮುಂಜಾವಿನೆಲರು
-ಕೈಫ್ ಅಹಮದ್ ಸಿದ್ದೀಖಿ
ಏನಾದರೂ ಸಿಗಲಿ ಈ ಮಧುರ ತುಟಿಯಿಂದ
ವಿಷ ಕುಡಿವ ಆದೇಶವಾದರೂ ಸರಿಯೆ
-ಆಜರ್ೂ ಲಖ್ನವಿ
ಹೊಳೆವ ಕೆನ್ನೆಯ ಮುಂದೆ ಸಮೆಯಿಟ್ಟು ಹೇಳುವರು:
ಯಾವ ಕಡೆ ಹೋಗುವುದೋ ಪತಂಗ ನೋಡೋಣ
-ದಾಗ್
ಎಷ್ಟು ಎದೆಗಳ ದೀಪ ನಂದಿಸಿ ನಿನ್ನ ನೋಟ
ಚುಕ್ಕೆ ಬಳಗಕೆ ಬೆಳಕನೀವುದು ತಿಳಿಯದಲ್ಲ
-ಆನಂದನರಾಯನ ಮುಲ್ಲಾ
ನೀಡು ಒಪ್ಪಿಗೆ ನಿನ್ನ ಕೆನ್ನೆಗಳ ನನ್ನೆದೆಗೆ ಅಪ್ಪಿಕೊಳ್ಳಲು
ಕಾವು ಕೊಡುವೆನೀ ಕೆಂಡಗಳಿಂದೆನ್ನ ಎದೆಯ ಗಾಯಗಳಿಗೆ
-ಖಿಜಲ್ ಬಾಷ್

Tuesday, December 9, 2008

ನಮ್ಮ ಮನೆಗೆ ಒಬ್ಬ ಪೊಲಿಟಿಷಿಯನ್ ಬರೋದಕ್ಕಿಂತ ಒಂದು ನಾಯಿ ಬಂದ್ರೆ ಒಳ್ಳೇದು



ಮನಸ್ಸು ದುಃಖಕ್ಕೆ ಬಿದ್ದಿದೆ.
ಅತ್ತ ಮುಂಬೈನ ನೂರಾರು ಸೋದರ ಸೋದರಿಯರು ಜೀವ ಕಳೆದುಕೊಂಡಿದ್ದಾರೆ. ನೂರಾರು ಸ್ನೇಹಿತರು ಗಾಯಗೊಂಡಿದ್ದಾರೆ. ತಾಜ್ ಹೋಟೆಲ್ಗಂಟಿದ ರಕ್ತದ ಕಲೆ ಆರುವುದಕ್ಕೆ ಎಷ್ಟುಕಾಲ ಬೇಕೋ! ಅಗೈನ್ ಉಗ್ರವಾದಿಗಳ ಕೊಲ್ಲುವ ಆಟ ಮುಂದುವರೆದಿದೆ. ಇಡೀ ಮುಂಬೈ ನಗರವೂ ಸೇರಿದಂತೆ ದೇಶಕ್ಕೆ ದೇಶವೇ ಪ್ರತಿ ಕ್ಷಣವನ್ನೂ ಆತಂಕ, ಭಯದಿಂದಲೇ ಎದುರುನೋಡುತ್ತಿದೆ. ಏನಾಗಿದೆ ಈ ದೇಶಕ್ಕೆ?
ಫ್ರೆಂಡ್ಸ್ ನೀವೇ ಹೇಳಿ, ಎಷ್ಟು ದಿನ ಅಂತ ಹೀಗೆ ಸಾವಿಗೆ ತಲೆ ಒಡ್ಡುತ್ತಲೇ ಬದುಕುವುದು? ಬದುಕಲಾಗದಷ್ಟು ಈ ಸಮಾಜ ಕ್ರೂರವಾಗುತ್ತಿದೆಯಾ? ಮನುಷ್ಯ ಮನುಷ್ಯನನ್ನ ಕೊಲ್ಲುವುದೇ ಉದ್ದೇಶವಾಗಿಬಿಟ್ಟರೆ ಜೀವಿಸುವ ಹಕ್ಕಾದರೂ ಉಳಿದೀತು ಎಲ್ಲಿ?
ಇವತ್ತು ಮುಂಬೈ, ನಾಳೆ ಬೆಂಗಳೂರು, ನಾಳಿದ್ದು ಗುಜರಾತ್, ಅದರ ನಾಳೆ ಇನ್ನಾವುದೋ? ಕೊಲ್ಲುವವರು ಬಂದು ನಿರಾತಂಕವಾಗಿ ಕೊಂದು ಹೋಗುತ್ತಿದ್ದಾರೆ. ಪ್ರತಿ ಸಲ ಕೊಂದಾಗಲೂ ನಮ್ಮ ಪುಢಾರಿಗಳದ್ದು ಅದೇ ನರ ಸತ್ತ ಹೇಳಿಕೆ. 'ನಾವು ಎಂಥ ಸ್ಥಿತಿಯನ್ನೂ ಎದುರಿಸಲು ಸಿದ್ಧ' ಅನ್ನುವುದು. ಘನವೆತ್ತ ಪುಢಾರಿಗಳೇ ನಿಮಗೆ ಮನುಷ್ಯತ್ವ ಅನ್ನುವುದೇನಾದರೂ ಇದೆಯಾ? ಒಂದು ಕೋಲು ಕೊಟ್ಟು ದೇಶ ಕಾಯಿರಿ ಅಂದ್ರೆ ಹೇಗೆ ಸಾಧ್ಯ ಅಂತೇನಾದ್ರೂ ಯೋಚಿಸಿದ್ದೀರಾ? ನಿಮಗೆ ಟೆರ್ರರಿಸ್ಟ್ ಹತ್ರ ಎಂತೆಂಥ ವೆಪೆನ್ಸ್ ಇದೆ ಅಂತೇನಾದ್ರೂ ಗೊತ್ತಾ? ಇವತ್ತು ಟೆರ್ರರಿಸ್ಟ್ಗೆ ಎದೆ ಒಡ್ಡಿ ನಿಂತು ಕಾದಾಡಲು ನಮ್ಮ ಪೊಲೀಸರ ಹತ್ರ ಒಂದು ಬುಲ್ಲೆಟ್ ಪ್ರೋಫ್ ಜಾಕೆಟ್ ಇಲ್ಲ. ಆಧುನಿಕವಾದ ವೆಪೆನ್ಸ್ ಎಷ್ಟು ಜನ ಪೊಲೀಸರ ಕೈಲಿದೆ? ನಮಗಿಂತ ಆತಂಕವಾದಿಗಳು ಟೆಕ್ನಾಲಜಿಯಲ್ಲಿ ಸೌಂಡ್ ಇರಬಾರದು ಅನ್ನುವ ಸಣ್ಣದೊಂದು ತಂತ್ರ ನಿಮಗೆ ಗೊತ್ತಿಲ್ಲ ಅಂದ್ರೆ ಹೇಗೆ? ಒಂದೇ ಒಂದು ಕ್ಷಣ ಯೋಚಿಸಿ. ನೀವು ಲೂಟಿ ಮಾಡುವ ಹಣದಲ್ಲಿ ಇಂಥ ಎಷ್ಟು ಒಳ್ಳೆ ಕೆಲಸ ಮಾಡಬಹುದಿತ್ತು. ಎಷ್ಟು ಒಳ್ಳೆ ಬು.ಪ್ರೂ. ಜಾಕೆಟ್ ಕೊಡಿಸಬಹುದಿತ್ತು, ಶೂ ಕೊಡಿಸಬಹುದಿತ್ತು, ಗನ್ ಕೊಡಿಸಬಹುದಿತ್ತು. ದೇಶಕ್ಕಾಗಿ ಹುತಾತ್ಮರಾದವರ ಕುಟುಂಬಕ್ಕೆ ಎಂಥ ಕಂಫಟರ್್ ಕೊಡಬಹುದಿತ್ತು. ಅದೆಲ್ಲ ನಿಮಗೆ ಎಲ್ಲಿ ಹೊಳೆಯಬೇಕು! ನಿಮಗೆ ಮಾತ್ರ ಟೈಟ್ ಸೆಕ್ಯೂರಿಟಿ ಬೇಕು. ಜನಸಾಮಾನ್ಯರು ಸಾಯಲಿ ಅಂದ್ರೆ ಈ ದೇಶ ನಿಮ್ಮನ್ನ ಯಾವತ್ತೂ ಕ್ಷಮಿಸುವುದಿಲ್ಲ, ತಿಳಿದುಕೊಳ್ಳಿ.
ಮಗನನ್ನೋ, ಮಗಳನ್ನೋ, ಅಪ್ಪನನ್ನೋ, ಅಮ್ಮನನ್ನೋ ಕಳೆದುಕೊಂಡವರ ನೋವು ನಿಮಗೆಲ್ಲಿ ಅರ್ಥ ಆಗಬೇಕು. ಅದಕ್ಕೂ ರಾಜಕೀಯ ಬೆರೆಸುತ್ತೀರಿ. ಇತ್ತ ಮಗನ ಸಾವಿನ ದುಃಖ ಭರಿಸಲಾಗದೇ ಕುಳಿತ ಅಪ್ಪನ ಮುಂದೆ ಸಿಎಮ್ ಬಂದಾಗ ಯಾಕೆ ಬಂದೆ ಅಂತ ಕೇಳಿದ್ದೇ ತಪ್ಪಾಗಿಹೋಯಿತಾ? ಅಷ್ಟಕ್ಕು ಆತ ಬಂದದ್ದಾರೂ ಯಾಕೆ? ಮೀಡಿಯಾದವರು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಅಲ್ಲವೇ! ಅದೂ ಒಂದು ರಾಜಕೀಯ ಗಿಮಿಕ್ಕೇ! ಅದನ್ನೆ ಆತ ನಿನ್ನ ಮನೆಗೆ ಯಾವ ನಾಯಿ ಬಂದೀತು ಅಂದ್ರೆ ಏನರ್ಥ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತ ವ್ಯಕ್ತಿಯೊಬ್ಬ ಆಡುವ ಮಾತೇ ಅದು. ನೀವು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದರೇ ಆ ಮಾತೇ ಬರುತ್ತಿರಲಿಲ್ಲ ಅಲ್ವಾ ಸಿಎಮ್ ಸಾಹೇಬರೇ! ಒಬ್ಬ ಬೆಳೆದ ಮಗನನ್ನು ಕಳೆದುಕೊಂಡ ದುಃಖ ಒಮ್ಮೆ ಭರಿಸಿ ನೋಡಿ ಗೊತ್ತಾಗುತ್ತೆ. ಆ ಸಂಕಟ ಎಂಥದು ಅಂತ. ದೇಶ ಕಾಯಿರಿ ಅಂತ ಹೇಳುತ್ತೀರಿಯೇ ಹೊರತು ಹಾಗೆ ಕಾಯುವಾಗ ಎದುರಾಳಿಗಳ ದಾಳಿಗೆ ಸಿಕ್ಕು ಸತ್ತರೇ ಅವರ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವವರಾರು? ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಆ ಸಂಸಾರಕ್ಕೆ ಯಾರು ದಿಕ್ಕು? ನಿಮಗೇನು ನಿಮ್ಮ ಮಕ್ಕಳನ್ನು ಆಕ್ಸ್ಫಡರ್್ನಲ್ಲೇ ಓದಿಸುತ್ತೀರಿ, ಅವರಿಗೆ ಬೇಕಾದ ಸೆಕ್ಯೂರಿಟಿ ಕೊಡಿಸುತ್ತೀರಿ. ನಿಮಗೇನು ಧಾಡಿ? ಇರುವ ಎನ್ಎಸ್ಜಿ ಪಡೆ ನಿಮ್ಮಂತ ದುರುಳರನ್ನು ಕಾಯುವುದಕ್ಕೆ ಬಳಕೆಯಾಗುತ್ತಿದೆಯಲ್ಲ ಅದಕ್ಕಿಂತ ದುದರ್ೈವದ ಸಂಗತಿ ಈ ದೇಶಕ್ಕೆ ಬೇರೇನಿದೆ! ಅವತ್ತು ಅಂತದ್ದೊಂದು ಪಡೆ ಇಲ್ಲದಿದ್ದರೇ ದೇಶದ ಗೌರವವಾದರೂ ಎಲ್ಲಿರುತ್ತಿತ್ತು ಬಲ್ಲಿರಾ? ನಿಮ್ಮ ಆತ್ಮಸಾಕ್ಷಿಯಾಗಿ ಹೇಳಿ, ನೀವು ಮಾಡುವ ಕೆಲಸ ನಿಮ್ಗೆ ತೃಪ್ತಿ ತಂದಿದೆಯಾ? ಈ ದೇಶಕ್ಕೋಸ್ಕರ ಏನಾದ್ರೂ ಒಳ್ಳೇದು ಮಾಡಿದ್ದೀರಾ? ನಮ್ಮ ಹಣವನ್ನ ಲೂಟಿ ಹೊಡೆಯುತ್ತೀರಿ. ಮೆರೆಯುತ್ತೀರಿ, ನಾವೇನು ನಿಮ್ಮನ್ನು ನಿಮ್ಮನ್ನ ಉದ್ಧಾರ ಮಾಡಿಕೊಳ್ಳಲಿಕ್ಕೆ ಅಂತ ಆರಿಸಿ ಕಳಿಸಿದ್ದೀವಾ?
ಯಾವುದಕ್ಕೆ ರಾಜಕೀಯ ಮಾಡಬೇಕು, ಯಾವುದಕ್ಕೆ ಮಾಡಬಾರದು ಅನ್ನುವ ಪರಿಜ್ಞಾನ ಇಲ್ಲದವರೇ ಇವತ್ತು ನಮ್ಮನ್ನಾಳುತ್ತಿರುವಾಗ ಟೆರ್ರರಿಸ್ಟ್ಗಳಿಗೆ ಅದಕ್ಕಿಂತ ಇನ್ನೇನು ಬೇಕು. ನಿಜಕ್ಕೂ ನಮಗೆ ಆತಂಕವಿರುವುದು ಟೆರ್ರರಿಸ್ಟ್ಗಳಿಂದಲ್ಲ ನಮ್ಮ ಪುಢಾರಿಗಳಿಂದಲೇ! ಟೆರ್ರರಿಸ್ಟ್ಗಳಿಗೆ ಜನರನ್ನು ಕೊಲ್ಲುವುದು ಈಸಿ ಅನಿಸಿಬಿಟ್ಟಿದೆ. ಕೊಂದ ಮೇಲೆ ಎಸ್ಕೇಪ್ ಆಗುವುದು ಅವರಿಗೆ ಕರಗತ. ಅಥವಾ ಅರೆಸ್ಟ್ ಆದರೂ ಇನ್ನೊಂದು ಅಟ್ಯಾಕ್ ಮಾಡಿ ಇವರನ್ನು ಬಿಡಿಸಿಕೊಂಡು ಹೋಗಲು ಅವರ ಪಡೆ ಸನ್ನದ್ಧವಾಗಿದೆ. ಅಂದ್ರೆ ನಮ್ಮನ್ನಾಳುವವರು ರೂಪಿಸುವ ಕಾನೂನುಗಳಿಗೆ, ನಾಟಕಗಳಿಗೆ ಅವರು ಕ್ಯಾರೆ ಅಂತ ಕೂಡ ಅನ್ನುತ್ತಿಲ್ಲ.
ಅಲ್ಲರೀ ಟೆರ್ರರಿಸ್ಟ್ ಯಾವನೇ ಆಗಿರಲಿ ಅವನು ಮನುಕುಲದ ವಿರೋಧಿ. ಅಂತಹವನನ್ನು ಹಿಡಿದು ತಂದು ಎನ್ಕ್ವೈರಿ ಮಾಡುವುದಾದರೂ ಎಂಥದು? ವರ್ಷಗಟ್ಟಲೆ ಅವನನ್ನ ಇಟ್ಟುಕೊಂಡು ವಿಚಾರಿಸಲು ಅವನಲ್ಲಿ ಏನು ಉಳಿದಿದೆ? ತಪ್ಪು ಮಾಡಿರುವುದು ಸಾಬೀತಾಗಿದೆ. ಹಿಡಿದು ಎಲ್ಲರೆದುರೇ ನೇತುಹಾಕಿ.ಅವರು ನಮ್ಮ ಇನ್ನೂರು ಜನ ಸೋದರ ಸೋದರಿಯರನ್ನು ಕೊಲ್ಲುತ್ತಾರೆ ಹೌದಾ? ಹಾಗಾದ್ರೆ ನಮಗೆ ಅವರು ಎಂಟತ್ತು ಮಂದಿಯನ್ನು ಕೊಲ್ಲಲ್ಲು ಹಾಗುವುದಿಲ್ಲ ಅಂದ್ರೆ ಹೇಗೇ? ಹಾಗಂತ ಕೊಲೆಗೆ ಕೊಲೆಯೇ ಪರಿಹಾರವಲ್ಲ ಒಪ್ಪಿಕೊಳ್ಳೋಣ. ಆದ್ರೆ ಕೊಲ್ಲುವವರನ್ನ ಹೀಗೆ ರಾಜಕೀಯದವರು ಪೋಷಿಸುತ್ತಾ ಬಂದ್ರೆ ದೇಶ ಸುಭದ್ರವಾಗಿರಲು ಎಲ್ಲಿ ಸಾಧ್ಯ?
ಗೇಟ್ವೇ ಆಫ್ ಇಂಡಿಯಾ ಮುಂದೆ ಮಡುವುಗಟ್ಟಿದ ದುಃಖದ ನಡುವೆಯೇ ಒಬ್ಬ ತನ್ನ ಫ್ಲಕಾಡರ್್ನಲ್ಲಿ ಹೀಗೆ ಬರೆದಿದ್ದ. ನಮ್ಮ ಮನೆಗೆ ಒಬ್ಬ ಪೊಲಿಟಿಷಿಯನ್ ಬರೋದಕ್ಕಿಂತ ಒಂದು ನಾಯಿ ಬಂದ್ರೆ ಒಳ್ಳೇದು ಅಂತ. ಇದರರ್ಥವಾದರೇ ಚೆನ್ನ.
ನಿಜಕ್ಕು ಈ ದೇಶದ ಜನಸಾಮಾನ್ಯ ರೋಸತ್ತುಹೋಗಿದ್ದಾನೆ. ಒಂದು ದೇಶದ ಪ್ರಜೆಗೆ ನೆಮ್ಮದಿಯಾಗಿ ಬದುಕುವಂತಹ ವಾತಾವರಣ ಕಲ್ಪಿಸಿಕೊಡದಿದ್ರೆ ಆ ದೇಶದ ಪುಢಾರಿಗಳೇನು ಕತ್ತೆಕಾಯಲಿಕ್ಕೆ ಇದ್ದಾರಾ?
ಜನರ ತಾಳ್ಮೆಯನ್ನ ಮತ್ತೆ ಮತ್ತೆ ಪರೀಕ್ಷಿಸಲು ಹೋಗಬೇಡಿ. ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಫುಲ್ಸ್ಟಾಪ್ ಇದೆ. ಅದು ನಿಮಗೂ ಅನ್ವಯಿಸುತ್ತೆ.
ಮೈಂಡ್ ಇಟ್.

Thursday, November 27, 2008

ಅವರಿಗೊಂದು ಹ್ಯಾಟ್ಸಾಫ್ ಹೇಳುತ್ತಾ...

ಹಂಪಿ ಒಂಥರಾ ಕಾಡುವ ಸಾಮ್ರಾಜ್ಯ.
ಎಷ್ಟರ ಮಟ್ಟಿಗೆ ಅಂದ್ರೆ, ಆ ಗುಂಗಿನಿಂದ ಹೊರಬರಲು ಬಹುಶಃ ತಿಂಗಳುಗಳೇ ಬೇಕೇನೋ! ಅಷ್ಟು ಕಾಡುತ್ತದೆ. ಅವತ್ತಿನ ಅವರ ಸಮೃದ್ಧ ಬದುಕನ್ನ ಕಲ್ಪಿಸಿಕೊಂಡರೇ ಗ್ರೇಟ್ ಅನಿಸುತ್ತೆ. ಒಂದು ಸಾಮ್ರಾಜ್ಯದ ರಿಚ್ನೆಸ್, ಅಭಿರುಚಿ, ಸಾಮಥ್ರ್ಯ, ಬುದ್ಧಿವಂತಿಕೆ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತದೆ. ನನಗೆ ಪ್ರತಿ ಬಾರಿ ಹೋದಾಗಲೂ ಕಾಡುವುದು ಅಲ್ಲಿನ ವಿಜಯ ವಿಠ್ಠಲ ದೇವಾಲಯದ ಕಲ್ಲಿನ ಕಂಬಗಳಿಂದ ಹೊಮ್ಮುವ ಸಂಗೀತ, ಅದರ ಹಿಂದಿರುವ ತಂತ್ರಜ್ಞಾನ. ಅವರ ಕಲಾನೈಪುಣ್ಯಕ್ಕೆ, ಕಲಾಪೋಷಣೆಗೆ, ತಂತ್ರಜ್ಞಾನಕ್ಕೆ ನನ್ನದೊಂದು ಹ್ಯಾಟ್ಸಾಫ್ ಹೇಳಲೇಬೇಕು.
ಇಲ್ಲಿ ಲೋಟಸ್ ಮಹಲ್ ಅಂತ ಒಂದಿದೆ. ಅದು ಯಾವಾಗಲೂ ತಂಪಾಗಿರುವಂತಹ ವ್ಯವಸ್ಥೆ ಆಗಲೇ ಇತ್ತಂತೆ. ಅಂದ್ರೆ ಅದನ್ನ ತಂಪಾಗಿರಿಸಲು ಕೊಳವೆಗಳ ಮೂಲಕ ನೀರನ್ನು ಚಾವಣಿಯಲ್ಲಿ ಹರಿಸುತ್ತಿದ್ದರು. ಅಲ್ಲರೀ 14 ನೇ ಶತಮಾನದಲ್ಲೇ ಅಂಥದ್ದೊಂದು ತಂತ್ರಜ್ಞಾನವನ್ನ ಅವರು ರೂಢಿಸಿಕೊಂಡಿದ್ರು ಅಂದ್ರೆ ಅದು ಸಾಮಾನ್ಯಾನಾ? ಅವರ ಮುಂದೆ ನಮ್ಮ ಇವತ್ತಿನ ತಂತ್ರಜ್ಞಾನ ನಥಿಂಗ್ ಅನ್ನಿಸಿಬಿಡುತ್ತೆ. ಅಷ್ಟು ಚಂದನೆಯ ಕಲ್ಲಿನ ರಥ ಸೃಷ್ಟಿಸಲು ಅದೆಷ್ಟು ಶಿಲಿಗಳು ಬೆವರು ಸುರಿಸಿದ್ದರೋ? ಅವರ ತಾಳ್ಮೆ ಎಂಥದೋ? ಆ ವಿರೂಪಾಕ್ಷನೇ ಬಲ್ಲ. ಮೊಗಲರ ದಾಳಿಗೆ ಒಳಗಾಗಿ ಮುಕ್ಕಾಗದಿದ್ದರೆ ಹಂಪಿ ತನ್ನ ಒಡಲಲ್ಲಿ ಅದಿನ್ನೆಂತಹ ಸರ್ವಶ್ರೇಷ್ಠ ಕಲಾಕೃತಿಗಳನ್ನ ಬಚ್ಚಿಟ್ಟುಕೊಂಡಿರುತಿತ್ತೋ, ಅಲ್ವ!
ಇಂಥ ಹಂಪಿ ತುಂಬಾ ಕಿತ್ತು ತಿನ್ನುವವರೇ ತುಂಬಿಕೊಂಡಿದ್ದಾರೆ. ಹಂಪಿ ಬಗ್ಗೆ ನಿಮಗೊಬ್ಬ ಗೈಡ್ ಬೇಕು ಅಂದ್ರೆ ನೀವು ಸಾವಿರಗಟ್ಟಲೇ ಹಣ ಕೊಡಬೇಕು. ಅದೂ ಅವನು ಅದರಲ್ಲಿ ಪ್ರವೀಣನೇ ಅಂದ್ರೆ ನೋ ನೋ. ಅವನು ಹೇಳಿದ್ದನ್ನು ಕೇಳಿಸಿಕೊಂಡು ಸುಮ್ಮನಾಗಬೇಕು. ಕ್ರಾಸ್ ಕ್ವಶ್ಚನ್ ಕೇಳಿದ್ರೆ ಆ ಟಾಪಿಕ್ ಬಿಟ್ಟು ಬೇರೆಲ್ಲ ಹೇಳುತ್ತಾನೆ. ವಿದೇಶಿ ಪ್ರವಾಸಿಗರು ಸಿಕ್ಕರಂತೂ ಅವರನ್ನು ಕಿತ್ತು ತಿನ್ನುವ ಪಡೆಗಳೇ ಇಲ್ಲಿವೆ. ಛದ್ಮವೇಷದಾರಿಗಳಿಂದ ಹಿಡಿದು ಅವರನ್ನು ಓಲೈಸಿ ಹಣ ಕಿತ್ತುಕೊಳ್ಳಲು ಹವಣಿಸುವ ಪಡೆಗಳಿವೆ. ಸಕರ್ಾರ ಕೂಡ ಅಂಥ ಕೇರ್ ತಗೊಂಡಿಲ್ಲ ಅನಿಸುತ್ತೆ. ಅಲ್ಲಿ ಸೆಕ್ಯೂರಿಟಿ ಕೋಣೆ ಅಂತ ಒಂದಿದೆ. ಅದು ತೆಂಗಿನ ಗರಿಯಿಂದ ಮಾಡಿದ್ದು. ಅದರಲ್ಲಿ ಒಬ್ಬ ಪ್ರೈವೇಟ್ ಸೆಕ್ಯೂರಿಟ ಗಾಡರ್್ ತೂಗಡಿಸುತ್ತಾ ಕೂತಿರುತ್ತಾನೆ. ಇಂಥ ಸೆಕ್ಯೂರಿಟಿ ಇಟ್ಟುಕೊಂಡು ಯಾವ ಟೆರ್ರರಿಸ್ಟ್ಗಳನ್ನ ತಡೆಯಲು ಸಾಧ್ಯ?
ಹಾಗೆ ನೋಡಿದ್ರೆ ಹಂಪಿಯನ್ನು ಇನ್ನೂ ಅಚ್ಚುಕಟ್ಟಾಗಿ ಸಂರಕ್ಷಿಸಬಹುದಿತ್ತು. ಬರುವ ಪ್ರವಾಸಿಗರಿಗೊಂದು ಕಮ್ಫಟರ್್ ಕೊಡಬಹುದಿತ್ತು. ಅವೆರಡೂ ಆಗಿಲ್ಲ ಅಲ್ಲಿ ಬಿಡಿ.
ಹಾಗಿದ್ರೂ ಹಂಪಿ ನೋಡಲೇಬೇಕು. ಅಲ್ಲಿನ ಗತ ವೈಭವವನ್ನ ಕಣ್ತುಂಬಿಕೊಳ್ಳಲೇಬೇಕು. ಅದಕ್ಕಾದ್ರೂ ಒಮ್ಮೆ ಹೋಗಿ ಬನ್ನಿ.

Wednesday, November 26, 2008

ಜರ್ನಿ ಟು ಹಂಪಿ












ಅವತ್ತು ಶುಕ್ರವಾರ. ಸಮಯ ರಾತ್ರಿ ಹತ್ತೂವರೆ.
ಹನ್ನೊಂದು ಜನರ ಪುಂಡ ಪಡೆಯನ್ನು ತುಂಬಿಕೊಂಡ ಹಂಪಿ ಎಕ್ಸ್ಪ್ರೆಸ್ ಹೊಸಪೇಟೆಯೆಡೆಗೆ ಶಿಳ್ಳೆ ಹಾಕುತ್ತಾ ಸಾಗಿತ್ತು. ನಮ್ಮ ಮೈಮನದ ತುಂಬೆಲ್ಲ ಜೋಷ್ ಜೋಷ್ ಮತ್ತು ಸಿಫರ್್ ಜೋಷ್. ಬೆನ್ನಿಗಿದ್ದ ಬ್ಯಾಗುಗಳನ್ನು ಒಗೆದು ಎಲ್ಲರಂತೆ ಬತರ್್ ಹತ್ತಿ ಮಲಗಿ ಗೊರಕೆ ಹೊಡೆಯಲಿಲ್ಲ. ರಾತ್ರಿ ಒಂದರ ತನಕ ಹರಟೆ, ಜೋಕು, ಅಂತ್ಯಾಕ್ಷರಿ ಎಲ್ಲಾ ನಿರಾತಂಕವಾಗಿ ಸಾಗಿತ್ತು. ಯಾರೋ ರಿಟೈಡರ್್ ಆಫೀಸರ್ ಒಬ್ಬರು ನಮ್ಮ ನಡುವೆ ತಗಲಿಹಾಕಿಕೊಂಡ್ರು. ತೋಳಗಳ ನಡುವೆ ಕುರಿ ತಗಲಿಬಿದ್ದಂಗಾಗಿತ್ತು ಅವರ ಸ್ಥಿತಿ. ಅವರೇನೂ ಕಡಿಮೆ ಇಲ್ಲ ಬಿಡಿ. ಮಾತು ಅಂದ್ರೆ ಸಾಕು ಸೇರಿಗೆ ಸವ್ವಾ ಸೇರು ಅಂತಾರಲ್ಲ ಅಂಥವರು. ಕೊನೆಗೆ ನಮ್ಮ ಚೀಕಲಾ, ಸರ್ ಮಲಗಿ ನೀವು. ವಯಸ್ಸಾಗಿದೆ. ಜಾಸ್ತಿ ಮಾತಾಡಿದ್ರೆ ಹೃದಯ ಬೇರೆ ನಿಮಗೆ ಇರೋದ್ರಿಂದ ತೊಂದ್ರೆ ಆದೀತು ಅಂತ ಮಲಗಿಸಿದಳು. ಅವರು ಆಗಲೂ ನೀವೆಲ್ಲ ಜರ್ನಲಿಸ್ಟ್ ಅಂದ್ರಲ್ಲ ಪಗಾರ ಜೋರೈತೇನು ಅಂದ್ರು. ಭಾಳ ಕೊಡ್ತೇವಿ ಅಂದ್ರು. ನಾವೇ ಸ್ವಲ್ಪ ಕಡಿಮೆ ಇಸಿಕೊಂತಾ ಇದೀವಿ ಅಂದ್ವಿ. ಅಷ್ಟರಲ್ಲಿ ಯಾರೋ ಪ್ರಶ್ನೆ ಹಾಕಿದ್ರು. ಸರ್ ಈ ರವಿ ಅಜ್ಜೀಪುರಗೆ ವಯಸ್ಸೆಷ್ಟು ಗೊತ್ತಾ ಅಂತ. ಅವರು ಬಹಳ ಏನಿಲ್ಲ ಬಿಡ್ರಿ ಮೂವತ್ತು ಇರಬಹುದು ಅಂದ್ರು. ಸರ್ ನನಗೆ ಅಂತ ಚುಪ್ಪಿ. ಸರ್ ನನಗೆ ಅಂತ ಸುಮಾ, ಕೋಲಾ. ಎಲ್ಲಾ ಕಿತ್ಕೊಂಡು ತಿನ್ನೋದಕ್ಕೆ ಶುರುಮಾಡಿದ್ರು. ಕೊನೆಗೆ ಸರ್ ನಿಮಗೆ ಅಂದ್ವಿ. ರಿಟೈಡರ್್ ಆಯ್ತಲ್ಲ ಅಂತ ಮುಖದ ತುಂಬಾ ಬೆಡ್ಶಿಟ್ ಎಳೆದುಕೊಂಡು ಮಲಗಿದ್ರು. ಮಲಗುವಾಗ ಲಗ್ಗೇಜ್ ಜೋಪಾನ ಅಂತ ಹೇಳೋದನ್ನ ಅವರು ಮರೆಯಲಿಲ್ಲ. ಹಾಗಂದ ನಿಮಿಷಕ್ಕೆ ಅವರದು ಒಂದು ಫುಲ್ ಗೊರಕೆ.
ಬೆಳಿಗ್ಗೆ ನಾನು ಕಣ್ಣುಬಿಟ್ಟಾಗ ಅವರು ಆಗಲೇ ಇಳಿದುಹೋಗಿದ್ರು.
ಹೊಸಪೇಟೆಯ ಶಾನುಭಾಗ ಲಾಡ್ಜ್ನಲ್ಲಿ ನಮ್ ವಾಸ್ತವ್ಯ. ಚೆನ್ನಾಗಿ ಮಿಂದು, ತಿಂದು ಹಂಪಿಕಡೆ ನಡೆದವು. ಅವತ್ತು ಶನಿವಾರ ಪೂತರ್ಿ ಹಂಪಿಯ ನೆಲದಲ್ಲಿ ನಮ್ಮ ಹೆಜ್ಜೆಗಳು ಹರಿದಾಡಿದ್ದವು. ಈ ಮೊದಲೂ ನಾನೂ ಹಂಪಿಗೆ ಎರಡುಮೂರು ಸಲ ಹೋಗಿದ್ದಿದೆ. ಪ್ರತಿ ಸಲ ಹೋದಾಗಲೂ ಅದು ಹೊಸದೇ ಅನಿಸುತ್ತೆ. ಅರೆ ಈ ಕಲ್ಲು ಇಲ್ಲಿತ್ತಾ ಅನಿಸಿಬಿಡುತ್ತೆ. ಹಂಪಿ ತುಂಬಾ ಹರಡಿಕೊಂಡಿರುವ ಕಲ್ಲುಗಳನ್ನು ನೋಡಿದ್ರೆ ಅದೆಲ್ಲ ಒಂದೊಂದು ದೇಗುಲವೇನೋ ಅನ್ನುವಂತೆ ಭಾಸವಾಗುತ್ತೆ. ಅಷ್ಟರಮಟ್ಟಿಗೆ ಹಂಪಿ ದ ಗ್ರೇಟ್ ಹೆರಿಟೇಜ್ ಸೆಂಟರ್. ಕಡಲೆಕಾಳು ಗಣಪ, ಸಾಸಿವೆಕಾಳು ಗಣಪದಿಂದ ಹಿಡಿದು, ರಾಣಿಯರ ಸ್ನಾನಗೃಹ, ಲೋಟಸ್ ಮಹಲ್, ಮಹಾನವಮಿ ದಿಬ್ಬ, ಪುಷ್ಕರಣಿ. ಅರೆಬರೆ ಅರಮನೆಗಳ ಅವಶೇಷ, ವೀಕ್ಷಣಾ ಗೋಪುರ, ಗಜಶಾಲೆ, ವಜ್ರ ವೈಢೂರ್ಯವನ್ನ ಮಾರುತ್ತಿದ್ದರೆನ್ನಲಾದ ಬೀದಿ, ಕಲ್ಲಿನ ರಥ, ಓಹ್ ಒಂದಾ ಎರಡಾ. ಹಂಪಿಯ ವೈಭವವೇ ಅಂಥದು ಬಿಡಿ. ಅದನ್ನು ಕಣ್ತುಂಬಿಕೊಳ್ಳುವ ಅನುಭವವೇ ಬೇರೆ. ಆದ್ರೆ ಅಷ್ಟು ಮೆರೆದಿದ್ದ ಒಂದು ಸಾಮ್ರಾಜ್ಯ ಹೇಗೆ ಕಾಲನ ಕಾಲಬುಡದಲ್ಲಿ ಮಂಡಿಯೂರಿಕೊಂಡು ಬಿದ್ದೋಗಿದೆ ಅಲ್ವ! ಇನ್ನು ನಾವ್ಯಾವ ಲೆಕ್ಕ!
ನಮ್ಮ ಕುಮಾರಸ್ವಾಮಿ ಮಹಾನವಮಿ ದಿಬ್ಬದ ಮೇಲೆ ರಾಜಗಾಂಭೀರ್ಯದಲ್ಲಿ ಕುಳಿತು ಯಾರಲ್ಲಿ ನರ್ತಕಿಯನ್ನು ಬರಹೇಳು ಅಂದಿದ್ದು ಅದನ್ನು ಕೇಳಿಸಿಕೊಂಡ ಚೀಕಲಾ ಅಪ್ಪಣೆ ಪ್ರಭು ಅಂದಿದ್ದು, ಮಂತ್ರಿಯಾಗಿ ರವಿರಾಜ್ ಗಲಗಲಿ ಪಕ್ಕದಲ್ಲೆ ಆಸೀನನಾಗಿದ್ದು, ಅದೆಲ್ಲಿಂದಲೋ ದಂಡೆತ್ತಿ ಬಂದ ಶೂರನಂತೆ ಶ್ಯಾಮ್ ಬಂದು ಮಹಾರಾಜರೇ ನೀವು ಬಂದ ರೂಟ್ ಸರಿಗಿಲ್ಲ ಅಂತ ಅಬ್ಬರಿಸಿದ್ದು, ್ಲ ಕಣ್ಣಿಗೆ ಇಪ್ಪತ್ತು ರೂಪಾಯಿನ ಕನ್ನಡಕ ಹಾಕಿಕೊಂಡು ಏಯ್ ಫೊಟೋ ತೆಗಿಯೇ ಚುಪ್ಪಿ ಅಂತ ಸುಮ ಅಬ್ಬರಿಸಿದ್ದು ಎಲ್ಲಾ ಸೂಪರ್. ನನಗೆ ಅಲ್ಲಿ ಸೋಜಿಗವೆನಿಸಿದ್ದು ಕೇವಲ ಬೇಸ್ಮೆಂಟ್ ಮಾತ್ರ ಉಳಿದಿರುವ ಅರಮನೆಯ ಅವಶéೇಷಗಳು. ಅದನ್ನೆಲ್ಲ ಮರದಲ್ಲಿ ಕಟ್ಟಿದ್ದರು. ಹಾಗಾಗಿ ಎಲ್ಲಾ ನಾಶವಾಗಿ ಈಗ ಕೇವಲ ಪಳೆಯುಳಿಕೆ ಮಾತ್ರ ಉಳಿದಿದೆ ಅಂದ ನಮ್ಮ ಗೈಡ್. ಈಗೈಡ್ದು ಒಂದು ಕಥೆ. ಸುಮ್ಮನೆ ಅವನು ಹೇಳಿದ್ದನ್ನೆಲ್ಲ ನಾವು ಕೇಳಿಸಿಕೊಳ್ಳಬೇಕು ಅಷ್ಟೆ. ಮಧ್ಯ ಬಾಯಿ ಹಾಕಬಾರದು. ಆದ್ರೂ ನಮ್ಮ ಗಲಗಲಿ ಬಿಡುತ್ತಿರಲಿಲ್ಲ. ಛಲ ಬಿಡದ ತ್ರಿವಕ್ರಮನಂತೆ ಅದ್ಯಾಕೆ ಹಿಂಗೆ ಇದ್ಯಾಕೆ ಹಿಂಗೆ ಅಂತ ಕೇಳುತ್ತಲೇ ಇದ್ದರು. ನಮ್ಮ ಇಡೀ ಟೀಮಿಗೆ ಹುರುಪು ತುಂಬಿದ್ದು ಸಾಧು ಮಗ. ಅವನು ಒಂದುಕ್ಷಣಕ್ಕೂ ಅತ್ತದ್ದು ನಾನು ನೋಡಿಲ್ಲ. ಮರಿ ಸೂಪರ್ಮ್ಯಾನ್ ಥರ ಎಲ್ಲೆಂದರಲ್ಲಿ ಸೊಂಯ್ ಟಪಕ್ ಅಂತ ನುಗ್ಗುತ್ತಲೇ ಇದ್ದ.
ಹಂಪಿಗೆ ಎಂಟ್ರಿ ಆದ ಕೂಡಲೇ ಒಂದಷ್ಟು ಸ್ವಾಮೀಜಿಗಳು ಎದುರಿಗೆ ಸಿಕ್ಕರು. ಅವರು ನಿಜಕ್ಕೂ ಸ್ವಾಮೀಜಿಗಳಾ ಅಂತ ನೋಡಿದ್ರೆ ಜಸ್ಟ್ ವೇಷದಾರಿಗಳು ಅಷ್ಟೆ. ವಿದೇಶಿಯರನ್ನ ನೋಡಿದ ತಕ್ಷಣ ಆಶೀವರ್ಾದ ಮಾಡುವ ಭಂಗಿಯಲ್ಲಿ ಸಾಲಾಗಿ ನಿಂತುಕೊಂಡುಬಿಡೋರು. ವಿದೇಶಿಯರಿಗೂ ಇವರು ನಮ್ಮನ್ನ ಬಕ್ರ ಮಾಡುತ್ತಾರೆ ಅಂತ ಗೊತ್ತಾಗಿದೆಯಾದ್ದರಿಂದ ಅವರು ಕ್ಯಾರೆ ಅಂತ ಕೂಡ ನೋಡುತ್ತಿರಲಿಲ್ಲ. ನಾನು ಸುಮಾ ಚುಪ್ಪಿ ಒಟ್ಟಿಗೆ ಹೋಗುತ್ತಿದ್ದದ್ದನ್ನು ನೋಡಿ ಒಬ್ಬಾಕೆ ಸರ್ರ ಬಾಳೆ ಹಣ್ಣು ತಗೋರಿ. ಆನೆಗೆ ಹಾಕಿ ಅಂದಳು. ನಮ್ಮಲ್ಲೇ ಎರಡು ಆನೆಗಳಿವೆ ಬೇಡ ಅಂದೆ ನಾನು. ಕೊನೆಗೆ ಒಂದು ಲಿಂಬು ಸೋಡಾ ಕುಡಿದು ಜಾಗ ಖಾಲಿ ಮಾಡಿದ್ವಿ. ಚೌಕಾಸಿ ಮಾಡಿ ಬ್ಯಾಗ್ ತೊಗೊಂಡ್ವಿ. ಆ ದಟ್ಟ ಬಣ್ಣದ ಬ್ಯಾಗಿನ ಮೇಲೆಲ್ಲ ಪುಟ್ಟ ಪುಟ್ಟ ಕನ್ನಡಿಗಳ ಮಿಣುಕು.
ಅವತ್ತು ರಾತ್ರಿ ಕುಮಾರ ಕಂಠೀರವ ಮತ್ತು ನಮ್ಮ ರೋಹಿತನ ಹುಟ್ಟಿದ ಹಬ್ಬ. ಇನ್ನುಮೇಲಾದ್ರೂ ಸ್ನಾನ ಮಾಡಿ, ದಿನಕ್ಕೊಮ್ಮೆ ಬಟ್ಟೆಬದಲಾಯಿಸಿ, ಬ್ರಷ್ ಬೇಡ ಕಲ್ಲಿನಿಂದಲೇ ಮೈ ತಿಕ್ಕಿಕೊಳ್ಳಿ. ಆಗಲಾದ್ರೂ ಚೂರು ಕೆಂಪಾಗಿ ಅಂತ ಅವರಿಗೆ ಗೈಡ್ ಮಾಡಿದ್ವಿ. ಗೆಳತಿಯರೆಲ್ಲ ಖುಷಿಗೆ ಕ್ಯಾಟ್ವಾಕ್ ಮಾಡಿ ಎಂಜಾಯ್ ಮಾಡಿದ್ರು. ಜಡ್ಜ್ ಆಗಿದ್ದ ನಾನು ಕೊನೆಗೆ ಯಾರಿಗೂ ಮಿಸ್ ಹೊಸಪೇಟ್ ಅಂತ ಕಿರೀಟ ತೊಡಿಸದೆ ಎಸ್ಕೇಪ್ ಆಗಿಬಿಟ್ಟೆ. ಕುಮಾರಂಗೆ, ರೋಹಿತ್ಗೆ ಮುಖಕ್ಕೆಲ್ಲ ಯರ್ರಾಬಿರ್ರೀ ಕ್ರೀಮ್ ಹಚ್ಚಿದ್ವಿ, ಚೀಕಲಾ ಭಾಷಣ ಮಾಡಿದ್ಲು, ಚುಪ್ಪಿ ಫೋಟೋ ತೆಗೆದ್ಲು. ಆಮೇಲೆ ಗಿಫ್ಟ್ ಕೊಡುವ ಸಮಾರಂಭ. ಶಟರ್್ ಒಂದನ್ನ ಗಿಫ್ಟ್ ಅಂತ ಕೊಟ್ಟಿದ್ರು. ಅದನ್ನ ಬೆಳಿಗ್ಗೆ ಎದ್ದ ಕುಮಾರ ಹಾಕ್ಕೋಳ್ಳ ಅಂದ. ಹಾಕ್ಕೋ ಮಾರಾಯ ನಿನಗೇ ಕೊಟ್ಟಿರೋದು ಅಂದೆ. ಹಾಕಿಕೊಂಡು ನಿಂತ. ಸೇಮ್ ಬ್ಲೌಸ್ ಇದ್ದಂಗಿತ್ತು. ಇದನ್ನ ಯಾರಿಗಾದ್ರೂ ಮಕ್ಕಳಿಗೆ ದಾನ ಅಂತ ಮಾಡಿಬಿಡುತ್ತೀನಿ ಬಾಸ್ ಅಂತ ಅವಾಗಲೇ ಅವನು ಪ್ರತಿಜ್ಞೆ ಮಾಡಿದ್ದು.
ಉಫ್ ... ಇಷ್ಟಾಯಿತಲ್ಲ ಗದಗಿಗೆ ಹೋಗೋಣ ಅಂತ ರೈಲ್ವೆ ಸ್ಟೇಷನ್ಗೋದ್ರೆ ನಮ್ಮ ಸಾಧು ಸೇವಿಂಗ್ ಮಾಡಿಸ್ಕೊಂಡು ಬರ್ತೀನಿ ಅಂತ ಹೋದೋರು ಪತ್ತೇನೆ ಇಲ್ಲ. ಸೋ ಟ್ರೈನ್ ಮಿಸ್. ಆಮೇಲೆ ನಾವು ಅವರ ಮೇಲೆ ಹದ್ದಿನ ಕಣ್ಣಿಟ್ಟಿದ್ವಿ. ಮತ್ತೆಲ್ಲಾದ್ರೂ ಕಟಿಂಗ್ ಅಂತ ಹೊರಟೋದ್ರೆ ಏನು ಮಾಡೋದು? ಸರಿ ಗದಗ ಟ್ರೈನ್ ಬಂತು. ಎಲ್ಲಾ ಹತ್ತೋದಕ್ಕೆ ಅಂತ ಹೋದ್ವಿ. ಆದ್ರೆ ಯಾರೂ ಹತ್ತಲಿಲ್ಲ. ಹತ್ತಿದವರು ಗಲಗಲಿ ಮಾತ್ರ. ನಾವೆಲ್ಲ ಅಲ್ಲೇ ರೈಲ್ವೇಸ್ಟೇಷನ್ನಲ್ಲಿ ಗಡದ್ದಾಗಿ ಇಡ್ಲಿ ವಡೆ ತಿಂದು ಇನ್ನೊಂದು ಟ್ರೈನ್ ಹತ್ತಿದ್ವಿ.
ಗದಗಿಗೆ ಹೋಗಿ ಅಲ್ಲಿ ಶಿರಹಟ್ಟಿ ತಲಪಿದ್ರೆ ನಮ್ಮ ಸಂಗಮೇಶ ಮೆಣಸಿನಕಾಯಿಯ ಮದುವೆ. ನಿಜ್ಜ ಹೇಳಬೇಕು ಅಂದ್ರೆ ಈ ಮದುವೆಗೆ ಅಂತಾನೆ ನಾವು ಬಂದಿದ್ದು. ಅವರು ನೋಡಿದ್ರೆ ತಲೆಗೆ ಕಿರೀಟ ಹಾಕ್ಕೊಂಡು ನಿಂತಿದ್ರು. ಎಲ್ಲರೂ ವಿಷ್ ಮಾಡಿ ಉಪ್ಪಿಟ್ಟು, ಅವಲಕ್ಕಿ ತಿಂದು ಮುಖಗಿಕ ತೊಳೆದು ರಿಸಪ್ಷನ್ಗೆ ಅಂತ ಹೋದ್ರೆ ಫುಲ್ ಹಾಡು.
ಚಿತ್ರಾನ್ನ ಚಿತ್ರಾನ್ನ ಚಿತ್ರ ಚಿತ್ರ ಚಿತ್ರಾನ್ನ ಚಿತ್ರಾನ್ನ
ನಾನಂತೂ ಬಿದ್ದು ಬಿದ್ದು ನಕ್ಕೆ. ಬೇರೆ ಯಾರ್ಯಾರು ನಕ್ಕರೋ ಗೊತ್ತಾಗಲಿಲ್ಲ.
ನಮ್ಮ ಚುಪ್ಪಿ ಕೈಯಲ್ಲಿದ್ದ ಕ್ಯಾಮೆರಾ ನೋಡಿ ಪುಟ್ಟ ಪುಟ್ಟ ಹುಡುಗ್ರು ನಂದೂ ಒಂದು ಪೋಟೋ ತೆಗಿತಾಳೇನೋ ಚೆಲುವೆ ಅಂತ ಚೇರನ್ನೆಲ್ಲ ತಲೆ ಮೇಲೆ ಹೊತ್ಕೊಂಡು ಕುಣಿದ್ವು. ಪಲ್ಟಿ ಹೊಡೆದ್ವು, ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ್ವು, ಕುಮಾರ ತಡಕೊಳಾಕೆ ಆಯ್ತಾ ಇಲ್ಲ ಬಾಸ್ ಎರಡೇ ಎರಡು ಸ್ಟೆಪ್ ಹಾಕ್ಲಾ ಅಂದ. ಬೇಡ ಸುಮ್ನಿರೋ ಇದು ಮದ್ವೆ ಸಮಾರಂಭ. ಎಲ್ಲರೂ ಓಡಿಹೋದ್ರೆ ಏನು ಗತಿ ಅಂದೆ. ಪಕ್ಕದಲ್ಲಿ ಕುಳಿತಿದ್ದ ಚೀಕಲಾ ಕಿಸಕ್ಕನೆ ನಕ್ಕಳು.
ಆಮೇಲೆ ಅಲ್ಲಿಂದ ಹೊರಟು ಹುಬ್ಬಳ್ಳಿ ಸೇರಿ ಅಲ್ಲಿ ಗಿರಮಿಟ್ಟ್ ತಿಂದ್ವಿ. ಅದೆಂಥದೂ ಜ್ಯೂಸ್ ಕುಡಿಸಿದ್ರು. ನಮ್ಮ ಕುಮಾರ ಅದನ್ನು ಕುಡಿದು ಕುಡಿದವನ ಥರ ಆ್ಯಕ್ಟ್ ಮಾಡಿ ಹೆಂಗೆ ಪರವಾಗಿಲ್ಲವಾ ಬಾಸ್ ಅಂದ. ಆಮೇಲೆ ಊಟ. ಮತ್ತೆ ಟ್ರೈನ್ಗೆ ಗಾಳ. ಆದ್ರೆ ನಮ್ಮದು ವೇಯಿಟಿಂಗ್ ಲಿಸ್ಟ್ನಿಂದ ಆಚೆ ಬರಲೇ ಇಲ್ಲ. ಇದ್ಯಾಕೋ ಸರಿಗಿಲ್ಲ ಅಂತ ಟ್ರೈನ್ ಕ್ಯಾನ್ಸಲ್ ಮಾಡಿಸಿ ಬಸ್ ಹತ್ತಿ ಬೆಂಗಳೂರು ತಲಪಿದ್ವಿ.
ಆಮೇಲೆ ಎಲ್ಲರದೂ ಅವರವರ ಪಾಡು. ಬದುಕು ಒನ್ಸ್ ಎಗೇನ್ ಬಿಸಿ ಆಗಿದೆ.
ಲಾಸ್ಟ್ ನೆನಪು: ಟ್ರಿಪ್ಗೆ ಬಂದು ಎರ್ರಾಬಿರ್ರೀ ಎಂಜಾಯ್ ಮಾಡಿದ, ಎಂಜಾಯೇ ಮಾಡದ ಎಲ್ಲರಿಗೂ ನನ್ನ ಥ್ಯಾಂಕ್ಸ್.
ಅಂದಹಾಗೆ ಮುಂದಿನ ಟ್ರಿಪ್ ಎಲ್ಲಿಗೆ?

>>> ನಮ್ಮ ಕೆಟ್ಟ ಮುಖಗಳ ಜೊತೆಗೆ ಈ ಸುಂದರವಾದ ಫೋಟೋಗಳನ್ನೆಲ್ಲಾ ತೆಗೆದಿದ್ದು ಸುಪ್ರಭಾ.

Thursday, November 13, 2008

ಕೆಪ್ಪ ಅನ್ನೋ ಮೇಸ್ಟ್ರು ಮತ್ತು ಸೀನಿಯರ್ಸ್- ಸ್ಕೂಲ್ ಪುರಾಣ 2

ನಮಗೊಬ್ಬ ಮೇಸ್ಟ್ರು ಇದ್ದರು. ದಪ್ಪಕ್ಕೆ, ಕುಳ್ಳಕ್ಕೆ. ಥೇಟ್ ಗುಜ್ಜಾರ್ ಕಾಟರ್ೂನ್ ಥರ ಅಂತಿಟ್ಟುಕೊಳ್ಳಿ. ಜೀವಶಾಸ್ತ್ರ ತಗೋಳೋರು. ನಾವೆಲ್ಲ ಒಂದಿಷ್ಟು ಜನ ಜೀವಶಾಸ್ತ್ರವನ್ನ ಜೀವ ಹಿಂಡೋಶಾಸ್ತ್ರ ಅಂತಲೇ ಭಾವಿಸಿದ್ದ ಕಾಲ ಅದು. ಗಣಿತ, ವಿಜ್ಞಾನ ಅಂದ್ರೆ ಅದೆಂಥದೋ ಭಯ ನಮಗೆ.
ಈ ಮೇಸ್ಟ್ರನ್ನ ನಮ್ಮ ಸೀನಿಯರ್ಸ್ ಕೆಪ್ಪ ಅಂತ ಕರೀತಿದ್ರು. ಕೆಪ್ಪ ಅಂದ್ರೆ ಒಂದರ್ಥದಲ್ಲಿ ಕಿವುಡ ಅಂತಲೂ ಆಗುತ್ತೆ. ಆದ್ರೆ ಆ ಮಾಸ್ತರಿಗೆ ಕಿವಿ ಚೆನ್ನಾಗೆ ಕೇಳಿಸ್ತಿತ್ತು. ಕೆಪ್ಪ ಅಂತ ಕರೆದು ಕರೆದು ಅವರ ಒರಿಜಿನಲ್ ಹೆಸರೇ ನಮಗೆ ಮರೆತುಹೋಗಿತ್ತು. ನಡೆದು ಹೋಗುತ್ತಿದ್ದವರ ಎದುರಾಎದುರಿಗೆ ನಿಂತು ಏನೋ ಕೆಪ್ಪ ಅಂತ ಕರೆದುಬಿಡೋದಕ್ಕೂ ಧಮ್ಮು ಬೇಕು ಬಿಡಿ. ಆಗತಾನೆ ಹಳ್ಳಿಯಿಂದ ಗುಳೇ ಎದ್ದುಬಂದಿದ್ದ ನಮಗೆ ಇದೆಲ್ಲ ಆಶ್ಚರ್ಯ, ದಿಗ್ಭ್ರಮೆ ಹುಟ್ಟಿಸುತ್ತಿತ್ತು. ಮೇಸ್ಟ್ರು ಅಂದ್ರೆ ದೇವರ ಸಮಾನ ಅನ್ನೋ ನಮ್ಮ ನಂಬಿಕೆಗೆ ಕ್ಷಣ ಮಾತ್ರದಲ್ಲಿ ಎಳ್ಳುನೀರು ಬಿಟ್ಟವರು ನಮ್ಮ ಸೀನಿಯರ್ಗಳು. ಅವರಿಗೆ ಮಾಸ್ತರು ಅಂದ್ರೆ ಏನೇನೇನೂ ಅಲ್ಲ. ಮೊದಲೇ ಹೇಳಿದಂಗೆ ಹೊಡೆಯೋದಕ್ಕೆ ಬಂದ್ರೆ ಕೋಲು ಕಿತ್ತಿಕೊಳ್ಳೋದು, ಕ್ಲಾಸಿನಲ್ಲೇ ಪಟಾಕಿ ಹೊಡೆಯೋದು, ಬುಧವಾರ ಶನಿವಾರ ಆದ್ರೆ ವೈಟ್ ಅಂಡ್ ವೈಟ್ ಹಾಕ್ಕೋಬೇಕಲ್ಲ ಅವತ್ತು ಬಿಳಿ ಪಂಚೆ ಬಿಳಿ ಶಟರ್್ ಹಾಕ್ಕೊಂಡು ಬರೋದು, ಪ್ರೇಯರ್ ಮಾಡಬೇಕಾದ್ರೆ ಎಲ್ಲರೂ ಮುಗಿಸಿದ್ರೆ ಒಬ್ಬ ಮಾತ್ರ ಹಾಡುತ್ತಲೇ ಇರೋದು... ಒಂದಾ ಎರಡಾ ಕಿತಾಪತಿ. ನನಗಂತೂ ನೋಡಿ ನೋಡಿ ಗಾಬರಿಯಾಗುತಿತ್ತು. ಹಳ್ಳಿಯಿಂದ ಬಂದವನು ನೋಡಿ. ಅಲ್ಲಿ ಸೀನಿಯರ್ಗಳಂತೂ ಕಡಿದರೆ ನಾಲ್ಕು ಊರಿಗೆ ಊಟಹಾಕಬಹುದು ಹಂಗಿದ್ರು. ಜೊತೆಗೆ ಒಬ್ಬೊಬ್ಬರದೂ ಒಂದೊಂದು ಗ್ಯಾಂಗ್. ನೋಡಿದ್ರೆ ಸಾಕು ಯಾಕೋ ಗುರಾಯಿಸ್ತೀಯ ಅಂತ ಒದೆ ಬೀಳುತ್ತಿತ್ತು. ಅಂಥದರಲ್ಲಿ ನಾನೋ ನರಪೇತಲ ನಾರಾಯಣನಂತಿದ್ದವ. ಮೈಯಲ್ಲಿ ಮಾಂಸವೇ ಇರಲಿಲ್ಲ. ಇನ್ನು ಧೈರ್ಯ ಎಲ್ಲಿಂದ ಬರಬೇಕು.
ಇಂತಿಪ್ಪ ಕೆಪ್ಪನ ಮೇಲೆ ನಡೆಯುತ್ತಿದ್ದ ಆಕ್ರಮಣಗಳು ಒಂದೆರಡಲ್ಲ. ಅವರು ಬರಲಿ ಹೋಗಲಿ ಕೂರಲಿ ಸದಾ ಏನಾದರೊಂದು ಕಿತಾಪತಿ ಮಾಡೋದಕ್ಕೆ ಅಂತಾನೆ ಕಾಯ್ದುಕೊಂಡು ಒಂದು ಪಡೆ ನಿಂತಿರುತ್ತಿತ್ತು.
ಬೆಳಿಗ್ಗೆ ಸ್ಕೂಲ್ ಶುರುವಾಗುವ ವೇಳೆಗೆ ಅವರು ತಮ್ಮ ಪುಟ್ಟ ಬೈಕ್ನಲ್ಲಿ ಬಂದಿಳಿಯೋರು. ಅದೆಂಥದೋ ಮಾಡೆಲ್ ಬೈಕ್ ಅದು. ಎತ್ತರವೂ ಇಲ್ಲ, ಉದ್ದಾನೂ ಇಲ್ಲ. ನೋಡೋದಕ್ಕೆ ಚೆನ್ನಾಗೂ ಇರಲಿಲ್ಲ. ಆ ಥರದ ಬೈಕ್ ಅದೊಂದೇ ನಾನು ನೋಡಿದ್ದು. ಅದರ ಸ್ಪೀಡ್ ಹೇಗೆಂದ್ರೆ ನಾವೆಲ್ಲ ಚೂರು ಚೂರೇ ಜೋರಾಗಿ ನಡೆಕೊಂಡು ಹೋದ್ರೆ ಹೆಂಗಿರುತ್ತೋ ಹಂಗೆ.
ಅಂತ ಬೈಕಲ್ಲಿ ಅವರು ಬುಡುಬುಡು ಅಂತ ಬಂದು ಇನ್ನೇನು ಗೇಟ್ ಒಳಗೆ ನುಗ್ಗಬೇಕು ಆಗಲೇ ಅವಿತುಕೊಂಡು ನಿಂತಿದ್ದ ಪುಂಡರು ಕೆಪ್ಪ ಅವರ ತಲೆಮೇಲೆ ಫಟ್ ಅಂತ ಹೊಡೆದುಬಿಡೋರು. ಹಿಂದಿನಿಂದಲೆ ಕೆಪ್ಪ ಅನ್ನೋ ಒಕ್ಕೊರಲ ಕೂಗು. ಅವರು ಯಾವೊನೋ ಅವನು ಅಂತ ಇಳಿದು ನಿಂತರೆ ಎಲ್ಲಾ ಪರಾರಿ.
ಎಷ್ಟೋ ಸಲ ಕ್ರಿಕೆಟ್ ಆಡುತ್ತಿದ್ದಾಗ ಅವರು ಬರ್ತಾರೆ ಅಂದ್ರೆ ಅವರು ಬರುವ ಕಡೆಗೆ ಬ್ಯಾಟ್ ಬೀಸೋರು. ಬಾಲ್ ಎಸೆಯೋ ನೆಪದಲ್ಲಿ ಅವರ ಬೆನ್ನಿಗೆ ಹೊಡೆಯೋದು ನಡೀತಾ ಇತ್ತು. ಅವರು ಸ್ಟಾಫ್ ರೂಮಿನಲ್ಲಿ ಕೂತಿದ್ರೆ ಕಿಟಕಿಯಲ್ಲಿ ಹೋಗಿ ಕೆಪ್ಪ ಅಂತ ಕಿರುಚಿಬಿಡೋರು. ಪಾಪ ಅವರಿಗೆ ಎಂಥ ಮುಜುಗರ ಆಗುತ್ತಿತ್ತೋ ಏನೋ! ಕ್ಲಾಸಿಗೆ ಬಂದಾಗಲೆಲ್ಲ ಗರಮ್ ಆಗೇ ಇರುತ್ತಿದ್ದರು.
ಒಂದ್ಸಲ ಅವರಿಗೆ ರೋಸಿಹೋಗಿತ್ತು ಅನಿಸುತ್ತೆ. ಯಾರ್ಯಾರು ತಲೆ ಮೇಲೆ ಹೊಡೀತಾರೆ, ಕೆಪ್ಪ ಅಂತ ಕೂಗ್ತಾರೆ ಅವರ ಹೆಸರನ್ನೆಲ್ಲ ಪಟ್ಟಿ ಮಾಡಿ ಹೆಡ್ ಮೇಡಮ್ಗೆ ಕೊಟ್ಟುಬಿಟ್ಟರು. ನಿಮ್ಮ ಅಪ್ಪ-ಅಮ್ಮನ್ನ ಕರ್ಕೊಂಡು ಬನ್ನಿ ಇಲ್ಲ ಅಂದ್ರೆ ಎಕ್ಸಾಮ್ಗೆ ಕೂರ್ಸೊಲ್ಲ ಅಂತ ಅವರು ರೋಫ್ ಹಾಕಿ ಕಳಿಸಿಬಿಟ್ಟರು.
ಈ ಸೀನಿಯರ್ರುಗಳೆಲ್ಲ ಸೇರಿ ತಪ್ಪಾಯ್ತು. ಇನ್ನುಮೇಲೆ ಹಿಂಗಿಂಗೆಲ್ಲ ಮಾಡೋಲ್ಲ ಅಂತ ಬರೆದುಕೊಟ್ರು. ಹೆಡ್ ಮೇಡಮ್ಗೆ ಸಿಟ್ಟು ಬಂತು. ಹಿಂಗ್ ಮಾಡೊಲ್ಲ ಅಂದ್ರೆ ಬೇರೆ ಥರ ಮಾಡ್ತೀರ ಈಡಿಯಟ್ಸ್. ಒದ್ದು ಪೊಲೀಸ್ ಸ್ಟೇಷನ್ಗೆ ಹಾಕಿಸ್ ಬಿಡ್ತೀನಿ. ಮೇಸ್ಟ್ರು ಅಂದ್ರೆ ಏನಂದುಕೊಂಡಿದೀರೋ ಮುಠ್ಠಾಳರಾ! ಅಂತೆಲ್ಲ ಕೂಗಾಡಿದ್ರು.
ಇವರು ಅಪ್ಪ ಅಮ್ಮನ್ನ ಕರೆಸಿ ಅವರೂ ಇನ್ನು ಮೇಲೆ ನಮ್ಮ ಮಕ್ಕಳು ಹೀಗೆಲ್ಲ ಮಾಡೋಲ್ಲ ಅಂತ ಬರೆದುಕೊಟ್ಟ ಮೇಲೆ ಕ್ಲಾಸಿಗೆ ಸೇರಿಸಿಕೊಂಡಿದ್ದರು.
ಅದಾಗಿ ಒಂದು ವಾರವಾಗಿತ್ತು ಅನಿಸುತ್ತೆ. ಯಥಾಪ್ರಕಾರ ಆ ಮೇಸ್ಟ್ರು ಸ್ಕೂಲಿನ ಗೇಟ್ ಬಳಿ ಬಂದು ಬೈಕ್ ತಿರುಗಿಸಿದ್ದಾರೆ. ಅದೇ ಕೆಪ್ಪ ಅನ್ನೋ ಒಕ್ಕೊರಲ ದನಿ.
ಯಾರೋ ಅವನು ಈಡಿಯಟ್ ಅಂತ ತಿರುಗಿನೋಡಿದ್ರೆ ಹೊಚ್ಚ ಹೊಸ ಗುಂಪು.
ಜೂನಿಯರ್ಸ್ದು.

Saturday, November 8, 2008

ಬಬ್ಬಲ್ಗಮ್ಮು, ಪ್ಯಾಂಟು ಮತ್ತು ಜಿಪ್ ಹಾಕದ ಗೊರಿಲ್ಲಾ ಮಾಸ್ತರ್...

ನನಗೆ ಹಿಂದಿನಿಂದಲೂ ಒಂದು ಅಭ್ಯಾಸವಿತ್ತು.
ಎಗ್ಗಾಮಗ್ಗಾ ಚ್ಯೂಯಿಂಗ್ಗಮ್ ಅಗಿಯುವುದು. ಅದನ್ನ ಇತ್ತೀಚೆಗೆ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ ಮಾಡಿಕೊಂಡಿದ್ದೇನೆ ಬಿಡಿ.
ಇದು ಎಂಟತ್ತು ವರ್ಷಗಳ ಹಿಂದಿನ ಮಾತು. ಆಗೆಲ್ಲ ಚ್ಯೂಯಿಂಗ್ಗಮ್ ತಿನ್ನುವ ಆಸೆಯ ಜೊತೆಜೊತೆಗೆ ಒಂದು ಥರದ ಭಯವೂ ಇತ್ತು. ಅದಕ್ಕೆ ಕಾರಣ ಚ್ಯೂಯಿಂಗ್ಗಮ್ ಅಗಿಯುವಾಗ ಅದನ್ನೇನಾದ್ರೂ ಅಕಸ್ಮಾತ್ ನುಂಗಿಬಿಟ್ಟರೆ ಸತ್ತೇಹೋಗುತ್ತಾರೆ ಅನ್ನುವುದು. ನಾವೆಲ್ಲ ಯಾವ ಪರಿ ಹೆದರಿದ್ದೆವು ಅಂದ್ರೆ ನಾನಂತೂ ಕೆಲ ಕಾಲ ಚ್ಯೂಯಿಂಗ್ಗಮ್ ತಿನ್ನುವುದನ್ನೇ ಬಿಟ್ಟುಬಿಟ್ಟಿದ್ದೆ. ಮನೆಯಲ್ಲಿ ಚ್ಯೂಯಿಂಗ್ಗಮ್ ಕಂಡ್ರೆ ಸಾಕು ಹಾವು ಮೆಟ್ಟಿದಂಗಾಡ್ತಿದ್ರು. ಇದು ಇನ್ನೂ ಎಷ್ಟು ಎಕ್ಸ್ಟ್ರೀಮ್ ಹಂತಕ್ಕೆ ಹೋಯ್ತು ಅಂದ್ರೆ ಯಾರೋ ಒಬ್ಬ ಹುಡುಗ ಚ್ಯೂಯಿಂಗ್ಮ್ ತಿಂದು ಸತ್ತೇ ಹೋದನಂತೆ. ಚ್ಯೂಯಿಂಗ್ಗಮ್ನ ಬ್ಯಾನ್ ಮಾಡ್ತಾರಂತೆ ಅನ್ನುವ ಸುದ್ದಿ ಹರಡಿ ನಮ್ಮೆಲ್ಲರ ಜಂಗಾಬಲವೇ ಉಡುಗಿಹೋಗಿತ್ತು. ಅವತ್ತಿಂದ ಬಾಯಿಗೆ ಚ್ಯೂಯಿಂಗ್ಗಮ್ ಬಿದ್ರೆ ಸಾಕು ಎಲ್ಲಿ ನುಂಗಿಬಿಡುತ್ತೇನೋ ಅನ್ನುವ ಭಯ ಫೋಬಿಯಾ ಥರ ಇನ್ನಿಲ್ಲದೆ ಕಾಡತೊಡಗಿದ್ದು ಮಾತ್ರ ಸುಳ್ಳಲ್ಲ.
ಇಂಥ ಚ್ಯೂಯಿಂಗ್ಗಮ್ ನನ್ನದೊಂದು ಹೊಚ್ಚ ಹೊಸ ಪ್ಯಾಂಟನ್ನು ಹಾಳು ಮಾಡಿತ್ತು. ತೀರಾ ಮೊಲದ ಬಿಳುಪಿನದ್ದು ಅದು. ಅದನ್ನು ಎಷ್ಟು ಪ್ರೀತಿಯಿಂದ ಹೊಲಿಸಿಕೊಂಡಿದ್ದೆ ಅಂದ್ರೆ ಎಲ್ಲಿ ಹಾಕಿಕೊಂಡ್ರೆ ಕೊಳೆ ಆಗುತ್ತೋ ಅಂತ ಹೆಚ್ಚಾಗಿ ಹಾಕಿಕೊಳ್ತಾನೆ ಇರಲಿಲ್ಲ. ಮನೆಯಲ್ಲಿ ಹಾಕ್ಕೊಂಡುಹೋಗೋ. ಅದನ್ನೇನು ಹೊಲಿಸಿ ಇಟ್ಕೊಂಡು ಪೂಜೆ ಮಾಡ್ತೀಯ ಅಂತ ಸಣ್ಣಗೆ ಗದರಿದ್ದೂ ಉಂಟು.
ಇರಲಿ. ನಮ್ಮ ಕ್ಲಾಸ್ ಒಂಥರ ಪುಂಡರ ಸಂತೆ. ಏನೋ ತರಲೆ ಮಾಡ್ತೀಯ ಅಂತ ಹೊಡೆಯಲು ಹೋದ್ರೆ ಪಿಲ್ಟು ಅನ್ನುವ ಫ್ರೆಂಡ್ ಒಬ್ಬ ಮಾಸ್ತರನ ಕೈಲಿದ್ದ ಕೋಲನ್ನೇ ಬಿಗಿಯಾಗಿ ಕಿತ್ತುಕೊಂಡು ಅಬ್ಬರಿಸಿದ್ದ. ಹೊಡಿ ನೋಡ್ತೀನಿ ಅಂತ. ಅವನಿಗೆ ಅಷ್ಟು ಪೊಗರು ಹೇಗೆ ಬಂದಿತ್ತು ಅಂದ್ರೆ ಅವನು ಅಣ್ಣ ಆಗಲೇ ರೌಡಿ ಅಂತ ಹೆಸರು ಮಾಡಿದ್ದ. ಅವನೂ ಅದೇ ಸ್ಕೂಲ್ನ ಸೀನಿಯರ್ ಸ್ಟೂಡೆಂಟ್. ಅವನದೋ ಇನ್ನೂ ಅದ್ವಾನ. ಶನಿವಾರ ಬಿಳಿ ಡ್ರೆಸ್ ಹಾಕ್ಕೊಂಡು ಹೋಗೋದು ಕಂಪಲ್ಸರಿ ತಾನೆ. ಆದ್ರೆ ಈ ಮಹಾನುಭಾವ ಒಂದಿನ ಬಿಳಿ ಪಂಚೆ ಶಟರ್ು ಹಾಕ್ಕೊಂಡು ಬಂದು ಪ್ರೇಯರ್ನಲ್ಲಿ ನಿಂತಿದ್ದ. ನೋಡಿದ ಟೀಚರ್ರು ಏನಯ್ಯಾ ಇದು ಅಪದ್ಧ ಅಂದ್ರೆ, ಸರ್ ನಿಮಗೆ ಏನು ಬೇಕು. ಬಿಳಿ ಬಟ್ಟೆ ತಾನೆ ಅಂತ ದಬಾಯಿಸಿದ್ದ. ಅವತ್ತಿಡೀ ಅವನನ್ನ ಊರ ಬಾಗಿಲಿಗೆ ಕಾವಲು ನಿಲ್ಲಿಸಿದಂತೆ ಕ್ಲಾಸಿನ ಹೊರಗೆ ಬಿಸಿಲಿನಲ್ಲಿ ನಿಲಿಸಿದ್ದರು.
ಅಂತ ಶುದ್ಧಾನುಶುದ್ಧ ತರಲೆಗಳ ಕೈಗೆ ಸಿಕ್ಕು ನಾನೂ ನಜ್ಜುಗುಜ್ಜಾಗಿದ್ದೆ. ಒಂದಾ ಎರಡಾ ಚೇಷ್ಟೆ. ಕೂರುವಾಗ ಕೆಳಕ್ಕೆ ಪೆನ್ ಇಡುವುದು, ಬಬ್ಬಲ್ಗಮ್ ಅಂಟಿಸುವುದು, ಇಂಕ್ ಪೆನ್ನಿಂದ ಇಂಕ್ ಹಾರಿಸುವುದು ಇತ್ಯಾದಿಗಳೆಲ್ಲ ಒಂಥರ ಎಂಟಟರ್ೈನ್ ಮೆಂಟ್ ಥರ ಆಗಿಬಿಟ್ಟಿತ್ತು. ಎಕ್ಸ್ಟ್ರಾ ಕರಿಕಲರ್ ಆ್ಯಕ್ಟಿವಿಟೀಸ್ ಅನ್ನಿ ಬೇಕಾದ್ರೆ. ಇಂಥ ತರಲೆಗಳು ಒಂದಿನ ಮಾಡಬಾರದ ಕೆಲಸ ಮಾಡಿಬಿಟ್ಟಿದ್ದರು. ನನ್ನ ಹೊಸ ಪ್ಯಾಂಟ್ ಹಾಕಿಕೊಂಡು ಹೋದನಲ್ಲ ಆ ದಿನ ಕೂತು ಏಳುವಷ್ಟರಲ್ಲಿ ಬಬ್ಬಲ್ಗಮ್ ಅಂಟಿಸಿಬಿಟ್ಟಿದ್ದರು. ಏಳಲು ಹೋದ್ರೆ ಡೆಸ್ಕ್ಗೂ ನನ್ನ ಹಿಂಬದಿಗೂ ನಡುವೆ ಬಬ್ಬಲ್ಗಮ್ನ ಅಂಟು ಅಂಟು. ನಿಜಕ್ಕೂ ನನ್ನ ಕಣ್ಣಲ್ಲಿ ನೀರಿತ್ತು. ಕಣ್ಣೆದುರೇ ನನ್ನ ಕನಸಿನ ಪ್ಯಾಂಟನ್ನು ಈ ಸ್ಥಿತಿಗೆ ತಂದವರನ್ನು ಸುಮ್ಮನೆ ಬಿಡಬಾರದು ಅಂತ ಹಲಬುತ್ತಿದ್ದೆ. ಆದ್ರೆ ಅವಾಗ ನಾನು ಒಣಗಿದ ಅಂಚಿಕಡ್ಡಿಯಂತಿದ್ದವ. ಹೇಗೆ ತೂಕ ಹಾಕಿದರೂ ಐವತ್ತು ಕೇಜಿ ತೂಗುತ್ತಿರಲಿಲ್ಲ. ನನ್ನನ್ನು ಯಾರು ಕೇರ್ ಮಾಡಿಯಾರು? ಮನೆಗೋಗಿ ಅವ್ವನ ಹತ್ತಿರ ಚೆನ್ನಾಗಿ ತಿಕ್ಕಿಸಿದೆ. ಆದ್ರೂ ಅದು ಹೋಗಲೇ ಇಲ್ಲ. ಕೊನೆಗೆ ಉಜ್ಜೀ ಉಜ್ಜೀ ಪ್ಯಾಂಟಿನ ಹಿಂಬದಿಯಲ್ಲಿ ಸಣ್ಣಗೆ ಇಲಿ ಕೊರೆದಂತಹ ತೂತು ಕಾಣಿಸತೊಡಗಿತು. ತೂತು ಕಂಡ ಮೇಲೆ ಹಾಕಿಕೊಳ್ಳುವುದು ಎಂತು. ಅದನ್ನು ಮೂಲೆಗೆಸೆದದ್ದಾಯಿತು.
ಇನ್ನೊಂದೇ ಒಂದು ಇನ್ಸಿಡೆಂಟ್ ಹೇಳಲೇ ಬೇಕು ನಿಮಗೆ. ನಮ್ಮಲ್ಲಿ ಒಬ್ಬರು ಪೀಟಿ ಮಾಸ್ತರು ಇದ್ದರು. ಅವರ ಹೆಸರೇನೋ ನೆನಪಾಗುತ್ತಿಲ್ಲ. ಆದ್ರೆ ನಮ್ಮ ಶಾಲೆಯಲ್ಲಿ ಅವರಿಗೆ ಗೊರಿಲ್ಲಾ ಅಂತ ಕರೀತಿದ್ರು. ದೈತ್ಯ ದೇಹಿ. ಯಾವಾಗಲೂ ಹಾಕುತ್ತಿದ್ದದ್ದು ಗ್ರೇ ಕಲರ್ ಸಫಾರಿ ಮಾತ್ರ. ಅದನ್ನ ಬಿಟ್ಟು ಅವರು ಬೇರೆ ಬಟ್ಟೆ ಹಾಕಿದ್ದು ನಾ ಕಾಣೆ. ಆಗಲೇ ರಿಟೈಡರ್್ಮೆಂಟ್ ವಯಸ್ಸು. ಅವರು ರೂಮಿನಲ್ಲಿ ಕೂತಿದ್ರೆ ಈ ಹುಡುಗರು ಕಿಟಕಿಯಲ್ಲಿ ಹೋಗಿ ಗೊರಿಲ್ಲಾ ಅಂತ ಕಿರುಚಿಬಿಡ್ತಿದ್ರು. ಪಾಪ ಆವಯ್ಯಾ ತಬ್ಬಿಬ್ಬು. ಇಂಥ ಗೊರಿಲ್ಲಾ ಒಂದಿನ ಒಂದು ಎಡವಟ್ಟು ಮಾಡಿಕೊಂಡಿತ್ತು.
ಅವತ್ತು ಎಲ್ಲಾ ಪ್ರೇಯರ್ಗೆ ಅಂತ ನಿಂತಿದ್ದರು. ಸಾಮಾನ್ಯವಾಗಿ ಮಾಸ್ತರರೆಲ್ಲ ನಮಗಿಂತ ಎತ್ತರದ ಒಂದು ಸ್ಟೇಜ್ಮೇಲೆ ನಿಂತುಕೊಳ್ಳುತ್ತಿದ್ರು,. ಅವತ್ತೂ ಹಾಗೆ ನಿಂತಿದ್ರು. ಪೀಟಿ ಮಾಸ್ತರಲ್ವ ಗೊರಿಲ್ಲಾ ಯಾವಾಗಲೂ ಮುಂದೇನೆ ನಿಂತಿರೋದು. ಇನ್ನೇನು ರಾಷ್ಟ್ರಗೀತ್ ಶುರುಕರ್ ಅನ್ನಬೇಕು. ಯಾರೋ ಒಬ್ಬ ನಮ್ಮ ನಡುವಿನಿಂದಲೇ ಸಾರ್ ನೀವು ಪ್ಯಾಂಟ್ಗೆ ಜಿಪ್ಪೆ ಹಾಕಿಲ್ಲ ಅಂತ ಕಿರುಚಿಬಿಟ್ಟ.
ಪಾಪ ಗೊರಿಲ್ಲಾ ಮುಖ ಇಷ್ಟು ಚಿಕ್ಕದಾಯಿತು. ತಕ್ಷಣ ಸರಿ ಮಾಡಿಕೊಂಡರು. ನಮಗೆಲ್ಲ ನಗುವೋ ನಗು. ಉಳಿದ ಮೇಸ್ಟ್ರುಗಳಿಗೂ ಏನುಮಾಡಬೇಕೋ ಅಂತ ತೋಚದೆ ತಕ್ಷಣ ನಮ್ಮನ್ನೆಲ್ಲ ಗದರಿಸಿ ಪ್ರೇಯರ್ ಮಾಡಿಸಿದ್ರು.
ಇಂಥವು ಎಷ್ಟೋ!
ಮತ್ತೊಮ್ಮೆ ಬರೆದೇನು.

Thursday, November 6, 2008

ಸಂಡೇ ನೋಡಿದ ವೆಡ್ನೆಸ್ಡೇ ಮತ್ತು ಸಂಜೆ ನೋಡಿದ ಫ್ಯಾಷನ್

ಬದುಕು ಎಂಥ ಭಯಕ್ಕೆ ಬಿದ್ದಿದೆ ಗೊತ್ತಾ ಫ್ರೆಂಡ್ಸ್?
ಯಾವ ತೊಟ್ಟಿಯಲ್ಲಿ ಎಂಥ ಬಾಂಬ್ ಇದೆಯೋ? ಎಷ್ಟೊತ್ತಿಗೆ ಸಿಡಿದಾವೋ ಅನ್ನುವ ಆತಂಕವನ್ನು ಕೈಲಿಡಿದುಕೊಂಡೇ ಓಡಾಡಬೇಕಿದೆ. ಹಾದಿ ಬೀದಿ ತುಂಬಾ ಭಯದ ನೆರಳು ಬಾಚಿಕೊಂಡಿದೆ. ಮನೆಯಿಂದ ಹೋದವರು ಮನೆಯಲ್ಲೇ ಉಳಿದವರು ಇಬ್ಬರೂ ಸುರಕ್ಷಿತವಲ್ಲ. ಎರಡೂ ಕಡೆ ಆತಂಕ ಮಡುವುಗಟ್ಟಿದೆ. ಕೊಲ್ಲುವುದೇ ಗುರಿಯಾಗಿಸಿಕೊಂಡವರಿಗೆ, ಕೊಲ್ಲುವುದೇ ನಮ್ಮ ಧರ್ಮದ ಧರ್ಮ ಅಂದುಕೊಂಡವರಿಗೆ ಯಾವ ಉಪದೇಶ ತಾನೆ ಹಿಡಿಸೀತು? ಯಾವ ಸರಳು ತಾನೆ ಬಂಧಿಸೀತು? ಅಲ್ಲಿ ಕೇವಲ ರಕ್ತದ ದಾಹ ಇರುತ್ತದೆಯೇ ವಿನಹ ಕೊಲ್ಲುವವರ ಕಣ್ಣಲ್ಲಿ ಚೂರು ಅಳುಕಾಗಲೀ ವಿಷಾದವಾಗಲೀ ಇರುವುದಿಲ್ಲ.
ಎಲ್ಲಿದ್ದೇವೆ ನಾವು? ಎಂಥ ಬದುಕು ಸಾಗಿಸುತ್ತಿದ್ದೇವೆ? ನಾಗರಿಕ ಸಮಾಜವೊಂದು ನಡೆದುಕೊಳ್ಳುವ ರೀತಿಯೇ ಇದು. ಮನುಷ್ಯ ಮನುಷ್ಯನನ್ನ ಗೌರವಿಸದ, ಅರ್ಥ ಮಾಡಿಕೊಳ್ಳದ ಸಮಾಜವೊಂದು ನಿಮರ್ಾಣವಾಗಿಬಿಟ್ಟರೆ ಬದುಕಾದರು ಹೇಗೆ ನಡೆಸೋದು. ಒಂದು ಕಡೆ ದೇಶದ ರಾಜಕಾರಣಿಗಳು ಲೂಟಿ ಹೊಡೆಯುತ್ತಿದ್ದಾರೆ, ಇನ್ನೊಂದು ಕಡೆ ಉಗ್ರರು ಬದುಕನ್ನ ಛಿದ್ರಗೊಳಿಸುತ್ತಿದ್ದಾರೆ. ಹಾಗಾದ್ರೆ ಜನಸಾಮಾನ್ಯರಿಗೆ ಶಾಂತಿಯಿಂದ ಬದುಕುವ ಹಕ್ಕೇ ಇಲ್ಲವೇ?
ಇದನ್ನೆ ನೀರಜ್ ಪಾಂಡೆ ವೆಡ್ನೆಸ್ಡೇನಲ್ಲಿ ಹೇಳೋದು. ಕ್ಷಣ ಕ್ಷಣವೂ ಆತಂಕದಿಂದಲೇ ಇದ್ದು ಸಾಕಾಗಿದೆ. ಎಷ್ಟು ದಿನ ಇದನ್ನು ಸಹಿಸಿಕೊಳ್ಳೋದು. ಅದಕ್ಕೊಂದು ಫುಲ್ ಸ್ಟಾಪ್ ಹಾಕಬೇಡವೇ? ಹಿಂಸೆ ಅನ್ನುವುದು, ರಕ್ತ ಅನ್ನುವುದು ಮನಷ್ಯನನ್ನ ಯಾವ ರೀತಿ ಅಧೀರನನ್ನಾಗಿ ಮಾಡಿಬಿಡುತ್ತದೆ ಅಂದ್ರೆ ಅವನು ಮಾನಸಿಕವಾಗಿ ತೀರಾ ಕುಗ್ಗಿಹೋಗುತ್ತಾನೆ. ಹಾಗೆ ಅಧೀರನನ್ನಾಗಿ ಮಾಡುವುದೇ ಉಗ್ರರ ಗುರಿ ಕೂಡ ಹೌದಾ?
ಕಮೀಷನರ್ ಪ್ರಕಾಶ್ ರಾಥೋಡ್ಗೆ ಒಂದು ಕಾಲ್ ಬರುತ್ತದೆ. ಅದು ಕ್ರಾಂಕ್ ಕಾಲಾ? ಹಾಗಂತ ಅನುಮಾನಿಸುತ್ತಾರೆ ಪ್ರಕಾಶ್. ಆದ್ರೆ ಅತ್ತ ಕಡೆಯ ವ್ಯಕ್ತಿ ನಿನ್ನ ಆಫೀಸಿನಲ್ಲೇ ಬಾಂಬ್ ಇಟ್ಟಿದ್ದೇನೆ ನೋಡು ಅನ್ನುತ್ತಾನೆ. ನೋಡಿದ್ರೆ ಅದು ನಿಜವೂ ಆಗಿರುತ್ತದೆ! ಹಾಗಿದ್ದರೆ ಉಳಿದ ಕಡೆ ಬಾಂಬ್ ಸಿಡಿದರೆ ಗತಿ ಏನು? ಯಾರೀತ? ಅವನ ಹಿಂದಿರುವ ಸಂಘಟನೆಯ ಹೆಸರೇನು?
ಪ್ರಕಾಶ್ ಗಡಬಡಿಸಿಹೋಗುತ್ತಾರೆ. ನಿಮ್ಮ ಕಸ್ಟಡಿಯಲ್ಲಿರುವ ನಾಲ್ಕು ಜನ ಉಗ್ರರನ್ನು ನಾನು ಹೇಳಿದಲ್ಲಿಗೆ ತರಬೇಕು ಅನ್ನುತ್ತಾನೆ ಆತ. ಅಂದ್ರೆ ಆತನ ಇಂಟೆನ್ಷನ್ ಅರ್ಥ ಆಯ್ತಲ್ಲ. ಆದ್ರೆ ನಾಲ್ಕು ಜನ ಉಗ್ರರನ್ನೂ ಹೇಗೆ ಬಿಡುಗಡೆ ಮಾಡುವುದು? ದೇಶದ ಮಾನ? ಪವರ್?
ಟೀವಿ ವರದಿಗಾಗಿ ಹಂಬಲಿಸುವ ನೈನಾ ರಾಯ್ಗೆ ಫೋನ್ ಮಾಡಿ ಹೇಳುತ್ತಾನೆ ಆತ. ನಿನ್ನ ಜೀವನದ ಅತ್ಯಂತ ಮುಖ್ಯ ಘಳಿಗೆ ನೀನು ನೋಡಬೇಕೆಂದ್ರೆ ಇಂತ ಕಡೆ ಬಾ. ನ್ಯೂಸ್ನ ಹಸಿವಿದ್ದ ನೈನಾ ಒಪ್ಪಿಕೊಳ್ಳುತ್ತಾಳೆ.
ಮುಂದೆ ಏನಾಯ್ತು? ನಾನು ನಿಮ್ಮ ಕುತೂಹಲ ಹಾಳುಮಾಡೊಲ್ಲ. ಸಿನೆಮಾ ಒಂದು ಬಾರಿ ನೋಡಿಬನ್ನಿ. ಫಸ್ಟ್ಕ್ಲಾಸ್ ಆಗಿದೆ ಅಂತ ಮಾತ್ರ ಹೇಳಬಲ್ಲೆ.
ನಾಸಿರುದ್ದೀನ್ ಶಾ ಒಮ್ಮೆ ಕೇಳುತ್ತಾನೆ. ಅವರು ಅಷ್ಟು ಜನರನ್ನು ನಿರ್ದಯವಾಗಿ ಕೊಂದಿದಾರೆ. ನೀವ್ಯಾಕೆ ಕೇವಲ ನಾಲ್ವರನ್ನ ಕೊಲ್ಲುವುದಕ್ಕೆ ಹೆದರುತ್ತೀರಿ?
ಪ್ರಶ್ನೆಯನ್ನ ನಮ್ಮ ರಾಜಕಾರಣಿಗಳಿಗೆ, ಪೊಲೀಸರಿಗೆ ಕೇಳಬೇಕು. ಕೊಲೆ ಮಾಡಿದ್ದು ಇವನೆ. ಬಾಂಬ್ ಹಾಕಿದ್ದು ಇವನೆ ಅಂತ ಎಲ್ಲವೂ ನೇರನೇರ ಗೊತ್ತಿರುತ್ತದೆ. ಅಂಥವರನ್ನು ಇಟ್ಟುಕೊಂಡು ಎನ್ಕ್ವೈರಿ ಮಾಡಿ ಸಾಧಿಸುವುದಾದರೂ ಏನು?
ಇಡೀ ಚಿತ್ರ ತುಂಬಾ ಸೂಕ್ಷ್ಮವಾಗಿದೆ.

ಹಾಗೆ ಫ್ಯಾಶನ್ ನೋಡಿದೆ.
ಆ ಲೋಕವೇ ಒಂಥರಾ ಬಿಡಿ. ಅಲ್ಲಿ ಸೆಕ್ಸ್ಗೆ, ಪ್ರೀತಿಗೆ, ಬದುಕಿಗೆ ಅರ್ಥವೇ ಇರುವುದಿಲ್ಲ. ಎಲ್ಲಾ ಬಟ್ಟೆ ಬದಲಾಯಿಸಿದಷ್ಟೇ ಸಲೀಸಾಗಿ ಬದಲಾಗುತ್ತಿರುತ್ತದೆ. ನಾನು ಮಾಡೆಲ್ ಆಗಬೇಕು ಅಂತ ಬಂದ ಹುಡುಗಿಯೊಬ್ಬಳು ಹೇಗೆ ತನ್ನತನವನ್ನೆಲ್ಲ ಕಳೆದುಕೊಂಡು ಬದುಕಬೇಕಾಗುತ್ತದೆ ಅನ್ನುವುದೇ ಚಿತ್ರದ ಥೀಮ್. ಅಲ್ಲಿ ಅವಳ ಮಜರ್ಿಗೆ ಅಂತ ಏನೂ ನಡೆಯುವುದಿಲ್ಲ. ಏಣಿ ಹಾಕಿ ಆಕಾಶ ತೋರಿಸುವ ಜನ ಕೆಳಗೆ ನಿಂತುಕೊಂಡೇ ಕಾಲೆಳೆಯುತ್ತಿರುತ್ತಾರೆ.
ಇಟ್ಟ ಪ್ರತಿ ಕ್ರಾಸ್ ಲೆಗ್ ತಪ್ಪುತ್ತಿರುವುದು ಗೊತ್ತೇ ಆಗುವುದಿಲ್ಲ. ಗೊತ್ತಾಗುವ ಹೊತ್ತಿಗೆ ಬದುಕು ಮುರುಟಿಹೋಗಿರುತ್ತದೆ. ಇಂಟೆರೆಸ್ಟಿಂಗ್ ಫಿಲ್ಮ್.
ಸಾಧ್ಯವಾದರೆ ಒಮ್ಮೆ ನೋಡಿ ಬನ್ನಿ.

ಎರಡು ಸಣ್ ಕಥೆ

ಎಂಥ ಸೆಖೆ ಕಣೆ? ಎದುರಿಗೆ ಕೇತಾನ್ ಫ್ಯಾನ್ ಇಟ್ಟುಕೊಂಡು ಕುಳಿತರೂ ಇಷ್ಟೊಂದು ಸೆಖೆ ಆಗುತಲ್ಲಾ? ಹಾಳಾದ ಸಮ್ಮರ್!
ಅವನು ಹೇಳಿದ.
ಜಡೆ ಬಿಚ್ಚಿಕೊಂಡು, ಅದನ್ನ ಬೆಲ್ಲದ ಬಣ್ಣದ ಬೆನ್ನಿಗೆಲ್ಲ ಹರವಿಕೊಂಡು ಘಮಲಿನ ಎಣ್ಣೆ ಹಚ್ಚಿಕೊಳ್ಳುತ್ತಾ ಕುಳಿತಿದ್ದ ಇವಳು ಎದ್ದು ನಿಂತಳು.
ಅಷ್ಟೆ!
ರೂಮಿನ ತುಂಬ ಬರೀ ಘಮ್ ಘಮಲು.
***
ಅವಳು ಬೆತ್ತಲೆ ಮಲಗಿದ್ದಳು.
ಅವನೂ.
ಮಗು ಮಾತ್ರ ನಿದ್ರಿಸುತ್ತಿತ್ತು.

ಹೂ



ಒಂದಾದರೂ ಸರಿ ಹೂವಿನ ಗಿಡ ಹಾಕಿ. ಅದು ಹೂ ಬಿಟ್ಟ ಮೇಲೆ ಅದರ ಅಂದ-ಚಂದ, ಘಮವನ್ನೆಲ್ಲ ಅನುಭವಿಸುವುದನ್ನು ಬಿಟ್ಟು ಇನ್ಯಾರೋ ಹೂ ತರುತ್ತಾರೆಂದು ಕಾಯುತ್ತಾ ಕೂರುವುದಿದೆಯಲ್ಲ ಅದು ಸರಿಯಲ್ಲ ಅಂತಾನೆ ಒಬ್ಬ ಫಿಲಾಸಫರ್.

ಸುಮ್ಮನೆ ಕುಳಿತವನ ಮನದ ಪಟಲದಲ್ಲಿ ಎದ್ದು ಕುಳಿತದ್ದು ಈ ಕವಿತೆ. ಆದ್ರೆ ಬರೆದು ಮುಗಿಸಿದವನಿಗೆ ಯಾಕೋ ಒಂದು ಶೀಷರ್ಿಕೆ ಕೊಡಲು ಆಗಲಿಲ್ಲ. ಕೊಡಬೇಕೆನಿಸದರೆ ನೀವೇ ಅದಕ್ಕೊಂದು ಶೀಷರ್ಿಕೆ ಕೊಟ್ಟುಬಿಡಿ.


ಬೀದಿ ಬದಿಯ ಗೂಡಂಗಡಿಯಲಿ
ಬೀಡಿಕೊಳ್ಳುವಾಗ
ಹೋದದ್ದು ನೀನಾ?
ಹಸಿರು ಲಂಗಕ್ಕೆ
ಹೂ ಮಲ್ಲಿಗೆಯ ಹೊದಿಕೆ
ಮೇಲೆ ಕನಕಾಂಬರದ ರವಿಕೆ
ಎಂಥ ಸೊಗಸಿತ್ತು ಗೊತ್ತಾ
ನಿನ್ನ ಸುತ್ತ
ಅಂಗಡಿಯವ ಕೇಳಿದ
ಅವಳು ನಿನಗೆ ಗೊತ್ತಾ?
ಮನಸು ಗೊತ್ತು ಅಂತು
ಮಾತು ಗೊತ್ತಿಲ್ಲ ಅಂತು

ಊರ ಹೊರಗಿನ
ಮಾರೀ ಗುಡಿಯ ಬಳಿ
ಇತ್ತಲ್ಲ ಬಾವಿ
ಅಲ್ಲಿಗೆ ನೀನು ಬರುವಾಗಲೆಲ್ಲ
ದಾಹ ನನ್ನಲ್ಲಿ
ನಾನು ಕಳ್ಳ ಕಳ್ಳನೇ ಬರುತ್ತಿದ್ದೆ
ನೀನು ಮೆಲ್ಲಮೆಲ್ಲನೇ ನಡೆಯುತ್ತಿದ್ದೆ

ನಿನಗೋ ಆಗಾಗ
ಕೋಪ
ಹುಸಿ ಮುನಿಸು
ತುಂಟ ಸೆರಗಿನ ಮೇಲೆ
ಅದರದ್ದು ಜಾರುವ ಜಾಯಮಾನ
ನಿನಗೋ ಜಾರಿಬಿದ್ದೇನೆಂಬ ಅನುಮಾನ

ನನಗೆ ನಿನ್ನ ಗೆಲ್ಲುವ ಬಯಕೆ
ನಿನಗೋ ಸೋತೇನೆಂಬ ಹೆದರಿಕೆ

ನಡುವೆ ನನ್ನ
ಎದೆಯ ಗೂಡಿನ ಗೋಡೆಗೆ ಹೊರಗಿ
ಕುಳಿತಿದ್ದ ಪ್ರೀತಿ
ಫಕ್ಕನೆದ್ದು ಕುಳಿತು ಹಾಡಿತು
ಒಳಗೊಳಗೇ
ಜೀಕಿತು
ಅವಳೆಂದ್ರೆ ನಿನಗೆ ಇಷ್ಟಾನಾ?

ಅವತ್ತು ಬಿಡು
ನನ್ನ ಮನದ ತುಂಬಾ
ಬಿಸಿಲಮಳೆ
ಕಣ್ತುಂಬಾ
ಕಾಮನ ಬಿಲ್ಲು

ನಾನು ಸೋಲದ
ರಾಜಕುಮಾರನಂತಿದ್ದವ
ಅಂಥವನನ್ನೂ ಕಣ್ಣ ಇಷಾರೆಯಲ್ಲಿ
ಸೋಲಿಸಿದ
ಯಶೋಧರೆ ನೀನು

ಹೀಗಿರುವಾಗ
ಅಂದು ನೀನು
ಸಿಕ್ಕೆ, ನಕ್ಕೆ
ಬಂದ ಮಾತಿಗೂ ಬೀಗ ಹಾಕಿದೆ
ಮಾತಾಡಲು ಮಾತಿರಲಿಲ್ಲವಾ?
ಗೊತ್ತಿಲ್ಲ!

ಪ್ರೀತಿಯೆಂದ್ರೆ
ಗಾಳಿಮಾತಲ್ಲ ಬಿಡು
ಮನದ ಮಾತು

ಅವತ್ತು ಭಾನುವಾರ
ಊರ ಕೆರೆ ಬಳಿಯ
ಕಡುಗಪ್ಪು ಕಲ್ಲಿನ ಮೇಲೆ
ಕುಳಿತಿದ್ಯಲ್ಲ ನೀನು
ಪಕ್ಕದಲ್ಲೇ
ನಿನ್ನ ಎದೆಗಾನಿಸಿಕೊಂಡಿದ್ದನಲ್ಲ
ಅವನು

ಅವತ್ತೇ ಕೊನೆ

ಅಂದಿನಿಂದ ನನಗೆ ಹುಷಾರಿಲ್ಲ
ಉಸಿರೂ ಇಲ್ಲ

ಕಾಲ ಬುಡದಲ್ಲೆ
ಪ್ರೀತಿ ಸತ್ತು ಮಲಗಿದೆ
ಎಬ್ಬಿಸಬೇಕಾದ ನೀನೇ
ಎದ್ದುಹೋದೆ

ಇನ್ನೆಲ್ಲಿಯ ಬದುಕು?

Monday, November 3, 2008

Tuesday, October 28, 2008




ಸುಮ್ನೆ ಿದ್ದವನಿಗೆ ಹೀಗೇನೋ ಮಾಡಬೇಕೆನಿಸಿತು.
ಹೇಗಿದೆ ಹೇಳಿ.

Tuesday, October 7, 2008

ಆ ಭಾನುವಾರದ ಪ್ರೀತಿ ಮತ್ತು ಸಂಭ್ರಮದಲ್ಲಿ ನೀವೂ ಇರಬೇಕಿತ್ತು...



ವಾವ್ ವಾಟ್ ಅ ಪ್ರೋಗ್ರಾಮ್?ಹಾಗಂತ ನನಗೆ ನಾನೇ ಅಂದುಕೊಂಡೆ. ಅಷ್ಟು ಚಂದದ ಪ್ರೋಗ್ರಾಮ್ ಒಂದನ್ನ ಮಾಡಲಿಕ್ಕೆ ಬೇರೆ ಯಾರಿಗಾದ್ರೂ ಸಾಧ್ಯಾನಾ? ನೋ ಅಂತಲ್ಲ. ಮಾಡಬಹುದು ಬಿಡಿ. ಪೊಲಿಟಿಷಿಯನ್ಸ್ ಆದ್ರೆ ಹಣ ಕೊಟ್ಟು ಜನ ತಂದು ಸೇರಿಸ್ತಾರೆ. ಸಿನೆಮಾ ಮಂದಿಗೊಂದು ಅಟ್ರಾಕ್ಷನ್ ಅಂತ ಇರುತ್ತೆ!. ಆದ್ರೆ ಒಬ್ಬ ರವಿ ಬೆಳಗೆರೆಗೆ?ಕೇವಲ ಪ್ರೀತಿಯೊಂದರಿಂದಲೇ ಅಷ್ಟು ಜನರನ್ನು ಸಂಪಾದಿಸಿದವರು ಅವರು. ಅವತ್ತಿನ ಮಟ್ಟಿಗೆ ಅದು ನಮ್ಮ ಪಾಲಿಗೆ ಸಂಭ್ರಮದ ದಿನ! ಎಂದೂ ಮರೆಯಲಾರದ ದಿನ.ಅವತ್ತು ಕಲಾಕ್ಷೇತ್ರದಲ್ಲಿ ಹಾಯ್ ಬೆಂಗಳೂರ್!ಗೆ ಹದಿನಾಲ್ಕುರವಿ ಬೆಳಗೆರೆಗೆ ಐವತ್ತರ ಸಂಭ್ರಮವಿತ್ತು; ಯಾಪಾಟಿ ಜನ ಸೇರಿದ್ರು ಅಂದ್ರೆ ನನ್ನ ಕಣ್ಣನ್ನ ನಾನೇ ನಂಬಲಿಲ್ಲ. ಆ ಫಂಕ್ಷನ್ನಿಗೆ ಬಂದವರಾದರು ಎಂಥವರು, ಅಪರೂಪದ ವ್ಯಕ್ತಿತ್ವದ ಸುನೀಲ್ ಶಾಸ್ತ್ರಿಗಳು. ಅವರು ಲಾಲ್ ಬಹದ್ದೂರ್ ಶಾಸ್ತ್ರಿಗಳ ಮಗ. ತುಂಬಾ ಪ್ರಜ್ಞಾವಂತ, ವಿನಯವಂತ, ಕ್ಲೀನ್ಡ್ ಪೊಲಿಟಿಷಿಯನ್. ಅವರಂತವರು ಅಪರೂಪ. ಲಾಲ್ ಬಹದ್ದೂರ್ ಶಾಸ್ತ್ರಿಗಳ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡಂತಿದ್ದಾರೆ ಶಾಸ್ತ್ರೀಜಿ. ಅವರ ಧರ್ಮ ಪತ್ನಿ ಮೀರಾ ಶಾಸ್ತ್ರೀಗಳೂ ಬಂದಿದ್ದರು. ಕೇವಲ ಮೂರ್ನಾಲ್ಕು ತಿಂಗಳ ಹಿಂದಷ್ಟೇ ಸುನೀಲ್ ಶಾಸ್ತ್ರೀಜಿ ಅವರಿಗೆ ಬೈಪಾಸ್ ಸರ್ಜರಿ ಆಗಿತ್ತು. ಆದ್ರೂ ಬಂದಿದ್ದರು. ನನಗೆ ಈ ಫಂಕ್ಷನ್ ನೋಡಿದ ಮೇಲೆ ಆಯಾಸಗಿಯಾಸ ಏನೂ ಇಲ್ಲ ಅಂದ್ರು. ಅಪ್ಪನ್ನ ಇಡೀ ದೇಶ ಯಾಕೆ ಮೆಚ್ಚುತ್ತೆ ಅಂತ ಹೇಳಿದ್ರು. ಮನೆಯವರ ಬಗೆಗಿನ ಕಾಳಜಿಗಿಂತ ದೇಶದ ಕಾಳಜಿ ಎಷ್ಟು ಮುಖ್ಯ. ಅದು ಶಾಸ್ತ್ರೀಜಿಯವರಲ್ಲಿ ಹೇಗೆ ಮೈಗೂಡಿತ್ತು ಅಂತಾನು ಹೇಳಿದ್ರು. ಎಷ್ಟು ಚೆನ್ನಾಗಿ ಮಾತನಾಡಿದ್ರು ಅಂದ್ರೆ ಕೊನೆಗೆ ಸಭೆಯಲ್ಲಿದ್ದವರೆಲ್ಲ ಎದ್ದು ನಿಂತು ಅವರಿಗೆ ಗೌರವ ಸೂಚಿಸಿದ್ರು. ಒಂದೇ ಒಂದು ಎಕ್ಸ್ಟ್ರಾ ಮಾತಿಲ್ಲ. ಎಕ್ಸಾಗರೇಷನ್ ಇಲ್ಲ. ಎಲ್ಲಾ ನೀಟ್ ನೀಟ್ ನೀಟ್. ಅವರ ನೆನಪಿನ ಶಕ್ತಿಯಂತೂ ಅಗಾಧ. ನನಗನಿಸುತ್ತೆ, ಅಂತ ಒಬ್ಬ ಸಜ್ಜನ ವ್ಯಕ್ತಿಯನ್ನ ನೋಡಿದ್ದೇ ನಮ್ಮ ಭಾಗ್ಯ.ಅವತ್ತು ಎರಡು ಪುಸ್ತಕಗಳು ಅಧಿಕೃತವಾಗಿ ರಿಲೀಸ್ ಆದ್ವು. ಒಂದು ಫಸ್ಟ್ ಹಾಫ್. ಎರಡನೇದು ಡಿ ಕಂಪನಿ. ಎರಡೂ ವಿಶಿಷ್ಟವಾದ ಪುಸ್ತಕಗಳೇ! ಒಂದು ರವಿ ಬೆಳಗೆರೆಗೆ ಐವತ್ತು ತುಂಬಿದ ಸಂದರ್ಭದಲ್ಲಿ ಅವರಿಗೆ ಅಭಿನಂದನಾ ಗ್ರಂಥವಾಗಿ ನಮ್ಮ ಸ್ಟಾಫ್ ಎಲ್ಲಾ ಸೇರಿ ತಂದ ಪುಸ್ತಕ, ಫಸ್ಟ್ ಹಾಫ್. ಅದನ್ನು ನೋಡುವುದೇ ಒಂದು ಸೊಗಸು ಬಿಡಿ. ಅಷ್ಟು ಚಂದದ ಪುಸ್ತಕವನ್ನ ಯಾರಾದರೂ ಕನ್ನಡದಲ್ಲಿ ಮಾಡಿದ್ದಾರಾ? ಗೊತ್ತಿಲ್ಲ. ಪುಸ್ತಕ ನೋಡಿದವರೇ ಶಾಸ್ತ್ರೀಜಿಗಳು... ವಾಟ್ ಅ ನೈಸ್ ಬುಕ್ ಅಂತ ಹೇಳಿಬಿಟ್ರು. ಎಲ್ಲೆಲ್ಲೂ ಅದರದೇ ಮಾತು. ಅದನ್ನು ರೂಪಿಸಿದ ಪ್ರಮುಖರಲ್ಲಿ ನಾನೂ ಒಬ್ಬ ಅನ್ನೋದು ನನಗೆ ಹೆಮ್ಮೆಯ ವಿಚಾರವೇ!ಇನ್ನು ರವಿ ಬೆಳಗೆರೆಯವರ ಡಿ ಕಂಪನಿ. ಎಪ್ಪತ್ತರ ದಶಕದಿಂದ ಇಂದಿನ ತನಕ ಮುಂಬೈ ಪಾತಕ ಜಗತ್ತನ್ನು ಪರಿಚಯಿಸುವ ಪುಸ್ತಕ. ಒಬ್ಬ ದಾವೂದ್ ಹುಟ್ಟಿಕೊಂಡದ್ದಾದರು ಹೇಗೆ? ಚೋಟಾ ರಾಜನ್ ಹೇಗಾದ? ಅವನಾರು ಮಾಯಾ ಡೊಳಾಸ್? ಮೆಳ್ಳಗಣ್ಣ ಸದಾಮಾಮನ ಹತ್ಯೆಗಳಾದರೂ ಎಂಥವು? ಹತ್ಯೆಗಳ ಹಿಂದಿನ ಸಂಚುಗಳಾದರೂ ಎಷ್ಟು ಕರಾರುವಾಕ್ಕಾಗಿರುತ್ತವೆ? ತೆಳ್ಳಗಿನ ಉದ್ದ ಕೋಲಿನಂತಿರುವ ಆಸಾಮಿ ಅರುಣ್ ಗೌಳಿ ಯಾರು? ಎಲ್ಲರೂ ದುಬೈ ಅಲ್ಲಿ ಇಲ್ಲಿ ಹೋಗಿ ಸೆಟ್ಲ್ ಆದಾಗ ನಾನು ಇಲ್ಲೇ ಇದ್ದು ನಿಮಗೆ ಗೌಳಿ ಏನೂ ಅಂತ ತೋರಿಸುತ್ತೇನೆ ಅಂತ ದಗಡೀ ಚಾಳದಲ್ಲಿ ಕಾಲೂರಿ, ಇಡೀ ಮುಂಬೈ ಪಾತಕ ಜಗತ್ತನ್ನು ಆಳಿದ ಗೌಳಿಯ ತಾಕತ್ತಾದರೂ ಎಂಥದು? ಅವನು ಅಡಗಿಕೊಳ್ಳುತ್ತಿದ್ದದಾದರೂ ಎಲ್ಲಿ? ಪ್ರತಿ ಅಧ್ಯಾಯವೂ ಮುಂಬೈ ಪಾತಕ ಜಗತ್ತಿನಲ್ಲಿ ಅದ್ದಿ ಅದ್ದಿ ತೆಗೆದಂಥದೇ. ಅದರ ಲೇಔಟ್ ನೋಡಬೇಕು. ಪೂತರ್ಿ ಕಪ್ಪು ಬಿಳುಪಿನಲ್ಲಿ ಒಂದು ಪುಸ್ತಕವನ್ನು ಅಷ್ಟು ಚೆನ್ನಾಗಿ ಮಾಡಲು ಸಾಧ್ಯವೇ? ಎಂಥ ಕೆಲಸ ಮಾಡಿದ್ದೀರಿ ಅಂದ್ರೆ ಫಸ್ಟ್ ಹಾಫ್ ಮತ್ತು ಡಿ ಕಂಪನಿಯನ್ನ ಹೊಸಬಗೆಯಲ್ಲಿ ತಂದು ಇಡೀ ಕನ್ನಡ ಪ್ರಕಾಶನಕ್ಕೆ ಹೊಸ ತಿರುವು ನೀಡಿದಿರಿ. ಗ್ರೇಟ್ ಅಂದ್ರು ಪುಸ್ತಕ ನೋಡಿದ ಪತ್ರಕರ್ತ ಗೆಳೆಯ ಅಜಿತ್ ಹನುಮಕ್ಕನವರ್. ಅವರ ಮಾತಿಗೆ ಪುಷ್ಠಿ ನೀಡುವ ಅಭಿಪ್ರಾಯಗಳ ಸರಮಾಲೆಯೇ ಪುಸ್ತಕದ ಬಗ್ಗೆ ಬಂದಿದೆ.ಇಷ್ಟೆಲ್ಲ ಆಯ್ತಲ್ಲ ಅವತ್ತಿನ ಸಂಭ್ರಮ ನೋಡಬೇಕಿತ್ತು. ಮನಸು ಕೊಡಿ ಅಂತ ಮುಗಿಬಿದ್ದವರಿಗೆ ಲೆಕ್ಕವಿಲ್ಲ, ನೀವು ಎಷ್ಟು ಚಂದಕ್ಕೆ ಬರೀತೀರಿ ಅಂತ ಕೈಹಿಡಿದು ಮಾತನಾಡಿಸಿದವರು ಎಷ್ಟು ಜನ. ನಿಜಕ್ಕೂ ಕಣ್ಣು ತುಂಬಿ ಬಂತು. ಯಾರೋ ಎಲ್ಲಿಂದಲೋ ಬಂದು ನಮ್ಮದೊಂದು ಆಟೋಗ್ರಾಫ್ ಹಾಕಿಸಿಕೊಂಡು ಹೋಗುತ್ತಾರಲ್ಲ ಅವರ ಪ್ರೀತಿಗೆ ಏನು ಹೇಳುವುದು. ಕೆಲವರಂತೂ ಮೊದಲೇ ಮೆಸ್ಸೇಜ್ ಮಾಡಿ ನಿಮ್ಮನ್ನ ನೋಡಬೇಕು ಅದಕ್ಕೋಸ್ಕರಾನೆ ಬರ್ತಿದೀವಿ ಪ್ಲೀಸ್ ಮಿಸ್ ಮಾಡಬೇಡಿ ಅಂದಿದ್ದರು.

ಅವರ ಪ್ರೀತಿಗೆ ನಾನು ಋಣಿ.

Thursday, October 2, 2008

ಅವಣಿ ಬೆಟ್ಟ ಮತ್ತದರ ಕಾಲ ಬುಡಕ್ಕೆ ಕಟ್ಟಿದ ಕುದುರೆ...


ಭಾನುವಾರ ಬೆಳಿಗ್ಗೆ ಆರಕ್ಕೆಲ್ಲ ನನ್ನ ಆಲ್ಟೋ ಜುಮ್ ಅಂತ ಕೋಲಾರದ ಕಡೆಗೆ ಸಾಗಿತ್ತು. ಜೊತೆಗೆ ಗೆಳೆಯ ಸದಾನಂದ ಇದ್ದ. ಪತ್ರಕತರ್ೆಯರಾದ ಸುಪ್ರಭಾ, ಶ್ರೀಕಲಾ ಹಿಂದಿನ ಸೀಟಿನಲ್ಲಿ ಕುಳಿತು ತರ್ಲೆ ಮಾಡ್ತಿದ್ದರು. ನಮ್ಮ ಟಾಗರ್ೆಟ್ ಇದ್ದದ್ದು ಅವಣಿ ಬೆಟ್ಟವನ್ನ ಇಡೀದಿನ ಸುತ್ತಬೇಕು ಅನ್ನೋದು. ಆದ್ರೆ ಅಲ್ಲಿಗೆ ಹೋದ ಮೇಲೆ ನನಗೆ ಬೆಟ್ಟಕ್ಕಿಂತ ಹೆಚ್ಚು ಇಷ್ಟ ಆಗಿದ್ದು ಬೆಟ್ಟದ ತಪ್ಪಲಿನಲ್ಲಿರುವ ಕಲ್ಯಾಣಿಗಳು. ಕೋಲಾರ ಬೇಸಿಕಲಿ ಡ್ರೈಲ್ಯಾಂಡ್ ಅಂತಾರೆ. ಆದ್ರೆ ಅಲ್ಲಿರುವ ಕೆರೆಗಳು ಕಲ್ಯಾಣಿಗಳು ಬೇರೆಲ್ಲೂ ಇಲ್ಲ . ಪತ್ರಕರ್ತ ಗೆಳೆಯ ರೋಹಿತ್ ಅವುಗಳ ಥರೋ ಸಂಶೋಧನೆಗೆಂದೇ ಅಲ್ಲಿ ಹೋಗಿ ಕುಳಿತಿದ್ದಾನೆ. ಕುಮಾರ ಸ್ವಾಮಿ, ಶ್ರೀನಿವಾಸ್, ಒಂದಿಷ್ಟು ಚಿಳ್ಳೆಪಳ್ಳೆಗಳೆಲ್ಲ ಸೇರಿ ನೋಡು ನೋಡುತ್ತಲೇ ನಮ್ಮ ಟೀಮು ಗಿಜುಗುಟ್ಟತೊಡಗಿತು. ಜೊತೆಗೆ ರೋಹಿತ್ ತಂದಿದ್ದ ಚಿತ್ರಾನ್ನ, ಚಕ್ಕುಲಿ, ಚಿಪ್ಸ್. ಇಬ್ಬರು ಗೈಡ್. ಈ ಗೈಡ್ಗಳದ್ದೇ ಸಕತ್ ಮಜಾ ಮಾರಾಯ್ರೇ!ಈ ಅವಣಿ ಬೆಟ್ಟದ ತಪ್ಪಲಿನಲ್ಲೊಂದು ರಾಮನ ದೇವಸ್ಥಾನವಿದೆ. ಅದರ ಇತಿಹಾಸವೇ ಸಾವಿರ ವರ್ಷಗಳ ಆಚೆಗೆ ನೆಗೆಯುತ್ತದೆ. ತುಂಬಾ ಸುಂದರವಾದ ದೇವಸ್ಥಾನ, ತುಂಬಾ ನೀಟಾಗಿದೆ. ಅಲ್ಲಿ ಬೆಣ್ಣೇ ಬಸವ ಇದ್ದಾನೆ. ರಾಮ ಇದ್ದಾನೆ. ಅದರ ಪಕ್ಕದಲ್ಲೇ ಒಂದು ಕಲ್ಯಾಣಿ ಇದೆ. ಅಲ್ಲಿನ ಮುರಿದು ಬಿದ್ದ ಮರದ ಮೇಲೆ ಕುಳಿತು ಸುಪ್ರಭ ಮತ್ತು ಕಲಾ ಗತಕಾಲದ ಪಳೆಯುಳಿಕೆಗಳಂತೆ ಫೋಟೊ ತೆಗೆಸಿಕೊಂಡ್ರು. ಈ ದೇವಸ್ಥಾನದ ಮುಂಭಾಗದಲ್ಲಿ ತುಂಬಾ ಹಳೆಯದಾದ ಒಂದು ತೇರು ಇದೆ. ನಮ್ಮ ಕಲಾ ಅದನ್ನ ಕಂಡ ಕೂಡಲೇ ಅದಕ್ಕಾಕಿದ್ದ ಕಬ್ಬಿಣದ ಗೇಟಿನಿಂದ ಅದು ಹ್ಯಾಗೋ ನುಸುಳಿ ತೇರಿನ ಗರ್ಭಸ್ಥಾನಕ್ಕೋಗಿ ದೇವಿಯಂತೆ ಕೈ ಮಾಡಿ ಕುಳಿತಳು. ಇಲ್ಲಿಂದ ಬೀಳುತ್ತೇನೆ ಅಂತ ಬೀಳೋ ಥರ ಫೊಟೋಗೆ ಪೋಸ್ ಕೊಟ್ಟಳು. ಅವಳ ಕ್ಯಾಮರಾಗೆ ಸಿಲುಕದವರೇ ಇರಲಿಲ್ಲ. ಕಂಡಲ್ಲಿ ಗುಂಡು ಅನ್ನುವ ಹಾಗೇ ಇವಳು ಸಿಕ್ಕಸಿಕ್ಕಿದ್ದನೆಲ್ಲ ತನ್ನ ಕೆಮೆರಾಗೆ ಆಹಾರವಾಗಿಸಿಕೊಳ್ಳುತ್ತಾ ಹೋಗುತ್ತಿದ್ದರೆ ನಮಗೋ ಬೆರಗು. ಬಂಡೆ ಮುಂದೆ ಸನ್ಯಾಸಿ ಥರ, ಬಂಡೆ ಬೆಂಡಾಗಿದ್ದರೆ ಅದನ್ನು ಕಿರುಬೆರಳಿನಲ್ಲಿ ಎತ್ತಿಹಿಡಿದ ಕೃಷ್ಣನ ಥರ ಹೀಗೆಲ್ಲ ಅವಳದು ಹಲವು ವೇಷ. ಮಜಾ ಇತ್ತು. ಅವಣಿ ಬೆಟ್ಟ ಒಂಥರಾ ಅಷ್ಟು ಕಡಿದಾದ ಬೆಟ್ಟವೇನಲ್ಲ. ಹತ್ತಲಿಕ್ಕೆ ಮೆಟ್ಟಿಲುಗಳಿವೆ. ನನಗೆ ವಿಚಿತ್ರ ಅನಿಸಿದ್ದು ಇಲ್ಲಿನ ಪ್ರತಿ ಕಲ್ಲು, ಬಂಡೆಗೂ ಒಂದೊಂದು ಪ್ರತೀತಿ ಇದೆ ಅಂತ ಹೇಳುವುದು. ಬೆಟ್ದದ ತಪ್ಪಲಿನಲ್ಲಿ ಒಂದು ಮಾವಿನ ತೋಟವಿದೆ. ಅಲ್ಲಿ ಅಶ್ವಮೇಧ ಯಾಗದ ಕುದುರೆ ಕಟ್ಟಿ ಹಾಕ್ತಿದ್ದರಂತೆ. ಅದರ ಹಿಂದಿನ ಎರಡು ಕಾಲನ್ನು ಮಾವಿನ ತೋಟದ ಕಂಬಕ್ಕೆ ಕಟ್ಟಿಹಾಕಿದ್ದರೆ ಮುಂದಿನ ಎರಡು ಕಾಲನ್ನು ಬೆಟ್ಟದ ಮೇಲೆ ಇರುವ ಬೃಹತ್ ಬಂಡೆಗೆ ಕಟ್ಟಿಹಾಕ್ತಿದ್ದರಂತೆ. ಅಲ್ಲ ಮಾರಾಯ ಅದಿರೋದು ಬೆಟ್ದದ ತಪ್ಪಲಿನಲ್ಲಿ. ಹೆಚ್ಚಕಡಿಮೆ ಎರಡು ಕಿಲೋಮೀಟರ್ ಆಗಬಹುದು. ಇನ್ನು ಬೆಟ್ಟದ ಮೇಲಕ್ಕೆ ಅಂದ್ರೆ ಅದು ಹೇಗೆ ಸಾಧ್ಯ? ಅಷ್ಟು ದೊಡ್ಡ ಕುದುರೆ ಇತ್ತಾ? ಅಂದದ್ದಕ್ಕೆರೀ ಸ್ವಾಮಿ ಆಗ( ಅಂದಕಾಲತ್ತಿಲ್) ಜನ ಕೂಡ ಇಪ್ಪತ್ತಿಪ್ಪತ್ತಡಿ ಇದ್ದರು ಕಣ್ರೀ ಅಂದ ಆ ಗೈಡ್.ಇಂತಿಪ್ಪ ಸಮಯದಲ್ಲೇ ನಮ್ಮ ಕುಮಾರಸ್ವಾಮಿ ಜಾರಿ ಬಿದ್ದುಬಿಟ್ಟ. ಬಿದ್ದ ಪೊಸಿಷನ್ ಹೇಗಿತ್ತೆಂದ್ರೆ ಎಲ್ಲರೂ ಕಿಸಕ್ ಅಂತ ನಕ್ಕಿದ್ದೇ ನಕ್ಕಿದ್ದು. ಅದನ್ನು ಫೋಟೋ ತೆಗಿಯಲಿಕ್ಕೆ ಆಗಲಿಲ್ಲವಲ್ಲ ಅಂತ ಸುಪ್ರಭ ಬೇಜಾನ್ ಬೇಜಾರು ಮಾಡ್ಕೋತಾ ಇದ್ದಳು. ಸುಮ್ನಿರಿ ಇದು ಕುಡ ಪ್ರತೀತಿ ಆಗುತ್ತೆ. ರೀ ಗೈಡ್ ನೆಕ್ಸ್ಟ್ ಬರುವವರಿಗೆ ಇಲ್ಲಿ ಕುಮಾರ ಜಾರಿ ಬಿದ್ದಿದ್ದಿ ಅಂತ ಹೇಳ್ರಿ ಅಂತ ಕುಮಾರ ಖ್ಯಾತೆ ತೆಗೆದ. ಪಾಪ ಆ ಗೈಡ್ ಸುಮ್ಮನೆ ನಕ್ಕ.ಇಡೀ ಬೆಟ್ಟದ ಉದ್ದಕ್ಕೂ ಇಂಥ ಉತ್ಪ್ರೇಕ್ಷಿತ(?) ಕಲ್ಪನೆಗಳೇ ಸಿಗುತ್ತವೆ. ಬೆಟ್ಟದ ಮೇಲೆ ಕುಳಿತು ಸೀತೆ ಅಳುತ್ತಿರುವುದು, ಲವ ಕುಶರ ತೊಟ್ಟಿಲು, ಸೀತೆಯ ತಿಜೋರಿ, ಅದನ್ನು ಕಾಯುವುದಕ್ಕೆ ಅಂತ ನಿಂತ ನಾಗರಾಜ, ರಾಮನ ಬೃಹತ್ ಕತ್ತಿ, ಲವಕುಶ ಹುಟ್ಟಿದ ಸ್ಥಳ, ಪಂಚ ಪಾಂಡವರ ಗುಡಿ. ಈ ನಡುವೆ ಅಲ್ಲಿ ನೂರಾರು ಕಲ್ಲಿನ ಮೇಲೆ ಕಲ್ಲು ಜೋಡಿಸಿಟ್ಟಿದ್ದು ಕಂಡುಬಂತು. ಹಾಗೆ ಜೋಡಿಸಿಟ್ಟರೆ ಮಕ್ಕಳಾಗುತ್ತವಂತೆ. ಮನೆ ಕಟ್ಟುತ್ತಾರಂತೆ ಅನ್ನುವುದೊಂದು ಪ್ರತೀತಿ. ನಮ್ಮ ಕುಮಾರಸ್ವಾಮಿ ಹತ್ತು ಕಲ್ಲನ್ನ ಪೇರಿಸಿಟ್ಟ. ಯಾಕೋ ಅಂದ್ರೆ ನನಗೆ ಹತ್ತು ಅಂತಸ್ತಿನ ಅಪಾಟರ್್ಮೆಂಟ್ ಕಟ್ಟೋದಿದೆ ಅಂದ. ಒನ್ಸ್ ಎಗೇನ್ ನಗು. ಹುಡುಗಿಯರಿಗೆಲ್ಲ ನೀವು ಕಲ್ಲುಜೋಡಿಸಿ ಬೇಗ ಮದುವೆ ಆಗಲಿ ಮಕ್ಕಳಾಗಲಿ ಅಂತ ಗೋಳು ಹುಯ್ದುಕೊಂಡ್ವಿ.ಬೆಟ್ದದ ನೆತ್ತಿಮೇಲೆ ಸೀತಾಮಾತೆಯ ದೇವಸ್ಥಾನವಿದೆ. ಸೀತೆಗೆ ಬೇರೆಲ್ಲೂ ಈ ಥರದ ದೇವಸ್ಥಾನ ಇಲ್ಲ ಅಂತಾರೆ ಪೂಜಾರಪ್ಪ. ಇರಬಹುದೇನೋ? ನಮಗೆ ಅಲ್ಲೇ ಇದ್ದ ಕೋತಿಗಳು ತುಂಬಾ ಇಂಟರೆಸ್ಟಿಂಗ್ ಅನಿಸಿದ್ವು. ಎರಡು ಕೋತಿಗಳಂತೂ ಡಿಸಪ್ಪಾಯಿಂಟ್ಗೆ ಒಳಗಾದ ಲವ್ವರ್ಗಳಂತೆ ಒಂದು ಬಂಡೆಯ ಮೇಲೆ ಮೌನವಾಗಿ ಕುಳಿತಿದ್ದವು.ಇನ್ನೊಂದು ಮಗುವನ್ನ ಮಲಗಿಸಿಕೊಂಡು ಹೇನು ಹೆಕ್ಕುತ್ತಿತ್ತು. ನೀವು ಹೋಗೋದಾದ್ರೆ ಬೆಟ್ಟದ ಸುತ್ತ ಮುತ್ತ ತಿನ್ನೋದಕ್ಕಾಗಲೀ ಕುಡಿಯೋದಕ್ಕಾಗಲೀ ಏನೂ ಸಿಗೋಲ್ಲ. ಏನಾದ್ರೂ ತಗೋಂಡೋದರೇನೆ ಒಳ್ಳೆಯದು.ಬೆಳಿಗ್ಗೆ ಬೆಳಿಗ್ಗೆ ಹೋದ್ರೆ ಒಂದು ಗಂಟೆಯಲ್ಲಿ ಬೆಟ್ಟದ ನೆತ್ತಿಮೇಲೆ ಇರಬಹುದು. ಬಿಸಿಲಾದ್ರೆ ತುಸು ಹತ್ತೋದು ಕಷ್ಟ. ದಟ್ಸ್ ಆಲ್. ಮಧ್ಯಾಹ್ನ ಎನ್ಜಿಓ ಒಂದರಲ್ಲಿ ಸಖತ್ ಊಟ. ಸಂಜೆ ಗೆಳೆಯ ನಾಗರಾಜ(ಸೆಂಟ್ ನಾಗ ಅಂತೀವಿ ಅವನ್ನ) ನ ಮನೆಗೋಗಿ ಜ್ಯೂಸ್ ಕುಡಿದು ವಾಪಸ್ ಬರುವಷ್ಟರಲ್ಲಿ ಕತ್ತಲು ಕತ್ತಲು.ಬೆಂಗಳೂರಿನ ಜಾಮ್ಗಳಲ್ಲಿ, ಅದೇ ಮನಾಟನಸ್ ಕೆಲಸದಲ್ಲಿ ಮುಳುಗಿಹೋದವರಿಗೆ ಅವಣಿ ಬೆಟ್ಟ ನಿಜಕ್ಕೂ ಒಂದು ರಿಲೀಫ್.ಸಾಧ್ಯ ಆದರೆ ನೀವೂ ಹೋಗಿ ಬನ್ನಿ.

Monday, September 8, 2008

ನಂದಿಯ ನೆತ್ತಿ ಮೇಲೆ ಕುಳಿತವನ ಸಿಟ್ಟುಗಿಟ್ಟು ಮುಂತಾದುವು...



ಅವತ್ತು ಭಾನುವಾರ. ಬೆಳಿಗ್ಗೆ ಎದ್ದವನಿಗೆ ಯಾಕೋ ನಂದಿಬೆಟ್ಟಕ್ಕೆ ಹೋಗಬೇಕೆನಿಸಿತು. ಕೆಲವೊಮ್ಮೆ ಮನಸು ಸಣ್ಣ ಮಕ್ಕಳ ಥರ ಹಾಗೇ ಹಟ ಹಿಡಿದುಬಿಡುತ್ತದೆ. ಅಲ್ಲಿ ನೋಡುವುದು ಏನೂ ಇಲ್ಲ ಅಂತ ಗೊತ್ತಿದ್ದರೂ ಅವಾಗೀವಾಗೊಮ್ಮೆ ಹೋಗಬೇಕೆನಿಸುತ್ತದೆ. ಅದಕ್ಕೆ ಕಾರಣ ಸಿಂಪಲ್. ಮನಸ್ಸು ರಿಲ್ಯಾಕ್ಸ್ ಆಗಲು ಬಯಸುತ್ತಿದೆ ಅಂತ. ಸರಿ, ಗೆಳೆಯ ಸದಾನಂದನಿಗೆ ಫೋನ್ ಮಾಡಿದರೆ ತಟ್ಟೆ ಇಡ್ಲಿ, ವಡೆ ತೆಗೆದು ಇಟ್ಟಿರ್ತೀನಿ ಬಾ ಅಂದ. ಭೇಸ್ ಆಯ್ತಲ್ಲ ಬಿಡು ಅಂದುಕೊಂಡವನೆ ಎಲ್ಲರನ್ನೂ ಗುಂಪು ಕಟ್ಟಿಕೊಂಡು ಹೊರಡುವಷ್ಟರಲ್ಲಿ ಬೆಳಿಗ್ಗೆ ಒಂಬತ್ತೂವರೆ. ಮಟ ಮಟ ಮಧ್ಯಾಹ್ನಕ್ಕೆಲ್ಲ ನಂದಿಯ ನೆತ್ತಿ ಮೇಲಿದ್ದೆವು.ನನಗೆ ಈ ನಂದಿ ಬೆಟ್ಟ ನೋಡಿದಾಗಲೆಲ್ಲ ಈ ಟೀಪು ಎಂಥ ಕಿಲಾಡಿ ಅನ್ನಿಸಿಬಿಡುತ್ತದೆ. ಇಷ್ಟು ಎತ್ತರದ ಪ್ಲೇಸ್ನಲ್ಲಿ ಪುಟ್ಟದೊಂದು ಅರಮನೆ ಕಟ್ಟಿಕೊಂಡು ಅವಾಗವಾಗ ಬಂದು ತಂಗಿದರೆ ಎಂಥ ಮನಸ್ಸಾದರೂ ಮುದಗೊಳ್ಳದೇ ಇರುತ್ತದೆಯೇ? ಸಮ್ಮರ್ನಲ್ಲಿ ಕೂಡ ಇಲ್ಲಿನ ಹವೆ ಕೂಲ್ ಕೂಲ್. ಹಾಗಾಗೆ ಶೋಕಿಲಾಲರಾದ ಬ್ರಿಟೀಷರಿಗೂ ಇದು ಅಚ್ಚುಮೆಚ್ಚಿನ ಸ್ಥಳವೇ. ಅದು ಬಿಟ್ಟರೇ ಟಿಪು ಡ್ರಾಪ್ನ ಕಲ್ಪನೆಯೇ ಭಯಾನಕ. ಈಗ ಅಲ್ಲಿ ಸೂಯಿಸೈಡ್ ಮಾಡ್ಕೊಳ್ಳೋರು ಜಾಸ್ತಿ ಆಗಿರೋದ್ರಿಂದ ಅದನ್ನು ಸೂಯಿಸೈಡ್ ಸ್ಪಾಟ್ ಅಂತ ಕರೀಬಹುದೇನೋ! ಯಾಕೆಂದ್ರೆ ನಾನು ಗಮನಿಸಿದ ಹಾಗೆ ಅಲ್ಲಿ ಬೀಳಬೇಕೆನ್ನುವವರಿಗೆ ಯಾವ ಅಡೆತಡೆಯೂ ಇಲ್ಲ. ಎಲ್ಲಿಂದ ಬಿದ್ದರೂ ಸಾಯಬಹುದು.ನಮ್ಮಲ್ಲಿನ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಈ ಪ್ರವಾಸೋದ್ಯಮ ಅನ್ನೋ ಕಾನ್ಸೆಪ್ಟೇ ಸರಿಯಾಗಿ ಗೊತ್ತಿಲ್ಲ. ಯಾವ ಟೂರಿಸ್ಟ್ ಸ್ಥಳಕ್ಕೋದರೂ ಅಲ್ಲಿ ಒಂದಾದರೂ ಮೂಲಭೂತ ಸೌಲಭ್ಯ ಇದೆಯಾ? ಕಳ್ಳಕಾಕರು, ಸುಲಿಗೆಕೋರರು, ಗೈಡ್ ಮಾಡ್ತೀವಿ ಅಂತ ತಲೆತಿನ್ನೋರು ಸಿಗ್ತಾರೆಯೇ ಹೊರತು ಒಬ್ಬನೇ ಒಬ್ಬ ಒಳ್ಳೇ ಗೈಡ್ ಸಿಗೋಲ್ಲ. ಅಲ್ರಿ ಪಕ್ಕದ ಸ್ಟೇಟ್ ಕೇರಳದವರು ಅಷ್ಟು ಚೆನ್ನಾಗಿ ಪ್ರವಾಸೋದ್ಯಮವನ್ನ ಡೆವೆಲಪ್ ಮಾಡಿ ಹಣ ಬಾಚ್ಕೋತಾ ಇದ್ರೆ ನಮ್ಮವರು ಏನೂ ಗೆಣಸು ಕೆರೀತಾ ಇದಾರಾ ಇಲ್ಲ ಬೂಸಾ ತಿಂತಾ ಇದಾರಾ? ಎಷ್ಟು ಸ್ಮಾರಕಗಳಿಲ್ಲ, ಎಷ್ಟು ಕೋಟೆಗಳಿಲ್ಲ, ಎಷ್ಟು ಪುರಾತನ ದೇಗುಲಗಳಿಲ್ಲ ನಮ್ಮಲ್ಲಿ. ಎಲ್ಲಾ ಕುಸಿದುಬೀಳುತ್ತಿವೆ. ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿವೆ. ಹಿಂದಿನ ತಲೆಮಾರಿನವರು ಕಟ್ಟಿಕೊಟ್ಟ ಒಂದು ಕಲಾಕೃತಿಯನ್ನ ಉಳಿಸಿಕೊಳ್ಳಲಿಕ್ಕೆ ಆಗಲಿಲ್ಲ ಅಂದ ಮೇಲೆ ಸುಮ್ಮನೆ ಟೆಕ್ನಾಲಜಿ ಇಟ್ಟುಕೊಂಡು ನೆಕ್ಕೋದಕ್ಕೆ ಆಗುತ್ತಾ? ಪೀಸಾ ಗೋಪುರ ವಾಲುತ್ತಿದೆ ಅಂದಾಗ ಅದು ಬೀಳದೆ ಇರಲಿ ಅಂತ ಇರಬರೋ ತಲೆ ಎಲ್ಲಾ ಉಪಯೋಗಿಸಿ ಅದಕ್ಕೊಂದು ಸಲ್ಯೂಷನ್ ಕಂಡುಹಿಡಿದರಲ್ಲ ಅದು ಕೆಲಸ ಅಂದ್ರೆ. ನಮ್ಮವರಾಗಿದ್ರೆ ಅದು ಬೀಳುತ್ತಿದೆ ಅಂತ ತಾವೇ ಬೀಳಿಸಿ ಎಮ್ಮೆ ಕಟ್ಟಾಕೋದಕ್ಕೆ ಬಳಸಿಕೊಳ್ಳುತ್ತಿದ್ರು.ಪ್ರವಾಸೋದ್ಯಮ ಅಂದ್ರೆ ಸುಮ್ಮನೆ ಜನಾನ ಬನ್ನಿ ಅನ್ನೋದಲ್ಲ. ಒಂದು ಸ್ಥಳದಲ್ಲಿರುವ ಆಕರ್ಷಣೆಯನ್ನ ಮತ್ತಷ್ಟು ಆಕರ್ಷಣೀಯವಾಗಿ ಮಾಡಬೇಕಾಗುತ್ತದೆ. ಅದು ಬಿಟ್ಟು ಬನ್ನಿ ಬನ್ನಿ ಅಂದ್ರೆ ಯಾರು ಬಂದಾರು? ಈ ಜಗತ್ತಿನಲ್ಲಿ ಮಾಡೋದಕ್ಕೆ ಕೆಲಸ ಇಲ್ಲ ಅಂತ ಯಾರೂ ಎಲ್ಲಿಗೂ ಬರೋಲ್ಲ ಅನ್ನುವುದು ಸಂಬಂಧಪಟ್ಟವರಿಗೆ ಗೊತ್ತಿದ್ದರೆ ಚೆನ್ನಯಾಕೋ ಇದನ್ನೆಲ್ಲ ಹೇಳಬೇಕೆನಿಸಿತು. ಬಹಳ ದುಃಖದ ಸಂಗತಿ ಅಂದ್ರೆ ನಮ್ಮನ್ನು ಯಾವ್ಯಾವೋ ಪುಂಡ ಪೋಕರಿಗಳೆಲ್ಲ ಆಳುವವರಾಗಿಬಿಟ್ಟಿದ್ದು. ಅವರಿಗೆ ಹಣ ಮಾಡುವುದಕ್ಕಷ್ಟೇ ಗೊತ್ತು. ನಾವು ಕೊಟ್ಟ ಹಣದಲ್ಲಿ ಅವನು ಲಕ್ಷುರಿ ಜೀವನ ಮಾಡುತ್ತಾನೆ. ಕಾಲೇಜ್ ಕಟ್ಟಿಸುತ್ತಾನೆ. ಇಂಡಸ್ಟ್ರೀ ಓಪನ್ ಮಾಡುತ್ತಾನೆ. ಹೊಟೇಲ್ ಕಟ್ಟಿ ಕನಸಿಗೆ ಬಣ್ಣ ಹಚ್ಚುತ್ತಾನೆ. ಇದೆಲ್ಲ ಏನು ಅವನ ಅಪ್ಪನ ಮನೆಯಿಂದ ತಂದ ದುಡ್ಡಾ? ನಮ್ಮ ಹೊಟ್ಟೆ ಮೇಲೆ ಹೊಡೆದು ಅವನು ಮಜಬೂತಾಗಿ ಬೆಳೆದಿರುತ್ತಾನೆ. ಅದೇ ಒಬ್ಬ ಬಡವ ನನಗೆ ಸಣ್ಣದೊಂದು ಸೂರಿಲ್ಲ ಸ್ವಾಮಿ ಅಂದ್ರೆ ಅವನನ್ನು ಕ್ಯಾರೇ ಎನ್ನುವವರಿಲ್ಲ. ಆದ್ರೆ ಅದೇ ಒಬ್ಬ ಪುಢಾರಿ ಎಕರೆಗಟ್ಟಲೇ ಭೂಮಿ ಲೂಟಿ ಹೊಡೆದು ಬಂಗಲೇ ಮೇಲೆ ಬಂಗಲೇ ಕಟ್ಟಿಸಿಕೊಳ್ಳುತ್ತಾನೆೆ. ಹೊಟ್ಟೆ ಹುರಿಯಲ್ವಾ? ಇದ್ಯಾವ ನ್ಯಾಯ ಸ್ವಾಮಿ? ನನ್ನನ್ನ ಕೇಳಿದ್ರೆ ಎಲ್ಲೀ ತನಕ ಜನ ದಂಗೆ ಏಳಲ್ವೋ ಅಲ್ಲೀ ತನಕ ಈ ರಾಜಕಾರಣಿಗಳು ಹೀಗೇನೇ ನಮ್ಮನ್ನು ಸುಲಿಗೆ ಮಾಡ್ತಾನೆ ಇರ್ತಾರೆ. ಯಾಕೋ ಇದನ್ನೆಲ್ಲ ಯೋಚಿಸುತ್ತಾ ಕೂತರೆ ಮೈಯೆಲ್ಲ ಉರಿದುಹೋಗುತ್ತೆ. ಬಟ್ ಅಂಥ ಕಾಲವೂ ಒಂದಿನ ಬಂದೇ ಬರುತ್ತೆ ಅನ್ನುವ ಆಶಾವಾದಿ ನಾನು.ನೋಡೋಣ.ಓಕೆ ಒಂದು ಇನ್ಸಿಡೆಂಟ್ ಹೇಳ್ತೀನಿ. ಮಜಾ ಅಂದ್ರೆ, ಶಿವಾನಂದ್ ತೆಗೆದುಕೊಂಡು ಬಂದಿದ್ದ ಎರಡುಮೂರು ಸೇರು ಕಡಲೆ ಕಾಯಿಯನ್ನು ನಿಂತ ನಿಲುವಿನಲ್ಲೆ ಕೋತಿಯೊಂದು ಎಗರಿಸಿಕೊಂಡು ಹೋಗಿದ್ದು. ಹೋಗ್ಲಿ ಬಿಡು ಅಂದುಕೊಳ್ಳುತ್ತಿರುವಾಗಲೇ ಶಿವಾನಂದನ ಎಡಗೈಲಿದ್ದ ಚಿಪ್ಸ್ ಪ್ಯಾಕೆಟ್ಟನ್ನ ಇನ್ನೊಂದು ಕೋತಿ ಎಗರಿಸಿತ್ತು. ಅದಾಗಿ ಮಧ್ಯಾಹ್ನ ಊಟ ಎಲ್ಲಾ ಮುಗಿದು ತಂದಿದ್ದ ಬಾಳೆ ಹಣ್ಣನ್ನ ತಿನ್ನೋಣ ಅಂತ ಕಾರಿಂದ ಇನ್ನೇನು ತೆಗೆಯಬೇಕು ಅದೆಲ್ಲಿತ್ತೋ ಗಡವ ರಪ್ಪಂತ ಕಿತ್ತುಕೊಂಡು ಹೋಯ್ತು. ಶಿವಾನಂದ್ಗಂತೂ ಸಿಟ್ಟೇ ಸಿಟ್ಟು. ಆದ್ರೆ ನೋ ಯೂಸ್. ಇಂಥದೇ ಒಂದು ಘಟನೇ ನೆನಪಾಯ್ತು. ಒಂದ್ ಸಾರಿ ಮುತ್ತತ್ತಿಗೋಗಿ ಬರ್ತಾ ಇದ್ವಿ. ಸದಾನಂದ್ ಮುಂದೆ ಕೂತಿದ್ರು. ದಾರಿ ಮಧ್ಯದಲ್ಲಿ ಕಾರು ನಿಲ್ಲಿಸಿ ಕಡಲೇ ಕಾಯಿ ತಿಂತಾ ಕೂತಿದ್ವಿ. ನಾನು ಶಿವಾನಂದ್ ಹಿಂದೆ. ಡ್ರೈವರ್ ಸೀಟಿನಲ್ಲಿದ್ದವನು ಬಸವರಾಜ್. ಅದೆಲ್ಲಿತ್ತೋ ಒಂದು ಮಂಗ ಚಂಗನೆ ಹಾರಿ ಕಾರಿನೊಳಕ್ಕೆ ಬಂದು ಸದಾನಂದನ ತೊಡೆ ಮೇಲೆ ಆಸೀನವಾಯಿತು. ಕೊಟ್ಟ ಕಡಲೆ ಕಾಯನ್ನು ತಿನ್ನುತ್ತಾ ಇನ್ನಷ್ಟು ಕೊಡು ಅಂತ ಮಕ್ಕಳು ಪೀಡಿಸ್ತಾವಲ್ಲ ಹಾಗೆ ಅಲ್ಲೇ ಕುಳಿತಿತು. ಹೋಗೆಂದ್ರೂ ಹೋಗ್ತಿಲ್ಲ. ಒಳ್ಳೇ ಕತೆಯಾಯ್ತಲ್ಲ ಅಂತ, ನಾವೇ ಕಾರಿನಿಂದ ಇಳಿಯೋಣ. ಅದೂ ಆಗ ಇಳೀಬಹುದು ಅಂತತ ಎಲ್ಲಾ ಇಳಿದರೂ ಉಹೂಂ ಅದು ಡ್ರೈವರ್ ಸೀಟಿಗೆ ಹಾರಿ ಕುಳಿತಿತು. ಕೊನೆಗೆ ಬಸವರಾಜ್ ಒಂದು ಕೋಲು ತೆಗೊಂಡು ಹೋಗ್ತೀಯೋ ಇಲ್ವೋ ಅಂತ ಅಬ್ಬರಿಸಿದ. ಹೋಗೋ ಲೇಯ್ ನಿನ್ನಂತವನನ್ನ ಎಷ್ಟು ಜನ ನೋಡಿಲ್ಲ ಅನ್ನುವಂತೆ ಒಮ್ಮೆ ಕೆಕ್ಕರಿಸಿ ನೋಡಿ ಅಲ್ಲೇ ಕುಳಿತಿತು. ಏನು ಮಾಡಿದರೂ ಹೋಗ್ತಿಲ್ಲ. ಕೊನೆಗೆ ನಾನು ನನ್ನ ಜೇಬಿನಲ್ಲಿದ್ದ ಕಡಲೆ ಕಾಯಿಯನ್ನೆಲ್ಲ ತೆಗೆದು ಜೋರಾಗಿ ಮೇಲಕ್ಕೆಸೆದೆ. ಅದೇನನ್ನಿಸಿತೋ ಚಂಗಂತ ಬಂದು ಕುಳಿತು ಒಂದೊಂದನ್ನೆ ಆರಿಸಿಕೊಂಡು ತಿನ್ನತೊಡಗಿತು.ನಾವು ಪರಾರಿ.ಯಾಕೋ ಎಲ್ಲಿಗೆ ಹೋದರೂ ಇದೊಂದು ಘಟನೆ ಗಕ್ಕನೆ ನೆನಪಾಗುತ್ತದೆ.

Saturday, September 6, 2008

ಅಮ್ಮಂಗೆ ಸೀರೆ ಕೊಡಿಸಬೇಕು ಅನ್ನೋ ಕನಸಿತ್ತು


ನಿಮಗೆ ಗೊತ್ತಿದೆ. ಫಸ್ಟ್ ಹಾಫ್ ಈಗಾಗಲೇ ನಾಡು-ನಾಡಿನಾಚೆಗೂ ಮೆಚ್ಚುಗೆ ಪಡೆದಿದೆ. ಅಭಿನಂದನಾ ಗ್ರಂಥವೊಂದನ್ನು ಅಷ್ಟು ಚಂದಕ್ಕೂ ಮಾಡಬಹುದು ಅನ್ನುವುದನ್ನು ತೋರಿಸಿಕೊಟ್ಟಿದ್ದೀರಿ. ಹ್ಯಾಟ್ಸಾಫ್ ಟು ಆಲ್ ಅಂತ ಪ್ರಶಂಸೆಗಳಸುರಿಮಳೆಯಾಗುತ್ತಿದೆ. ನಾನಂತೂ ಫುಲ್ ಹ್ಯಾಪಿ.

ಅಂದಹಾಗೆ ಫಸ್ಟ್ ಹಾಫ್ ಪುಸ್ತಕದಲ್ಲಿ ನಾನು ರವಿಬೆಳಗೆರೆಯವರನ್ನ ಒಂದು ಸಣ್ಣ ಇಂಟರ್ವ್ಯೂ ಅಂತ ಮಾಡಿದ್ದೀನಿ. ತುಂಬಾ ಕ್ರಿಸ್ಪಿಯಾದುದು. ಇಂಟರೆಸ್ಟಿಂಗ್ ಆದುದು. ಜಸ್ಟ್ ಅವರ ಮನಸ್ಸಿನ ಕದ ತಟ್ಟುವ ಪ್ರಯತ್ನ ಅಷ್ಟೆ. ಸುಮ್ನೆ ಓದಿಕೊಳ್ಳಿ.


ಅಮ್ಮನಿಗಿಂತ ಹೆಚ್ಚು ಇಷ್ಟ ಆಗೋರು?

ಸೋದರ ಮಾವ

ಪದೇ ಪದೇ ಇಷ್ಟ ಆಗುವ ಹಾಡು?

ಓಡುವ ನದಿ ಸಾಗರವಾ...

ಮೊದಮೊದಲು ಸಿಗರೇಟ್ ಸೇದಿದ್ದು?

ಮೂರನೇ ಕ್ಲಾಸಿನಲ್ಲಿ

ಕಾಲೇಜಿನ ನಿಮ್ಮ ಕನಸಿನ ಹುಡುಗಿ?

ನಟಿ ರೋಜಾ ರಮಣಿ

ಲಲಿತಾ ಅವರನ್ನ ಏನಂತ ಕರೀತಿದ್ರಿ?

ಮೇಡಮ್ ಷೇರ್

ನಿಮ್ಮ ಬೆಸ್ಟ್ ಫ್ರೆಂಡ್?

ಅಶೋಕ್ ಶೆಟ್ಟರ್

ನಿಮ್ಮ ಇಷ್ಟದ ಬರಹಗಾರ?

ಅನರ್ೆಸ್ಟ್ ಹೆಮ್ಮಿಂಗ್ವೇ

ನಿಮಗೊಬ್ಬ ಗುರು ಇದ್ದಾನಾ?

ಚಲಂ, ಖುಷ್ವಂತ್ ಸಿಂಗ್

ನೀವು ಓದಿದ ಬೆಸ್ಟ್ ಬುಕ್?

ದಿ ಗಾಡ್ ಫಾದರ್

ಓದಿದ ಇರಿಟೇಟಿಂಗ್ ಅನಿಸೋ ಪುಸ್ತಕ?

ಅಂಥವು ಓದಿಸಿಕೊಳ್ಳೊಲ್ಲ

ದಿ ಬೆಸ್ಟ್ ಅಂಡ್ ವಸ್ಟರ್್ ಮೂವೀ?

ತೆಲುಗು 'ದೇವದಾಸು'/ ಅದರ ಎರಡನೇ ವರ್ಶನ್

ಬಾಲ್ಯದ ನಿಮ್ಮ ಕನಸು ಏನಾಗಿತ್ತು?

ದೊಡ್ಡವನಾಗಿ ಅಮ್ಮಂಗೆ ಸೀರೆ ಕೊಡಿಸಬೇಕು

ಪತ್ರಕರ್ತನಾಗದೇ ಇದ್ದಿದ್ದರೇ?

ಲಾರಿ ಡ್ರೈವರ್ ಆಗಿರ್ತಿದ್ದೆ

ನಿಮ್ಮ ಕಣ್ತೆರಿಸಿದ ಘಟನೆ?

ಮೊದಲ ಮೋಸವಾದಾಗ

ಮೊದಲನೇ ಕ್ರಷ್?

ನಟಿ ಭಾರತಿ

ನಿಮ್ಮ ಇಷ್ಟದ ಆ್ಯಕ್ಟರ್? ಆ್ಯಕ್ಟ್ರೆಸ್?

ದೇವಾನಂದ್/ ಮಧುಬಾಲಾ

ದೇವರೇ ಕಾಪಾಡು ಅಂದದ್ದಿದೆಯಾ?

ನೆವೆರ್

ನೀವು ಈಗಲೂ ಭಯ ಪಡೋದು ಯಾರಿಗೆ?

ನಿವೇದಿತಾ

ನೀವು ಕ್ಲಾಸಾ, ಮಾಸಾ?

ಜಸ್ಟ್ ಪಾಸು

ಫೇವರೀಟ್ ಕಾರ್?

ಕಾಲು

ಮೂವರು ಮಕ್ಕಳಲ್ಲಿ ಬಹಳ ಇಷ್ಟ ಅನ್ನೋರು?

ಕರ್ಣ, ಬಾನಿ, ಚೇತೂ

ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಅಂತಂದ್ರೆ?

ಅನುಭವ ಆಗಿದೆ

ರಾಜಕೀಯ ಮಾಡ್ತೀರಾ?

ಈಗಲ್ಲ

ಸದಾ ನಿಮ್ಮ ಟೇಬಲ್ ಮೇಲಿರೋ ವಸ್ತು?

ಕನ್ನಡಕ, ಆ್ಯಶ್ಪಾಟ್

ಕನಸಿಗೊಂದು ವ್ಯಾಖ್ಯಾನ?

ಅದು ನನ್ನ ಜೀವನ

ಪ್ರೀತಿ ಸುಳ್ಳೋ ನಿಜವೋ?

ತುಂಬ ಸತ್ಯ

ಸುಳ್ಳು ಹೇಳದೆ ಬದುಕೋದಕ್ಕೆ ಸಾಧ್ಯಾನಾ?

ನನ್ನ ಕೈಲಿ ಆಗಿಲ್ಲ

ಏನಾದ್ರೂ ಕದ್ದದ್ದುಂಟಾ?

ಮನಸು

ಇಷ್ಟವಾದ ಕಲರ್?

ಲ್ಯಾವೆಂಡರ್

ಸಿಎಮ್ ಆದ್ರೆ?

ನೀವೇ ಡೆಪ್ಯೂಟಿ

ನೀವು ಸಕ್ಕತ್ ಹಾಟಾ ಇಲ್ಲ ಕೂಲಾ?

ರೂಮ್ ಟೆಂಪರೇಚರ್

ಹೊಗಳಿಕೆ-ತೆಗಳಿಕೆ ಎರಡನ್ನೂ ಹೇಗೆ ಸ್ವೀಕರಿಸ್ತೀರಿ?

ಕಾಫಿ ಮತ್ತು ಸಿಗರೇಟಿನಂತೆ

ಎಂದಾದರೂ ಆಟೋಗ್ರಾಫ್ ಹಾಕಿಸಿಕೊಂಡದ್ದುಂಟಾ?

ಗೆಳತಿಯರ ಕೈಲಿ

ಬೇಜಾನ್ ಅತ್ತಿದ್ದು?

ಅಮ್ಮ ಸತ್ತ ಎಷ್ಟೋ ದಿನಕ್ಕೆ

ಅಪರೂಪದ ಕಾಣಿಕೆ ಕೊಟ್ಟೋರು?

ಜನ್ಮ ಕೊಟ್ಟೋರು

ಸ್ಮೋಕಿಂಗ್ ಈಸ್ ಇಂಜ್ಯೂರಿಯಸ್ ಟು ಹೆಲ್ತ್ ನಿಮಗೆ ಅನ್ವಯ ಆಗುತ್ತಾ?

ನಾಟ್ ಯೆಟ್

ಯಶಸ್ಸು ಅಂದ್ರೆ?

ಒಮ್ಮೆ ಸಿಕ್ಕು ಆಮೇಲೆ ಚಟವಾಗುವಂಥದು

ಸೋಲಿಗೊಂದು ಸಿಂಪಥಿ ಬೇಕೆ?

ಥತ್!

ಪ್ರೀತೀಲಿ ಹೇಳಿಹೋಗು ಕಾರಣ ಅಂದವರ್ಯಾರು?

ನಾನೇ

ಪದೇ ಪದೇ ಆಗೋ ನೆನಪು?

ಅಮ್ಮ

ರವಿ ಬೆಳಗೆರೆಯನ್ನ ನೀವೇ ವ್ಯಾಖ್ಯಾನಿಸೋದಾದ್ರೆ?

ನಂಬಿಕಸ್ಥ

ಕವಿತೆ ಬರೆದದ್ದಿದೆಯಾ?

ಅಯ್ಯಪ್ಪ!

ಈಡೇರದ ಅತಿ ಸಣ್ಣ್ಡ ಕನಸು?

ಓಡಿ ಓಡಿ ಓಡಿ ಸುಸ್ತಾಗುವುದು

ನಿಮ್ಮ ಸ್ಟ್ರೆಂತ್ ಅಂಡ್ ವೀಕ್ನೆಸ್?

ಕೆಲಸ ಮತ್ತು ಕೆಲಸ

ನಿಮ್ಮ ಪಾಲಿನ ದೇವರಂಥವರು?

ಬೆಳಗೆರೆ ಕೃಷ್ಣಶಾಸ್ತ್ರಿಗಳು

ಪದೇ ಪದೇ ಹೋಗಬೇಕು ಅನ್ನಿಸೋ ಸ್ಥಳ?

ಜೋಯಿಡಾದ ಕಾಡು

ನಕ್ಸಲಿಸಂ ಬೇಕಾ?

ಮ್...!

ಇಷ್ಟ ಪಡುವ ತಿಂಡಿ?

ಬ್ರೈನ್ ಡ್ರೈ

ಶ್ರೇಷ್ಠ ದಾನ ಅಂದ್ರೆ?

ದುಡಿಯುವ ಹಾದಿ ತೋರಿಸುವಿಕೆ

ಆಫ್ಟರ್ ಫಿಫ್ಟಿ ಮನಸ್ಸು ಏನನ್ನುತ್ತೆ?

ಹದಿನೆಂಟು ಮುಗಿದಂತಿಲ್ಲ

ಖಾಸ್ಬಾತ್ ಖಾಲಿ ಆದ್ರೆ?

ನಾನೆಲ್ಲಿತರ್ೀನಿ?

ಬರೆದು ಬರೆದು ಬೋರಾಗಿದೆಯಾ?

ನೆವೆರ್

ನಿಮ್ಮ ಪುಸ್ತಕಗಳಲ್ಲೆಲ್ಲ ಹೆಚ್ಚು ಇಷ್ಟ ಆಗೋ ಪುಸ್ತಕ?

ಇನ್ನೂ ಬರೀಬೇಕಿದೆ

ನಾನು ಅವರ ಥರ ಆಗಬೇಕು ಅನಿಸಿದ್ದಿದೆಯಾ?

ಮನೋಹರ ಮಳಗಾಂವಕರ್

ಒಂದಿನಾ ಆದ್ರೂ ಹಾಯ್ ಬೆಂಗಳೂರ್! ಎಡಿಟರ್ಷಿಪ್ ಬೇರೆಯವರಿಗೆ ಬಿಟ್ಟುಕೊಡ್ತೀರಾ?

ನೆವೆರ್

ಸಿಎನ್ನೆನ್- ಐಬಿಎನ್ ಚಾನಲ್ಗೆ ಛೀಫ್ ಆಗಿ ಅಂದ್ರೆ ಹೋಗ್ತೀರಾ?

ನೆವೆರ್

ನಿಮ್ಮ ಕೋರ್ ಟೀಮನ್ನ ಯಾರಾದ್ರೂ ಹೈಜಾಕ್ ಮಾಡಿದ್ರೆ?

ಅವರ ಗತಿ?

ಸಿಗರೇಟ್ ಕಂಪನಿಗಳೆಲ್ಲ ಮುಚ್ಚೋದ್ರೆ?

ಬೀಡಿಗೆ ಬರವುಂಟೆ?

ನಿವೇದಿತಾ ಅಂದ್ರೆ?

ಅಮ್ಮ

ಐಶೂ ಆಯ್ತು...ಶಿಲ್ಪಿ ಆಯ್ತು...ಸಾನಿಯಾ ಆಯ್ತು ಮುಂದ?

ಅದ್ಯಾರು ಪಡುಕೋಣೇ?

Friday, August 29, 2008

ಹೇಗೆ ಹೇಳಲೀ ಅವನೇ ಬಂದಿದ್ದು ಅಂತ...




ಅವತ್ತು ಮನೆ ಬಾಗಿಲು ತೆಗೆದಾಗ
ಮನೆಯ ಒಳಗಡೆ ನಾನಿರಲಿಲ್ಲ

ಒಳಗೆ ಬಂದವನಿಗೆ ಬಾಯಾರಿಕೆ
ಎಂಥದೋ ಚಡಪಡಿಕೆ
ನೋಡಿದರೆ ಕಳ್ಳನಂತೆ, ಮಳ್ಳನಂತೆ
ಗುಮ್ಮನ ಗುಸಕ್
ಏನೋ ಕದಿಯಲು ಬಂದಿದ್ದಾನೆಯೇ?
ಕದ್ದುಬಿಟ್ಟರೇನು ಗತಿ ಮಗಳ ಹೃದಯ ?

ಅಮ್ಮ ಅದ್ದರಿಸಿದ್ದಾಳೆ
ಹಚಾ ಹಚಾ
ಸುಮ್ಮನೆ ಹಾಗೆ ಯಾರ ಮನೆಯಂಗಳಕ್ಕೂ
ಬರಬಾರದು!
ಮನದಂಗಳಕ್ಕೂ!

ಆದರೂ
ಅವನ ಕಣ್ಣಿದೆಯಲ್ಲೇ
ನೀಲಿ ಬಾನನ್ನೆಲ್ಲ ತಂದು ಎರಕ ಹುಯ್ದಂತೆ
ಹುಬ್ಬೋ ಕಡುಕಪ್ಪು ಕಾಮನ ಬಿಲ್ಲು
ಎದೆ ಸೆಟೆದು ನಿಂತರೆ ವೀರಬಾಹು

ಎಲ್ಲಾ ಸರಿ
ಸರಿಯಿಲ್ಲ ಅವನು ಇಲ್ಲಿಗೆ ಬಂದದ್ದು
***
ನಾನು ಹೋಗುವಷ್ಟರಲ್ಲಿ
ಅವನು ಹೋಗಿಯಾಗಿತ್ತು

ಅಮ್ಮ ಕೇಳಿದಳು
ಬಂದವನು ಯಾರೆ?

ಯಾರೆಂದು ಹೇಳಲಿ?
ಯಾರೋ ಕಳ್ಳನಿರಬೇಕು ಬಿಡು!

ಕದಿಯುವುದಕ್ಕೆ ನಮ್ಮಲ್ಲೇನಿದೆ
ನನ್ನ ಹೃದಯವೊಂದನ್ನು ಬಿಟ್ಟು

ಆದರೂ
ಖಾಲಿ ಎದೆಯ ಒಳಗೊಂದು
ಕನಸು ಜೀಕುತ್ತಿದೆ
ಮನಸ ದಾರಿಯಲ್ಲಿ
ಮಲ್ಲಿಗೆ ಅರಳಿದೆ

ಹಾರಿ ಬಿಡಲಾ?

ಬಾಗಿಲಲ್ಲಿ ಅವನ ಕೈಯ್ಯ ಮಿದುವಿತ್ತು
ಮೈಯ್ಯ ಘಮವಿತ್ತು
ಬಿಟ್ಟು ಹೋದ ಉಸಿರಿನ
ಪಸೆ ಇತ್ತು

ಅಮ್ಮನಿಗೋ ಆತಂಕ
ಹೇಗೆ ಹೇಳಲೀ ಅವನೇ ಬಂದಿದ್ದು ಅಂತ!

Thursday, August 28, 2008

ಆಳೆತ್ತರಕ್ಕೆ ನಿಂತಿದ್ದ ಅಪ್ಪನ ಕಣ್ಣಲ್ಲೂ ಅಂತದೇ ದುಃಖವಿತ್ತಾ?

ಅವನು ರಿಚ್ rich ಅಪ್ಪ.ಮೂರು ತಲೆಮಾರು ತಿಂದರೂ ಮುಗಿಯದ ಆಸ್ತಿ ಅವನ ಬಳಿಯಿತ್ತು. ಕಾರು, ಬಂಗಲೇ, ಎಸ್ಟೇಟ್. ಹೇಳಬೇಕೆಂದ್ರೆ ಯಾವುದೇ ಹೊಸ ಕಾರು ಬಂದರೂ ಅದರ ಮಾರನೇ ದಿನವೇ ಇವರ ಮನೆಯ ಮುಂದೆ ನಿಂತಿರುತ್ತಿತ್ತು, ಅಷ್ಟರಮಟ್ಟಿಗೆ ಈ ಅಪ್ಪ ಕರೋಡ್ಪತಿ.ಇಂಥ ಕರೋಡ್ಪತಿಗೆ ತೇಜ ಅನ್ನೋ ಒಬ್ಬನೇ ಸುಪುತ್ರ. ಇಂಜಿನಿಯರಿಂಗ್ ಓದುತ್ತಿದ್ದ. ಈ ಬಾರಿ ಕೊನೆ ಸೆಮಿಸ್ಟರ್ನಲ್ಲಿ ಹೈಯೆಸ್ಟ್ ಮಾಕ್ಸರ್್ ತಗೊಂಡೇ ತಗೋತೀನಿ. ಕಸಮ್ ಡ್ಯಾಡ್ . ಆದ್ರೆ ನನ್ನ ಬತರ್್ಡೇಗೆ ನನಗೊಂದು ಸ್ಕೋಡ ಕಾರು ಬೇಕೇ ಬೇಕು ಅಂತ ಅಪ್ಪನಿಗೆ ದುಂಬಾಲು ಬಿದ್ದಿದ್ದ. ಒಬ್ಬನೇ ಮಗ, ಇರುವ ಆಸ್ತಿಯನ್ನೆಲ್ಲ ಯಾರಿಗೇ ಕೊಡೋದು? ಮಜ್ಜವಾಗಿರಲಿ ನನ್ನ ಮಗ ಅನ್ನೋದು ಅಪ್ಪನ ಆಸೆ. ಹಾಗಿದ್ದೂ ತುಂಬಾ ಸಲುಗೆ ಬಿಟ್ಟರೆ ಎಲ್ಲಿ ಮಗ ದಾರಿ ತಪ್ಪಿ ಹೋದಾನೋ ಅನ್ನುವ ಆತಂಕವೂ ಒಳಗೊಳಗೇ ಕಾಡುತ್ತಿತ್ತು. ಮಗ ಸ್ಕೋಡ ಕೇಳಿದನಲ್ಲ ಆವಾಗ, ನೋಡೋಣ ಮೈ ಸನ್ ಅಂತ ಬೇಕಂತಲೇ ಮಾತು ತೇಲಿಸಿಬಿಟ್ಟಿದ್ದ. ಅಪ್ಪ ನನಗೆ ಸ್ಕೋಡಾ ಕಾರು ಕೊಡಿಸದೇ ಇರೋದಿಲ್ಲ. ಯಾಕೆಂದ್ರೆ ನಾನಂದ್ರೆ ಅಪ್ಪನಿಗೆ ಅಷ್ಟಿಷ್ಟ. ಇಷ್ಟಕ್ಕೂ ಅವರು ನಾನು ಏನು ಕೇಳಿದೆನೋ ಅವನ್ನೆಲ್ಲ ಕೊಡಿಸಿಯೇ ಇದಾರೆ! ಇದನ್ನೂ ಹಾಗೇ, ಖಂಡಿತಾ ಕೊಡಸ್ತಾರೆ! ನನ್ನ ಬತರ್್ಡೇ ಪಾಟರ್ಿ ಮುಗಿಸಿಕೊಂಡು ಮೈ ಸ್ವೀಟ್ ಹಾಟರ್್ ಋತುವನ್ನು ಕರೆದುಕೊಂಡು ಜುಮ್ಮಂತ ಒಂದು ರೌಂಡ್ ಹೋಗಿ ಬಂದುಬಿಡಬೇಕು. ಸಾಧ್ಯವಾದರೇ ಅಪ್ಪನಿಗೆ ಸುಳ್ಳು ಹೇಳಿ ಅವಳನ್ನು ಬೇಕಲ್ ಫೋಟರ್್ಗೆ ಕರ್ಕೊಂಡು ಹೋಗಬೇಕು. ಅಲ್ಲಿ ಕೋಟೆ ಮೇಲೆ ನಿತ್ಕೊಂಡು ಅವಳಿಗೊಂದು ಕೆಂಪು ಗುಲಾಬಿ ಕೊಡ್ತಾ ಕೊಡ್ತಾ ಛಕ್ಕಂತ ಒಂದು ಮುತ್ತು ಕೊಟ್ಟುಬಿಡಬೇಕು. ಹೇಗೆ ರಿಯಾಕ್ಟ್ ಮಾಡ್ತಾಳೋ ಏನೋ? ಬಟ್ ನಾನು ಮಾಡೇ ಮಾಡ್ತೀನಿ. ಅದಕ್ಕಿಂತ ಥ್ರಿಲ್ಲಿಂಗ್ ಆದ ವಿಷ್ಯ ಇನ್ನೊಂದುಂಟೆ. ದೇವರೇ ಅಪ್ಪ ಕಾರು ಕೊಡಿಸಲಿ.... ಋತುಗೆ ಪಪ್ಪಿ ಕೊಡುವ ಭಾಗ್ಯ ನನ್ನದಾಗಲೀ...ಹೀಗೇನೋ ಹಂಬಲಿಸಿದ. ಆ ದಿನ, ಬತರ್್ಡೇ ದಿನವೂ ಬಂತು. ಹೊಸ ಬಟ್ಟೆ, ಹೊಸ ಕಾರು, ಋತುಗೆ ಕೊಡುವ ಮುತ್ತು ನೆನಸಿಕೊಂಡೇ ತೇಜು ರೋಮಾಂಚಿತನಾಗಿದ್ದ. ಇಂಜಿನಿಯರಿಂಗ್ ಅನ್ನು ಹೈಯಸ್ಟ್ ಮಾಕ್ಸರ್್ ತೆಗೆದು ಪಾಸು ಮಾಡಿದ್ದ. ಅಪ್ಪ ಖುಷಿ ಖುಷಿಯಾಗಿದ್ದರು. ಕಾರು ಗ್ಯಾರಂಟಿ ಬಿಡು ಅಂದುಕೊಂಡ. ಬೆಳಿಗ್ಗೆ ಎದ್ದವನಿಗೆ ಅಪ್ಪನದೇ ಮೊದಲ ವಿಷ್. ಹ್ಯಾಪಿ ಬತರ್್ ಡೇ ಟು ಯು ಮೈ ಸನ್. ಜೊತೆಗೆ ಕೈಯಲ್ಲೊಂದು ಕೆಂಪು ಕೆಂಪಾದ ಕಾಗದದಿಂದ ವ್ರಾಪ್ ಮಾಡಿದ ಗಿಫ್ಟ್. ಎಂದಿನಂತೆ ಒಂದು ಸಿಹಿ ಮುತ್ತು. ತೇಜುನ ತಲೆಯ ತುಂಬಾ ಸ್ಕೋಡಾ ಕಾರೇ! ಖುಷಿ ಖುಷಿಯಿಂದ ಗಿಫ್ಟ್ಪ್ಯಾಕ್ ಓಪನ್ ಮಾಡಿದರೆ ಒಳಗೇನಿದೆ? ಫಳ ಫಳ ಹೊಳೆಯುವ ಭಗವದ್ಗೀತೆ ಪುಸ್ತಕ. ತೇಜುಗೆ ಶಾಕ್. ವಾಟ್ ಈಸ್ ದಿಸ್ ಡ್ಯಾಡ್. ನಿಮ್ಮಿಂದ ನಾನು ಈ ಭಗವದ್ಗೀತೆ ಎಕ್ಸ್ಪೆಕ್ಟ್ ಮಾಡಿರಲಿಲ್ಲ. ಐ ಹೇಟ್ ಯು ಡ್ಯಾಡಿ. ನಾನೀಗಲೇ ಮನೆ ಬಿಟ್ಟು ಹೋಗ್ತಾ ಇದೀನಿ ಅಂತ ಅಪ್ಪನ ಒಂದು ಮಾತಿಗೂ ಕಾಯದೇ ಕಣ್ಣೀರಾಕಿಕೊಂಡು ಹೊರಟುಬಿಟ್ಟಿದ್ದ. ಹೋದವನು ಕೆಲವೇ ವರ್ಷಗಳಲ್ಲಿ ಮುಂಬೈನ ದೊಡ್ಡ ಬಿಜಿನೆಸ್ ಮ್ಯಾನ್ ಎನಿಸಿಕೊಂಡ. ತೇಜು ಈಗ ಬಿಜಿ ಬಿಜಿ ಬಿಜಿ. ಹೀಗಿದ್ದವನಿಗ,ೆ ಎಷ್ಟೋ ವರ್ಷಗಳ ನಂತರ ಅಪ್ಪನನ್ನ ನೋಡಬೇಕು ಅಂತ ಅನಿಸಿದೆ. ಹೆಂಡತಿ, ಮಕ್ಕಳು, ಕೆಲಸ, ಆಸ್ತಿ ಮಾಡುವುದರಲ್ಲೇ ವಯಸ್ಸಾದ ಅಪ್ಪನನ್ನು ಮರೆತುಬಿಟ್ಟೆನಲ್ಲ ಅಂತ ಕಾಡುವುದಕ್ಕೆ ಶುರುವಾಗಿದೆ. ತಕ್ಷಣ ಹೊರಡಬೇಕು ಅಂತ ಅಂದುಕೊಂಡವನ ಮೊಬೈಲ್ಗೊಂದು ಮೆಸೇಜು. ನಿನ್ನ ಅಪ್ಪ ತೀರಿಕೊಂಡು ತುಂಬಾ ದಿನವಾಯಿತು. ನೀನು ಬಂದು ಇಲ್ಲಿನ ಆಸ್ತಿಪಾಸ್ತಿಗೊಂದು ವ್ಯವಸ್ಥೆ ಮಾಡು ಅಂತ. ಅರ್ರೆ ಅಪ್ಪ ತೀರಿಕೊಂಡರೇ? ಛೇ ನನಗೆ ಗೊತ್ತೇ ಆಗಲಿಲ್ಲವಲ್ಲ. ಅಪ್ಪ ನನ್ನನ್ನು ಎಷ್ಟು ಮಿಸ್ ಮಾಡಿಕೊಂಡರೋ ಏನೋ! ಅವರಿಗೆ ನನ್ನ ಮೇಲೆ ಅತೀವ ಪ್ರೀತಿ ಇತ್ತು. ಅಮ್ಮ ಸತ್ತ ಮೇಲೆ ಮಲತಾಯಿ ಬಂದ್ರೆ ನನ್ನ ಮಗನನ್ನು ಹೇಗೆ ನೋಡಿಕೊಳ್ಳುತ್ತಾಳೋ ಅನ್ನುವ ಆತಂಕದಿಂದ ಎರಡನೇ ಮದುವೆಯನ್ನೂ ಆಗದೇ ಒಬ್ಬಂಟಿಯಾಗಿ ಇಡೀ ಜೀವನ ಕಳೆದುಬಿಟ್ಟರಲ್ಲ! ಅಪ್ಪನನ್ನು ನಾನು ಕೊನೆ ಗಳಿಗೆಯಲ್ಲಿಯಾದರೂ ಸರಿಯಾಗಿ ನೋಡಿಕೊಳ್ಳಬೇಕಿತ್ತು. ಛೇ ನಾನು ತಪ್ಪು ಮಾಡಿಬಿಟ್ಟೆ! ಕಣ್ಣು ಒದ್ದೆ ಒದ್ದೆ. ಮನಸ್ಸಿನ ತುಂಬಾ ರೋದನ. ಅಪ್ಪನಿಗಾಗಿ ಹಂಬಲಿಸಿದ. ತಕ್ಷಣ ಊರಿಗೆ ಹೊರಟ. ಅಲ್ಲಿ ಮನೆಯ ಹೊಸ್ತಿಲು ತುಳಿದರೇ ಅಪ್ಪನದೇ ನೆನಪು. ಅಪ್ಪನ ತೊಡೆಯ ಮೇಲೆ ಕುಳಿತು ಕೆನ್ನೆ ಗಿಂಡುತಿದ್ದದ್ದು, ಹೆಗಲ ಮೇಲೆ ಕೂರಿಸಿಕೊಂಡು ನಿಂತಿದ್ದು, ಬೆನ್ನ ಮೇಲೆ ಉಪ್ಪು ಮೂಟೆ ಆಡಿಸಿದ್ದು, ಬೆಲೂನ್ ಕಟ್ಟಿ ಆಕಾಶಕ್ಕೆ ಆರಿಸಿದ್ದು, ಕೊನೆಯ ಬತರ್್ಡೇವರೆಗಿನ ಒಟ್ಟು ಇಪ್ಪತ್ತೈದು ಬತರ್್ಡೇ ಫೋಟೋಗಳು. ಅದರಲ್ಲಿ ಮಿಸ್ ಮಾಡದೇ ಅಪ್ಪ ಕೆನ್ನೆಗಿಡುತ್ತಿದ್ದ ಸಿಹಿಸಿಹಿ ಮುತ್ತು....ಯಾಕೋ ದುಃಖ ತಡೆಯಲಾಗಲಿಲ್ಲ. ಅಲ್ಲೇ ಹೊಸ್ತಿಲ ಬಳಿ ಕುಳಿತು ಬಿಕ್ಕತೊಡಗಿದ. ಆದರೆ ಎಲ್ಲಿ ಶಮನವಾದೀತು? ಯಾರೋ ಬಂದು, ನಿಮ್ಮಪ್ಪ ಒಂದಿಷ್ಟು ಇಂಪಾಟರ್ೆಂಟ್ ಅನ್ನುವ ವಸ್ತುಗಳನ್ನೆಲ್ಲ ಒಂದು ರೂಮಿನಲ್ಲಿಟ್ಟುಹೋಗಿದ್ದಾರೆ. ನೋಡಿ ಅಂದ್ರು. ಮೆಲ್ಲಗೆ ರೂಮಿನ ಬಾಗಿಲು ತೆಗೆದು ಒಳ ಅಡಿ ಇಟ್ಟರೆ ಅಷ್ಟೆಲ್ಲ ಇಂಪಾಟರ್ೆಂಟ್ ವಸ್ತುಗಳ ನಡುವೆ ಅದೇ ಕೆಂಪು ಕೆಂಪಾದ ವ್ರಾಪರ್ನ ಗಿಫ್ಟ್ಪ್ಯಾಕ್. ಮೆಲ್ಲಗೆ ಅದರ ಮೈ ದಡವಿ ಒಳಗಿನ ಭಗವದ್ಗೀತೆ ತೆಗೆದರೆ ಠಣ್ ಅಂತ ಕೆಳಗೆ ಏನೋ ಬಿದ್ದಂಗಾಯಿತು. ಏನು ಅಂತ ನೋಡಿದರೆ ಸ್ಕೋಡ ಕಾರಿನ ಕೀ. ಅದರ ಟ್ಯಾಗ್ನಲ್ಲಿ ನಮೂದಾದ ತನ್ನ ಇಪ್ಪತ್ತೈದನೆಯ ಬತರ್್ಡೇ ಡೇಟ್ ಮತ್ತು ವಿಷಸ್. ಅಂದ್ರೆ ಅಪ್ಪ ನನಗೆ ಕೊಡಬೇಕೆಂದಿದ್ದ ಕಾರ್ ಕೀಯನ್ನ ಈ ಪುಸ್ತಕದೊಳಗಿಟ್ಟು ಕೊಟ್ಟರಾ? ದೇವರೆ ನನಗೇನಾಗಿತ್ತು ಅವತ್ತು? ಕ್ಷಣ ಪುಸ್ತಕ ತೆಗೆದು ನೋಡಿದ್ದರೂ ನನ್ನ ಅಪ್ಪ ನನ್ನ ಬಳಿಯೇ ಇರುತ್ತಿದ್ರಲ್ಲ! ಆ ಒಂದು ತಾಳ್ಮೆಯನ್ನೂ ಯಾಕೆ ಕಿತ್ತುಕೊಂಡಿಬಿಟ್ಟೆ ದೇವರೇ? ಕಣ್ಣು ತಿರ್ಗಾ ಮಂಜಾದವು. ನಿಲ್ಲಲಾಗದೇ ಹೊರಕ್ಕೆ ಬಂದು ಕುಳಿತವನ ಎದೆಯ ತುಂಬಾ ದುಃಖದ ಹೊಳೆ. ಎದುರಿನ ಫೋಟೊದಲ್ಲಿ ಆಳೆತ್ತರಕ್ಕೆ ನಿಂತಿದ್ದ ಅಪ್ಪನ ಕಣ್ಣಲ್ಲೂ ಅಂತದೇ ದುಃಖವಿತ್ತಾ? ಗೊತ್ತಿಲ್ಲ!

Friday, August 22, 2008

ಆರು ಹಾರ್ರರ್ ಸ್ಟೋರೀಸ್


1.

ಊರಿಗೆ ಆರು ತಿಂಗಳಾದ ಮೇಲೆ ಹೊರಟಿರ್ತೀರಿ. ಇರೋದೊಂದೇ ಬಸ್ ಆ ರೂಟ್ನಲ್ಲಿ. ಹೋಗಲೋ ಬೇಡವೋ ಅಂತ ಯೋಚಿಸಿ, ಸರಿ ಯಾರಾದ್ರೂ ಊರಿನವರು ಸಿಗಬಹುದು ಅಂತ ಬಸ್ ಹತ್ತುತ್ತೀರಿ. ಆದ್ರೆ ಇಳಿಯುವಾಗ ನಿಮ್ಮನ್ನು ಬಿಟ್ಟು ಯಾರೊಬ್ಬರೂ ಬಸ್ನಿಂದ ಇಳಿಯುವುದಿಲ್ಲ. ಆಗಲೇ ಎದೆಯಲ್ಲಿ ನಡುಕ ಶುರುವಾಗುತ್ತದೆ. ಮುಖ್ಯ ದಾರಿಯಿಂದ ಒಂದು ಕಿಲೋಮೀಟರ್ ಒಳಕ್ಕೆ ಹೋದ್ರೆ ಮಾತ್ರ ನಿಮ್ಮ ಊರು ಸಿಗೋದು. ನೋ ಸ್ಟ್ರೀಟ್ ಲೈಟ್. ಎರಡೂ ಕಡೆ ಕರಿ ಕಂಬಳಿ ಹೊದ್ದುಕೊಂಡು ಅವಿತು ಕುಳಿತಂಥ ಜಾಜಿ ಮುಳ್ಳಿನ ಪೊದೆಗಳು. ಅದನ್ನಾವರಿಸಿಕೊಂಡ ಕಗ್ಗತ್ತಲು. ಜೀರುಂಡೆಯ ಗುಂಯ್ ಗುಂಯ್. ಮೈ ಸೋಕುವ ತಣ್ಣನೆಯ ಗಾಳಿ. ಯಾರಾದ್ರೂ ಸಿಕ್ಕಾರೇನೋ ಅಂತ ಎರಡು ನಿಮಿಷ ಕಾದು ಕಾಲೆಳೆದುಕೊಂಡು ಒಬ್ಬರೇ ಹೊರಡ್ತೀರಿ. ಅಜ್ಜಿ ಹೇಳಿದ್ದ ಕೊಳ್ಳಿ ದೆವ್ವ ನೆನಪಾಗುತ್ತೆ. ಹುಣಸೇ ಮರದಲ್ಲಿ ಉಲ್ಟಾ ನೇತಾಡೋ ದೆವ್ವಗಳು ನೆನಪಾಗ್ತವೆ. ಗೊಬ್ಬರ ಸಿಗಲಿಲ್ಲ ಅಂತ ಆರು ತಿಂಗಳ ಹಿಂದೆ ನೇಣುಹಾಕಿಕೊಂಡ ಶಾಂತಪ್ಪ ನೆನಪಾಗ್ತಾನೆ. ದೇವರೇ ಹೇಗಪ್ಪಾ ಹೋಗೋದು? ಅಂದುಕೊಳ್ಳುವ ಹೊತ್ತಿಗೆ ಯಾರೋ ಹಿಂದಿನಿಂದ ನಿಮ್ಮ ಹೆಸರಿಡಿದು ಕರೆದಂತಾಗುತ್ತದೆ. ಗಾಬರಿಯಿಂದ ತಿರುಗಿ ನೋಡಿದರೆ ಶ್ರೀನಿವಾಸ. ಹಳೇ ಫ್ರೆಂಡ್. ಅರೇ ನೀನೇನೋ? ಎಷ್ಟು ದಿನ ಆಯ್ತು ನಿನ್ನನ್ನ ನೋಡಿ. ಬಸ್ ಲೇಟ್ ಆಯ್ತಾ? ಒಬ್ಬನೇ ಹೋಗೋದಕ್ಕೆ ಭಯ ಅನಿಸಿರಬೇಕಲ್ವಾ? ನಾನಿದೀನಲ್ಲ ಜೊತೆಗೆ, ಬಾ ಬಾ. ಹೇಗಿದೀಯಾ? ಸಿಟಿಗೆ ಹೋದವ್ನು ನಮ್ಮೂರ್ಗೆ ಬರೋದೆ ಬಿಟ್ಟಬಿಟ್ಟಲ್ಲಪ್ಪ! ನಾನೂ ಪಕ್ಕದೂರಿಗೆ ಹೋಗಿದ್ದೆ ಹೊರಡೋದು ಲೇಟಾಗೋಯ್ತು. ಆಮೇಲೆ ಏನ್ ಸಮಾಚಾರ? ಅಂತ ನಿಮ್ಮ ಪಕ್ಕದಲ್ಲೇ ಭುಜಕ್ಕೆ ಭುಜ ತಾಕಿಸಿಕೊಂಡು ನಡೆಯತೊಡಗುತ್ತಾನೆ. ನಿಮಗೆ ಹೋದ ಜೀವ ಬಂದಂತಾಗುತ್ತದೆ. ಕೊನೆಗೂ ಒಬ್ಬ ಗೆಳೆಯನನ್ನ ಕಷ್ಟ ಕಾಲಕ್ಕೆ ಕಳಿಸ್ದಲ್ಲ ಥ್ಯಾಂಕ್ ಗಾಡ್ ಅಂದ್ಕೊಳ್ತೀರಿ.ಹಾಗೆ ಮಾತಾಡ್ತಾ ಮಾತಾಡ್ತಾ ಮಾತಾಡ್ತಾ ಊರು ಸಮೀಪಿಸುತ್ತದೆ. ನಿಮ್ಮ ಮನೆಯಿಂದ ಎರಡು ಗಲ್ಲಿ ದಾಟಿದರೆ ಶ್ರೀನಿವಾಸನ ಮನೆ, ಹೌದಾ? ನಿಮ್ಮ ಮನೆ ಹತ್ತಿರ ಆಗ್ತಿದ್ದ ಹಾಗೇ ನಿಮ್ಮನ್ನು ದಾಟಿ ಆಯ್ತಪ್ಪ ಸಿಕ್ತೀನಿ. ನೆಕ್ಸ್ಟ್ ಟೈಮ್ ಬಂದಾಗ ಅದೇ ದಾರಿಯಲ್ಲಿ ಕಾಯ್ತಾ ಇರ್ತೀನಿ. ಮರೀಬೇಡ ಅಂತ ಕೈ ಬೀಸಿ ಹೊರಟುಬಿಡ್ತಾನೆ. ನೀವು ಗುಗ್ಗು ಥರ ಓಕೆ ಬಾಯ್ ಅಂತೀರಿ.ಮನೆಗೆ ಹೋದ್ರೆ ಅಮ್ಮ, ಇಷ್ಟೊತ್ತಲ್ಲಿ ಯಾಕೋ ಬರೋದಕ್ಕೆ ಹೋದೆ. ಜನ ಸಂಜೆ ಆದಮೇಲೆ ತಿರುಗಾಡೋದಕ್ಕೆ ಹೆದರ್ತಾರೆ. ಬೆಳಿಗ್ಗೆ ಬಂದಿದ್ರೂ ಆಗ್ತಿತ್ತಪ್ಪ. ಏನು ಅಂತ ಕೆಲಸ ಇಲ್ಲಿ ಕಡಿದುಗುಡ್ಡೆ ಹಾಕೋದಿತ್ತು ಅಂತಾರೆ.ಇಲ್ಲಮ್ಮ ಒಬ್ಬನೇ ಬರಲಿಲ್ಲ. ಜೊತೇಲಿ ನನ್ನ ಹಳೇ ಗೆಳೆಯ ಶ್ರೀನಿವಾಸ ಇದ್ನಲ್ಲ ಅವನು ಸಿಕ್ಕಿದ್ದ. ಜೊತೇಲೇ ಬಂದ್ವಿ!ಶ್ರೀನಿವಾಸಾನಾ?ಯಾಕಮ್ಮ?ಅವನು ಸತ್ತು ಎರಡು ತಿಂಗಳಾಯ್ತಲ್ಲೋ?ಈ ಮಾತು ಕೇಳಿದ ಮೇಲಿನ ನಿಮ್ಮ ಸ್ಥಿತಿ ನನ್ನ ಊಹೆಗೂ ನಿಲುಕುತ್ತಿಲ್ಲ.

2.

ಇಡೀ ಜಗತ್ತು ನಿನರ್ಾಮವಾಗಿಹೋಗಿರುತ್ತೆ. ಆದ್ರೆ ಅದು ಹೇಗೋ ಒಬ್ಬನೇ ಒಬ್ಬ ತಪ್ಪಿಸಿಕೊಂಡು ಕದವಿಕ್ಕಿಕೊಂಡು ಕುಳಿತುಬಿಡುತ್ತಾನೆ. ಅವನಿಗೂ ಗೊತ್ತು ಈ ಜಗತ್ತಿನಲ್ಲಿ ನನ್ನೊಬ್ಬನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಅಂತ. ಅಂತ ಸಮಯದಲ್ಲಿ ನಡುರಾತ್ರಿಯಲ್ಲಿ ಯಾರೋ ಬಾಗಿಲು ತಟ್ಟಿದರೇ?ಇದಕ್ಕಿಂತ ಹಾರ್ರರ್ ಸ್ಟೋರಿ ಇದೆಯಾ?

3.

ಯಾವುದೋ ತಮಿಳು ಫಿಲ್ಮ್ನಲ್ಲಿ ನೋಡಿದ್ದು.ಒಬ್ಬ ರಾತ್ರಿ ಕಾಡಿನಲ್ಲಿ ಹೋಗ್ತಿರ್ತಾನೆ. ಇದ್ದಕ್ಕಿದ್ದಂತೆ ಬೀಡಿ ಸೇದಬೇಕು ಅನ್ನೋ ಆಸೆಯಾಗುತ್ತೆ. ಆದ್ರೆ ಬೀಡಿ ಇದೆ ಬೆಂಕಿಪೊಟ್ಟಣ ಇಲ್ಲ. ಕೊರೆವ ಚಳಿ ಬೇರೆ. ಏನ್ ಮಾಡೋದು?ಹಾಗಂದುಕೊಂಡು ಎರಡು ಹೆಜ್ಜೆ ಇಟ್ಟಿಲ್ಲ ಎದುರುಗಡೆಯಿಂದ ಒಬ್ಬ ಬರ್ತಿದ್ದಾನೆ. ಆಹಾ ಒಳ್ಳೇದೇ ಆಯ್ತು ಅಂದುಕೊಂಡು.ಅಣ್ಣ ಬೆಂಕಿಪೊಟ್ಟಣ ಇದೆಯಾ?ಇದೆ. ಈತ ಅವನ ಹತ್ತಿರಕ್ಕೆ ಹೋಗಿ ನಿಲ್ಲುತ್ತಾನೆ. ಆ ವ್ಯಕ್ತಿಯೇ ಬೀಡಿಗೆ ಬೆಂಕಿ ಹಚ್ಚುತ್ತದೆ. ಹಾಗೆ ಹಚ್ಚುವಾಗ ಕೈ ಜಾರಿ ಬೆಂಕಿಪೊಟ್ಟಣ ವ್ಯಕ್ತಿಯ ಕಾಲ ಕೆಳಕ್ಕೆ ಬಿದ್ದುಹೋಗುತ್ತದೆ.ಈತ ಬೆಂಕಿಪೊಟ್ಟಣ ಎತ್ತಿಕೊಳ್ಳೋದಕ್ಕೆ ಅಂತ ಬಗ್ಗುತ್ತಾನೆ ಅಷ್ಟೆ.ಎದುರಿಗೆ ನಿಂತ ವ್ಯಕ್ತಿಯ ಕಾಲೇ ಇರುವುದಿಲ್ಲ.

4.

ನಮ್ಮೂರಿನಲ್ಲಿ ಕೋಟೆ ಮೈದಾನ ಅಂತ ವಿಶಾಲವಾದ ದಿಬ್ಬ ಇತ್ತು. ಅಲ್ಲಿ ಹಳೇ ಬಾವಿ, ಹಳೇ ಕೋಟೆ, ಹಳೇ ಹಳೇ ಅನ್ನಬಹುದಾದ ಎಂಥೆಂತದೋ ಕಲ್ಲುಗಳು. ಇನ್ನೂ ಏನೇನೋ ಇದ್ದವು. ಜೊತೆಗೆ ಅಲ್ಲೇ ಅದರ ಪಕ್ಕದಲ್ಲೇ ಊರಿನ ಸ್ಮಶಾನ.ನಮ್ಮೂರಿನಲ್ಲಿ ಕುಖ್ಯಾತ ಕಳ್ಳ ಎಂದೇ ಪ್ರಖ್ಯಾತವಾಗಿದ್ದ ಬಸವ ಅನ್ನೋನು ರಾತ್ರಿ ಕೆಲಸ ಮುಗಿಸಿ ಸರಿಹೊತ್ತಿನಲ್ಲಿ ಹಿಂತಿರುಗ್ತಿದ್ದದ್ದು ಎಲ್ಲರಿಗೂ ಗೊತ್ತಿತ್ತು.ಅವತ್ತೂ ಹಾಗೇ ಬರ್ತಾ ಇದ್ದನಂತೆ.ಇನ್ನೇನು ತನ್ನ ಮನೆ ಹೊಕ್ಕಬೇಕು ಅನ್ನುವಷ್ಟರಲ್ಲಿ ಯಾರೋ ಶಿಳ್ಳೆ ಹಾಕಿ ಕರೆದಿದ್ದಾರೆ. ತಿರುಗಿ ನೋಡಿದ್ರೆ ಪೊಲೀಸು.ಅಯ್ಯಯ್ಯಪ್ಪೋ ಅಂತ ಮನೆಗೂ ಹೋಗದೇ ಎದ್ದೆನೋ ಬಿದ್ದೆನೋ ಅಂತ ಓಡಿದ್ದಾನೆ.ಹಾಗೆ ಓಡಿ ಓಡಿ ಸುಸ್ತಾಗಿ ಊರ ಹೊರಗಿನ ಅದೇ ಕೋಟೆ ಬಾವಿಯ ಹತ್ತಿರಕ್ಕೆ ಬಂದು ಬಾವಿ ಹಿಂದೆ ಬಚ್ಚಿಟ್ಟುಕೊಂಡಿದ್ದಾನೆ. ಆಮೇಲೆ ಎರಡು ನಿಮಿಷ ಬಿಟ್ಟು ಮೆಲ್ಲಗೆ ಎದ್ದು ನೋಡಿದ್ರೆ ಯಾರೂ ಇಲ್ಲ.ನನ್ನ ಜೊತೆ ಓಡೋದಕ್ಕೆ ಅವನಿಗೆಲ್ಲಿ ಸಾಧ್ಯ ಅಂತಂದುಕೊಂಡು ಮೆಲ್ಲಗೆ ಮತ್ತೆ ಮನೆ ಕಡೆ ಹೆಜ್ಜೆ ಹಾಕಿದ್ದಾನೆ.ಅಲ್ಲಿ ನೋಡಿದ್ರೆ ಮನೆಯ ಜಗಲಿಯ ಮೇಲೆ ಪೊಲೀಸ್ ಬೀಡಿ ಸೇದ್ತಾ ಕುಳಿತಿದ್ದಾನೆ. ಯಾಕೋ ಟೈಮ್ ಸರಿಗಿಲ್ಲ ಅಂದುಕೊಂಡು ಇವತ್ತು ಆ ಕೋಟೆ ಮೈದಾನದಲ್ಲೇ ಬೆಳಗಿನ ಜಾವದ ತನಕ ಕಾಲ ಕಳೆದರಾಯ್ತು ಅಂತ ವಾಪಸ್ ಹೋಗಿದ್ದಾನೆ.ಅಲ್ಲಿ ಹೋಗಿ ಇನ್ನೂ ಐದು ನಿಮಿಷ ಆಗಲಿಲ್ಲ ಯಾರೋ ಭುಜದ ಮೇಲೆ ಹಿಂದಿನಿಂದ ಕೈ ಇಟ್ಟಿದ್ದಾರೆ.ಅದೇ ಪೊಲೀಸು. ಅಣ್ಣ ತಪ್ಪಾಯ್ತು ಬಿಟ್ಟುಬಿಡು. ಇನ್ನೊಂದ್ ಸಾರಿ ಕಳ್ಳತನ ಮಾಡೋಲ್ಲ ಅಂತ ಗೋಗರೆದಿದ್ದಾನೆ ಬಸವ. ಪೊಲೀಸ್ದು ಮಾತೇ ಇಲ್ಲ.ಇನ್ನೇನು ಇವನು ಅಲ್ಲಿಂದ ಕದಲಬೇಕು.ಅಷ್ಟರಲ್ಲಿ ಹೆದರ್ಕೊಂಡ್ ಬಿಟ್ಯಾ. ನಾನು ನಿಜವಾದ ಪೊಲೀಸ್ ಅಲ್ಲ. ನಾಟಕ ಮಾಡ್ತಿದ್ದನಲ್ಲ ರುದ್ರಣ್ಣ ಅವನು. ನನಗೆ ಪೊಲೀಸ್ ಆಗಬೇಕು ಅಂತ ಬಹಳ ಆಸೆ ಇತ್ತು. ಆದ್ರೆ ಏನ್ ಮಾಡೋದು ಅದೆಂಥದೋ ಜ್ವರ ಬಂದು ಸತ್ತೋಗ್ಬಿಟ್ಟೆ ಅಂದಿದ್ದಾನೆ.ಬಸವ ಆಮೇಲೆ ಒಂದು ವಾರ ಹಾಸಿಗೆ ಬಿಟ್ಟು ಮೇಲೇಳಲೇ ಇಲ್ಲ.

5.

ಹನ್ನೆರಡು ಗಂಟೆ ರಾತ್ರಿ.ನಾನು ಮತ್ತು ನೀನು ಇಬ್ಬರೂ ಒಂದು ರೂಮಿನಲ್ಲಿ ಮಾತಾಡ್ತಾ ಕುಳಿತಿರ್ತೀವಿ.ಸಡನ್ನಾಗಿ ಲ್ಯಾಂಡ್ಲೈನ್ ಬಡಕೊಳ್ಳುತ್ತೆ. ನೀನು ಒಂದ್ ನಿಮಿಷ ಇರು ಬಂದೆ ಅಂತ ಎದ್ದು ಹೋಗಿ ಫೋನ್ ಅಟೆಂಡ್ ಮಾಡ್ತೀಯ.ಆದ್ರೆ ಆ ಕಡೆಯಿಂದ ಫೋನ್ ಮಾಡಿದೋನು ನಾನು ಕಳೆದ ರಾತ್ರಿಯೇ ಸತ್ತುಹೋಗಿದೀನಿ ಅಂತ ನಿನಗೆ ತಿಳಿಸ್ತಾನೆ.

ನೀನು ಮತ್ತೆ ರೂಮಿಗೆ ಬರ್ತೀಯಾ?

6.

ಅವತ್ತು ಕರೆಂಟ್ ಹೋಗಿರುತ್ತೆ. ರೂಮಿನ ತುಂಬಾ ಬರೀ ಕತ್ತಲು. ಬರೀಬೇಕು ಅಂತ ಪೆನ್ನು ಹಿಡಿದು ಕುಳಿತಿದ್ದ ನೀವು ಛೇ ಅಂತ ಕೆಇಬಿಯವರನ್ನ ಬೈಯ್ಕೊಂಡ್ ಬೆಂಕಿ ಪೊಟ್ಟಣ ಹುಡುಕೋದಕ್ಕೆ ಶುರು ಮಾಡ್ತೀರಾ.ಹಾಗೆ ಹುಡುಕ್ತಾ ಇರುವಾಗಲೇ ಬೆಂಕಿ ಪೊಟ್ಟಣವೊಂದನ್ನ ನಿಮ್ಮ ಕೈಗೆ ಯಾರೋ ಕೊಟ್ಟಂಗಾಗುತ್ತೆ.ಮನೆಯಲ್ಲಿ ಇದ್ದೋರು ನೀವೊಬ್ರೇ ಅಲ್ವಾ?ಹಾಗಾದ್ರೆ ಬೆಂಕಿ ಪೊಟ್ಟಣ ಕೊಟ್ಟೋರು?

Thursday, August 21, 2008

ಒಮ್ಮೆ ಬಂದು ಹೋಗೆ!



ನಾನು ಸುಮ್ಮನಿದ್ದವ

ಅಂದ್ರೆ, ಕೇವಲ ಸುಮ್ಮನೇ!


ಆ ಎತ್ತರದ ಬೆಟ್ಟಗಳಲ್ಲಿ

ಅದ ಸುತ್ತುವ ನದಿಗಳಲ್ಲಿ

ಗಿರಗಿರನೆ ಸುತ್ತಾಡಿಕೊಂಡು

ಸುಖಾ ಸುಮ್ಮನೆ ಬದುಕಿದ್ದವ


ಮಗನಿಗೆ ಮೀಸೆ ಬಂತು ಅಂತ

ಹೆಮ್ಮೆ ಪಡ್ತಿದ್ದ ಅವ್ವ

ಮೊಲೆ ಬಂದ ಹೆಣ್ಣು ಮಕ್ಕಳು ಮಾತಾಡಿಸಿದ್ರೆ

ಉರಿದು ಬೀಳುತ್ತಿದ್ದಳು

ಹುಡುಗ ಚೆನ್ನಾಗವನೇ ಕಣ್ರೆ ಬಿನ್ನಾಣಗಿತ್ತೀರಾ

ಹಾರಿಸ್ಕೊಂಡು ಹೋಗ್ಗೀಗ್ ಬಿಟ್ಟಿರಾ?

ಊರ ಬಾಗಿಲಿಗೆ ತೋರಣ ಕಟ್ಟುಬಿಟ್ಟೇನು ಅಂತಿದ್ಳು.


ನಾನೋ ಮಹಾ ಯಬರ

ಹುಡುಗೀರ ಮೊಲೆ

ಕಂಡೋರ ಮನೆ ತೊಲೆ

ಯಾವುದಕ್ಕೂ ಕಣ್ಣಾಕದವ
***


ನಾನು ಸುಮ್ಮನಿದ್ದವ

ಅಂದ್ರೆ, ಕೇವಲ ಸುಮ್ಮನೇ!


ಅಂತ ಸುಮ್ಮನಿದ್ದ ಒಂದಿನ

ಯಾರೋ ಸುಳಿದಂಗಾಯ್ತು

ಕೂಗಿದಂಗಾಯ್ತು

ಕೈ ಹಿಡಿದು ಜಗ್ಗಿದಂಗಾಯ್ತು

ಕಣ್ಣ ಕದ ತೆರೆದು ಬಂದು ಕುಳಿತಂಗಾಯ್ತು

ಎದೆಯ ಮಿದುವಿಗೆ

ಬೆರಳ ತಾಕಿಸಿ ಮೀಟಿದಂಗಾಯ್ತು

ಮನಸು ನನ್ನ ಮಾತೇ ಕೇಳಲಿಲ್ಲ

ಬಂದ ಕನಸುಗಳಿಗೆ ಲೆಕ್ಕವಿಲ್ಲ

ಹರವಿಕೊಂಡ ಆಕಾಶದ ತುಂಬಾ

ನಿನ್ನದೇ ಬಿಂಬ

ಹಾಡಬೇಕೆಂದು ಕುಳಿತವನ ಕೊರಳಲ್ಲಿ

ನಿನ್ನದೇ ಹೆಸರು

ಪ್ರಿಯೆ ಪ್ರಿಯೆ ಪ್ರಿಯಂವದಾ


ಅರೆ ಅಷ್ಟು ಹುಡುಗಿಯರಲ್ಲಿ

ಇಷ್ಟವಾಗಲಿಲ್ಲವಲ್ಲ ಒಬ್ಬಳೂ

ಇವಳಲ್ಲೇನಿದೆ ಸೆಳೆತ

ನನ್ನ ಈ ಪರಿ ಸೆಳೆಯಲು


ಕಾರಣ ಹುಡುಕಿದೆ

ಕಾರಣ ನೀನೇ ಆಗಿರುವಾಗಲೂ!


ಇಷ್ಟಾಗುವ ಹೊತ್ತಿಗೆ

ನೀನು ಇಷ್ಟವಾಗಿದ್ದೆ

ಮತ್ತು...

***


ಮತ್ತೆ ಮಳೆ ಹುಯ್ಯುತಿದೆ

ನೆನಪು ಜೀಕುತ್ತಿದೆ


ಮೊದಲ ಮಾತು

ಮೊದಲ ಸ್ಪರ್ಶ

ಮೊದಲ ಗಿಫ್ಟು

ಮೊದಮೊದಲ ಕಚಗುಳಿ

ಮೊದಲು ಕೊಟ್ಟ ಮುತ್ತು

ಮತ್ತು ಮುತ್ತು

ನೆನಪಿದೆಯಾ ನಿನಗೆ


ತಡವಾಗಿ ಬಂದಿದ್ದು

ನೀನು ಬೈದಿದ್ದು

ಬರ್ತಡೇಗೆ ವಿಷ್ ಮಾಡಿಲ್ಲ ಅಂತ

ಮುನಿಸಿಕೊಂಡಿದ್ದು

ಕೊಟ್ಟ ಗಿಫ್ಟ್ ಗಿಫ್ಟೇ ಅಲ್ಲ

ಅಂತ ವಾದಿಸಿದ್ದು

ನಾಳೆ ಕಡುಗೆಂಪು ಬಣ್ಣದ ಸೀರೆ ಉಟ್ಕೊಂಡ್ ಬಾರೆ ಅಂದ್ರೆ

ಮುಗಿಲು ಬಣ್ಣದ ಜೀನ್ಟ್ ತೊಟ್ಟು

ಪೇಚಾಡಿದ್ದು

ಪರಮ ಪೋಲೀ ಜೋಕಿಗೆ ನಕ್ಕಿದ್ದು

ಕಾನರ್ೆಟ್ಟೋ ಐಸ್ಕ್ರೀಮ್ ನೆಕ್ಕಿದ್ದು

ಸಂಜೆ ಸಿಗುತ್ತೀನಿ ಅಂತ ಅಣ್ಣಮ್ಮನ ದೇವಸ್ಥಾನದ ಬಳಿ

ಕಾಯಿಸಿದ್ದು


ಪ್ರೀತಿ ಕಾಯಿಸುತ್ತದೆ

ಮತ್ತು ಸತಾಯಿಸುತ್ತದೆ

ಪ್ರೀತಿ ಸಾಯಿಸುತ್ತದಾ?

***

ನಾನು ಸುಮ್ಮನಿದ್ದವ

ಅಂದ್ರೆ, ಕೇವಲ ಸುಮ್ಮನೇ!


ಒಮ್ಮೆ ನಾ ಕೇಳಿದ್ದೆ

ನನ್ನದು ನದಿ ಪ್ರೀತಿ ಕಣೆ

ನಿನ್ನದು?

ಮುಗಿಲ ಪ್ರೀತೀನಾ? ಅಂತ.


ನೀನು ಉತ್ತರ ಹುಡುಕುತ್ತಲೇ ಹೋದೆ

ನಾನು ಪ್ರಶ್ನೆ ಹಾಕುತ್ತಲೇ ಹೋದೆ

ಕಾಲ ಬಡ್ಡೀಮಗಂದು

ಗೀಚಿ ಹೋದ ಭಾಷೆಗೆ ಅರ್ಥವೇ ಇರಲಿಲ್ಲ


ಜಗತ್ತು ಎಷ್ಟು ಕ್ರೂರಿ ಅಲ್ವಾ?

ಬದುಕು ಇನ್ನೇನು ಬಿಚ್ಚಿಕೊಳ್ತು ಅನ್ನುವಾಗಲೇ

ಮುಚ್ಚಿಹೋಗುತ್ತದೆ

ಮುಕ್ತ ಮುಗಿಲಿಗೂ

ಮೋಡ ಆವರಿಸಿಕೊಳ್ಳುತ್ತದೆ


ನಿಜ್ಜ ಹೇಳ್ತೀನಿ

ನಾನು ನಿನ್ನನ್ಯಾವತ್ತೂ ಕಾಮಿಸಿಲ್ಲ

ಕೇವಲ ಪ್ರೇಮಿಸಿದೆ

ಆರಾಧಿಸಿದೆ

ಎದೆಯಲ್ಲಿಟ್ಟುಕೊಂಡೆ

ಬೊಗಸೆಯಲ್ಲಿಟ್ಟರೆ ಕಳೆದುಹೋಗುತ್ತಿಯ ಅಂತ


ಪ್ರಿಯ ಪ್ರಿಯಂವದಾ


ಗೊತ್ತಾ

ಪ್ರೀತಿಗೆ ಸೋಲಬಹುದು ಕಣೆ

ಕಾಮಕ್ಕೆ ಸೋಲಬಾರದು


***

ಹಚ್ಚಿಟ್ಟ ಹಣತೆಗೆ ಎಣ್ಣೆಯಿಲ್ಲ

ಕಣ್ಣಲ್ಲಿ ಕಾಂತಿಯಿಲ್ಲ

ಎದೆಯ ಮಗ್ಗುಲಲ್ಲಿ ಮುಳ್ಳುಕಂಟಿ


ಬಾಗಿಲು ತೆರೆದೇ ಇದೆ

ಹೋಗಿದ್ದು ಯಾಕೆ ಅಂತ ಕೇಳೊಲ್ಲ

ನಾನೋ ಈಡಿಯಟ್ ಕಾಯುತ್ತಿದ್ದೇನೆ

ಒಮ್ಮೆ ಬಂದು ಹೋಗೆ.

Tuesday, August 5, 2008

ಪ್ರತಿ ಹುಡುಗಿಯ ಕನಸು, ನನಸು ಮತ್ತು ಈ ಮೊಗ್ಗಿನ ಮನಸು


ನನ್ನನ್ನ ನೀನು ಎಷ್ಟು ಇಷ್ಟ ಪಡ್ತೀಯ?

ನೀನು ನಿನ್ನನ್ನ ಎಷ್ಟು ಇಷ್ಟ ಪಡ್ತೀಯೋ ಅಷ್ಟು.

ಹುಡುಗಿ ಕಣ್ಣಲ್ಲಿ ಭರವಸೆಯ ಬೆಳಕು ಫಳ್ ಅನ್ನುತ್ತದೆ.

ಅದಾದ ಮೇಲೆ ಒಂದಿನ ಬಂದವಳೇ ನನ್ನನ್ನು ಮರೆತುಬಿಡು ಅಂದುಬಿಡುತ್ತಾಳೆ.ಹಾಗೆಲ್ಲ ಮರೆಯೋದಕ್ಕೆ ಸಾಧ್ಯಾನಾ? ಏನಾಗಿದೆ ನಿನಗೆ? ಅನ್ನುತ್ತಾನೆ ಹುಡುಗ. ನನ್ನನ್ನ ಏನೂ ಕೇಳಬೇಡ, ಏನೂ ಹೇಳಬೇಡ. ಜಸ್ಟ್ ಇಷ್ಟ ಇಲ್ಲ ಅಂದುಬಿಡುತ್ತಾಳೆ. ಹುಡುಗನಿಗೆ ಸಿಟ್ಟು ಬಂದು ನಿನ್ನನ್ನ ಕೊಂದಾಕಿಬಿಡ್ತೀನಿ ಅನ್ನುತ್ತಾನೆ. ಕೊಂದುಬಿಡು. ಇಲ್ಲ ನನ್ನನ್ನ ಮರೆತುಬಿಡು ಅನ್ನುತ್ತಾಳೆ ಹುಡುಗಿ ತಣ್ಣಗೆ. ಹುಡುಗ ಎರಡನ್ನು ಮಾಡುವುದಿಲ್ಲ. ಆದ ಶಾಕ್ನಿಂದ ಚೇತರಿಸಿಕೊಂಡು ತಿರುಗಿ ನೋಡುವಷ್ಟರಲ್ಲಿ ಅವಳು ಬಹಳ ದೂರ ನಡೆದುಬಿಟ್ಟಿರುತ್ತಾಳೆ. ಹೆಣ್ಣೆಂದ್ರೆ ಅಷ್ಟೊಂದು ನಿಭರ್ಾವುಕಾ ಮನಸ್ಸಾ? ಹುಡುಗರೆಂದ್ರೆ ಹೀಗೇನಾ?

ಮೊಗ್ಗಿನ ಮನಸ್ಸು ನೋಡಿ ಬಂದಾಗಿನಿಂದ ಮನಸ್ಸು ಒಂದೊಳ್ಳೆ ಸಿನೆಮಾ ನೋಡಿದ ಖುಷಿಗೆ ಬಿದ್ದಿದೆ. ಇಷ್ಟು ಕ್ಲಿಯರ್ ಆಗಿ, ಇಷ್ಟು ಲವಲವಿಕೆಯಿಂದ, ಅದೂ ಇಷ್ಟು ಚಂದಕ್ಕೆ ಒಂದು ಸಿನೆಮಾ ಮಾಡಲು ಸಾಧ್ಯಾನಾ? ನಿಜ ಹೇಳಬೇಕೆಂದ್ರೆ, ಇಂಥದ್ದೊಂದು ಪಿಚ್ಚರ್ ನೋಡಿಯೇ ಎಷ್ಟೋ ವರ್ಷಗಳಾಗಿತ್ತು. ಅಸಲಿಗೆ ಮೊಗ್ಗಿನ ಮನಸ್ಸಿನ ನಿಜವಾದ ಸ್ಟಫ್ ಏನು?ನಾಲ್ಕು ಹುಡುಗೀರು. ಮತ್ತವರ ಮನಸ್ಸು. ಆ ಮನಸ್ಸಿನ ಕಾಂಕ್ಷೆ, ಧಾವಂತ. ತಳಮಳ ಮತ್ತು ಕೊನೆಗೆ ಒಡೆದ ಹೃದಯದ ರೋದನ. ಚಿಕ್ಕ ಚಿಕ್ಕ ಖುಷಿಗಳಿವೆ. ಆ ಖುಷಿಯ ಮಗ್ಗುಲಲ್ಲೆ ಅಡಗಿದ್ದ ದುಃಖದ ಛಾಯೆಯೂ ಇದೆ. ಅಗಲಿಕೆಯ ಜೊತೆಗೆ ಮತ್ತೆ ಸೇರಿದ ಖುಷಿ ಕೂಡ ಇದೆ. ಅದಕ್ಕೆ ಅಬ್ಬರವಿದೆಯಾ ಅಂದ್ರೆ ನೋ. ಎಲ್ಲಾ ತಣ್ಣಗಿನದ್ದು.ಹಾಗೆ ನೋಡಿದ್ರೆ ಇಡೀ ಚಿತ್ರದಲ್ಲಿ ಎಲ್ಲೂ ಅಬ್ಬರವಿಲ್ಲ. ಫೈಟ್ ಇಲ್ಲ. ತುಂಬಾ ಎಮೋಷನಲ್ ಅನ್ನುವ ಶಾಟ್ಸ್ಗಳಿಲ್ಲ. ಅಳುಮುಂಜೀ ಪಾತ್ರಗಳಿಲ್ಲ. ಆದರೂ ಕಣ್ಣು ಅಲ್ಲಲ್ಲಿ ಒದ್ದೆಯಾಗುತ್ತದೆ. ಹೀಗೆ ನನಗೂ ಆಗಿತ್ತಲ್ವಾ ಅಂತ ಹುಡುಗಿಯ ಮನಸ್ಸು ದಿಗ್ಗನೆದ್ದು ಕುಳಿತು ಕಾಡುತ್ತದೆ. ತೀರಾ ಘಾಸಿಗೊಂಡ ಮನಸ್ಸನ್ನಿಟ್ಟುಕೊಂಡು ಬಂದು ಅಮ್ಮನ ತೊಡೆಯ ಮೇಲೆ ಮಲಗಿ ಒಳಗೊಳಗೇ ದುಃಖಿಸುವ ಹುಡುಗಿಯ ಮನಸ್ಸು ನನ್ನದೂ ಏನೋ ಅನ್ನಿಸುವಷ್ಟು ಆಪ್ತವೆನಿಸಿಬಿಡುತ್ತದೆ. ಪ್ರೀತಿಸಿದ್ದು ತಪ್ಪಾ? ಪ್ರೀತಿಸಿದ ಮೇಲೆ ಕಾಮಿಸಿದ್ದು ತಪ್ಪಾ? ಯಾರು ಸರಿ? ಯಾರು ತಪ್ಪು? ಹುಡುಗರೆಂದ್ರೆ ಹೀಗೇನಾ? ಅಥವಾ ಹುಡುಗಿಯರೆಂದ್ರೆ ಹೀಗೀಗೇನಾ? ಪ್ರೀತಿ ನಂಬಿಕೆಯಾ, ಅಪನಂಬಿಕೆಯಾ? ಪ್ರೀತಿ ಸಾವಾ? ಗೆಲುವಾ? ಅವಕ್ಕೆಲ್ಲ ಪಾತ್ರಗಳೇ ಉತ್ತರ ಹೇಳುತ್ತಾ ಸುಮ್ಮನೆ ಎಲ್ಲವನ್ನೂ ಒಡಲಲ್ಲಿಟ್ಟುಕೊಂಡು ಸಾಗುವ ತಣ್ಣನೆಯ ನದಿಯ ಹಾಗೆ ಚಿತ್ರ ಸಾಗುತ್ತದೆ.

ಹೇಳಬೇಕೆಂದ್ರೆ, ಮೊಗ್ಗಿನ ಮನಸ್ಸು ಪ್ರತಿಯೊಂದು ಹುಡುಗಿಯ ಮನಸ್ಸಿನ ಕ್ಯಾನ್ವಾಸ್. ಮೊದಲ ಸಲ ಪಿಯುಸಿ ಮೆಟ್ಟಿಲು ಹತ್ತುವ ಹುಡುಗಿಯರ ಧಾವಂತದಿಂದ ಹಿಡಿದು ಕಡೆಗೆ ತಾನು ಜೀವ ಹೋಗುವಷ್ಟು ಪ್ರೀತಿಸುವ ಹುಡುಗನನ್ನು ನಿರಕರಿಸುವ ತನಕ ಕ್ಯಾನ್ವಾಸ್ ವಿಸ್ತಾರಗೊಂಡಿದೆ. ಮೊದಲ ಕ್ರಷ್, ಮೊದಲ ಸ್ಪರ್ಶ, ಮೊದಲ ಮಾತು ಹುಡುಗಿ ಪುಳಕಗೊಳ್ಳುತ್ತಾಳೆ. ಇಡೀ ಮೊಗ್ಗಿನ ಮನಸು ನಿಲ್ಲುವುದು ಅದರ ಲವಲವಿಕೆಯಲ್ಲಿ. ನಾಲ್ಕೂ ಹುಡುಗಿಯರ ಮನಸ್ಸಿನ ಭಾವಗಳು ಎಲ್ಲೋ ಒಂದು ಕಡೆ ಒಬ್ಬಳದೆ ಅನ್ನುವಷ್ಟು ಒಂದು ಫ್ರೇಮ್ಗೆ ಒಳಗಾದರೂ ಹಾಗೇ ನೋಡ ನೋಡುತ್ತಲೇ ಅವು ಪ್ರತಿಯೊಂದು ಹುಡುಗಿಯ ಮನಸಿನ ಭಾವನೆಗಳೂ ಆಗಿಬಿಡುವ ಸಾಧ್ಯತೆಯೇ ಹೆಚ್ಚು. ನಿನಗೋಸ್ಕರ ಜೀವ ಬೇಕಾದ್ರೆ ಕೊಡ್ತೇನೆ ಅಂತಿದ್ದ ಹುಡುಗನೇ ಸುರಿವ ಮಳೆಯಲ್ಲಿ ನಿಂತು ನೀನು ನಿನ್ನ ಫ್ರೆಂಡ್ಸ್ ಜೊತೆ ಹಾಗೆಲ್ಲ ಚೆಲ್ಲು ಚೆಲ್ಲಾಗಿ ನಗುವುದು ನನಗಿಷ್ಟ ಇಲ್ಲ ಅಂದುಬಿಡುತ್ತಾನೆ. ಅರೆ ನನ್ನನ್ನ ಪ್ರೀತಿಸುತ್ತಿರುವ ಹುಡುಗ ಇವನೇನಾ? ಅಂತ ಹುಡುಗಿಗೆ ಕ್ಷಣ ತಬ್ಬಿಬ್ಬಾಗುತ್ತದೆ. ಹಾಗೆಲ್ಲ ಅನ್ನಬೇಡ ಕಣೋ ಅಂತಾಳೆ. ಅವನು ನಿನಗೆ ನನಗಿಂತ ಅವರೇ ಹೆಚ್ಚಾ ಅಂತ ಹುಚ್ಚಾಡುತ್ತಾನೆ. ಡೋಂಟ್ ಟ್ರೀಟ್ ಲೈಕ್ ಅ ಪ್ರಾಪಟರ್ಿ ಅಂತ ಗದರಿ ಎದ್ದುಹೋಗಿಬಿಡುತ್ತಾಳೆ. ಪ್ರೀತಿ ನೆಗೆದು ಬೀಳುತ್ತದೆ. ಇಡೀ ಚಿತ್ರದಲ್ಲಿ ಪ್ರೀತಿ ಗೆಲ್ಲುವ, ಪ್ರೀತಿ ಸೋಲುವ ಮತ್ತೆ ಪ್ರೀತಿ ಗೆಲ್ಲುವ ಅನುಭೂತಿ ಇದೆ. ವಂಡರ್ಫುಲ್ ಅನ್ನಿಸುವ ಲೊಕೇಷನ್ಗಳಿವೆ. ಯಾಣವನ್ನ, ಬೇಕಲ್ ಫೋಟರ್್ ಅನ್ನ ಅಷ್ಟು ಅದ್ಭುತ ಅನ್ನಿಸುವಷ್ಟರ ಮಟ್ಟಿಗೆ ತೋರಿಸಿದ್ದಾರೆ. ಹಾಡುಗಳು ತೀರಾ ಮೆಲೊಡಿ ಅನ್ನುವಂತಿಲ್ಲವಾದರೂ ಓಕೆ.

ಅಷ್ಟೊಂದು ಚೆನ್ನಾಗಿ ಹುಡುಗಿಯರ ಮನಸ್ಸನ್ನು ಹೇಗೆ ಅರ್ಥ ಮಾಡಿಕೊಂಡಿರಿ ಅಂದ್ರೆ ಗೆಳೆಯ ಶಶಾಂಕ್, ಇದು ಸುಮ್ಮನೆ ಹೆಣೆದ ಕಥೆಯಲ್ಲ. ಪಕ್ಕಾ ರಿಯಲ್ ಇನ್ಸಿಡೆಂಟ್ಗಳನ್ನ ಸ್ಟಡಿ ಮಾಡಿದೀನಿ ಅಂತಾರೆ. ಅದಕ್ಕೆ ಅವರಿಗೆ ಪ್ರೇರಣೆಯೂ ಇದೆಯಂತೆ. ಹ್ಯಾಟ್ಸಾಫ್ ಟು ಯು ಶಶಾಂಕ್. ಹಾಗೆ ಇಂಥದ್ದೊಂದು ವಿಭಿನ್ನ ಚಿತ್ರಕ್ಕೆ ಹಣ ಹಾಕಿದ ಕೃಷ್ಣಪ್ಪನವರಿಗೂ ಒಂದು ಹ್ಯಾಟ್ಸಾಫ್. ಒಟ್ಟಿನಲ್ಲಿ ಮೊಗ್ಗಿನ ಮನಸು ಚಿತ್ರ ನೋಡಿ ಹೊರಬಂದ ಮೇಲೂ ಕಾಡುತ್ತದೆ. ಒಂದು ಚಿತ್ರ ಕಾಡಿತು ಅಂದ್ರೆ ಅದು ನಿಜಕ್ಕೂ ಗೆದ್ದಂತೆಯೇ. ಹಾಗಾಗಿ ಮೊಮ ಗೆದ್ದಿದೆ.ಬಿಡುವು ಮಾಡಿಕೊಂಡು ಒಮ್ಮೆ ಹೋಗಿ ಬನ್ನಿ. ಇಲ್ಲ ಅಂದ್ರೆ ಒಂದು ಒಳ್ಳೆ ಚಿತ್ರ ಖಂಡಿತಾ ಮಿಸ್ ಮಾಡಿಕೊಳ್ತೀರಿ.

Tuesday, July 29, 2008

ಪ್ರೇಮ ನಿವೇದನೆಗೊಂದು ಪಲ್ಲವಿ


ಮೆಲ್ಲ ಮೆಲ್ಲ ಮೆಲ್ಲುವ

ಸನ್ನೆಯಲ್ಲೆ ಕೊಲ್ಲುವ

ಸದ್ದೆ ಇರದ ಉತ್ಸವ

ಪ್ರೀತಿಯೊಂದೇ ಅಲ್ಲವಾ...

ಆಹಾ ಆಹಾ! ಎಂಥ ಸಾಲುಗಳು. ಅದ್ಯಾವ ಗಳಿಗೆಯಲ್ಲಿ ಕವಿ ಈ ಹಾಡು ಬರೆದನೋ, ಅದ್ಯಾವ ಗಳಿಗೆಯಲ್ಲಿ ನಾನು ಶ್ರದ್ಧೆಯಿಂದ ಕೇಳಿಸಿಕೊಂಡೆನೋ ಅವಾಗಿನಿಂದ ಅದರದೇ ಹುಚ್ಚು ಹಿಡಿದಿದೆ. ಹಾಡೊಂದು ಗುಂಗು ಹಿಡಿಸುತ್ತೇ ಅಂತಾರಲ್ಲ ಅದು ಇದೇ ಇರಬೇಕು. ಟೀವಿ ಹಾಕಿದ್ರೆ, ಕಾರ್ ಹತ್ತಿದ್ರೆ, ಎಫ್ ಎಂ ಹಾಕಿದ್ರೆ, ಹೊರಗೋದ್ರೆ ದೇವರೇ ಆ ಹಾಡು ಒಮ್ಮೆ ಕಿವಿಗೆ ಬೀಳಲೀ ಅಂತ ಮನಸ್ಸು ಕಾತರಿಸುತ್ತೆ. ಅಷ್ಟು ಇಂಪು. ಮುಂಗಾರು ಮಳೆಯ ಅನಿಸುತಿದೆ ಯಾಕೋ ಇಂದು ಕೂಡ ಕೆಲ ಕಾಲ ಹೀಗೆ ಗುಂಗು ಹಿಡಿಸಿತ್ತು. ಆಮೇಲೆ ಸೌಂದರ್ಯ ಚಿತ್ರದ ಹೃದಯದ ಮಾತು ಕೇಳು ಕೇಳು ನನ್ನ ಒಲವೇ ಅನ್ನುವುದು ಇನ್ನಿಲ್ಲದೇ ಕಾಡಿತು. ಈಗ ನಿನ್ನ ನೋಡಲೆಂತೋ ... ಮಾತನಾಡಲೆಂತೋ... ಅನ್ನುವ ಪ್ರೇಮ ನಿವೇದನೆ.

ಈ ಹಾಡು ಮುಸ್ಸಂಜೆ ಮಾತು ಚಿತ್ರದ್ದು. ಟ್ಯೂನ್ ಕೂಡ ಚೆನ್ನಾಗಿದೆ. ಹಿತವಾಗಿದೆ ಅಂದ್ರೆ ಸರಿಹೋಗುತ್ತೇನೋ. ಬರೀ ಅಹಿತ ಗೀತೆಗಳೇ ಕಿವಿಗೆ ಬೀಳುತ್ತಿದ್ದಾಗ ರಾಮ್ ನಾರಾಯಣ್ ಗೀತೆ ರಚಿಸಿ ಶ್ರೀಧರ್ ಸಂಗೀತವಿರುವ ಇಂತಹ ಹಾಡು ಯಾಕೋ ಮನಕ್ಕೆ ಹತ್ತಿರವಾಗಿಬಿಡುತ್ತದೆ. ಭಾವ ಜೀಕುತ್ತದೆ. ಸೋನು ನಿಗಮ್ ಶ್ರೇಯ ಘೋಷಲ್ ದನಿ ಸೂಪರ್ಬ್.

ನನಗೆ ಈ ಹಾಡು ಬರೀವಾಗಲೇ ಇದು ಗ್ಯಾರಂಟಿ ಹಿಟ್ ಆಗುತ್ತೆ ಅನಿಸಿತ್ತು ಅಂತಾರೆ ರಾಮ್ ನಾರಾಯಣ್. ಅವರಿಗೊಂದು ಗುಡ್ಲಕ್ ಹೇಳೋಣ. ಹಾಗೆ ಶ್ರೀಧರ್ ಗೂ.

Saturday, July 26, 2008

ಮಾರ್ನಿಂಗ್ ದುನಿಯಾದಲ್ಲಿ ಸಿಕ್ಕ ಗೆಳೆಯನೂ ಮತ್ತವನ ಪ್ರೀತಿಯೂ


ಅವತ್ತು ಇಡೀ ರಾತ್ರಿ ಕಣ್ಣು ಮುಚ್ಚಿಲ್ಲ. ಸೀನಣ್ಣ ಸ್ವಲ್ಪ ಸಮಯ ಜೊತೆಲಿದ್ದು ಆಮೇಲೆ ಹಾಯ್ ಬೆಂಗಳೂರ್ ಪ್ರಿಂಟ್ ಇದ್ದದ್ದರಿಂದ ಅದರ ಉಸ್ತುವಾರಿಗೆ ಹೋದ. ಎದುರಿಗಿದ್ದ ಮೆಷೀನ್ ಸೆಕೆಂಡಿಗೆ ಮೂರು ಕಲರ್ ಷೀಟ್ ಉಗುಳುತಿತ್ತು. ಮಧ್ಯೆ ಮಧ್ಯೆ ಪ್ರಿಂಟರ್ಗೆ ನಂಗೊಂದು ಷೀಟ್ ಕೊಡಿ ಅಂತ ತೆಗೆದುಕೊಂಡು ಕಲರ್ ಸರಿಯಾಗಿದೆಯಾ ಅಂತ ನೋಡ ನೋಡುತ್ತಲೇ ಬೆಳಕು ಹರಿದಿತ್ತು. ಪ್ರಿಂಟರ್ ತಮಿಳುನಾಡಿನವನು. ಕನ್ನಡ ಮಾತಾಡಿದರೆ ಅದು ತಮಿಳೇ ಇದ್ದಂಗಿತ್ತು. ಸಾರ್ ಣೀವು ಹೋಗಿ ಮಳಗಿ. ನಣ್ಣ ಮೇಲೇ ಣಂಬಿಗೆ ಇಳ್ಳವಾ? ಅಂತ ಅವನು. ಇಲ್ಲಪ್ಪ ನನಗೆ ಅಭ್ಯಾಸ ಆಗಿಹೋಗಿದೆ. ಪರವಾಗಿಲ್ಲ ಇರ್ತೇನೆ ಅಂತ ಪಟ್ಟಾಗಿ ಅಲ್ಲೇ ಒಂದು ಚೇರ್ ಎಳೆದುಕೊಂಡು ಕುಳಿತುಬಿಟ್ಟೆ. ನನಗೆ ಹೀಗೆ ನಿದ್ರೆಗೆಡುವುದೆಲ್ಲ ಹೊಸದಲ್ಲ. ಮೈಸೂರಿನಲ್ಲಿದ್ದಾಗ ಒಂದು ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿದ್ದ ಎಲ್ಲರೂ ತಮಿಳರೇ. ಹಾಗಾಗಿ ತಮಿಳಿನ ಗಂಧ ನನಗೆ ಸ್ವಲ್ಪ ಗೊತ್ತು. ಅವರು ಕೆಟ್ಟಕೆಟ್ಟದಾಗಿ ಬೈದಾಡಿಕೊಳ್ಳುತ್ತಿದ್ರೆ (ಅಥವಾ ನಮಗೆ ಬೈದ್ರೆ) ನಾನು ಮೊದಮೊದಲು ಪೆಕರುಪೆಕರಾಗಿ ನೋಡುತ್ತಿದ್ದೆ. ಆಮೇಲೆ ಸ್ವಲ್ಪ ಹುಷಾರಾಗಿ ಆ ಬೈಗುಳದ ಅರ್ಥ ತಿಳಿದುಕೊಂಡೆ. ಆಗ ಗೊತ್ತಾಯ್ತು ಅವರು ಏನೆಲ್ಲ ಬೈದಾಡಿಕೊಳ್ಳುತ್ತಿದ್ದರೂ ಅಂತ. ಆಮೇಲಾಮೇಲೆ ನಾನೂ ಅವರನ್ನು ಅದೇ ಭಾಷೆಯಲ್ಲಿ ಬೈದಾಗ ಇವನಿಗೆ ತಮಿಳು ಕಲಿಸಿಕೊಟ್ಟಿದ್ದೇ ತಪ್ಪಾಯ್ತು ಅಂತ ಅವರು ಪೇಚಾಡಿಕೊಂಡಿದ್ದರು.ಇಂತಿಪ್ಪ ಪ್ರೆಸ್ನಲ್ಲಿ ನಾವು ಹೆಣ ಬಿದ್ದೋಗೋ ಹಂಗೆ ದುಡಿಯುತ್ತಿದ್ದೆವು. ನಿಜ ಹೇಳ್ತೀನಿ ಆ ಎರಡು ವರ್ಷದಲ್ಲಿ ನಾನು ದಿನಕ್ಕೆ ನಿದ್ರೆ ಅಂತ ಮಾಡುತ್ತಿದ್ದದ್ದು ಕೇವಲ ಮೂರೋ ನಾಲ್ಕೋ ಗಂಟೆ ಮಾತ್ರ. ರಾತ್ರಿ ಎಲ್ಲಾ ದುಡಿದು ಬೆಳಗಿನ ಮೂರೋ ನಾಲ್ಕೋ ಗಂಟೆಗೆ ಅವರು ಸೈಕಲ್ ಹತ್ತಿ ಹೊರಟುಬಿಡುತ್ತಿದ್ದರು. ನಾನು ಅಲ್ಲೇ ಡಬ್ಬಲ್ ಡೆಮಿ ಪೇಪರ್ ಒಂದನ್ನು ಹಾಸಿಕೊಂಡು ಅಂತದೇ ಇನ್ನೊಂದನ್ನು ಹೊದ್ದುಕೊಂಡು ಮಲಗಿಕೊಳ್ಳುತ್ತಿದ್ದೆ. ಬೆಳಿಗ್ಗೆ ಹೋದ್ರೆ ಮನೆ, ಇಲ್ಲ ಅಂದ್ರೆ ಡ್ಯೂಟಿ ಕಂಟಿನ್ಯೂ ಆಗ್ತಿತ್ತು. ಆ ರಾತ್ರಿಗಳಲ್ಲೆ ನಾನು ಗೆಳೆಯ ಗೆಳತಿಯರಿಗೆ ಒಬ್ಬಂಟಿಯಾಗಿ ಕುಳಿತು ಪತ್ರ ಬರೆಯುತ್ತಿದ್ದದ್ದು. ಆಗ ನನಗಿದ್ದ ಬರವಣಿಗೆ ಅಂದ್ರೆ ಅದೊಂದೇ. ಪುಟಗಟ್ಟಲೇ ಪತ್ರ ಬರೆಯುವುದು ಅಭ್ಯಾಸವಾಗಿ ಹೋಗಿತ್ತು. ಯಾವುದಾವುದೋ ವಿಷಯ... ಏನೇನೋ ಚಚರ್ೆ, ಜೊತೆಗೊಂದಿಷ್ಟು ಗೆರೆಗಳು. ನಾನು ಬರೆವ ಪ್ರತಿ ಲೆಟರ್ನಲ್ಲೂ ಚಿತ್ರ ಇದ್ದೇ ಇರುತ್ತಿತ್ತು. ಅವನ್ನೆಲ್ಲ ಈಗಲೂ ನೆನೆದು ಪುಳಕಗೊಳ್ಳುತ್ತೇನೆ.ನಾವಿದ್ದ ಪ್ರೆಸ್ನಿಂದ ಕೂಗಳತೆ ದೂರದಲ್ಲಿ ದಾಸ್ಪ್ರಕಾಶ್ ಪ್ಯಾರಡೈಸ್ನವರದೊಂದು ಬೇಕರಿ ಇತ್ತು. ಅಲ್ಲಿ ದಿಲ್ಪಸಂದ್ ನೆನಸಿಕೊಂಡ್ರೆ ಈಗಲೂ ಬಾಯಲ್ಲಿ ನೀರೂರುತ್ತೆ. ಅಷ್ಟು ಚೆನ್ನಾಗಿರುತ್ತಿತ್ತು. ಅದನ್ನ ತಂದು ಮೇಯ್ತಿದ್ವಿ. ಹೆಚ್ಚು ಕಡಿಮೆ ವಾರದಲ್ಲಿ ಮೂರ್ನಾಲ್ಕು ದಿನ ಇರ್ತಿತ್ತು. ಹಣದ್ದೇನು ಕೊರತೆ ಇರ್ತಿರಲಿಲ್ಲ. ಓಟಿ ಕೊಡ್ತಿದ್ರು. ತಿಂಡಿಗೂ ಕಾಸು ಕೊಡ್ತಿದ್ರಲ್ಲ! ಆಮೇಲೆ ರಾತ್ರಿಗೆ ಊಟಕ್ಕೆ ಅಂತ ಪರೋಟ ತಿಂತಿದ್ವಿ. ಅದೂ ಒಂಥರಾ ಮಜ್ಜಾ ಇರ್ತಿತ್ತು. ಪರೋಟ ತಂದು ಅದಕ್ಕೆ ಸಾಗು ಹಾಕ್ಕೊಂಡು ತಿನ್ನೋದು ಓಕೆ. ಆದ್ರೆ ಈ ತಮಿಳ್ನೋರು ನನಗೊಂದು ಹೊಸ ರುಚಿ ಹೇಳ್ಕೊಟ್ರು. ಪರೋಟಾನೆಲ್ಲ ಪೀಸ್ ಪೀಸ್ ಮಾಡಿ ಅದಕ್ಕೆ ಸಾಗು ಹಾಕಿ ಕಲಸಿ... ಜೊತೆಗೆ ಎರಡೋ ಮೂರೋ ಬಾಳೆ ಹಣ್ಣು ಹಾಕಿ ಕಲಸಿಕೊಳ್ಳೋದು. ಏನೋ ಒಂಥರ ರುಚಿ ಸಿಗ್ತಿತ್ತು. ಹಾಗೆ ಕಲಸಿಕೊಂಡು ಎರಡು ಪರೋಟ ತಿಂದುಬಿಟ್ರೆ ರಾತ್ರಿ ಇಡೀ ಹಸಿವು ಅನ್ನೋದು ಹತ್ತಿರಕ್ಕು ಸುಳಿಯುತ್ತಿರಲಿಲ್ಲ. ಆದ್ರ್ರೆ ಬೆಳಗಿನ ಜಾವ ಮೂರು ಗಂಟೆ ಆಗ್ತಾ ಇದ್ದ ಹಾಗೆ ಒಂದು ನಿದ್ರೆ ಬರ್ತಿತ್ತು ನೋಡಿ, ತಡೆಯೋದಕ್ಕೆ ಸಾಧ್ಯಾನೆ ಇಲ್ಲ ಅನ್ನೋ ನಿದ್ರೆ ಅದು. ಒಮ್ಮೆ ತೂಕಡಿಸುತ್ತಲೇ ಪೇಪರ್ ಎಲ್ಲಾ ಸ್ಟೋರ್ ಆಗುತ್ತಲ್ಲ ಟ್ರೇ ಅದರೊಳಕ್ಕೇ ಕೈ ಹಾಕ್ಕೊಂಡು ಮಲಗಿಬಿಟ್ಟಿದ್ದೆ. ಪುಣ್ಯಕ್ಕೆ ಅಲ್ಲಿರುವವರು ಎಚ್ಚರಿಸಿದ್ದರು.ಇಂಥ ಪ್ರೆಸ್ನಿಂದ ಒಂದಿನ ಒಂದು ಮಾತೂ ಆಡದೇ ಎದ್ದು ಬಂದಿದ್ದೆ. ಆಗ ನಾನು ಅನುಭವಿಸಿದ ಡಿಪ್ರೆಷನ್ ಇದೆಯಲ್ಲ ಅದರಿಂದ ಪಾರಾಗಲು ನನಗೊಂದು ದಾರಿ ಬೇಕಿತ್ತು. ನನ್ನ ಬದುಕು ಕಟ್ಟಿಕೊಳ್ಳಲು ಒಂದು ಕನಸು ಬೇಕಿತ್ತು. ಅಂಥದ್ದೊಂದು ಕನಸಿನ ಬೆನ್ನು ಹತ್ತಿ ಬಂದವನಿಗೆ ಬೆಂಗಳೂರು ಬೇಡ ಅನ್ನಲಿಲ್ಲ.ಬದುಕು ನಿಧಾನಕ್ಕೆ ಬದಲಾಗತೊಡಗಿತು.ಯಾಕೋ ಹೋದ ವಾರ ಫಸ್ಟ್ ಹಾಫ್ ಮುದ್ರಣಕ್ಕೆ ಅಂತ ಪ್ರೆಸ್ಗೆ ಹೋದಾಗ ಇದೆಲ್ಲ ನೆನಪಾಗತೊಡಗಿತು.ಹಾಗೆ ರಾತ್ರಿ ಎಲ್ಲ ನಿದ್ರೆ ಗೆಟ್ಟು ಬೆಳಿಗ್ಗೆ ಮನೆಗೆ ಹೋಗಿ ಸ್ನಾನ ಮಾಡಿಬರೋಣ ಅಂತ ಹೊರಟೆ. ಕಾರು ಪ್ರೆಸ್ಸಲ್ಲೇ ಬಿಟ್ಟು ಹೋಗಿದ್ದೆನಾದ್ದರಿಂದ ಇಸ್ಕಾನ್ ಹತ್ತಿರ ಬಂದ ಆಟೋ ಒಂದಕ್ಕೆ ಕೈ ಅಡ್ಡ ಹಾಕಿದೆ.ನನ್ನ ಏರಿಯಾಗೆ ಬರ್ತೀಯಾ ಅಂದೆ.ನಾನಿದ್ದ ಡ್ರೆಸ್ ನೋಡಿಯೋ ಏನೋ, ಏನ್ ಸಾರ್ ಇಲ್ಲಿಗಂಟ. ಜಾಗಿಂಗ್ ಬಂದುಬಿಟ್ರಾ ಅಂತ ಆತ್ಮಿಯವಾಗಿ ಕೇಳಿದ. ಇಲ್ಲ ಇಲ್ಲ. ಪ್ರೆಸ್ಗೆ ಬಂದಿದ್ದೆ. ಈಗ ಮನೆಗೆ ಹೋಗತಾ ಇದೀನಿ ಅಂದೆ.ಪ್ರೆಸ್ನವರ ಸಾರ್. ಯಾವ ಪ್ರೆಸ್ಸು? ಅಂದ.ಹಾಯ್ ಬೆಂಗಳೂರ್ ಅಂದೆ.ಸಾರ್ ನಿಮ್ಮೆಸರು ಅಂದ.ರವಿ ಅಜ್ಜೀಪುರ ಅಂದೆ.ನಾನು ನಿಮ್ಮ ಫ್ಯಾನ್ ಸಾರ್. ನೀವು ಓ ಮನಸೇನಲ್ಲಿ ಬರೀತೀರಲ್ವಾ. ಸೂಪೆರ್ಬ್ ಅಂದ. ನನಗೆ ಇನ್ ಬಾಕ್ಸ್ ಅಂದ್ರೆ ಪ್ರಾಣ ಅಂದ. ನಾನು ನನ್ನ ಹುಡುಗಿಗೇ ಈ ಮೆಸ್ಸೇಜ್ಗಳನ್ನೇ ಕಳಿಸೋದು ಸಾರ್. ಅವಳಿಗೆ ತುಂಬಾ ಇಷ್ಟ ಅಂದ.ಹಾಗೆ ಮಾತಾಡ್ತಾ ಮಾತಾಡ್ತ ಮನೆ ಬಂದಿದ್ದೇ ಗೊತ್ತಾಗಲಿಲ್ಲ. ಹಣ ಕೊಡಲು ಹೋದ್ರೆ ಸರ್ ನಿಮ್ಮತ್ರ ಹಣಾನ, ಬೇಡ ಸಾರ್ ಅಂತ ಹಿಂಜರಿಯತೊಡಗಿದ.ಬಲವಂತ ಮಾಡಿ ಹಣ ಕೊಟ್ಟೆ.ಓ ಮನಸೇ ತುಂಬಾ ಲೇಟ್ ಮಾಡಬೇಡಿ ಸಾರ್. ನಮ್ಮಂತೋರು ಕಾಯ್ತಾ ಇರ್ತೀವಿ. ಮನೇಲಿ ಅದಿದ್ರೆ ದಾರಿ ದೀಪ ಇದ್ದಂಗೆ ಅಂದವನ ಕಣ್ಣಲ್ಲಿದ್ದ ಪ್ರೀತಿಗೆ ಏನು ಹೇಳಲಿ. ಎಲ್ಲಿಯವರೋ, ಯಾರೊ? ವಿನಾಕಾರಣ ನಮ್ಮನ್ನು ಪ್ರೀತಿಸಿಬಿಡುತ್ತಾರೆ. ಒಮ್ಮೊಮ್ಮೆ ಅಂಥ ಪ್ರೀತಿಗೆ ನಾವು ಅರ್ಹರೇ ಅನ್ನುವ ಪ್ರಶ್ನೆಯೂ ಎದ್ದು ದಿಗಿಲಾಗುತ್ತದೆ. ಇವೆಲ್ಲದರ ನಡುವೆ ಒಂದು ಒಳ್ಳೆ ಕೆಲಸ ಮಾಡಿದಾಗ ಆಗುವ ಖುಷಿ ಇದೆಯಲ್ಲ ಅದಕ್ಕೆ ಪಾರವೇ ಇಲ್ಲ. ಈಗ ಫಸ್ಟ್ ಹಾಫ್ ಕೈಯಲ್ಲಿದೆ. ಅದನ್ನು ನೋಡುತ್ತಾ ಕೂರುವುದರ ಸಂಭ್ರಮವೇ ಬೇರೆ ಬಿಡಿ.

Friday, July 25, 2008

ಗೆಳೆಯನಿಗೆ ಬಿಟ್ಟ ಒಂದು ಮೆಸ್ಸೇಜು...

ಒಂದು ವಿನಂತಿಯ ಹೊರತು ನಾನು ನಿನ್ನನ್ನೇನೂ ಕೇಳುವುದಿಲ್ಲಅಂದ ಹುಡುಗ.
ಹುಡುಗಿ ನಕ್ಕಳು.
ನಂತರ ಮಳೆ ಬಂತು.
ಮಳೆ ಬಿಸಿಲು ಬಂತು.
ಮುಗಿಲು ಶುಭ್ರವಾಯ್ತು.
ನೆಲ ಮಾತ್ರ ರಕ್ತಸಿಕ್ತವಾಗಿತ್ತು.
ಇದು ನಾನು ಭಾನುವಾರ ಗೆಳೆಯ ನವಿಲುಗರಿ ಸೋಮುವಿಗೆ ಕಳಿಸಿದ್ದ ಮೆಸ್ಸೇಜ್. ಅವತ್ತು ಹಾಸನದಿಂದ ಹಿಂದಿರುಗುತ್ತಿದ್ದೆ. ಯಾಕೋ ಏನೋ ಸುಮ್ಮನೆ ಕೂರಲು ಆಗದೇ ಒದ್ದಾಡುತ್ತಿದ್ದೆ. ಕುಣಿಗಲ್ ತಲಪುವಷ್ಟರಲ್ಲಿ ಚೂರೇ ಚೂರು ಮಳೆ ಬಂದು ಹಿತವೆನಿಸಿತು. ಕಿಟಕಿಯಲ್ಲಿ ತಲೆ ತೂರಿಸಿ ಆಹಾ ಅನ್ನಲು ಹೋದೆ. ಡ್ರೈವರ್ ರೀ ಸ್ವಾಮಿ ತಲೆ ಒಳಕ್ಕಾಕಳ್ರೀ, ಇಲ್ಲ ಅಂದ್ರೆ ತಲೇನೇ ಇರಲ್ಲ ಅಂದ. ಸರಕ್ಕನೆ ತಲೆ ಒಳಕ್ಕೆಳೆದುಕೊಂಡು ಕುಳಿತೆ. ಹೇಳಬೇಕೆಂದ್ರೆ ನನಗೆ ಈ ಪ್ರಯಾಣ ಯಾವಾಗಲೂ ಬೋರೇ! ಒಂಥರ ಆಯಾಸ ತಂದುಬಿಡುತ್ತೆ. ತೀರಾ ಹಸಿರು ಉಕ್ಕುವ ಪ್ರದೇಶಕ್ಕೆ ಹೋಗಿ ಬಂದರೆ ಮಾತ್ರ ಮನಸ್ಸು ಸ್ವಲ್ಪ ಉಲ್ಲಾಸದಿಂದಿರುತ್ತೇನೋ! ಆದ್ರೆ ಸುಮ್ಮನೆ ಯಾರದೋ ಮನೆಗೆ ಹೋಗಿ ತಿಂದುಂಡು ಮಲಗಿ ಮತ್ತೆ ಎದ್ದು ಹೊರಡುವುದಿದೆಯಲ್ಲ ಅದು ನಿಜಕ್ಕೂ ಬೇಜಾರಿನ ಕೆಲಸ. ನಾನು ಮಾಡಿದ್ದೂ ಅದನ್ನೇ! ಹಾಗಾಗಿ ಮನಸ್ಸಿನಲ್ಲಿ ಲವಲವಿಕೆಯೇ ಇರಲಿಲ್ಲ.
ಆಗ ಹೊಳೆದಿದ್ದೇ ಈ ಸಾಲುಗಳು.ತಕ್ಷಣ ನವಿಲುಗರಿ ಸೋಮುವಿಗೆ ಕಳಿಸಿಬಿಟ್ಟೆ. ಅವರಿಗೆ ಅದೇನು ಹಿಡಿಸಿತೋ ಮೂರು ದಿನ ಆದಮೇಲೆ ಒಂದು ಮೆಸ್ಸೇಜ್ ಬಿಟ್ಟರು. ನನಗೆ ನಿಜಕ್ಕೂ ಇದು ಹುಚ್ಚು ಹಿಡಿಸಿಬಿಟ್ಟಿದೆ. ಕೊನೆ ಸಾಲು ಮಾತ್ರ ಜಪ್ಪಯ್ಯ ಅಂದರೂ ಅರ್ಥ ಆಗಲಿಲ್ಲ. ಅದರಲ್ಲಿ ಏನೋ ಇದೆ ಅನಿಸುತ್ತಿದೆ. ಅದೇನು ಅಂತ ಹೇಳು ಗುರುವೇ ಅಂತ. ನಾನು ಅದುವರೆಗೂ ಆ ಮೆಸ್ಸೇಜ್ ಕಳಿಸಿ ಮರೆತು ಸುಮ್ಮನಿದ್ದವ. ಆದ್ರೆ ಯಾವಾಗ ಈ ನವಿಲುಗರಿ ಮತ್ತೆ ಕಳಿಸಿದರೋ ಮತ್ತೆ ಮತ್ತೆ ಓದಿಕೊಂಡೆ. ಹೌದಲ್ಲ ಇದರಲ್ಲೇನೋ ಇದೆ ಅನಿಸಿಬಿಟ್ಟಿತು. ಏನದು?ನಾನು ಹೇಳುವುದಕ್ಕಿಂತ ಅದನ್ನು ನೀವು ಹೇಳಿದ್ರೇ ಚೆನ್ನ. ಏನನ್ನಿಸಿತು ಅಂತ ಒಂದು ಮೆಸ್ಸೇಜ್ ಬಿಡಿ.
ಮನಸ್ಸು ಖುಲ್ಲಂ ಖುಲ್ಲ ಖುಷಿಯಾಗುತ್ತದೆ.

Wednesday, July 23, 2008

ಫಸ್ಟ್ ಹಾಫ್ ನೋಡಬೇಕು ಅಂದಿದ್ರು ವ್ಯಾಸರು

ಆಗತಾನೆ ಬಂದಿದ್ದ "ಫಸ್ಟ್ ಹಾಫ್" ಪುಸ್ತಕವನ್ನ ಪತ್ರಕರ್ತ ಗೆಳೆಯ ಶ್ರೀಕಂಠ ಒಂದು ಎಕ್ಸೈಟ್ಮೆಂಟ್ನೊಂದಿಗೆ ತಿರುವಿ ಹಾಕುತ್ತಿದ್ದರು. ಆ ಪುಸ್ತಕದ ಬಗ್ಗೆ ನನಗಿಂತ ಅವರಿಗೇ ಹೆಚ್ಚು ಕುತೂಹಲವಿತ್ತು. ಹಾಗಾಗಿ ಪುಸ್ತಕದ ಮೊದಲ ಕಾಪಿ ಬಂತು ಅನ್ನುತ್ತಿದ್ದಂತೆ ನನಗೆ ತೋರಿಸಿಯೇ ನೀವು ಹೋಗಬೇಕು ಅಂತ ಹಟ ಹಿಡಿದಿದ್ದರು. ಇಡೀ ಪುಸ್ತಕ ನೋಡಿ ಆದ ಮೇಲೆ ಅವರು ಹೇಳಿದ್ದಿಷ್ಟು... ಈ ತರಹದ ಪುಸ್ತಕ ಇದುವರೆಗೂ ಬಂದಿಲ್ಲ. ನೀವು ಅದ್ಭುತವಾದ ಕೆಲಸ ಮಾಡಿದ್ದೀರಿ ಅಂತ. ಅವರ ಪ್ರೀತಿ ದೊಡ್ಡದು.
ಆದರೆ ವಿಪಯರ್ಾಸ ನೋಡಿ. ವ್ಯಾಸರು ರವಿ ಬೆಳಗೆರೆ ಬಗ್ಗೆ ಅತ್ಯಂತ ಪ್ರೀತಿಯಿಂದ ಬರೆದುಕೊಟ್ಟಿದ್ದ ಲೇಖನವನ್ನ ತಿರುವಿಹಾಕುತ್ತಿದ್ದಾಗಲೇ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಂತು. ಮಧ್ಯಾಹ್ನ 12.20ಕ್ಕಷ್ಟೇ ಫೋನ್ ಮಾಡಿ ವಿಠ್ಠಲ ಗಟ್ಟಿ ಉಳಿಯ ಅವರ ಜೊತೆ ನಗುನಗುತ್ತಾ ಮಾತಾಡಿದ್ದರು. ನಮ್ಮನ್ನೆಲ್ಲ ಯಥಾಪ್ರಕಾರ ವಿಚಾರಿಸಿದ್ದರು. ಓ ಮನಸೇ ಬೇಗ ಕೊಡಿ. ಯಾಕೆ ಲೇಟ್ ಮಾಡ್ತೀರಿ ಅಂದಿದ್ದರು. ನಾನು ಫಸ್ಟ್ ಹಾಫ್ ಪುಸ್ತಕದ ರಿಲೀಸಿಂಗ್ ಫಂಕ್ಷನ್ಗೆ ಬರ್ತೇನೆ ಅಂದಿದ್ದರಂತೆ. ಇನ್ನೆಲ್ಲಿ ಬರೋದು? ಯಾಕೋ ಗೊತ್ತಿಲ್ಲ ಹಿರಿಯರೆನಿಸಿಕೊಂಡಿದ್ದವರೆಲ್ಲ ಒಬ್ಬೊಬ್ಬರಾಗಿ ಹೇಳದೆ ಕೇಳದೆ ಹೊರಟುಹೋಗುತ್ತಿದ್ದಾರೆ. ನನ್ನ ಅತ್ಯಂತ ಪ್ರೀತಿಯ ರಾಮ್ದಾಸ್ ಹೋದಾಗಲಂತೂ ನನ್ನನ್ನೊಂದು ಶೂನ್ಯ ಆವರಿಸಿಕೊಂಡಿತ್ತು. ಮೊನ್ನೆ ಅವರ ಕೊನೆಯ ಫೋಟೋ ಆಕಸ್ಮಿಕವಾಗಿ ಸಿಕ್ಕಿತು. ಕಣ್ಣು ಒತ್ತರಿಸಿಕೊಂಡು ಬಂತು. ಒಮ್ಮೆ ಮೂಡುಬಿದಿರೆಯಲ್ಲಿ ಸಿಕ್ಕು ಇಷ್ಟು ಎತ್ತರ ಬೆಳೆದುಬಿಟ್ಟಿದ್ದೀರಾ? ಗುರುತೇ ಸಿಗುತ್ತಿಲ್ಲ ಅಂದಿದ್ದರು. ಆಮೇಲೆ ಅದೆಂಥದೋ ಮರದ ಕೆಳಗೆ ಗಂಟೆಗಟ್ಟಲೆ ಕುಳಿತು ಹರಟೆ ಹೊಡೆದಿದ್ದರು. ಹಾಗೆ ತೇಜಸ್ವಿ. ಈಗ ವ್ಯಾಸರು. ನಾವೆಲ್ಲ ಸಾಹಿತ್ಯಕ ತಬ್ಬಲಿಗಳಾಗುತ್ತಿದ್ದೀವೇನೋ ಅನಿಸಿಬಿಟ್ಟಿದೆ.ಗೆಳೆಯ ವಿಠ್ಠಲ ಗಟ್ಟಿ ಉಳಿಯ ಅವರಿಗೆ ವ್ಯಾಸರು ಫೋನ್ ಮಾಡಿದಾಗಲೆಲ್ಲ ರವಿ ಅಜ್ಜೀಪುರ ಅವರನ್ನು ಕೇಳಿದೆ ಅಂತ ಹೇಳಿ. ಅವರು ಚೆನ್ನಾಗಿ ಬರೆಯುತ್ತಾರೆ. ಅವರ ಶೈಲಿ ಚೆನ್ನಾಗಿದೆ ಅನ್ನುತ್ತಿದ್ದರಂತೆ. ಪ್ರತಿ ಮೆಸ್ಸೇಜ್ನಲ್ಲೂ ನಮ್ಮ ಕ್ಷೇಮ ಸಮಾಚಾರ ವಿಚಾರಿಸುತ್ತಿದ್ರು. ಒಮ್ಮೆ ಹೋಗಿ ಅವರನ್ನು ನೋಡಿಕೊಂಡು ಬರೋಣ ಅಂತ ನಾನು ವಿಠ್ಠಲಗಟಿ ಉಳಿಯ ಮಾತಾಡಿಕೊಂಡಿದ್ದೆವು. ಅವರಿಗೆ ಫಸ್ಟ್ ಹಾಫ್ ಪುಸ್ತಕ ನೋಡಬೇಕೆಂಬ ಆಸೆ ತೀವ್ರವಾಗಿತ್ತು. ಆದ್ರೆ ಅದನ್ನು ನೋಡುವ ಮೋದಲೇ ಹೊರಟುಬಿಟ್ಟರಲ್ಲ ಅನ್ನುವ ವ್ಯಥೆ ಇನ್ನಿಲ್ಲದೇ ಕಾಡುತ್ತಿದೆ.
ಅವರ ಪ್ರೀತಿ ಅಜರಾಮರ. ಅವರು ಬರೆದ ಕಥೆಗಳೂ

Monday, July 21, 2008

ಫಸ್ಟ್ ಹಾಫ್ ಅನ್ನೋ ಬೆಳಗೆರೆ ಬದುಕಿನ ಬೆರಗು




ಫಸ್ಟ್ ಹಾಫ್.


ಫಸ್ಟ್ ಹಾಫ್ಇದೇನು ಹೆಸರೇ ಡಿಫರೆಂಟ್ ಆಗಿದೆ ಅಂದುಕೊಂಡ್ರಾ! ಹೆಸರು ಮಾತ್ರವಲ್ಲ ಬುಕ್ಕೂ ಡಿಫರೆಂಟಾಗೆ ಇದೆ.ನಾಲ್ಕುನೂರಕ್ಕೂ ಹೆಚ್ಚಿನ ಫೊಟೋಗಳು.... ಎಪ್ಪತ್ತಕ್ಕೂ ಹೆಚ್ಚಿನ ಆಪ್ತ ಬರಹಗಳು... ಸೊಗಸಾದ ವಿನ್ಯಾಸ... ಬೊಗಸೆಯಲ್ಲಿ ಬಿದ್ದೊಡನೆಯೇ ಬೆರಗುಗೊಳಿಸುವಂತಹ ಮುದ್ದುಮುದ್ದಾದ ಪುಸ್ತಕ ಇದು. ನಿಜ್ಜ ಇದು ರವಿ ಬೆಳಗೆರೆ ಅಭಿನಂದನಾ ಗ್ರಂಥ. ಅವರನ್ನು ಕಣ್ಣಲ್ಲಿ ತುಂಬಿಕೊಂಡವರು... ಮನದಲ್ಲಿ ಬಚ್ಚಿಟ್ಟುಕೊಂಡವರು ...ಹೇಗಿದ್ದ ಹೇಗಾದ ಅಂತ ಬೆರಗುಗೊಂಡವರು... ಬಹಳ ಕಷ್ಟಪಟ್ಟಾಂನ್ರಿ. ಅಂವ ಇನ್ನೂ ಚೆನ್ನಾಗಿರಬೇಕು ಅಂತ ಮನ ಬಿಚ್ಚಿ ಹರಸಿದವರು... ಕೈ ಹಿಡಿದು ನಡೆಸಿದವರು...ಗೆಳೆಯರು-ಗೆಳತಿಯರು... ಅವರ ನೆರಳಲ್ಲೇ ಬದುಕು ಕಂಡುಕೊಂಡವರು... ಎಲ್ಲರ ಮನದ ಮಾತು ಇಲ್ಲಿದೆ.


ಪ್ರತಿ ಪುಟವೂ ನವನವೀನ ಅಂತಾರಲ್ಲ ಹಾಗೇ.


ನಿಜ್ಜ ಹೇಳ್ತೀನಿ ಇಂಥ ಚಂದಕ್ಕೆ ಕನ್ನಡದಲ್ಲಿ ಈ ಮೊದಲು ಪುಸ್ತಕ ಬಂದಿದೆಯಾ?ಗೊತ್ತಿಲ್ಲ.ಆದ್ರೆ ಫಸ್ಟ್ ಹಾಫ್ ನ ಫಸ್ಟ್ ಕಾಪಿ ಬಂತಲ್ಲ ಅದನ್ನ ಕೈಯಲ್ಲಿಡಿದುಕೊಂಡು ಅದೆಷ್ಟು ಹೊತ್ತು ನೋಡುತ್ತಾ ಕುಳಿತೆನೋ..ನೋಡಿದಷ್ಟೂ ಬೆರಗು ತಣಿಯಲಿಲ್ಲ...


ಆ ಬೆರಗು ಇನ್ನೇನು ಕೆಲವೇ ದಿನಗಳಲ್ಲಿ ನಿಮಗೂ ಸಿಗಲಿದೆ...

Saturday, July 5, 2008

Tuesday, July 1, 2008

ಹೇಗೆ ಸಾಯಲಿ ಮತ್ತೆ?

ಹೇಗೆ ಸಾಯಲಿ ಮತ್ತೆ?
ನಿನಗಾಗಿ

ಆ ತಿರುವಿನಲ್ಲಿ ಕಾದೂ ಕಾದೂ
ಸತ್ತಿದ್ದು
ಕುಡಿ ನೋಟಕ್ಕಾಗಿ ಸತ್ತಿದ್ದು
ಪಿಸು ಮಾತಿಗಾಗಿ ಸತ್ತಿದ್ದು
ತಿರುಗಿ ನೋಡಬಾರದಾಂತ ಸತ್ತಿದ್ದು
ಸಿಗುತ್ತಾಳೋ ಇಲ್ಲವೋ ಅಂತ ಚಡಪಡಿಸಿ
ಸತ್ತಿದ್ದು
ರಾತ್ರಿ ನಕ್ಷತ್ರ ಎಣಿಸಿ ಸತ್ತಿದ್ದು
ಸತ್ತ ಸಂಜೆಗಳಲ್ಲಿ ಮತ್ತೆ ಸತ್ತಿದ್ದು
ನಿನ್ನ ನೆನಪುಗಳಿಗೆ ನೇಣುಹಾಕಿಕೊಂಡಿದ್ದು

ಹೇಳು
ಹೇಗೆ ಸಾಯಲೀ ಮತ್ತೆ?

ನೀನು ಸಿಕ್ಕಿದ ಮೇಲೂ
ಸಾಯುವುದು ನಿಲ್ಲಲಿಲ್ಲ

ಮಾತಲ್ಲಿ ಕೊಂದೆ
ಮೌನದಲ್ಲಿ ಕೊಂದೆ
ಕಣ್ಣಲ್ಲಿ ಕೊಂದೆ
ಬೆರಳ ತುದಿಯಲ್ಲಿ ಕೊಂದೆ
ಅನುಮಾನದಿ ಕೊಂದೆ
ಬಿಗುಮಾನದಿ ಕೊಂದೆ
ಕೊಂದೆ

ಎದೆಯ ಒಳಗಿನಭಾವ ಎಳೆದೆಳೆದು ಕೊಂದೆ
ಕನಸುಗಳನ್ನೆಲ್ಲ ಬರಸೆಳೆದು ಕೊಂದೆ
ನೀಲಾಕಾಶದ ತಳದಲಿ ನಿಂದವನ
ನಿಂದಿಸಿ ಕೊಂದೆ

ಹೇಳು
ಹೇಗೆ ಸಾಯಲಿ ಮತ್ತೆ?

ನಿನ್ನದೊಂದು ಕಣ್ಣ ಕುಡಿ
ನನ್ನ ಎದೆಯ ಕಡಲಲಿ ಜೀಕುವ ತನಕ
ನಾನು ಸತ್ತವನಲ್ಲ

ಪ್ರೀತಿಸುವುದೆಂದ್ರೆ
ಸಾಯುವುದಾ?
ಸಾಯಿಸುವುದಾ?

Friday, June 13, 2008

ಫಿಫ್ಟಿ ಫಿಫ್ಟಿ


ಯಾಕೋ ಗೊತ್ತಿಲ್ಲ ಮೊದಲ ನೋಟಕ್ಕೇ ಕೆಲವು ಹುಡುಗೀರು ಇಷ್ಟವಾಗಿ ಬಿಡುತ್ತಾರಲ್ಲ ಹಾಗೆ ಈ ಮರ ಕೂಡ ನನಗೆ ಇಷ್ಟ ಆಯ್ತು. ನನಗೆ ಅರ್ಥವಾಗಿದ್ದಕ್ಕೆ ಫಿಫ್ಟಿ ಫಿಫ್ಟಿ ಅಂತ ಹೆಸರಿಟ್ಟೆ. ನಿಮಗೆ ಏನನ್ನಿಸುತ್ತದೋ ಬಲ್ಲವರಾರು. ಮೂರ್ತವೂ ಆಗಬಹುದು ಅದೇ ಅಮೂರ್ತವೂ ಆಗಬಹುದು. ಅಥವಾ ಎದೆಯ ಭಾವಕ್ಕೇ ಸಿಗದೇ ಹೋಗಬಹುದು. ಹೇಗೋ ಹಾಗೇ!
ನಿಮಗೆ ಬಿಟ್ಟಿದ್ದೇನೆ.

ಪಾಳುಬಾವಿ ಬಳಿಯ ಕಾಲುದಾರಿಯಲ್ಲಿನ ಒಂದು ನೆನಪು


ನನಗಿನ್ನೂ ಅದು ನೆನಪಿದೆ.

ನಾವು ಸ್ಕೂಲಿಗೆ ಹೋಗುವಾಗ ಬರುವಾಗ ನಡುವೆ ಒಂದು ಬಾವಿ ಸಿಗುತ್ತಿತ್ತು. ಅದನ್ನೇನು ಯಾರೂ ಉಪಯೋಗಿಸ್ತಿರಲಿಲ್ಲ. ಪಾಳು ಬಾವಿ ಅಂತಾರಲ್ಲ ಆ ಥರದ್ದು. ಅದನ್ನ ದೆವ್ವದ ಬಾವಿ ಅಂತಾಲೂ ಕರೀತಿದ್ರು. ಅದರ ಎದೆ ಮೇಲೆ ಅಮಟೆ ಕಾಯಿ ಮರ... ನೇರಳೇ ಮರ... ಹೊಂಗೆ ಮರಗಳೆಲ್ಲ ಇದ್ವು. ಮೇನ್ ರೋಡ್ ಬಿಟ್ರೆ ಶಾಟರ್್ ಕಟ್ ಅಂತ ಬಹುತೇಕ ಮಂದಿ ಹೋಗುತ್ತಿದ್ದದು ಇದೇ ದಾರಿಯಲ್ಲಿ. ಹಾಗೇ ಹೋಗ್ತಾ ಬರ್ತಾ ಅಮಟೆ ಕಾಯಿ ಕಿತ್ಕೊಂಡು ಅದಕ್ಕೆ ಉಪ್ಪು ಕಾರ ಅದ್ಕಂಡು ತಿನ್ನೊ ಮಜಾ ಇದೆಯಲ್ಲ ಅದಕ್ಕೆ ಇವತ್ತಿನ ಯಾವ ತಿಂಡಿಯು ಸಮವಲ್ಲ ಬಿಡಿ. ಹುಣಸೇ ಹಣ್ಣಿಗೆ ಉಪ್ಪು ಕಾರ ಬೆರೆಸಿ ಅದನ್ನ ಉಂಡೆ ಮಾಡಿ ಕಡ್ಡಿಗೆ ಸಿಕ್ಕಿಸಿಕೊಂಡು ಚೂರು ಚೂರೇ ಚೂರು ಚೂರೇ ತಿಂತಾ ಇದ್ವಲ್ಲ ಅದ್ನ ಇವತ್ತಿನ ಯಾವ ಲಾಲಿಪಪ್ ತಿಂದ್ರೆ ಸಿಗುತ್ತೆ? ಉರುಳಿಯನ್ನ ಬೇಯಿಸಿ ಅದಕ್ಕೆ ಬೆಲ್ಲ ಏಲಕ್ಕಿ ಹಾಕಿ ಕುಟ್ಟಿ ಅವ್ವ ಮುದ್ದೆ ಗಾತ್ರ ಉಂಡೆ ಮಾಡಿ ಕೈ ತುಂಬಾ ಇಟ್ರೆ ಅದನ್ನ ತಿಂದಿದ್ದೇ ಗೊತ್ತಾಗ್ತಿರಲಿಲ್ಲ. ಹಸು ಕರು ಹಾಕಲಿ ಎಮ್ಮೆ ಕರು ಹಾಕಲಿ ಮೊದ ಮೊದಲು ಗಿಣ್ಣಿನ ಹಾಲಿರುತ್ತಲ್ಲ ಅದನ್ನ ಕಲ್ಲು ಇಟ್ಟು ಹಬೆಯಲ್ಲೇ ಬೇಯಿಸಿ ಒಳ್ಳೆ ಕೇಕ್ ಥರ ಮಾಡಿ ಕೊಡ್ತಿದ್ಲಲ್ಲ ಅವ್ವ. ಅದರ ರುಚೀನೆ ಬೇರೆ ಇತ್ತು! ಅವೆಲ್ಲ ನಮ್ಮ ತಲೆಮಾರಿಗೆ ಅಷ್ಟೇ ಗೊತ್ತೇನೋ. ಇವತ್ತಿನ ಮಕ್ಕಳಿಗೆ ಗಿಣ್ಣು ಅಂದ್ರೆ , ಉರುಳಿ ಕಾಳು ಅಂದ್ರೆ? ಹೂಂಹು ಅವರೆಲ್ಲ ಪಿಜ್ಜಾಗೆ ಮೊರೆ ಹೋದವರು... ಪೆಪ್ಸಿಗೆ ಮೊರೆ ಹೋದವರು... ಕುರ್ಕುರೆಗೆ ಮೊರೆ ಹೋದವರು. ಇರಲಿ.

ಈ ಬಾವಿ ಅಂತಂದನಲ್ಲ ಆ ವಿಷಯಕ್ಕೆ ಬರೋಣ. ಒಂದ್ಸಾರಿ ನಾನು ಅಕ್ಕ ಇಬ್ಬರೂ ಅದೇ ದಾರಿಯಲ್ಲಿ ಇಸ್ಕೂಲ್ ಮುಗಿಸಿಕೊಂಡು ಬರ್ತಾ ಇದ್ವಿ. ಬಾವಿ ಹತ್ರ ಬರೋದಕ್ಕೂ ಅದೇನೋ ಬಾವಿ ಒಳಕ್ಕೆ ದಡ್ ಅಂತ ಬೀಳುವುದಕ್ಕೂ ಸರಿ ಹೋಯ್ತು. ಅಕ್ಕ ಕಿಟಾರ್ ಅಂತ ಕಿರುಚಿದ್ಲು. ಅದರ ಹಿಂದೆಯೇ ನಾನೂ. ಇಬ್ಬರೂ ಅಲ್ಲಿ ಓಟಕಿತ್ತವರು ಮನೆಯ ಹೊಸ್ತಿಲ ತನಕ ನಿಲ್ಲಲಿಲ್ಲ. ಅವ್ವ ಗಾಬರಿಯಾಗಿ ಏನು ಅಂತ ಕೇಳಿದ್ರೆ ಹಿಂಗಿಂಗಾಯ್ತು ಅಂದ್ವಿ. ಅಪ್ಪ ಅವ್ವ ಆ ಕಡೆಯಿಂದ ಬರಬೇಡಿ. ಅಲ್ಲಿ ದೆವ್ವ ಇದೆಯಂತೆ ಅಂತ ನಾನು ಹೇಳಿರಲಿಲ್ವಾ? ಅಂತೆಲ್ಲ ಗದರಿಸಿದ ಮೇಲೆ ನಮಗೆ ಇನ್ನೂ ಭಯ ಹೆಚ್ಚಾಗಿ ಇಬ್ಬರೂ ಮೂರ್ನಾಲ್ಕು ದಿನ ಜ್ವರ ಬಂದು ಮಲಗಿದ್ವಿ. ಮಾರಮ್ಮನ ದೇವಸ್ತಾನಕ್ಕೆ ಕರ್ಕೊಂಡ್ ಹೋಗಿ ತಾಯ್ತಾ ಕಟ್ಟಿಸಿದ್ರು. ಕೆಂಪು ನೀರ್ ತೆಗದ್ರು... ಅದ್ಯಾವುದೋ ದೇವರ ದೂಳ್ತಾ ಹಚ್ಚಿದ್ರು...ತಡೆ ಹೊಡಿಸಿದ್ರು... ಕೊನೆಗೆ ಒಂದ್ ದಿನ ಜ್ವರ ಬಿಡ್ತು.ಆದ್ರೆ ಅಲ್ಲಿ ದೆವ್ವ ಆಗಿದ್ದು ಯಾರು? ಅನ್ನೋದು ಮಾತ್ರ ನಮಗೆ ಬಿಡದೇ ಕಾಡುತ್ತಿತ್ತು.ಆ ದೆವ್ವ ಬೇರೆ ಯಾರೂ ಅಲ್ಲ. ತುಂಬಾ ಹಿಂದೆ ನಮ್ಮೂರಲ್ಲಿ ಒಬ್ಬಳು ಹೆಣ್ಣುಮಗಳಿದ್ದಳು. ಇನ್ನೂ ಚಿಕ್ಕ ವಯಸ್ಸು ಆಕೀದು. ಮದುವೆ ಆಗಿ ಮೂರ್ನಾಲ್ಕು ವರ್ಷ ಆಗಿತ್ತಂತೆ. ಗಭರ್ಿಣಿ ಬೇರೆ. ಗಂಡ ದಿನ ಕುಡಿದು ಬಂದು ಗಲಾಟೆ ಮಾಡೋನಂತೆ. ಹೊಡೆಯೋನಂತೆ. ಗಂಡನ ಹೊಡೆತ ತಾಳಲಾರದೇ ಬೇಸತ್ತು ಆ ಬಾವಿಗೆ ಬಿದ್ದು ಸತ್ತೋದ್ಲಂತೆ. ಆ ಮೇಲೆ ಆಕೆ ಸೇಡಿನಿಂದ ಗಂಡನನ್ನೂ ಬಲಿ ತೆಗೆದುಕೊಂಡ್ಲಂತೆ. ಈಗಲೂ ಅಮಾಸೆ ಹುಣ್ಣಿಮೆಗೆ ಆ ಬಾವಿ ಹತ್ರ ಆಕೆ ಕೂತ್ಕಂಡು ಸರಿ ರಾತ್ರೀಲಿ ಅಳ್ತಾಳಂತೆ...ಇಷ್ಟೆಲ್ಲ ಹೇಳಿದಮೇಲೂ ಆ ಬಾವಿ ಕಡೆ ಹೋಗೋ ಗುಂಡಿಗೆ ಯಾರಿಗಿರುತ್ತೆ.ಆಮೇಲಿಂದ ಏನಿದ್ರೂ ನಮ್ದು ಮೇನ್ ರೋಡೇ.ಹೊಲದ ಮೇಲೆ ಹೋಗುವಾಗ ಬರುವಾಗ ತಿಂತಿದ್ದ ಹಾಲು ತುಂಬಿಕೊಂಡ ಕಾಚಕ್ಕೀ, ಮುಸುಕಿನ ಜೋಳ.. ಹಸಿ ಹಸೀ ಹೆಸರು ಕಾಳು... ಹತ್ತಿ ಹಣ್ಣು ಎಲ್ಲಾ ಆಗಾಗ್ಗೆ ನೆನಪಾಗುತ್ತೆ.

ಜೊತೆಗೆ ಈ ದೆವ್ವದ ಘಟನೆಯೂ.