ಹಂಪಿ ಒಂಥರಾ ಕಾಡುವ ಸಾಮ್ರಾಜ್ಯ.
ಎಷ್ಟರ ಮಟ್ಟಿಗೆ ಅಂದ್ರೆ, ಆ ಗುಂಗಿನಿಂದ ಹೊರಬರಲು ಬಹುಶಃ ತಿಂಗಳುಗಳೇ ಬೇಕೇನೋ! ಅಷ್ಟು ಕಾಡುತ್ತದೆ. ಅವತ್ತಿನ ಅವರ ಸಮೃದ್ಧ ಬದುಕನ್ನ ಕಲ್ಪಿಸಿಕೊಂಡರೇ ಗ್ರೇಟ್ ಅನಿಸುತ್ತೆ. ಒಂದು ಸಾಮ್ರಾಜ್ಯದ ರಿಚ್ನೆಸ್, ಅಭಿರುಚಿ, ಸಾಮಥ್ರ್ಯ, ಬುದ್ಧಿವಂತಿಕೆ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತದೆ. ನನಗೆ ಪ್ರತಿ ಬಾರಿ ಹೋದಾಗಲೂ ಕಾಡುವುದು ಅಲ್ಲಿನ ವಿಜಯ ವಿಠ್ಠಲ ದೇವಾಲಯದ ಕಲ್ಲಿನ ಕಂಬಗಳಿಂದ ಹೊಮ್ಮುವ ಸಂಗೀತ, ಅದರ ಹಿಂದಿರುವ ತಂತ್ರಜ್ಞಾನ. ಅವರ ಕಲಾನೈಪುಣ್ಯಕ್ಕೆ, ಕಲಾಪೋಷಣೆಗೆ, ತಂತ್ರಜ್ಞಾನಕ್ಕೆ ನನ್ನದೊಂದು ಹ್ಯಾಟ್ಸಾಫ್ ಹೇಳಲೇಬೇಕು.
ಇಲ್ಲಿ ಲೋಟಸ್ ಮಹಲ್ ಅಂತ ಒಂದಿದೆ. ಅದು ಯಾವಾಗಲೂ ತಂಪಾಗಿರುವಂತಹ ವ್ಯವಸ್ಥೆ ಆಗಲೇ ಇತ್ತಂತೆ. ಅಂದ್ರೆ ಅದನ್ನ ತಂಪಾಗಿರಿಸಲು ಕೊಳವೆಗಳ ಮೂಲಕ ನೀರನ್ನು ಚಾವಣಿಯಲ್ಲಿ ಹರಿಸುತ್ತಿದ್ದರು. ಅಲ್ಲರೀ 14 ನೇ ಶತಮಾನದಲ್ಲೇ ಅಂಥದ್ದೊಂದು ತಂತ್ರಜ್ಞಾನವನ್ನ ಅವರು ರೂಢಿಸಿಕೊಂಡಿದ್ರು ಅಂದ್ರೆ ಅದು ಸಾಮಾನ್ಯಾನಾ? ಅವರ ಮುಂದೆ ನಮ್ಮ ಇವತ್ತಿನ ತಂತ್ರಜ್ಞಾನ ನಥಿಂಗ್ ಅನ್ನಿಸಿಬಿಡುತ್ತೆ. ಅಷ್ಟು ಚಂದನೆಯ ಕಲ್ಲಿನ ರಥ ಸೃಷ್ಟಿಸಲು ಅದೆಷ್ಟು ಶಿಲಿಗಳು ಬೆವರು ಸುರಿಸಿದ್ದರೋ? ಅವರ ತಾಳ್ಮೆ ಎಂಥದೋ? ಆ ವಿರೂಪಾಕ್ಷನೇ ಬಲ್ಲ. ಮೊಗಲರ ದಾಳಿಗೆ ಒಳಗಾಗಿ ಮುಕ್ಕಾಗದಿದ್ದರೆ ಹಂಪಿ ತನ್ನ ಒಡಲಲ್ಲಿ ಅದಿನ್ನೆಂತಹ ಸರ್ವಶ್ರೇಷ್ಠ ಕಲಾಕೃತಿಗಳನ್ನ ಬಚ್ಚಿಟ್ಟುಕೊಂಡಿರುತಿತ್ತೋ, ಅಲ್ವ!
ಇಂಥ ಹಂಪಿ ತುಂಬಾ ಕಿತ್ತು ತಿನ್ನುವವರೇ ತುಂಬಿಕೊಂಡಿದ್ದಾರೆ. ಹಂಪಿ ಬಗ್ಗೆ ನಿಮಗೊಬ್ಬ ಗೈಡ್ ಬೇಕು ಅಂದ್ರೆ ನೀವು ಸಾವಿರಗಟ್ಟಲೇ ಹಣ ಕೊಡಬೇಕು. ಅದೂ ಅವನು ಅದರಲ್ಲಿ ಪ್ರವೀಣನೇ ಅಂದ್ರೆ ನೋ ನೋ. ಅವನು ಹೇಳಿದ್ದನ್ನು ಕೇಳಿಸಿಕೊಂಡು ಸುಮ್ಮನಾಗಬೇಕು. ಕ್ರಾಸ್ ಕ್ವಶ್ಚನ್ ಕೇಳಿದ್ರೆ ಆ ಟಾಪಿಕ್ ಬಿಟ್ಟು ಬೇರೆಲ್ಲ ಹೇಳುತ್ತಾನೆ. ವಿದೇಶಿ ಪ್ರವಾಸಿಗರು ಸಿಕ್ಕರಂತೂ ಅವರನ್ನು ಕಿತ್ತು ತಿನ್ನುವ ಪಡೆಗಳೇ ಇಲ್ಲಿವೆ. ಛದ್ಮವೇಷದಾರಿಗಳಿಂದ ಹಿಡಿದು ಅವರನ್ನು ಓಲೈಸಿ ಹಣ ಕಿತ್ತುಕೊಳ್ಳಲು ಹವಣಿಸುವ ಪಡೆಗಳಿವೆ. ಸಕರ್ಾರ ಕೂಡ ಅಂಥ ಕೇರ್ ತಗೊಂಡಿಲ್ಲ ಅನಿಸುತ್ತೆ. ಅಲ್ಲಿ ಸೆಕ್ಯೂರಿಟಿ ಕೋಣೆ ಅಂತ ಒಂದಿದೆ. ಅದು ತೆಂಗಿನ ಗರಿಯಿಂದ ಮಾಡಿದ್ದು. ಅದರಲ್ಲಿ ಒಬ್ಬ ಪ್ರೈವೇಟ್ ಸೆಕ್ಯೂರಿಟ ಗಾಡರ್್ ತೂಗಡಿಸುತ್ತಾ ಕೂತಿರುತ್ತಾನೆ. ಇಂಥ ಸೆಕ್ಯೂರಿಟಿ ಇಟ್ಟುಕೊಂಡು ಯಾವ ಟೆರ್ರರಿಸ್ಟ್ಗಳನ್ನ ತಡೆಯಲು ಸಾಧ್ಯ?
ಹಾಗೆ ನೋಡಿದ್ರೆ ಹಂಪಿಯನ್ನು ಇನ್ನೂ ಅಚ್ಚುಕಟ್ಟಾಗಿ ಸಂರಕ್ಷಿಸಬಹುದಿತ್ತು. ಬರುವ ಪ್ರವಾಸಿಗರಿಗೊಂದು ಕಮ್ಫಟರ್್ ಕೊಡಬಹುದಿತ್ತು. ಅವೆರಡೂ ಆಗಿಲ್ಲ ಅಲ್ಲಿ ಬಿಡಿ.
ಹಾಗಿದ್ರೂ ಹಂಪಿ ನೋಡಲೇಬೇಕು. ಅಲ್ಲಿನ ಗತ ವೈಭವವನ್ನ ಕಣ್ತುಂಬಿಕೊಳ್ಳಲೇಬೇಕು. ಅದಕ್ಕಾದ್ರೂ ಒಮ್ಮೆ ಹೋಗಿ ಬನ್ನಿ.
5 comments:
ravi
hampi bagegina nimma lekhana odide..
Hampiyalli yavathhu guide annu niyamisikollale baradu..
Hampiyannu adbhutha siri yannu thannage aaswadisuthhisuthirabeku..ashte
noodidashtu nodabekennisuva soundarya adu..
Hampi ge omme banni..
First half' vinyasa masth ide.
Nimma bagge thumba kelidde..
mathhashtu preethiyinda
srujan
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್ ಸೃಜನ್
ಆಕ್ಚುಯಲಿ ನಮಗೆ ಗೈಡ್ ನೇಮಿಸಿಕೊಳ್ಳುವ ಇರಾದೆಯೇ ಇರಲಿಲ್ಲ. ಆದ್ರೆ ಎಲ್ಲೋ ಒಂದುಕಡೆ ಇರಬೇಕು ಅನಿಸಿದ್ದು ನನ್ನ ಗೆಳೆಯರಿಗೆ. ಆದ್ರೆ ಅವರು ಬೇಕಿರಲಿಲ್ಲ ಅನಿಸಿದ್ದು ಮಾತ್ರ ನಿಜ್ಜ.
ಫಸ್ಟ್ ಹಾಫ್ ನಿಮ್ಮಂತೆ ನೂರಾರು ಜನ ಮೆಚ್ಚಿಕೊಂಡಿದ್ದಾರೆ. ಅದಕ್ಕೆ ನಾನು ಋಣಿ.
ಅಂದಹಾಗೆ ನಿಮ್ಮ ಪರಿಚಯ ಖುಷಿ ತಂತು. ಪ್ರೀತಿ ಹೀಗೇ ಜಾರಿಯಲ್ಲಿರಲಿ
ರವಿ ಅಜ್ಜೀಪುರ
Mattomme nivu hampi ge hogbedi ajjipura... alliruva anegalige bedike kammi agutte antha besara avakke...... but channagide nimma hampi baravanige
Hi,
Nanoo kuda monne december nalli hampi ge hogidde. kittu tinnoru tumba aagi bittiddare ....... ella kade bari foregn ratu. season iddagantu hampiyalli iroodu or hogudu tumba kasta. yakandre yelladakku duoble duddu kodabeku.
Idakke enaadru madabeku anta annisodilva ravi. E kadeemaranna ondistu daarige taroke agolva...ravi?
can we do any thing......?
Hampiyalli neeninnu nododu tumba ide..
1) matanga parvata hatti suryodaya nodu.
2)Hemakuta hatti suryasta nodu.
3) vittala mandiravanna obbane summane barigallali odaadu.
4)belagge ne eddu tunga nadi teeradlli barigalalli usukinalli odadu......
5) List swalpa doddadide. ivella ista aadre next episode nalli heltini.
aytaa...
ಪ್ರಿಯ ಬೆಳಕು
ನಿಮ್ಮ ಪ್ರೀತಿಗೆ ನನ್ನ ಸಲಾಮ್. ಹಂಪಿಗೆ ಹೋದಾಗಲೆಲ್ಲ ಅಲ್ಲಿ ಬಾಚಿ ತಬ್ಬುವ ಖುಷಿಯ ಜೊತೆಗೆ ಅಖಂಡ ಬೇಜಾರು ಆವರಿಸಿಕೊಳ್ಳುತ್ತದೆ.ಏನಾದರೂ ಮಾಡಬೇಕು ಅಂತ ನನಗೂ ಅನ್ನಿಸುತ್ತಿದೆ. ಹಾಗಂದುಕೊಳ್ಳುತ್ತಲೇ ಅದನ್ನು ಮರೆತುಬಿಡುತ್ತಿದ್ದೇವೆ.
ಇರಲಿ, ಇನ್ನೂ ನೋಡಬೇಕಾದ ಸ್ಥಳದ ಪಟ್ಟಿ ಕೊಟ್ಟು ಕಾತರ ಹೆಚ್ಚಿಸಿದ್ದೀರಿ.
ಮತ್ತೆ ಹಂಪಿಯ ಹೊಸ್ತಿಲು ತುಳಿಯುವ ಆಸೆ ಚಿಗುರೊಡೆಯುತ್ತಿದೆ.
next episode ನಲ್ಲಿ ಏನೋ ಹೇಳ್ತೀನಿ ಅಂದ್ರಿ. ಹೇಳಿಬಿಡಿ.
ಪ್ರೀತಿ ಜಾರಿಯಲ್ಲಿರಲಿ.
ರವಿ ಅಜ್ಜೀಪುರ್ರ
Post a Comment