Wednesday, December 24, 2008
ಗೊತ್ತಾ ... ಸತ್ತುಹೋಗೋ ಅಷ್ಟು ನಿನ್ನ ಪ್ರೀತಿಸ್ತಿದೀನಿ ಕಣೇ...
ಹಾಯ್ ಕಣೇ
ಬೆಣ್ಣೆ ಬಣ್ಣದ ಕಾಲವಳೇ.
ಹೇಗೆ ಶುರುಮಾಡಬೇಕೋ ತೋಚುತ್ತಿಲ್ಲ. ಹೋದ ವರ್ಷವೆಲ್ಲ ನನ್ನನ್ನ ಪ್ರೀತಿಸೋ ಅಂತ ನೀನು ಬೆನ್ನು ಬಿದ್ದಿದ್ದೆ. ನೆನಪಿದೆಯಾ... ಐಯಾಮ್ ಇನ್ ಲವ್ ವಿಥ್ ಯೂ ಅಂತ ಬೋಡರ್ು ಹಿಡಿದುಕೊಂಡು ಒಂದಿನ ರೂಮಿನ ತನಕ ಬಂದುಬಿಟ್ಟಿದ್ಯಲ್ಲ! ನನಗೋ ನನ್ನ ಮನಸ್ಸಿನಲ್ಲಿರುವವಳು ನೀನಲ್ಲ ಕಣೇ ಅಂತ ಹೇಗೆ ಹೇಳಲಿ ಅನ್ನುವುದು ತೋಚದೆ ಪೆಕರು ಪೆಕರಾಗಿ ನಿಂತಿದ್ದೆ. ನೀನು ಅತ್ತೆ, ಗೋಗರದೆ, ಬೆನ್ನಿಗೆ ಗುದ್ದು ಮಾಡಿ ಪ್ಲೀಸ್ ಕಣೋ ನನಗೇನು ಕಡಿಮೆಯಾಗಿದೆ ಹೇಳು? ನಾನು ಚೆನ್ನಾಗಿಲ್ವಾ? ಓದಿಲ್ವಾ? ಅಥವಾ ನಿನ್ನ ಟೇಸ್ಟ್ಗೆ ಒಗ್ಗೊಲ್ವಾ? ಹೈಟೂ ನಿನಗಂತ ಎರಡಿಂಚು ಕಮ್ಮಿ ಇದೀನಿ ಅಷ್ಟೆ. ನಿನಗೆ ಬೇಕಂದ್ರೆ ಚೂರು ದಪ್ಪ ಆಗ್ತೀನಿ. ಸತ್ಯ ಹೇಳ್ತೀನಿ ಕೇಳು, ನೀನು ನನ್ನನ್ನ ಪ್ರೀತಿ ಮಾಡ್ತೀನಿ ಅಂತ ಹೇಳು. ಅಲ್ಲಿ ನನ್ನದೂ ಅಂತ ಏನೂ ಇರೋಲ್ಲ. ಎಲ್ಲಾ ನಿನ್ನ ಆಣತಿಯಂತೆಯೇ ನಡೆಯುತ್ತದೆ. ನಿನ್ನ ಟೇಸ್ಟ್ ನಾನೂ ಕಲಿತುಕೊಳ್ಳುತ್ತೇನೆ. ನಿನ್ನ ಬೈಗುಳ, ನಿನ್ನ ಹುಚ್ಚಾಟ, ನಿನ್ನ ಅಸಹ್ಯ ಮೌನ ಸಹಿಸಿಕೊಳ್ಳುತ್ತೇನೆ. ನಿನ್ನ ದಿನಕ್ಕೊಂದು ಫಿಲ್ಮ್ ನೋಡೋ ಹುಚ್ಚಿಗೆ ನಾನೂ ಬಲಿಯಾಗುತ್ತೇನೆ, ಆದ್ರೆ ಅದೊಂದನ್ನು ಬಿಟ್ಟು. ನಿಮಿಷಕ್ಕೆ ಹದಿನೆಂಟು ಸಲ ಎಳೆಯುತ್ತೀಯಲ್ಲ ಸಿಗರೇಟು ಅದು. ಇಲ್ಲ ಅನ್ನಬೇಡ, ನನಗೆ ನಿನ್ನ ಮುಖ ನೋಡದೇ ಇರೋದಕ್ಕೆ ಆಗ್ತಾ ಇಲ್ಲ ಕಣೋ. ನೀನು ಹೇಗೇ ಇದ್ದರೂ, ಏನೇ ಕೊರತೆ ಇದ್ದರೂ ಸಹಿಸಿಕೊಂಡು ಜೀವನ ಮಾಡ್ತೀನಿ ಅಂತೆಲ್ಲ ಅವಲತ್ತುಕೊಂಡಿದ್ದೆಯಲ್ಲ ಸೌಪಣರ್ಿಕಾ, ಕೇಳು ಈಗೀಗ ನಿನ್ನ ಮೇಲೆ ಮನಸ್ಸಾಗಿದೆ ಕಣೆ.
ನಾವ್ ಐ ಯಾಮ್ ಇನ್ ಲವ್ ವಿಥ್ ಯು.
ನಿಂಗೆ ಗೊತ್ತಾ, ಬಡ್ಡೀ ಮಗಂದು ಈ ಪ್ರೀತೀನೆ ಹಾಗೆ. ಯಾರೋ ನಿನ್ನನ್ನ ಪ್ರೀತಿಸ್ತಿದೀನಿ ಅಂದಾಗ ಇವಳಿಗೆ ಮಾಡೋದಕ್ಕೆ ಕೆಲಸ ಇಲ್ಲ ಅನಿಸಿಬಿಡುತ್ತೆ. ಅದೇ ಅವಳು ದೂರ ಆದಾಗ ಛೇ ಅವಳನ್ನ ತುಂಬಾ ಮಿಸ್ ಮಾಡ್ಕೋತಿದೀನಿ ಅನ್ನಿಸಿಬಿಡುತ್ತೆ. ರಿಯಲಿ ಐ ಮಿಸ್ ಯೂ ಕಣೆ. ಮನಸ್ಸು ನೀನಿಲ್ಲದೆ ಬಿಕೋ ಅಂತಿದೆ. ನೀನು ಬಿಸಾಕಿ ಹೋದ ಆ ಪ್ರೀತಿಯ ಬೋರ್ಡನ್ನ ಹುಡುಕಿ ಎತ್ತಿಟ್ಟುಕೊಂಡಿದ್ದೇನೆ. ಅವತ್ತೇಕೋ ಸುಮ್ಮನೆ ಕುಳಿತವನಿಗೆ ನೀನು ಯಾವ ಪರಿ ಕಾಡಿಬಿಟ್ಟೆ ಅಂದ್ರೆ ಸತ್ತು ಹೋಗೋ ಅಷ್ಟು ನಿನ್ನನ್ನ ಆಗಲೇ ನೋಡಬೇಕು ಅನಿಸಿಬಿಡ್ತ್ತು. ನಿನ್ನ ಹಾಸ್ಟೆಲ್ ಹತ್ರ ಹೋದ್ರೆ ಅವಳು ಊರಿಗೋಗಿ ತಿಂಗಳಾಯ್ತು ಅಂದ್ರು. ಯಾವತ್ತೂ ಅಳದವನು ಅಲ್ಲೇ ಒಂಟಿ ಕಲ್ಲಿನ ಮೇಲೆ ಕುಳಿತು ಅತ್ತುಬಿಟ್ಟೆ ಗೊತ್ತಾ! ಕಲ್ಲಿಗೂ ಕನಿಕರ ಬಂತೆನೋ. ಗೊತ್ತಿಲ್ಲ. ನನಗೆ ಗೊತ್ತು ನಿನಗೆ ಸಿಟ್ಟು ಬಂದಿದೆ ಅಂತ. ಆದರೇನು ಮಾಡಲಿ ಮನಸ್ಸು ನೀನೇ ಬೇಕು ಅಂತ ಹಟ ಹಿಡಿದಿರುವಾಗ. ಅವಾಗೆಲ್ಲ ನಿನ್ನ ಮುಖ ನೋಡಲಿಕ್ಕೂ ನನಗೆ ಬೇಜಾರಾಗುತ್ತಿತ್ತು ನಿಜ್ಜ, ಈಗ ಅದೇ ಮುಖದ ತಲಾಶೆಯಲ್ಲಿದ್ದೇನೆ. ನಿನ್ನ ನಗು ನೋಡಬೇಕೆನಿಸಿದೆ, ಮಾತು ಕೇಳಬೇಕೆನಿಸಿದೆ, ಮೌನಕ್ಕೆ ಸಾಥಿಯಾಗಬೇಕೆನಿಸಿದೆ, ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನಿನ್ನಿಷ್ಟದ ಹಾಡನ್ನ ನನ್ನೆದೆಯೊಳಗೆ ಗುನುಗಿಕೊಳ್ಳಬೇಕೆನಿಸಿದೆ. ಎಲ್ಲಿಹೋದೆ ಸೌಪಣರ್ಿಕಾ?
ನಿಜ್ಜ ಹೇಳು ಅಷ್ಟು ಹೇಟ್ ಮಾಡ್ತೀಯ ನನ್ನ?
ಹೊಸ ವರ್ಷದ ಬೆಳ್ಳಂಬೆಳಿಗ್ಗೆ ನಿನಗೆ ಐ ಲವ್ ಯೂ ಅಂತ ಹೇಳಲಿಕ್ಕೆ ಕಾದು ಕುಳಿತಿದೀನಿ. ಎದೆಯಲ್ಲಿ ಅದೆಂಥದೋ ಪುಳಕವಿದೆ. ಆಸೆ ಇದೆ. ಅದಮ್ಯ ಉತ್ಸಾಹವಿದೆ. ಮೂರು ಜನ್ಮಕ್ಕಾಗುವಷ್ಟು ಪ್ರೀತಿ ಇದೆ. ಜೊತೆಗೆ ಭಯವೂ ಇದೆ. ಅವತ್ತು ಕೂತು ಮಾತಾಡಿಕೊಳ್ಳೋದೆ ಬೇಡ. ಜಸ್ಟ್ ಸಿಗು ಸಾಕು. ತಾಳಿಕಟ್ಟಿಬಿಡ್ತೀನಿ. ಅವತ್ತಿಂದ ನೀನು ಸಿಫರ್್ ನನ್ನವಳು. ಪಟ್ಟದ ರಾಣಿ ಅಂತಾರಲ್ಲ ಹಾಗೆ ನೋಡಿಕೊಳ್ತೀನಿ . ನಿನ್ನ ರವಿಕೆಗೆ ಹುಕ್ ಹಾಕುವುದರಿಂದ ಹಿಡಿದು ಮುಡಿಗೆ ಮಲ್ಲಿಗೆ ಮುಡಿಸುವುದರ ತನಕ ಜವಾಬ್ದಾರಿ ನನ್ನದು. ತಪ್ಪು ನನ್ನಿಂದಾಗಿದೆ ನಿಜ್ಜ. ಹಾಗಂತ ಕಾಡಬೇಡ, ಸತಾಯಿಸಬೇಡ, ಕೊಲ್ಲಬೇಡ. ಜಸ್ಟ್ ಕ್ಷಮಿಸಿಬಿಡೆ ನನ್ನ.
ಒಂದನೇ ತಾರೀಖು ಬೆಳಿಗ್ಗೆ ಲಾಲ್ ಬಾಗ್ನ ಎಡ ತಿರುವಿನಲ್ಲಿರುವ ಪುಟ್ಟ ಹೂವಿನ ಗಿಡದ ಹತ್ತಿರ ಕಾಯುತ್ತಾ ನಿಂತಿರುತ್ತೇನೆ. ಅವತ್ತಿಂದ ಇಬ್ಬರೂ ಬದುಕೋದಾದರೆ ಒಟ್ಟಿಗೆ ಸತ್ತರೂ ಒಟ್ಟಿಗೆ.
ಬರ್ತೀಯಲ್ಲ ...
ಬಾರದಿದ್ದರೆ ನಾ ಬದುಕೊಲ್ಲ ಅನ್ನೋದು ನಿನಗೆ ಗೊತ್ತಿರಲಿ.
Subscribe to:
Post Comments (Atom)
5 comments:
ಖಂಡಿತಾ ಬರ್ತೀನಿ... ಪ್ರಿಯಾ... ನೀನು ಅಲ್ಲಿ ಇಲ್ಲದೆ ಹೋದರೆ ಅಲ್ಲಿಯೇ ಇರುವ ಲಾಲ್ ಬಾಗ್ ಕೆರೆಗೆ ಹಾರುವವಳೇ... ನಿನ್ನ ಒಂದು ಕರೆಗಾಗಿ ವರುಷಗಳಿಂದ ಎದಿರು ನೋಡುತ್ತಿದ್ದ ನಾನು ಈಗ ಬೇಡವೆನ್ನುವುದಾದರೂ ಹೇಗೆ?
ಅದೇ ಹೂವಿನಗಿಡ... ಅದೇ ಕಲ್ಲುಬೆಂಚು... ಆದರೆ ತಾರೀಕು ಮಾತ್ರ ಬದಲಾಗಿದೆ. ಇರಲಿ.. ನಿನಗಾಗಿ ನೀನು ಹೇಳಿದ ದಿನದಂದೇ ಬರುವೆ.. ಕಾಯುತ್ತಿರು... ಕಾಯುತ್ತಿರು....
ಹೌದಾ..ಹಾಗಾದ್ರೆ ಕಲ್ಲುಬೆಂಚು ಹತ್ರ ನಿಮ್ ನೋಡಕ್ಕೆ ನಾವು ಕಾಯುತ್ತಿರ್ತೀವಿ..ಶುಭವಾಗಲಿ ಸರ್.
-ತುಂಬುಪ್ರೀತಿ,
ಚಿತ್ರಾ
ಹಾಯ್ ಸರ್
ನಿಮ್ಮ ಬ್ಲಾಗ ನೋಡಿ ತುಂಬಾ ಸಂತೋಷ ಆಯ್ತು.ಓ ಮನಸೆ ನಲ್ಲಿ ಓದುತ್ತಿದ್ದ ನಿಮ್ಮ ಲೇಖನಗಳು ಅದು ನಿಂತು ಹೋದ ಮೇಲೇ ತುಂಭಾ ಅಪರೂಪವಾಗಿದ್ದ ನೀವು ಮತ್ತು ನಿಮ್ಮ ಲೇಖನಗಳು .ಇವತ್ತು ಓದಿ ತುಂಭಾ ಹರ್ಷವಾಯಿತು
ಬಿಡುವಿದ್ದಾಗ ನನ್ನ "ಸಾವಿರ ಕನಸು"ಗೆ ಬರುತ್ತಿರಿ ತಾನೇ.
ಪ್ರೀತಿ ಇರಲಿ
-ಕನಸು
ಸರ್..ಹೊಸ ವರುಷ ಅನುದಿನ ತರಲಿ ಹರುಷ...
ಅಂದಹಾಗೇ..ಇವತ್ತು ಎರಡನೇ ತಾರೀಕು..ಸಿಕ್ಕಿದ್ಳಾ ಹುಡುಗಿ? ಏನಾಯ್ತು..? ಬರಲಿ..ಮುಂದಿನ ಬರಹ...!
-ಚಿತ್ರಾ
ಗುರುಗಳಿಗೆ ಬೇಜಾನ್ ಲವ್ ಬಂದುಬಿಟ್ಟಿದೆ..! ಹುಡುಗಿ ಲಾಲ್ ಬಾಗ್ ಹತ್ರ ಬಂದ್ಲ ಸಾರ್? ನೀವ್ ಬದುಕೋದಿಲ್ಲ ಅಂತ ಬೇರೆ ಹೇಳಿದ್ದೀರಿ ಅಲ್ವ ಬಂದೇ ಬಂದಿರ್ತಾಳೆ..;) ಮುಂದೇನಾಯಿತೂ ಅಂತ ನಮಗೂ ಹೇಳಿ ಮುಂದಿನ ಪತ್ರದಲ್ಲಿ..:)
ನಿಮ್ ಹುಡುಗ
ಸೋಮು
Post a Comment