Tuesday, April 28, 2009

ಕಾಮಿ ಕವಿತೆಗಳು



ಪ್ರಿಯರೇ ಹೀಗ್ಯಾಕೆ ಬರೆಯಬೇಕೆನಿಸಿತೋ ನನಗೆ ಗೊತ್ತಿಲ್ಲ. ಸುಮ್ಮನೆ ಕುಳಿತಿದ್ದವನ ಕೈ ಹಿಡಿದು ಬರೆಸಿಕೊಂಡ ಪುಟ್ಟ ಪುಟ್ಟ ಸಾಲುಗಳಿವು. ಯಾಕೆ, ಏನು ಅಂತ ಕೇಳಬೇಡಿ. ಸುಮ್ಮನೆ ಓದಿಕೊಳ್ಳಿ. ಹಾಗೇ ಇಷ್ಟ ಆಗಿರಲಿ, ಆಗದೇ ಇರಲಿ ಪ್ರತಿಕ್ರಿಯಿಸಿ.




1
ಮುಟ್ಟು ಅಂದರೂ ಮುಟ್ಟಲ್ಲ
ಸುಮ್ಮನೆ ಆಸೆಪಡುತ್ತೀಯಲ್ಲ
ಒಮ್ಮೆ ಕೈ ತಾಕಿಸು ಗೆಳೆಯ
ಎದೆಯ ಪುಟಗಳಿಗೆ
ಸುಗ್ಗಿ ಬರಲಿ

1
ನೀನು ಮಲಗಿದೆ
ನಾನೂ ಮಲಗಿದೆ
ಎಚ್ಚರಾದಾಗಲೇ ಗೊತ್ತಾಗಿದ್ದ
ನಮ್ಮ ನಡುವೆ ಮತ್ತೊಬ್ಬನಿದ್ದ
ಕಾಮಿ

3
ನೀನು ಏನನ್ನೂ ಬಿಚ್ಚಬೇಡ
ಸುಮ್ಮನೆ ಬಚ್ಚಿಟ್ಟಿಕೋ
ಬಟಾ ಬಯಲಾಗುವುದೂ ಕೂಡ
ಕೆಲವೊಮ್ಮೆ ಬೋರ್ ಹೊಡೆಸುತ್ತದೆ.

4
ಇವತ್ಯಾಕೋ
ನೀನು ಬೇಕೆನಿಸುತ್ತಿದೆ
ಬಂದು ಹೋಗೋ
ಮೈಗೆ ಸೋಲುವುದು ಗೊತ್ತಿದ್ದಂತೆ
ಸುಖಕ್ಕೆ ತೇಲುವುದು ಗೊತ್ತಿದೆ
ಅವೆರಡನ್ನೂ ಕಲಿಸುತ್ತೇನೆ

5
ನನ್ನ ಪಾದದ ಕಿರುಬೆರಳಿಗೂ
ನಿನ್ನ ನೆನಪಿದೆ ಕಣೋ
ಕಚ್ಚಿದ
ಗುರುತು ಮಾಸಿ ಹೋಗಿಲ್ಲ
ಇವತ್ತಾದರೂ ಬಂದು
ಮುಲಾಮು ಹಚ್ಚಬಾರದಾ?

6
ನೀನು ಏನೋ ಹುಡುಕಿದೆ?
ನಾನು ಏನೋ ತಡಕಿದೆ?
ಗೊತ್ತಿಲ್ಲ, ಆದರೆ
ಇಬ್ಬರಲ್ಲೂ ಏನೋ ಸಿಕ್ಕ ಖುಷಿ ಇದೆ

7
ಏನೂ ಬೇಡ
ಸುಮ್ಮನೆ ತಬ್ಬಿಕೋ!

11 comments:

Anonymous said...

ನನಗೂ ಹಾಗೇ ಅನ್ನಿಸ್ತಿತ್ತು ನಾಲ್ಕು ದಿನದ ಹಿಂದೆ
ನಿಮ್ಮ ಕವನಗಳಿವೆ ನನ್ನ ಮುಂದೆ
ಆದರೆ ಅನ್ನಿಸಿದೆ ಆ ಕವನಗಳು ನಂದೇ

Anonymous said...

ಕವನ ಓಕೆ..ಚೆನ್ನಾಗಿದೆ. ಈ ಥರದ ಭಾವನೆಗಳು ಸಹಜ,....ಆದರೆ ಈ ವಯಸ್ಸಿಗೆ ಇಷ್ಟೊಂದು ಭಾವೋದ್ರೇಕಗೊಂಡ್ರೆ ಹೇಗೆ ಸ್ವಾಮಿ?
-ಪ್ರೀತಿಯ ಓದುಗ

Anonymous said...

Nice :)

ಬಾ.ರಾ. ಗೌರೀಶ್ ಕಪನಿ said...

nannolagina thunta, gilli thuti melondu nagu tharisida!

Basavaraj.S.Pushpakanda said...

chchi....tunta...

Shankar Prasad ಶಂಕರ ಪ್ರಸಾದ said...

ರವಿ,
ನಿಮ್ಮ ಬ್ಲಾಗಿಗೆ ಅನಿರೀಕ್ಷಿತವಾಗಿ ಭೇಟಿ ಕೊಟ್ಟೆ.
ಬಹಳ ಇಷ್ಟ ಆಯ್ತು. ವೈವಿಧ್ಯತೆಯಿಂದ ಕೂಡಿದೆ.
ಕವನ, ಚುಟುಕು, ಲೇಖನ, ಫೋಟೋಗಳು ತುಂಬಾ ಇಷ್ಟ ಆದ್ವು.
ಜೊತೆಗೆ ನೀವು ಡಿಜೈನರ್ ಅಂತಾ ಕೂಡ ಹೇಳಿದೀರ.
ನೀನಾ ಪಾಕಿಸ್ತಾನ ಪುಸ್ತಕದ ಕವರ್ ಪೇಜ್ ಬಹಳ ಹೇಳುತ್ತಿದೆ.
ಎನಿವೇ, ನನ್ನನ್ನು ನಿಮ್ಮ ಬಳಗಕ್ಕೆ ಸೇರಿಸಿಕೊಳ್ಳಿ.
ಜೊತೆಗೆ ಒಂದು ಸಣ್ಣ ಸಜೆಶನ್, ನಿಮ್ಮ ಬ್ಲಾಗನ್ನು Follow ಮಾಡೋದಕ್ಕೆ ಅನುಕೂಲವಾಗೋ ಹಾಗೆ
ಆ Gadget ಹಾಕಿಕೊಳ್ಳಿ.
ಹಾಗೆ ಒಮ್ಮೆ ನನ್ನ ಸೋಮಾರಿ ಕಟ್ಟೆಗೆ ಬನ್ನಿ.

http://somari-katte.blogspot.com
ಕಟ್ಟೆ ಶಂಕ್ರ

ಏಕಾಂತ said...

ನಮಸ್ತೆ...
ಅನಿರೀಕ್ಷಿತವಾಗಿ ನಿಮ್ಮ ಬ್ಲಾಗ್ಗೆ ಬಂದೆ.
ನಿಮ್ಮನ್ನು ನೋಡಿದ್ದೇನೆ. ಲೇಖನಗಳಲ್ಲಿ. ಅಪರೂಪದ ಮುಖಪುಟಗಳಲ್ಲಿ. ಈಗ ಬ್ಲಾಗ್ನಲ್ಲಿ. ಕಲೆಯ ಮೇಲಿನ ನಿಮ್ಮ ಅಭಿರುಚಿಯನ್ನು ಮೆಚ್ಚಿಕೊಂಡಿದ್ದೇನೆ.
ನದೀ ಪ್ರೀತಿ ನಿರಂತರವಾಗಿರಲಿ.
- ಲಕ್ಷ್ಮೀಕಾಂತ
http://yekantha.blogspot.com

ರವಿರಾಜ್ ಆರ್.ಗಲಗಲಿ said...

kamapoona kavite, chennagide...idu rochaka hagu sukhadayaka

Unknown said...

ravi sir superb matte matte odbeku ansta ide

Prabhakar. H.R said...

halavu vaividyagalinda koodida nimma blognnu odode ondu kushi...anireekshitavagi nanu ee blog ge bandiddu...but innu mele mis mado chancey illa bidi...!!!

Unknown said...

nimm talege talebagide