Monday, November 2, 2009

ನೂರು ರುಪಾಯಿಗೆ ಏನು ಬರುತ್ತೆ?

ಮೊನ್ನೆ ಸಂಜೆ ಯಾಕೋ ಫುಲ್ ಅಜರ್ೆಂಟಾಗಿ ಒಂದು ಟೀ ಕುಡಿಯಬೇಕೆನಿಸಿತು. ಒಮ್ಮೊಮ್ಮೆ ಯಾಕೆ ಹಾಗನ್ನಿಸುತ್ತದೆ ಅಂತ ನನಗೂ ಗೊತ್ತಿಲ್ಲ. ಬೇಜಾರಗಲಿಕ್ಕೆ, ತಲೆ ನೋವು ಬರಲಿಕ್ಕೆ ಆಫೀಸಿನಲ್ಲಿ ಬೇಜಾನ್ ಕಾರಣಗಳಿವೆ ಬಿಡಿ. ಆದರೆ ಅವತ್ತು ಅಂಥದ್ದೇನೂ ನಡೆದಿರಲಿಲ್ಲ.
ಆಫೀಸಿನ ಪಕ್ಕದಲ್ಲೊಂದು ಬೇಕರಿ ಇದೆ. ಅದು ಮರಳುಗಾಡಿನಲ್ಲಿ ಸಿಕ್ಕ ಓಯಸಿಸ್ ಥರ. ಅಲ್ಲಿಗೆ ಹೋಗಿ ಒಂದು ಟೀ ಹೇಳಿ ನಿಂತುಕೊಂಡೆ. ಬ್ಲೂ ಜೀನ್ಸ್ ಬ್ಲ್ಯಾಕ್ ಟೀಶಟರ್್ ತೊಟ್ಟಿದ್ದ ಚೆಲುವೆಯೊಬ್ಬಳು ಬಂದು ಎರಡು ಲೀಟರ್ ಪೆಪ್ಸಿ, ಎರಡು ಲೀಟರ್ ಮಿರಿಂಡಾ, ಎಡು ಲೀಟರ್ ಕೋಕ್ ತೆಗೆದುಕೊಂಡು ಹೋದಳು. ಅವಳು ಆ ಕಡೆ ಹೋದ ಮೇಲೆ ಅಂಗಡಿಯಾತ ಯಾತಕ್ಕೋ ನಕ್ಕ. ಏನ್ರಿ ಅಷ್ಟೊಂದು ಕುಡಿತಾರಾ? ಅಂದೆ. ಸ್ನಾನಕ್ಕಿರಬೇಕು ಸಾರ್ ಅಂದು ಆತ ಮತ್ತೆ ಫಕಫಕನೆ ನಕ್ಕ.
ಕೈಗೆ ಟೀ ಬರುವಷ್ಟರಲ್ಲಿ ಒಂದು ಮಗು ನೂರು ರುಪಾಯಿಯ ನೋಟು ಹಿಡಿದುಕೊಂಡು ಓಡೋಡಿ ಬಂತು. ಅದರ ಅಮ್ಮ ಮತ್ತು ಚಿಕ್ಕ ತಂಗಿ ಇನ್ನೂ ಆ್ಯಕ್ಟೀವಾದಿಂದ ಇಳಿದಿರಲೇ ಇಲ್ಲ. ಆಗಲೇ ಈ ಪೋರಿ ಈ ನೂರು ರುಪಾಯಿಗೆ ಏನು ಬರುತ್ತೆ ಅಂಕಲ್ ಅಂತ ಮೂರು ಸಲ ಕೇಳಿದ್ದಳು. ಅಂಗಡಿಯಾತ ಮಲಯಾಳಿ. ಅವನಿಗೆ ಏನು ಅರ್ಥ ಆಯಿತೋ ಅರ್ಥ ಆಗಲಿಲ್ಲವೋ! ಮಗುವಿನ ಮಾತಿಗೆ ಪ್ರತಿಕ್ರಿಯಿಸಲಾಗದೇ ಸುಮ್ಮನೆ ನಿಂತಿದ್ದ. ಮಗು ಮತ್ತೆ ಕೇಳಿತು, ಅಲ್ಲಿದ್ದ ತಿಂಡಿಯನ್ನೆಲ್ಲ ಒಮ್ಮೆ ನೋಡುತ್ತಾ... ನೂರು ರುಪಾಯಿಗೆ ಏನು ಬರುತ್ತೆ ಅಂಕಲ್ ?
ಅಂದರೆ ಆ ಮಗುವಿಗೆ ನೂರು ರುಪಾಯಿಗೆ ಅಂಥದ್ದೇನೂ ಬರೋಲ್ಲ ಅಂತ ಗೊತ್ತಾಗಿದೆಯೇ? ನೋ ಐಡಿಯಾ!
ಅಷ್ಟರಲ್ಲಿ ಅವರ ಅಮ್ಮ ಹೆಲ್ಮೆಟ್ಟೂ ತೆಗೆಯದೇ ಪರ ಲೋಕದಿಂದ ಬಂದ ಏಲಿಯನ್ಸ್ ಥರ ಇನ್ನೊಂದು ಚಿಕ್ಕ ಮಗುವಿನ ಕೈ ಹಿಡಿದುಕೊಂಡು ಬಂದಳು. ಮಗುವಿನ ಕೈಯಲ್ಲಿದ್ದ ನೂರು ರುಪಾಯಿ ಇಸಿದುಕೊಂಡು ಏನು ಬೇಕು ಬೇಗ ಹೇಳು? ಅಂತ ಅವಸರವಸರ ಮಾಡಿದಳು.
ಚಿಕ್ಕದು ದೊಡ್ಡದಕ್ಕಿಂತ ಹುಷಾರು. ನನಗೆ ಜೆಮ್ಸ್ ಬೇಕು. ಫ್ರೂಟಿ ಬೇಕು, ಕುರುಕುರೆ ಬೇಕು ಅಂತೆಲ್ಲ ಕೈ ಬೆರಳು ಎಣಿಸುತ್ತಾ ಪಟ್ಟಿಮಾಡತೊಡಗಿತು. ದೊಡ್ಡ ಮಗುವಿಗೆ ಮಾತ್ರ ಮೊದಲಿದ್ದ ಸ್ಪಿರಿಟ್ ಯಾಕೋ ಕಡಿಮೆಯಾದಂತಿತ್ತು. ಅದು ಒಂದೇ ಒಂದು ಡೈರಿಮಿಲ್ಕ್ಗೆ ಮೊರೆ ಹೋಗಿತ್ತು ಅಷ್ಟೆ.
ಬದುಕು ಎಂಥ ಡ್ರಾಸ್ಟಿಕ್ ಚೇಂಜ್ಗೆ ಒಳಗಾಗಿದೆ ಅಲ್ವಾ? ನಾವು ಚಿಕ್ಕವರಿದ್ದಾಗ ಐದು ಪೈಸೆಗೆ ಐದು ಶುಂಠಿ ಪೆಪ್ಪರ್ ಮಿಂಟ್ ಸಿಕ್ಕಿದರೆ ಅದೇ ಭಾಗ್ಯ. ಅದನ್ನೇ ಎಲ್ಲಿ ಬೇಗ ಕರಗಿ ಹೋಗುತ್ತದೋ ಅಂತ ಸ್ವಲ್ಪ ಚೀಪಿ ಇನ್ನು ಸ್ವಲ್ಪವನ್ನ ಅಂಗಿ ತುದಿಯಲ್ಲಿ ಒರೆಸಿ ಚಡ್ಡಿ ಜೇಬಲ್ಲಿ ಇಟ್ಟುಕೊಳ್ಳುತಿದ್ವಿ. ಈಗಿನ ಮಕ್ಕಳಿಗೆ ಅಂತ ಕೊರತೆಯಿಲ್ಲ. ಲಿಮಿಟ್ಟುಗಳೂ ಇಲ್ಲ. ಬಯಸಿದ್ದು ಕ್ಷಣದಲ್ಲೇ ಬೊಗಸೆಯಲ್ಲಿ ಸಿಗುತ್ತದೆ. ಸಿಗದೇ ಹೋಗಿರುವುದು ನಮಗೆ ಸಿಕ್ಕಿತಲ್ಲ ಆ ಮಜಬೂತಾದ ಬಾಲ್ಯ.
ಆ ವಿಷಯದಲ್ಲಿ ನಾವು ಭಾಗ್ಯವಂತರೇ!
ಏನಂತೀರಿ?

5 comments:

ವಿ.ರಾ.ಹೆ. said...

ಹೌದು ಸರ್, ಎಷ್ಟೊಂದು ನಿಜ ಅನ್ನಿಸಿತು.

Basavaraj.S.Pushpakanda said...

sir chikka vayasalli naavu hunasehannu jajji adakke swalpa uppu,menasu,jeerige haaki lolly pop madkondu tindiddu jnapakkakke barutte...eegina packet nalli aa ruchi sigoke saadhyana sir..
eeginavarige ade ruchi aaginavarige ade lotte hodkondu tinoshtu maja....ibru enjoy madtivi bere bere vidha ashte...
lekhana sakhath aagide...

Anonymous said...

>>>ಅಂದರೆ ಆ ಮಗುವಿಗೆ ನೂರು ರುಪಾಯಿಗೆ ಅಂಥದ್ದೇನೂ ಬರೋಲ್ಲ ಅಂತ ಗೊತ್ತಾಗಿದೆಯೇ? >>> ಸಿಗದೇ ಹೋಗಿರುವುದು ನಮಗೆ ಸಿಕ್ಕಿತಲ್ಲ ಆ ಮಜಬೂತಾದ ಬಾಲ್ಯ...

Neevandiddu Nija Ravi.

GURU said...

ಸಿಗದೇ ಹೋಗಿರುವುದು ನಮಗೆ ಸಿಕ್ಕಿತಲ್ಲ ಆ ಮಜಬೂತಾದ ಬಾಲ್ಯ...
sakkat line...

Guruprasad S Hattigoudar said...

ಹತ್ತು ಪೈಸೆ ಕೊಟ್ಟರೆ ಸಾಕು ದೂರದ ಅಂಗಡಿಗೆ ಓಡಿ ಪೆಪ್ಪರಮೆಂಟು ಖರೀದಿಸಿ ಜೇಬು ತುಂಬಾ ತುಂಬಿಕೊಂಡು ಎಲ್ಲರಿಗೂ (ಸಮವಯಸ್ಕರಿಗೆ) ತೋರಿಸುತ್ತಾ `ಕಾಂವ್...ಕಾಂವ್.." ಮಾಡುತ್ತಾ ತಿನ್ನುತ್ತಿದ್ದೆ. ಅದು ಈಗ ನೆನಪಾಯ್ತು. ನಮಗೆ ಸಿಕ್ಕಂಥ ಬಾಲ್ಯಜೀವನ ಈಗಿನವರಿಗೆ ಸಿಗಲ್ಲ ಬಿಡಿ.
बार बार आति है मुज्कॊ
मधुर याद बचपन तेरी
गयाले गया तू जीवन की सबसे मस्त खुशि मेरि
ಸುಭದ್ರಕುಮಾರಿ ಚೌಹಾನ್ ಅವರ ಈ ಹಾಡು ಕೂಡ ನೆನಪಾಯ್ತು. thanks