"Tell me whom you love and I will tell you who you are." - Houssaye
ಯಾರನ್ನು ಪ್ರೀತಿಸುತ್ತೀಯ ಅಂತ ಹೇಳು ನೀನು ಎಂಥವನು ಅಂತ ಹೇಳುತ್ತೇನೆ ಅನ್ನೋ ಅರ್ಥ ಬರುವಂಥ ಈ ಮಾತುಗಳನ್ನು ಹೇಳಿದವನು ಫ್ರೆಂಚ್ ಕಾದಂಬರಿಕಾರ, ಕವಿ ಆಸರ್ೆನ್ ಹುಸ್ಸೇ. ಎಷ್ಟು ನಿಜ್ಜ ಅನ್ನಿಸಿಬಿಡ್ತು ಗೊತ್ತಾ?ಯಾಕೇಂದ್ರೆ, ಕೆಲವೊಮ್ಮೆ ಪ್ರೀತಿಯ ಹೆಸರಿನಲ್ಲಿ ಅಪಾತ್ರರನ್ನೆಲ್ಲ ಎಳೆದುತಂದು ಎದೆಯ ಅಂಗಳದಲ್ಲಿ ಕುಳ್ಳಿರಿಸಿಕೊಂಡು ಬಿಡುತ್ತೇವೆ. ಅವರು ನಮಗೆ ಯೋಗ್ಯರಾ, ತಕ್ಕುದಾದವರಾ ಅಂತ ಒಮ್ಮೆ ಕೂಡ ಯೋಚಿಸುವುದಿಲ್ಲ. ಅಂತ ಅಪಾತ್ರರನ್ನೇ ಬಗಲಲ್ಲಿಟ್ಟುಕೊಂಡು ತಿರುಗುತ್ತೇವೆ, ಗಂಟೆ ಗಟ್ಟಲೆ ಮಾತಾಡುತ್ತೇವೆ, ಹರಟುತ್ತೇವೆ, ತೋಳ ತೆಕ್ಕೆಯಲ್ಲಿ ವಿಹರಿಸುತ್ತೇವೆ. ನನಗೆ ಈ ಪ್ರೀತಿ ಒಗ್ಗೊಲ್ಲ ಅಂತ ಗೊತ್ತಾಗುವ ತನಕ ಈ ಪಯಣ ಹಾಗೇ ಮುಂದುವರೆಯುತ್ತದೆ.ಒಮ್ಮೆ ಗೊತ್ತಾಯಿತು ಅಂತಿಟ್ಟುಕೊಳ್ಳಿ, ಅಲ್ಲಿಗೆ ಪ್ರೀತಿ ಮಕ್ಕಾಡೆ ಮಲಗಿತು ಅಂತಲೇ ಅರ್ಥ. ಆದರೆ ಹಾಗೆ ಮಲಗಿದ ಪ್ರೀತಿಯನ್ನೂ ಎಬ್ಬಿಸಿ ಕೈ ಹಿಡಿದು ಕರೆದುಕೊಂಡು ಹೋಗುವವರೂ ಇದ್ದಾರೆ. ಅಂಥ ಪ್ರೀತಿ ಎಲ್ಲಿತನಕ ಹೋಗಿ ನಿಲ್ಲುತ್ತದೋ ಹೇಳಬರುವುದಿಲ್ಲ.
ನನ್ನ ಗೆಳೆಯ ಒಬ್ಬನಿದ್ದ ಮೈಸೂರಿನಲ್ಲಿ ; ಹರೀಶ ಅಂತ. ಅವನಿಗೆ ಊರ ತುಂಬಾ ಸಖಿಯರು. ಹೋದಲ್ಲಿ ಬಂದಲ್ಲಿ ಅವನಿಗೆ ಒಬ್ಬೊಬ್ಬಳು ಸಿಕ್ಕಿ ಬೀಳುತ್ತಿದ್ದರು. ಹಾಗೆ ಹುಡುಗಿಯರು ಸಿಕ್ಕಿ ಹಾಕಿಕೊಳ್ಳುತ್ತಿದ್ದುದಕ್ಕೆ ಅವನ ಗಿಲೀಟಿನ ಮಾತೂ ಹುಡುಗಿಯರ ದಡ್ಡತನವೂ ಕಾರಣವಾಗಿತ್ತು ಅನ್ನೋದು ನನ್ನ ಅನಿಸಿಕೆ. ಹೀಗೆ ಹೇಳಿದಾಗೆಲ್ಲ, ನೀನು ವಿನಾಕಾರಣ ನನ್ನ ಪ್ರೇಮ ಸಂಗತಿಗಳಿಗೆ ತಲೆ ಹಾಕಬೇಡ ಅಂತ ಆತ ತಾಕೀತು ಮಾಡಿದ್ದ. ನಾನೋ ನನ್ನ ಕಣ್ಣಿಗೆ ಬಿದ್ದ ಅವನ ಹುಡುಗಿಯರಿಗೆಲ್ಲ ಅವನು ಇಂತಿಂಥವನು ಕಣ್ರೆ ಅಂತ ಹೇಳಿದ್ರೆ ಅವರು ನನ್ನನ್ನೇ ಅನುಮಾನದಿಂದ ನೋಡುತ್ತಿದ್ದರು. ಆದರೆ ಕಾಲ ಎಲ್ಲದಕ್ಕೂ ಒಂದು ಫುಲ್ಸ್ಟಾಪ್ ಇಡದೇ ಬಿಡುವುದಿಲ್ಲವಂತೆ. ಸತ್ಯ ಎಂದಾದರೂ ಒಮ್ಮೆ ಜಗತ್ತಿಗೆ ತೀಳಿಯಲೇ ಬೇಕು. ಹಾಗೆಯೇ ಹರೀಶನ ಪ್ರೀತಿಯ ಸತ್ಯ ಒಂದಿನ ಹುಡುಗಿಯರಿಗೆ ಗೊತ್ತಾಗಿಹೋಯಿತು.
ಆದ್ರೆ ಅಷ್ಟು ಹೊತ್ತಿಗೆ ಹರೀಶ ಆ ಹುಡುಗಿಯರ ಒಟ್ಟಿಗೆ ಬಹು ದೂರ ಸಾಗಿಬಿಟ್ಟಿದ್ದ. ಯಾಕೆ ಹೇಳಿದೆನೆಂದ್ರೆ, ಇಲ್ಲಿ ಹರೀಶ ಒಬ್ಬ ಟೈಲರ್ ಆಗಿದ್ದ. ಅವನಿಗೆ ಹಲವು ಹುಡುಗಿಯರನ್ನು ಪ್ರೀತಿಸುವುದೊಂದು ಚಟವಾಗಿತ್ತು. ಗೊತ್ತಿರಲಿ, ಪ್ರೀತಿ ಯಾವತ್ತೂ ಚಟವಾಗಬಾರದು ; ಡ್ರಗ್ಸ್ನಂತೆ, ಹೆಂಡದಂತೆ, ಸೆಕ್ಸ್ನಂತೆ. ಕೊನೆಗೆ ದರಿದ್ರ ಕೆರೆತದಂತೆಯೂ. ಆ ಕ್ಷಣಕ್ಕೆ ಕೆರೆತ ಖುಷಿ ಕೊಟ್ಟರೂ ಅದರಿಂದ ಉಂಟಾಗುವ ಗಾಯ ಮಾತ್ರ ಅಳಿಸಿಹೋಗಲಾರದೇನೋ!
ಇಂತಹ ಚಟಾಗ್ರೇಸರನ ಪ್ರೀತಿಗೆ ಮರುಳಾಗುವ ಮೊದಲು ಈ ಹುಡುಗಿಯರು ಒಮ್ಮೆ ಅವನ ಬ್ಯಾಕ್ಗ್ರೌಂಡ್ ನೋಡಬಹುದಿತ್ತಲ್ಲ? ಕೇವಲ ಒಂದು ಕಣ್ಣೋಟಕ್ಕೆ, ನಗುವಿಗೆ, ಚಂದಕ್ಕೆ ಮತ್ತು ಇನ್ಯಾತಕ್ಕೋ ಪ್ರೀತಿಗೆ ಬಿದ್ದು ಬಿಡುವ ಕಾತರದಲ್ಲಿ ಇಡೀ ಬದುಕನ್ನ ಅವನ/ಅವಳ ಕೈ ಗೆ ಕೊಡುವುದು ಎಷ್ಟು ಸರಿ?ಎಷ್ಟೋ ಜನ ಪ್ರೀತಿಯನ್ನ ಕೇವಲ ಕಾಮದ ಕಾಲುದಾರಿ ಅಂತಂದುಕೊಂಡಿದ್ದಾರೆ. ಅಂತವರಿಗೆ ಪ್ಲಟೋನಿಕ್ ಪ್ರೀತಿಯ ಅರ್ಥ ಗೊತ್ತಾಗುವುದಾದರೂ ಹೇಗೆ?
ಬಹುಶಃ ಹುಸ್ಸೇ ಪ್ರೀತಿಯ ಹುನ್ನಾರಗಳನ್ನೆಲ್ಲ ಹಿನ್ನೆಲೆಯಲ್ಲಿಟ್ಟುಕೊಂಡೇ ಮೇಲಿನ ಮಾತು ಹೇಳಿರಬೇಕು. ...................................ಯಾಕೋ ಇದನ್ನೆಲ್ಲ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.
ಒಪ್ಪಿಸಿಕೊಳ್ಳಿ.
4 comments:
ಹಾಯ್, ಇಣುಕುತ್ತಿದ್ದೇನೆ. ಬರೀತಾ ಇರಿ.
sakhattagide barita iri
Haneef Anilakatte
hmm preeti maaDa horata yuva hridayagaLige oLLe salahe.. tumba chennagide.. :)
ಉತ್ತಮ ಬರೆಹ... ಬರೆಯುತ್ತಿರಿ...
Post a Comment