ನಾನು ಕವಿತೆ ಬರೆದೇ ಸುಮಾರು ವರ್ಷಗಳಾಗಿ ಹೋದವು. ಈ ನಡುವೆ ಬರೀಬೇಕೆಂದು ಯಾವತ್ತೂ ಅನಿಸಿಯೇ ಇರಲಿಲ್ಲ. ಅಥವಾ ನನ್ನ ಮನಸ್ಸು ಅದಕ್ಕೆ ಸಿದ್ಧವಿರಲಿಲ್ಲವೋ ಗೊತ್ತಿಲ್ಲ. ಒಂದು ಕಾಲಕ್ಕೆ ಎಲ್ಲೆಂದರಲ್ಲಿ ಕವಿತೆ ಬರೆದು ಗೆಳೆಯರನ್ನು ಬೆಚ್ಚಿ ಬೀಳಿಸಿದ್ದೆ. ಕಾಲೇಜಿನ ಕಾರಿಡಾರಿನಲ್ಲಿ ಕವಿ ಬಂದ್ರು ಅಂತಿದ್ರು. ಅದಕ್ಕೆ ತಕ್ಕುನಾಗಿ ಅವಾಗವಾಗ ಜುಬ್ಬ ಹಾಕಿಕೊಂಡು, ಗಡ್ಡ ಬಿಟ್ಕೊಂಡು ಹೋಗೋದೂ ಇತ್ತು. ಹೊಸ ಕವಿತೆ ಬರೆದು ಬರೆದು ಕಾಲೇಜಿನ ನೋಟೀಸ್ ಬೋಡರ್ಿಗೆ ಹಾಕೋದು ಆಗ ನನಗೆ ರೂಢಿ. ಇದನ್ನು ನೋಡಿ ಉತ್ತರ ಕನರ್ಾಟಕದ ಗೆಳೆಯ ಬಸವರಾಜ ನೀನೇನು ಕವಿತೆಯಲ್ಲೆ ಎಲ್ರನ್ನೂ ಕೊಲ್ಲೋಂಗ್ ಕಾಣಿಸ್ತೀಯಲ್ಲೋ ಮಾರಾಯ ಅಂತಿದ್ದ. ಹಂಗ ಬರೀತಿದ್ದೆ. ಇಡೀ ಕಾಲೇಜಿಗೆ ಕವಿತೆಯಲ್ಲಿ ಫಸ್ಟ್ ಪ್ರೈಜ್ ಹೊಡಕೊಂಡು ಬಂದಿದ್ದೆ. ಆಮೇಲೆ ಪೊಯಿಟ್ರಿ ಸೊಸೈಟಿ ಆಫ್ ಇಂಡಿಯಾದವರು ಮಾಡಿದ್ದ ಒಂದು ವಾರದ ಪೊಯಿಟ್ರಿ ವಕರ್್ಶಾಪ್ಗೆ ಹೋಗಿದ್ದೆ. ಅದೊಂದು ಮರೆಯಲಾಗದ ಅನುಭವ. ಇನ್ನೊಮ್ಮೆ ಯಾವತ್ತಾದರೂ ಬರೆದೇನು. ಅಲ್ಲಿಗೆ ಬಂದವರಲ್ಲಿ ತುಂಬಾ ಜನ ನನ್ನ ಥರಾನೆ ಪತ್ರಕರ್ತರಾಗಿದ್ದಾರೆ. ಹಾಗೆ ಶುರುವಾದ ಕವಿತೆ ಯಾಕೋ ಬೆಂಗಳೂರಿಗೆ ಬಂದ ಮೇಲೆ ಗೊತ್ತಿಲ್ಲದೇ ಕಳೆದುಹೋಯಿತು. ನಾನೂ ಹುಡುಕುವ ಉಸಾಬರಿ ತೆಗೆದುಕೊಳ್ಳಲಿಲ್ಲ.ಓ ಮನಸೇಯಲ್ಲಿ ಇನ್ಬಾಕ್ಸ್ ಅಂಕಣದಲ್ಲಿ ಒಂದಿಷ್ಟು ಸಣ್ಣ ಸಣ್ಣ ಕವಿತೆಗಳನ್ನು ಬರೆದದ್ದು ಬಿಟ್ಟರೆ ಮತ್ತೇನೂ ಬರೆದಿಲ್ಲ. ಅದು ಬಹಳ ಪಾಪ್ಯುಲರ್ ಆಗಿಹೋಯಿತು.
ಇವತ್ತು ಸುಮ್ಮನೆ ಕುಳಿತವನಿಗೆ ಅದ್ಯಾಕೋ ಹೀಗೆ ಬರೆಯಬೇಕೆನಿಸಿತು. ಬರೆದಿದ್ದೇನೆ.
ಸುಮ್ಮನೆ ಓದಿಕೊಳ್ಳಿ.ಎಂಟು ವರ್ಷಗಳ ನಂತರ ಒಡಮೂಡಿದ ಕವಿತೆ.
ನಾನು ಹಾಗೇ!
ನಾನು ಹಾಗೇ!
ನಾನು ಹಾಗೇ!
ನನ್ನ ಮನದ ಕಡಲಿಗೆ
ಟಾಚರ್್ ಬಿಟ್ಟು ನೋಡಿಕೊಂಡವನು
ಎದೆಯ ಪ್ರೀತಿಗೆ ಸೇತುವೆ ಕಟ್ಟಿ
ಯಾರಿಗಾಗೋ ಕಾದು ಕುಳಿತವನು
ನಾನು ಹಾಗೇ!
ಬಣ್ಣಕ್ಕೆ ಬಣ್ಣ ಹಚ್ಚಿ
ಅದರ ಬೆರಗ ನೋಡುವವನು
ಅನ್ಲಿಮಿಟ್ ಆಕಾಶಕ್ಕೆ
ಏಣಿ ಹಾಕಲು ಹೊರಟವನು
ನಾನು ಹಾಗೇ!
ಅವಳ ಪ್ರೀತಿಗೆ ಸೋತಹಾಗೆ
ಮೋಸಕ್ಕೂ ಸೋತವನು
ಖಾಲಿ ಹೃದಯವಿಟ್ಟುಕೊಂಡು
ಒಳಗೆ ಮಾತ್ರ
ಚಿಲಕವಿಟ್ಟುಕೊಂಡವನು
ನಾನು ಹಾಗೇ!
ನದಿ ತಿರುವಿನಂತೆ, ಓಘದಂತೆ
ಬೆಟ್ಟದಿಂದಿಳಿದು ಓಡುವ
ಪುಟ್ಟ ಜರಿಯಂತೆ
ಆಮೇಲೆ ಕಾಲ ಬುಡದಲ್ಲೇ
ಅದನ್ನೆಲ್ಲ ಹೀರಿಕೊಂಡು ಬೆಳೆದ
ಸಂಪಿಗೆ ಮರದಂತೆ
ನಾನು ಹಾಗೇ!
ಸುಖದ ಸಂಬಂಧಿ
ದುಃಖದ ಬಂಧಿ
ನಾನು ಹಾಗೇ!
ನನ್ನ ಹಾಗೇ
ಮೂರ್ತ, ಅಮೂರ್ತ
ನಾನು ಹೇಳಬೇಕೆಂದ್ರೆ,
ಹಾಗೇ!
ಥೇಟ್ ನನ್ನ ಹಾಗೇ!
5 comments:
Ishtu Varsha yakri bareelilla!!!???
Kannada sahityakke mattu oh manase ge eshtu nashta aagide gotta???
Tumba chennagide Navu oodugariruvavargu nimma kavana dhare nirantaravaagi hariyali nadiyanthe nadipreethiyali.
poet workshop bagge innashtu mahiti needi. udayonmukha kavigalige sahayavagabahudu.
dhanyavadagalu
bhashe
ಕವಿತೆ ಕೆಟ್ಟದಾಗಿಲ್ಲ. ನನಗನಿಸಿದಂತೆ
ಖಾಲಿ ಹೃದಯವಿಟ್ಟುಕೊಂಡು
ಒಳಗೆ ಮಾತ್ರ
ಚಿಲಕವಿಟ್ಟುಕೊಂಡವನು
ಉತ್ತಮ ಸಾಲುಗಳು. ಎಂಟು ವರ್ಷಗಳಲ್ಲಿ ನಿಮ್ಮಂತಹವರು ಬರೆಯದೇ ಇದ್ದುದರಿಂದ ಕಳೆದ ಕೆಲವು ವರ್ಷಗಳಿಂದ ಒಳ್ಳೆಯ ಸಾಹಿತ್ಯ ಬರುತ್ತಿರಲಿಲ್ಲ ಎಂದನಿಸಿದೆ. ಕಳೆದ ಎರಡು ಮೂರು ವರ್ಷಗಳಿಂದ ಮತ್ತೆ ಒಳ್ಳೆಯ ಸಾಹಿತ್ಯ ಬರುತಿದೆ. ಮತ್ತೆ ಹೊಸ ರೂಪಕ, ಪ್ರತಿಮೆಗಳನ್ನು ಇಟ್ಟು ಕವಿತೆ ಬರೆಯುವುದನ್ನು ಮುಂದುವರಿಸಿ. ಅಭಿನಂದನೆಗಳು.
ರವಿಯವರೇ,
ಓ ಮನಸೇ ಗತಿ ಏನಾಗಿದೆ?
ಕವನ ಚೆನ್ನಾಗಿದೆ...
......
ನೀವು ಹೀಗಾ?
ಇಂದು ಗೊತ್ತಾಯಿತು.
ತುಂಬಾ ಚೆನ್ನಾಗಿದೆ. ಇನ್ನು ಹಲವಾರು ಕವನಗಳನ್ನು ಬರೆಯಿರಿ.
bahala chennagide...
Post a Comment