ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ.
ತೇಜಸ್ವಿ ಹೋದ್ರು, ರಾಮ್ದಾಸ್ ಹೋದ್ರು. ಅವರು ಬಿಟ್ಟು ಹೋದ ದುಃಖದ ಛಾಯೆ ಇನ್ನೂ ಮನದಲ್ಲಿ ಆರಿಲ್ಲ. ಆಗಲೇ ನೀವೂ ಅವರನ್ನು ಹಿಂಬಾಲಿಸಿದವರಂತೆೆ ಸುಮ್ಮನೆ ಎದ್ದು ಹೊರಟುಬಿಟ್ಟಿದೀರಿ. ಯಾಕೆ ಸರ್, ನಿಮಗೇನು ಅಷ್ಟೊಂದು ಅವಸರವಿತ್ತೆ? ಅಥವಾ ಈ ಜಗತ್ತೇ ಏನಾದರೂ ಬೇಸರವಾಯ್ತೇ?
ನಿಜ ಹೇಳ್ಲ ಸರ್, ನಾನು ನಿಮ್ಮನ್ನು ಮೊದಲ ಬಾರಿ ನೋಡಿದ್ದು ನವಕನರ್ಾಟಕದಲ್ಲಿ. ಆಗಿನ್ನೂ ನಾನು ಪತ್ರ್ರಿಕೋದ್ಯಮದ ಖದರಿಗೆ ಹೊಂದಿಕೊಳ್ಳುತ್ತಿದ.್ದೆ ಹೊಸತು ಪತ್ರಿಕೆ ಆಗ ತಾನೆ ಶುರುವಾಗಿತ್ತು. ಅದರಲ್ಲಿ ನನ್ನ ಮೊದಲ ಕವನ ಪ್ರಕಟವಾದಾಗ ಎಂಥ ಖುಷಿಯಾಗಿತ್ತು ಗೊತ್ತಾ? ಅದನ್ನು ಸೆಲೆಕ್ಟ್ ಮಾಡಿದ್ದು ನೀವೇ ಅನ್ನೋದು ನನ್ನ ಅನಿಸಿಕೆ! ಆಮೇಲೆ ಎಷ್ಟೊಂದು ಬಾರಿ ಸಿಕ್ಕಿದಿರಿ. ಸಿಕ್ಕಾಗಲೆಲ್ಲ ಪ್ರೀತಿಯಿಂದ ಮಾತನಾಡಿಸುತ್ತಿದ್ರಿ. ಚೆನ್ನಾಗಿ ಓದಿ ಅಂತಿದ್ರಿ. ಬರೀರಿ ಅಂತಿದ್ರಿ. ಇನ್ನಾರು ಸಾರ್ ನಮಗೆ ಅಂತ ಮಾರ್ಗದರ್ಶನ ಕೊಡೋರು? ಪ್ರೀತಿಯಿಂದ ಮಾತನಾಡಿಸೋರು?ಅವತ್ತು ನೀವು ನನ್ನನ್ನು ನವಕನರ್ಾಟಕದ ಪಡಸಾಲೆಯಲ್ಲಿ ಕೂರಿಸಿಕೊಂಡು ನನ್ನ ನೂರಾರು ಕವನಗಳನ್ನು ತಿರುವಿ ಹಾಕುತ್ತಿದ್ದರೆ ನಾನು ನಿಜಕ್ಕೂ ಎಕ್ಸೈಟ್ ಆಗಿಹೋಗಿದ್ದೆ. ನಾನೊಂದು ಕವನ ಸಂಕಲನ ತರಬೇಕೆಂದಿದ್ದೇನೆ. ಬೆಳಕು ಕಾಣದ ಹೂಗಳು ಅಂತ. ಅದಕ್ಕೆ ನೀವೇ ಮುನ್ನುಡಿ ಬರೆಯಬೇಕು. ಪ್ಲೀಸ್ ಸರ್ ಇಲ್ಲ ಅನ್ನಬೇಡಿ ಅಂದಿದ್ದೆ. ನೀವೂ ಆಯ್ತು. ಬರಕೊಡ್ತೀನಿ, ಆದರೆ ಅಜರ್ೆಂಟ್ ಮಾಡಬೇಡಿ ಅಂತ ತೆಗೆದುಕೊಂಡು ಹೋದ್ರಿ. ಹೋದವ್ರು ಮುನ್ನುಡಿ ಕೊಡೋ ಅಷ್ಟರಲ್ಲಿ ಬರೋಬ್ಬರಿ ಎರಡು ವರ್ಷ ಆಗೋಗಿತ್ತು. ಆದ್ರೆ ಒಂದಿನ ಇದ್ದಕ್ಕಿದ್ದಂತೆ ಅದೇ ಥಣ್ಣನೆ ನಡಿಗೆಯಲ್ಲಿ ಬಂದು ನನ್ನ ಕೈಯಲ್ಲಿ ಮುನ್ನುಡಿ ಇಟ್ರಿ. ನಾನು ಅದನ್ನು ಪರಮ ಕುತೂಹಲದಿಂದ ಏನು ಬರೆದಿರಬಹುದೆಂದು ಓದಿದರೆಅದರಲ್ಲಿದ್ದದ್ದು ನಿಮ್ಮ ನಿಷ್ಕಲ್ಮಶ ಪ್ರೀತಿ ಮತ್ತು ಮೆಚ್ಚುಗೆ ಮಾತ್ರ.ಅದಿನ್ನೂ ನನ್ನಲ್ಲಿ ಹಾಗೇ ಇದೆ. ಅದು ಬರೆದುಕೊಟ್ಟೂ ನೀವು ಎರಡು ವರ್ಷದ ಮೇಲಾಗಿಹೋಯಿತು. ಬೆಳಕು ಕಾಣದ ಹೂಗಳು ಇನ್ನೂ ಬೆಳಕು ಕಂಡಿಲ್ಲ. ಇತ್ತೀಚೆಗೇ ಗೆಳೆಯರ ಹತ್ತಿರ ರವಿ ಅಜ್ಜೀಪುರಗೆ ಮುನ್ನುಡಿ ಬರೆದುಕೊಟ್ಟಿದ್ದೆ. ಅವರ ಕವನ ಸಂಕಲನ ಹೊರಬಂತೋ ಇಲ್ಲವೋ ಗೊತ್ತಾಗಲೇ ಇಲ್ಲ, ಅಂದಿರಂತೆ. ಹಾಗೇ ನಾನು ಬರೆದುಕೊಟ್ಟಿದ್ದು ಅವರಿಗೆ ಇಷ್ಟ ಆಯ್ತೋ ಇಲ್ಲವೋ ಅಂತಲೂ ಅನುಮಾನ ಪಟ್ಟರಂತೆ. ಇಷ್ಟ ಆಗದೇ ಇರೋದಿಕ್ಕೆ ಅದೇನು ಯಾವುದೋ ಒಂದು ವಸ್ತುವೆ ಶ್ರೀನಿವಾಸ್ ಸರ್. ನಿಜ ಹೇಳ್ಲ ಆ ಮುನ್ನುಡಿಯಲ್ಲಿ ್ಲ ನಿಮ್ಮ ಬೆಚ್ಚನೆ ಪ್ರೀತಿ ಬಿಟ್ಟರೆ ಬೇರೇನೂ ಇಲ್ಲ. ನಿಮ್ಮ ಪ್ರೀತಿ ದೊಡ್ಡದು. ನಿಮ್ಮ ಬಗ್ಗೆ ನಮಗಿದ್ದ ಗೌರವವೂ ದೊಡ್ಡದು. ಅವತ್ತು ಬೆೆಳಿಗ್ಗೆ ಶರತ್ ಕಲ್ಕೋಡ್ ಚಿ. ಶ್ರೀನಿವಾಸ್ ರಾಜ್ ಹೋಗಿಬಿಟ್ಟರು ಅಂದಾಗ ಕ್ಷಣ ನನ್ನ ಮನಸ್ಸು ಒಪ್ಪಿಕೊಳ್ಳಲಿಕ್ಕೆ ರೆಡಿ ಇರಲಿಲ್ಲ.ಸರ್, ಮನಸ್ಸು ನೀವಿಲ್ಲದೆ ಬಿಕೋ ಅನ್ತಿದೆ. ಆದ್ರೆ ನೀವು ಬರೆದುಕೊಟ್ಟ ಮುನ್ನುಡಿ ಮಾತ್ರ ನನ್ನ ಅಂಗೈಯಲ್ಲಿ ಹಾಗೇ ಉಳಿದಿದೆ. ಅದೇ ಬೆಚ್ಚನೆ ಪ್ರೀತಿ ತುಂಬಿಕೊಂಡು.ಬೆಳಕು ಕಾಣದ ಹೂಗಳು ಪುಸ್ತಕದ ಮೊದಲ ಪ್ರತಿ ನಿಮಗೇ ಕೊಡಬೇಕು ಅನ್ನೋ ಆಸೆ ಇತ್ತು.ಈಗ ಆ ಆಸೆಯೋ ಕಮರಿಹೋಗಿದೆ. ಇನ್ನಾರಿಗೆ ಕೊಡಲಿ?
No comments:
Post a Comment