Sunday, January 20, 2008

ನಿಮ್ಮ ಮೊಬೈಲ್ನಲ್ಲಿ ಐಸಿಇ ಅನ್ನೋ ಹೆಸರಿರಲಿ..

ನೀವು ಮೊಬೈಲ್ ಬಳಸ್ತಾ ಇದೀರಾ?
ಹಾಗಾದ್ರೆ ಒಂದು ವಿಷಯ ನೀವು ತಿಳಿದುಕೊಳ್ಳಲೇ ಬೇಕು.ಸಾಮಾನ್ಯವಾಗಿ ಹೊರಗಡೆ ಹೋದ ಸಮಯದಲ್ಲಿ ಯಾರಿಗಾದ್ರೂ ಏನಾದ್ರೂ ಹೆಚ್ಚು ಕಡಿಮೆ ಆಗಿ ಅವರ ಸಂಬಂಧಪಟ್ಟವರಿಗೆ ಸುದ್ದಿ ಮುಟ್ಟಿಸಬೇಕೆಂದಾಗ ಆ ವ್ಯಕ್ತಿಯ ಪರ್ಸನಲ್ ಡೀಟೈಲ್ಸ್ ಸಹಕಾರಿಯಾಗುತ್ತೆ ಅಲ್ವ!. ಅದರಲ್ಲಿ ಬಹು ಮುಖ್ಯವಾದದ್ದು ಫೋನ್ ನಂಬರ್ಸ್ ಅನ್ನೋದು ನಿಮಗೆ ಗೊತ್ತಿದೆ. ಆದರೆ ಈಗೇನಾಗಿದೆ ಅಂದರೆ ಮೊಬೈಲ್ ಬಂದ ಮೇಲೆ ನೂರಾರು ಹೆಸರನ್ನ ಫೀಡ್ ಮಾಡಿ ಇಟ್ಟಿರುತ್ತೇವೆ. ಅದರಲ್ಲಿರೋ ನಂಬರ್ರುಗಳಲ್ಲಿ ಯಾರಿಗೆ ಮಾಡಿದ್ರೆ ಬೇಗ ಸುದ್ದಿ ತಲುಪುತ್ತೆ ಅನ್ನೋದು ತುಂಬಾ ಕಷ್ಟ. ಆಪತ್ಕಾಲದಲ್ಲಿ ಅಷ್ಟೆಲ್ಲ ನಂಬರಿಗೂ ಟ್ರೈ ಮಾಡ್ತಾ ಕೂರುವುದಕ್ಕಾಗುವುದಿಲ್ಲವಲ್ಲ, ಅದಕ್ಕೆ ಒಂದು ಸಿಂಪಲ್ ಮೆಥೆಡ್ ಫಾಲೋ ಮಾಡಿ.ಏನಪ್ಪ ಅಂದ್ರೆ, ನಿಮ್ಮ ಮೊಬೈಲ್ನಲ್ಲಿ ಐಸಿಇ (Incase of emergency) ಅನ್ನೋ ಹೆಸರಲ್ಲಿ ನಿಮಗೆ ಆಪ್ತರಾಗಿರುವವರ ಹೆಸರನ್ನು ಸೇವ್ ಮಾಡಿ ಇಡಿ. ಏನಾದ್ರೂ ತೊಂದರೆ ಆದಾಗ( ಆಗದೇ ಇರಲಿ ಅನ್ನೋದು ನಮ್ಮ ಹಾರೈಕೆ) ತಕ್ಷಣಕ್ಕೆ ನಾವಿರುವ ಸ್ಥಿತಿಯ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲು ಸಹಾಯವಾಗುತ್ತೆ. ತುಂಬಾ ಜನ ಇದ್ದಾಗ ಐಸಿಯು 1, 2, 3 ಅಂತ ಬೇಕಾದ್ರೆ ಸೇವ್ ಮಾಡ್ತಾ ಹೋಗಿ. ನೋ ಪ್ರಾಬ್ಲಮ್. ಮನೆಯಿಂದ ಆಚೆ ಹೋದ್ರೆ ಮತ್ತೆ ಮನೆ ತಲಪುತ್ತೀವಿ ಅನ್ನೋ ಗ್ಯಾರಂಟಿಯೇ ಇಲ್ಲ ಈಗ. ಇಂಥ ಸಂದರ್ಭದಲ್ಲಿ ಐಸಿಇ ನಂಬರ್ರು ಖಂಡಿತಾ ನಮ್ಮ ನೆರವಿಗೆ ಬರುತ್ತೆ.

ನನಗ್ಯಾಕೋ ಹೌದಲ್ಲ ಅನಿಸ್ತು.

ನಿಮಗೂ ಹಾಗನ್ನಿಸಿದರೆ ನಿಮ್ಮ ಮೊಬೈಲ್ನಲ್ಲೊಂದು ಐಸಿಇ ಹೆಸರಿರಲಿ...

No comments: