ನಾನು ಪಿಯುಸಿ ಮಾಡುವಾಗ ಒಬ್ಬರು ಅಧ್ಯಾಪಕರಿದ್ದರು.
ಇಂಗ್ಲಿಷ್ ತಗೋಳೋರು. ಪಾಠಾನೆ ಮಾಡ್ತಿರಲಿಲ್ಲ. ಕ್ಲಾಸಿಗೆ ಬಂದು ಐದು ನಿಮಿಷ ಕೂತಿರೋರು. ನೋಡಿ ಒಬ್ಬೊಬ್ಬರಾಗಿ ಕ್ಲಾಸಿಂದ ಎದ್ದು ಹೋಗಿ. ಪ್ರಿನ್ಸಿಪಲ್ ಕೇಳಿದ್ರೆ ಪೋರ್ಷನ್ ಕಂಪ್ಲೀಟ್ ಮಾಡಿದಾರೆ ಅಂತ ಹೇಳಿ, ಆಯ್ತ. ನಾನು ನಿಮಗೆ ಎಕ್ಸಾಮ್ನಲ್ಲಿ ಫುಲ್ ಮಾಕ್ಸರ್್ ಕೊಡಿಸ್ತೀನಿ ಅನ್ನೋರು. ನಮಗೆ ಎದೆಯ ಒಳಗೆ ಢವಢವ. ಎಲ್ಲಿ ಫೇಲ್ಗೀಲ್ ಮಾಡಿಬಿಡ್ತಾನಪ್ಪ ಈ ಕಳ್ಳ ಅನಿಸೋದು.ಎಷ್ಟೋ ಹುಡುಗರು ಕ್ಲಾಸ್ ಬಿಟ್ರೆ ಸಾಕು ಅಂಥ ಕಾಯ್ತಾ ಇದ್ದರಲ್ಲ ಅಂಥವರಿಗೆ ಖುಷಿಯೋ ಖುಷಿ. ಬಿಟ್ಟ ತಕ್ಷಣ ಸಿನೆಮಾ ಹಾಲ್ನಲ್ಲೋ, ಅಡ್ಡಾದಲ್ಲೋ ಕೂತು ಕಾಲ ಕಳೀತಿದ್ರು. ಹುಡುಗೀರು ಮಾತ್ರ ಹಿಡೀ ಶಾಪ ಹಾಕ್ತಿದ್ರು.
ಒಂದಿನ, ಸಾರ್ ನೀವು ಹಿಂಗ್ ಮಾಡಿದ್ರೆ ನಮ್ಮ ಗತಿ ಏನು? ಅಂತ ಒಬ್ಬಳು ಹುಡುಗಿ ಕೇಳಿಯೇಬಿಟ್ಲು.ತಗಳಪ್ಪ ಅವಯ್ಯ ಸಕ್ಕತ್ ಗರಮ್.
ವಿಷಯ ಏನಪ್ಪ ಅಂದ್ರೆ, ಪ್ರಿನ್ಸಿಪಲ್ಗೂ ಈವಯ್ಯನಿಗೂ ಆಗ್ತಿರಲಿಲ್ಲ. ಆ ಸೇಡನ್ನ ನಮಗೆ ಪಾಠ ಹೇಳಿಕೊಳ್ಳದೇ ಇರುವ ಮುಖಾಂತರ ತೀರಿಸಿಕೊಳ್ಳುತ್ತಿದ್ದನಂತೆ. ಉರಿಯಾಕಿಲ್ವಾ ಹೇಳಿ?
ಈಗಲೂ ನನಗೆ ಆ ಮೇಸ್ಟ್ರು ನೆನಪಿಗೆ ಬಂದ್ರೆ ಸಕ್ಕತ್ ಕೋಪ ಬರುತ್ತೆ.
ಯಾಕೆಂದ್ರೆ, ನನ್ನ ಇಂಗ್ಲಿಷ್ ಎಕ್ಕುಟ್ಟೋಗೋದಕ್ಕೆ ಕಾರಣಕರ್ತರಾದವರಲ್ಲಿ ಅವರೂ ಒಬ್ರು.
No comments:
Post a Comment