ನಾನು ಈ ಬ್ಲಾಗ್ನಲ್ಲಿ ತುಂಬಾ ಗಹನವಾದ ವಿಷಯವನ್ನ ತೆಗೆದುಕೊಂಡು ಚಿಂತಿಸುವ ಕೆಲಸ ಮಾಡೊಲ್ಲ. ಅದನ್ನೆಲ್ಲ ತುಂಬಾ ತಿಳಿದುಕೊಂಡವರು, ಬುದ್ಧಿ ಜೀವಿಗಳು ಮಾಡಿಯಾರು, ನನ್ನದೇನಿದ್ದರೂ ಕೈಗೆ ನಿಲುಕುವ ಪುಟ್ಟ ಪುಟ್ಟ ಕನಸುಗಳದೇ ಸಾಮ್ರಾಜ್ಯ. ಇಂಥ ಪುಟ್ಟ ಪುಟ್ಟ ಕನಸುಗಳೇ ನಮ್ಮನ್ನು ಬದುಕಿಡೀ ಕೈ ಹಿಡಿದು ನಡೆಸಬಲ್ಲವು.
ಹೇಳಬೇಕೆಂದರೆ, ಎಲ್ಲರ ಬದುಕೂ ಒಂದು ಪುಟ್ಟ ಕನಸಿನಿಂದಲೇ ಆರಂಭವಾಗೋದು.ಅದರಲ್ಲಿ ಮೊದಲ ಕನಸು ಅಮ್ಮ. ಈ ಜಗತ್ತಿಗೆ ಬಂದ ಮೊದಲ ಕ್ಷಣ ಅವಳಪ್ಪುಗೆ ಸಿಗುತ್ತಲ್ಲ ಅದೇ ಮಗುವಿನ ಮೊದಲ ಕನಸು. ಅಲ್ಲಿಂದ ಶುರುವಾಗುವ ಕನಸು ಕೊನೆಗೆ ಬಂದು ನಿಂತುಕೊಳ್ಳುವುದು ಬಾಯಿಗೆ ಹನಿ ನೀರು ಹಾಕಿ ಅನ್ನೋ ಕೊನೆ ಕನಸಿಗೆ.ನಿಜ್ಜ ಹೇಳ್ಲ... ಇಂಥ ಪುಟ್ಟ ಕನಸುಗಳೇ ನಮ್ಮನ್ನು ಜೀವಂತವಾಗಿಡೋದು. ಗೆಳೆಯ ಬತರ್್ಡೇಗೊಂದು ವಿಷ್ ಮಾಡಲಿ ಅಂತ ಮನಸು ಕಾತರಿಸುತ್ತದೆ... ಗಂಡ ಒಂದು ಸೀರೆ ಕೊಡಿಸಲಿ ಅನ್ನುವ ಕನಸು ಹಬ್ಬ ಇನ್ನೂ ಮೂರು ವಾರ ಇದೆ ಅನ್ನುವಾಗಲೇ ಎದ್ದು ಕುಳಿತುಬಿಡುತ್ತದೆ, ಪುಟ್ಟ ಹುಡುಗ ಮಮ್ಮಿ ನನಗೆ ಆ ಹೊಸ ಆಟದ ಕಾರ್ ಕೊಡಿಸು ಅಂತ ಕೈ ಹಿಡಿದು ಜಗ್ಗುತ್ತಾನೆ, ಈ ವ್ಯಾಲೆಂಟೈನ್ಸ್ ಡೇ ಗಾದರೂ ಅವನಿಗೆ ಐ ಲವ್ ಯು ಅಂತ ಹೇಳಲೇಬೇಕು ಎಂದು ಮನಸ್ಸು ಪತರಗುಟ್ಟುತ್ತದೆ, ಮಗ ಒಳ್ಳೆ ಮಾಕರ್್ ತರಲಿ, ಮಗಳಿಗೊಂದು ಗುಡ್ ಗುಡ್ ಅನ್ನುವಂತಹ ಹುಡುಗ ಸಿಗಲಿ..... ಒಂದೇ ಎರಡೇ ಈ ಲಿಟ್ಟಲ್ ಲಿಟ್ಟಲ್ ಕನಸುಗಳ ಸಾಮ್ರಾಜ್ಯ. ಅವುಗಳನ್ನು ಒಂದೊಂದೇ ಹೆಕ್ಕಿ ತೆಗೆದು ಜತನದಿಂದ ಈಡೇರಿಸಿಕೊಂಡು ಹೋದರೂ ಸಾಕು ಬದುಕು ಹಸನಾಗುತ್ತದೆ. ಆದರೆ ನಾವೇನು ಮಾಡುತ್ತೇವೆ ಗೊತ್ತಲ್ಲ.... ಏಕ್ದಮ್ ಬಿಲ್ ಗೇಟ್ಸ್ ಆಗಬೇಕು, ಅಂಬಾನಿ ಆಗಬೇಕು ಅಂತೆಲ್ಲ ಕನಸು ಕಾಣುತ್ತೇವೆ. ಅಂಥ ದೊಡ್ಡ ದೊಡ್ಡ ಕನಸುಗಳ ಎಡೆಯಲ್ಲಿ ಸಣ್ಣ ಸಣ್ಣ ಕನಸುಗಳು ಸದ್ದಿಲ್ಲದೆ ಸಿಕ್ಕಿ ಕಮರಿಹೋಗುವುದು ಗೊತ್ತಾಗುವುದೇ ಇಲ್ಲ.ನಮಗೆ ಅಂತ ದೊಡ್ಡ ಕನಸುಗಳು ಬೇಡ. ಸಣ್ಣವೇ ಇರಲಿ.
ಅವನ್ನೇ ಮೆಟ್ಟಿಲನ್ನಾಗಿ ಮಾಡಿಕೊಂಡು ದೊಡ್ಡದರ ಕಡೆಗೆ ಸಾಗೋಣ.
ನನ್ನ ಬ್ಲಾಗ್ ಅಂತ ಸಣ್ಣ ಸಣ್ಣ ಕನಸುಗಳ ಗೂಡು.
ಅಲ್ಲಿ ನಾನಿರುತ್ತೀನಿ.... ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನೀವಿರುತ್ತೀರಿ.
ಇನ್ನು ಸಣ್ಣ ಕನಸುಗಳಿಗೆ ಬರವಿಲ್ಲ ಬಿಡಿ.
3 comments:
ಸರಿ ಶುರು ಮಾಡಿ ಸ್ವಾಮೀ.. ಬರೀ ಇಂಟ್ರೊಡಕ್ಷನ್ಸಲ್ಲೇ ಹೊಟ್ಟೆ ತುಂಬ್ಕೋಬೇಕೋ ಹ್ಯಾಗೆ ನಾವು? ;)
ಹದಿನಾರರ ಹರೆಯದ ಹುಡುಗಿಯ ಜೋಶ್‌ನ ಬರಹಗಳಿಗಾಗಿ ಕಾಯ್ತಿದ್ದೇವೆ.. ಹಾಂ, ಬೇಗ್ಬೇಗ..
ಹಲೋ..ಸೋ ಕ್ಯೂಟ್ ಸರ್..
ಮೊಗೆದಷ್ಟು ಬತ್ತದ ನಿಮ್ಮ ಪುಟ್ಟ ಕನಸು ನನಸಾಗಲಿ..
ನಮ್ಮ ಮೆಚ್ಚಿನ ಲೇಖಕರೊಬ್ಬರನ್ನು ಬ್ಲಾಗ್ ಲೋಕದಲ್ಲಿ ಕಂಡು ಬಹಳ ಖುಷಿಯಾಗ್ತಿದೆ. ಪುಟ್ಟ ಪುಟ್ಟ ಕನಸುಗಳೇ ಚೆಂದ. ನಿಮ್ಮ ನದಿಪ್ರೀತಿ ಹರಿಯುತಿರಲಿ..ಕನಸು ಹಂಚಿಕೊಳ್ಳೋಕೆ ನಾವಿದಿವಿ.
Post a Comment