Monday, January 21, 2008

ಅವಳ ಎರಡು ಪ್ರಶ್ನೆಗೆ ಉತ್ತರ

ಅವಳು ನಿಜಕ್ಕೂ ಅಳುತ್ತಿದ್ದಳು.
ನನ್ನ ಎದುರಿಗೆ ಅವಳು....ಅವಳ ಎದುರಿಗೆ ನಾನು ಕುಳಿತಿದ್ದೆ.
ಇಬ್ಬರೂ ಎಷ್ಟು ಹೊತ್ತು ಕುಳಿತಿದ್ದೆವೋ ಗೊತ್ತಿಲ್ಲ. ಆಡಿದ್ದು ಮಾತ್ರ ಎರಡೇ ಮಾತು. ಅದೂ ಅವಳೇ ಆಡಿದ್ದು.
ಒಂದು.
ನೀನು ನನ್ನನ್ನು ಕೈ ಬಿಡೊಲ್ಲ ತಾನೇ?
ಇನ್ನೊಂದು.
ನಾನು ಸತ್ತರೆ ನೀನೂ ಸಾಯ್ತೀಯ?
ಎರಡಕ್ಕೂ ನನ್ನಲ್ಲಿ ಉತ್ತರ ಇಲ್ಲವೆಂದೇನಲ್ಲ, ಆದರೆ ಅವಳಿಗೆ ಹೇಗೆ ಹೇಳಬೇಕೋ ಎನ್ನುವುದು ತಿಳಿಯದೇ, ಪೆಕರುಪೆಕರಾಗಿ ಪ್ರಶ್ನೆ ಕೇಳ್ತೀಯಲ್ಲೇ. ತಲೆಗಿಲೆ ಕೆಟ್ಟಿದೆಯಾ ನಿಂಗೆ ಅಂತ ಗದರಿದ್ದೆ. ಆದರೆ ಅವಳ ಮುಸಿಮುಸಿ ಅಳು ಮಾತ್ರ ನಿಲ್ಲಲಿಲ್ಲ. ಅವೆರಡು ಪ್ರಶ್ನೆಯನ್ನೇ ರಿವೈಂಡ್ ಮಾಡಿ ಮಾಡಿ ನೂರು ಸಲ ಕೇಳಿದ್ದಳು.
ಇಷ್ಟಕ್ಕೂ ಆದದ್ದಾದರೂ ಏನು?
ಇವತ್ತು ಅವಳ birthday. ನನಗೆ ಆಫೀಸಿನಲ್ಲಿ ಮಣ ಕೆಲಸ. ರಜೆ ಹಾಕು ಇಬ್ಬರೂ ನಂದಿಬೆಟ್ಟಕ್ಕೆ ಹೋಗೋಣ ಅಂತ application ಹಾಕಿದ್ದಳು; ವಾರದಿಂದಲೇ! ನಾನೇನಾದರೂ ರಜೆ ಕೇಳಿದ್ದರೆ ಪೆಡಂಭೂತದಂತಿರುವ ಬಾಸ್ ಬೋಳೀಮಗನೆ ಗೆಟ್ಲಾಸ್ಟ್ ಅಂತ ಉಗಿದು ಅಟ್ಟುತ್ತಿದ್ದದ್ದಂತೂ ಗ್ಯಾರಂಟಿ. ಈ ಗಡಿಬಿಡಿಯಲ್ಲಿ ಅವಳಿಗೊಂದೂ ವಿಷ್ಷೂ ಮಾಡದೆ ಕುಳಿತುಬಿಟ್ಟಿದ್ದೆ. ಮಧ್ಯೆ ಒಮ್ಮೆ ಫೋನ್ ಮಾಡಿದ್ದಳು. ನನಗೆ ಇವತ್ತೇ ನನ್ನ ಪ್ರಾಜೆಕ್ಟ್ ಕಂಪ್ಲೀಟ್ ಮಾಡಬೇಕಿತ್ತು. ಇನ್ನು ಇವಳೊಟ್ಟಿಗೆ ಮಾತಾಡುವುದೆಲ್ಲಿ?ಸಂಜೆ ಸಿಗೋಣ ಕಣೆ ಅಂತ ಎಸ್ಸೆಮ್ಮೆಸ್ ಮಾಡಿದ್ದೆ. ಈಗ ನೋಡಿದರೆ ಎರಡು ಪ್ರಶ್ನೆ ಹಿಡಿದು ಧುಮ್ಮಂತ ಕುಳಿತಿದ್ದಾಳೆ.ನಿಮಗೆ ಗೊತ್ತಿಲ್ಲ, ನಾನು ಅವಳನ್ನು ಪ್ರಾಣ ಹೋಗುವಷ್ಟು ಪ್ರೀತಿಸುತ್ತೇನೆ. ಅವಳೂ ನನ್ನನ್ನು ಪ್ರೀತಿಸುತ್ತಾಳೆ. ಆದ್ರೆ ಎಷ್ಟು ಅಂತ ಮಾತ್ರ ಗೊತ್ತಿಲ್ಲ.

***
ಯಾಕೋ ಅವಳು ಅಳು ನಿಲ್ಲಿಸುವುದಿಲ್ಲ ಅನಿಸಿತು. ಅವಳ ಗಲ್ಲ ಹಿಡಿದು ನಿನ್ನ ಎರಡೂ ಪ್ರಶ್ನೆಗೆ ಉತ್ತರ ಹೇಳ್ತೀನಿ ಕೇಳು ಕಣೆ ಅಂದೆ.
ತಿರುಗಿ ಕುಳಿತಳು.
ಒಂದು.
ಬಿಡುವುದಕ್ಕೆ ನಾನು ನಿನ್ನ ಕೈ ಹಿಡಿದುಕೊಂಡಿದ್ದರೇ ತಾನೆ? ನೀನು ನನ್ನ ಕೈಲಿಲ್ಲ ಕಣೆ, ಹೃದಯದಲ್ಲಿದೀಯ.
ಎರಡು.
ನಿನಗಿಂತ ಮೊದಲೇ ನಾನು ಸಾಯುತ್ತೇನೆ. ಯಾಕೆಂದರೆ ಡಾಕ್ಟರು ನನಗೆ ಇನ್ನು ಎರಡು ತಿಂಗಳು ಮಾತ್ರ ಬದುಕುತ್ತೀಯ ಅಂತ ಹೇಳಿದ್ದಾರೆ.
ಬಿಕಾಸ್ ಆಫ್ ಬ್ಲಡ್ ಕ್ಯಾನ್ಸರ್.
ಹಾಗಂತ ಅವಳ ಕೈ ಹಿಡಿದುಕೊಂಡೆ.
ಅವಳ ಕಣ್ಣಲ್ಲಿದ್ದದ್ದು ಎಂಥ ಭಾವವೋ ಆ ಕ್ಷಣಕ್ಕೆ ನನಗೆ ಗೊತ್ತಾಗಲಿಲ್ಲ.

4 comments:

ಚಿತ್ರಾ ಸಂತೋಷ್ said...

ಹಲೋ ಸರ್..ಬ್ಲಾಗ್ ಚೆನ್ನಾಗಿದೆ. ನಿಮ್ ಬರಹ ಶೈಲಿಯೂ ಚೆನ್ನಾಗಿದೆ. 'ನದಿ ಪ್ರೀತಿ' ನಿರಂತರವಾಗಿರಲಿ..
ಶುಭಾಶಯಗಳೊಂದಿಗೆ
ಗೆಳತಿ
ಚಿತ್ರಾ

Tina said...

ರವಿಯವರೆ,ಹೆಲೋ.
ಅವಧಿಯಿಂದ ಇಲ್ಲಿಗೆ ಬಂದೆ. ನಿಮ್ಮ ಬರಹಗಳ ಶೈಲಿ ಭಿನ್ನ ಅನ್ನಿಸ್ತು. ಆದ್ರೆ.. ಈ ಬರಹದ ಎಂಡಿಂಗು ಮಾತ್ರ ಯಾಕೊ ಬುರುಡೇ ಒಳಗೆ ಇಳೀಲೇ ಒಲ್ಲೆ ಅಂತಾ ಇದೆಯಲ್ಲ! ಬ್ಲಡ್ ಕ್ಯಾನ್ಸರು! ಉಹ್ ಉಹ್!
ಏನೆ ಇರಲಿ, ಸ್ವಾಗತ ನಿಮಗೆ.
-ಟೀನಾ

Anonymous said...

Shashikala Kathige
Hellooooooooo sir,
Nimma baraha tumba chennagide Nimma EE Nadi Preeti Heege munduvareyali.
Best of luck
-Shashi

Unknown said...

Hai Ravi,
Nimma barahagala abhimani nanu, oh manaseyalli modi madi eega blog shuru madidira, best of luck, nimma nadi preeti nirantaravagirali, endigu battade irali,

Gelathi
Shree